2018 ಹುಂಡೈ ಕ್ರೆಟಾ ಫೇಸ್ ಲಿಫ್ಟ್ :ವಿಮರ್ಶೆ
Published On ಜೂನ್ 26, 2019 By alan richard for ಹುಂಡೈ ಕ್ರೆಟಾ 2015-2020
- 0K View
- Write a comment
ಇದನ್ನು ಮೂರು ವರ್ಷಗಳ ಹಿಂದೆ ಬಿಡುಗಡೆ ಮಾಡಿದಾಗಿನಿಂದ, ಕ್ರೆಟಾ ಭಾರತದ ಗ್ರಾಹಕರ ಕಲ್ಪನೆಯನ್ನು ಇನ್ನಾವುದೇ ಕ್ರಾಸ್ಒವರ್ ಗಳು ಹಿಡಿದಿಟ್ಟುಕೊಳ್ಳದಿರದಂತೆ ಗೆದ್ದಿದೆ. ಹಲವು ಬಾರಿ ಇದು ಎಲ್ಲ ಪ್ರತಿಸ್ಪರ್ದಿಗಳನ್ನು ಹಿಂದಿಕ್ಕಿದೆ.
ಕೊನೆಗೂ ನಾವು ಫೇಸ್ ಲಿಫ್ಟ್ ಆಗಿರುವ ಕ್ರೆಟಾ ವನ್ನು ಮುಟ್ಟುವಂತೆ ಆಯಿತು, ಇದು ಒಂದು ಹೆಚ್ಚು ನಿರಿಕ್ಷಿಸಿದಂತಹ ನವೀಕರಣವಾಗಿದೆ 2018 ನಲ್ಲಿ. ಟಾಪ್ ಸ್ಪೆಕ್ ವೇರಿಯೆಂಟ್ ಗಳ ಬೆಲೆ ಹೆಚ್ಚಾಗಿದೆ ಮತ್ತು ಕೆಲವು ವೇರಿಯೆಂಟ್ ಗಳು ಹೊಸ ಫೀಚರ್ ಗಳನ್ನೂ ಪಡೆದಿದೆ ಪಡೆದಿದೆ ಕೆಲವು ಪಡೆದಿಲ್ಲ. ಹುಂಡೈ ನವರು ಹೆಚ್ಚು ಬೇಡಿಕೆಯಲ್ಲಿರುವ ಫೀಚರ್ ಗಳಾದ, ಸನ್ ರೂಫ್, ಅನ್ನು ಟಾಪ್ ಸ್ಪೆಕ್ ಆಟೋಮ್ಯಾಟಿಕ್ ಮತ್ತು ಮಾನ್ಯುಯಲ್ ವೇರಿಯೆಂಟ್ ಗಳಲ್ಲಿ ಕೊಟ್ಟಿದೆ. ಇದರಲ್ಲಿ ಹಲವು ಉತ್ತಮವಾದವುಗಳನ್ನು ಕೊಡಲಾಗಿದೆ ಮತ್ತು ಹಲವು ಮಿಸ್ ಆಗಿದೆ ಕೂಡ, ಹುಂಡೈ ಕ್ರೆಟಾ ದಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಲು ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆಯೇ ಎಂದು ತಿಳಿಯಲು ಮುಂದೆ ಓದಿ.
ಬಾಹ್ಯ
ಹೆಚ್ಚು ಗಮನಾರ್ಹ ಬದಲಾವಣೆ 2018 ಕ್ರೆಟಾ ದಲ್ಲಿ ಎಂದರೆ ಅದು ಹೊಸ ಫ್ಯಾಮಿಲಿ ಗ್ರಿಲ್ ಆಗಿದೆ. ಇದರಲ್ಲಿ ಈಗ ಅಗಲವಾದ ಕ್ರೋಮ್ ಅಸ್ಸೇನ್ಟ್ ಅನ್ನು ಹೊಂದಿದೆ ಹಾಗು ಅದು ಹೆಡ್ ಲ್ಯಾಂಪ್ ಜೊತೆಗೆ ಮೇಲ್ಬಾಗದಲ್ಲಿ ಸೇರುತ್ತದೆ. ಹೆಡ್ ಲ್ಯಾಂಪ್ ಗಳು ಸಹ ಹೊಸ ಡಿಸೈನ್ ಹೊಂದಿದೆ ಅದರ ಅಳತೆಗಳು ಹಿಂದಿನಂತೆಯೇ ಇದ್ದರೂ ಸಹ. DRL ಗಳು ಈಗ ಮತ್ತೆ ಡಿಸೈನ್ ಮಾಡಲಾದ ಮುಂದಿನ ಬಂಪರ್ ಗೆ ಅಳವಡಿಸಲಾಗಿದೆ ಮತ್ತು ಅದು ಫಾಗ್ ಲ್ಯಾಂಪ್ ಒಳಗೆ ಇರುವಂತೆ ಮಾಡಲಾಗಿದೆ. ಬದಿಗಳಿಂದ ನೋಡಿದಾಗ ಕಂಡುಬರುವ ಬದಲಾವಣೆ ಎಂದರೆ ಅದು ಹೊಸ 17-ಇಂಚು ಐದು ಸ್ಪೋಕ್ ಮಷೀನ್ ಕಟ್ ಅಲಾಯ್ ವೀಲ್ ಗಳು ನೋಡಲು ಚೆನ್ನಾಗಿದೆ, ಮತ್ತು ರೂಫ್ ರೈಲ್ ಗಳು ರೂಫ್ ಗೆ ಹೊಂದುವಂತೆ ಮಾಡಲಾಗಿದೆ. ಹಿಂಬದಿಯಲ್ಲಿ ಬದಲಾವಣೆಗಳು ಸ್ವಲ್ಪ ಸೂಕ್ಷ್ಮವಾಗಿದೆ, ಮತ್ತೆ ಡಿಸೈನ್ ಮಾಡಲಾದ ಟೈಲ್ ಲೈಟ್ ಯೂನಿಟ್ ಗಳು ಮತ್ತು ಹಿಂಬದಿಯ ಬಂಪರ್ ಗಳು ಭಿನ್ನವಾಗಿದ್ದು ಬಾಡಿ ಯನ್ನು ನೇರವಾಗಿ ಸೇರಿಸುವುದಿಲ್ಲ, ಮತ್ತು ಕಾಣುವಂತಹ ಪ್ಲಾಸ್ಟಿಕ್ ಕ್ಲಾಡ್ಡಿಂಗ್ ಅನ್ನು ಕೊನೆಗಳಲ್ಲಿ ಕೊಡಲಾಗಿದೆ. ಹುಂಡೈ ನವರು ಫೇಸ್ ಲಿಫ್ಟ್ ನಲ್ಲಿ ಮತ್ತಷ್ಟು ವಿಷಯಗಳನ್ನು ಕುಡಿಸಿ ಡಿಸೈನ್ ಗೆ ಮೆರುಗು ಕೊಡಬಹುದಿತ್ತು, LED ತುಣುಕುಗಳನ್ನು ಹೆಡ್ ಲ್ಯಾಂಪ್ ಅಥವಾ ಟೈಲ್ ಲ್ಯಾಂಪ್ ನಲ್ಲಿ ಅಳವಡಿಸಿ. ಖೇದವಾಗಿ ಈ ಬಾರಿ ಆಥರಹ ಮಾಡಲಾಗಿಲ್ಲ.
ಆಂತರಿಕಗಳು
ಕ್ರೆಟಾ ದ ಆಂತರಿಕಗಳಲ್ಲಿ ಅಷ್ಟೇನು ಬದಲಾವಣೆ ಆಗಿಲ್ಲ. ಇದು ಹೇಳಿದ ನಂತರ ಡಿಸೈನ್ ಈಗಲೂ ಸಹ ಆಕರ್ಷಕವಾಗಿದೆ ಮತ್ತು ಹೊಸದಾಗಿ ಕಾಣುತ್ತದೆ ಈ ವೇದಿಕೆಯಲ್ಲಿ. ಸನ್ ರೂಫ್ ನ ಅಳವಡಿಕೆ ನಿಮಗೆ ಹೆಚ್ಚು ಬೆಳಕು ಬರುವಂತೆ ಮಾಡುತ್ತದೆ , ಮುಬ್ಬದ ಆಂತರಿಕಗಳನ್ನು ಬೆಳಗುತ್ತಾ, ಮತ್ತು ಇದು ಒಂದು ಉತ್ತಮವಾದ ಹೊಸ ಫೀಚರ್ ಆಗಿದೆ.
Measurements - Front Seat |
|
Parameter |
|
Legroom (min-max) |
925-1120mm |
Knee room (min-max) |
610-840mm |
Seat base length |
595mm |
Seat base width |
505mm |
Seat back height |
645mm |
Headroom (min-max) |
920-980mm |
Cabin width |
1400mm |
ಆಂತರಿಕ ವಿಶಾಲತೆಯ ಬಗ್ಗೆ ಹೇಳಬೇಕೆಂದರೆ ಕ್ರೆಟಾ ಕುಟುಂಬದ ಬಳಕೆಗಾಗಿ ವಿಶಾಲವಾಗಿದೆ ಎನಿಸುತ್ತದೆ. ಸೀಟ್ ಗಳು ಅಗಲವಾಗಿದೆ ಮತ್ತು ಸಹಕಾರಿಯಾಗಿದೆ ಮತ್ತು ಸ್ಟಿಯರಿಂಗ್ ಕೇವಲ ಟಿಲ್ಟ್ ಅಳವಡಿಕೆ ಮಾತ್ರ ಇದ್ದರೂ, ಡ್ರೈವರ್ ಸೀಟ್ ನಲ್ಲಿ ಬಹಳಷ್ಟು ಅಳವಡಿಕೆ ಇದೆ ನಿಮಗೆ ಆರಾಮದಾಯಕವಾಗಿ ಕುಳಿತುಕೊಳ್ಳಲು ಸಾಧ್ಯವಾಗುವಂತೆ.
Measurements - Rear Seat |
|
Parameter |
|
Shoulder room |
1250mm |
Headroom |
980mm |
Seat base length |
450mm |
Seat base width |
1260mm |
Seat back height |
640mm |
Knee room (min-max) |
615-920mm |
ಹಿಂಬದಿಯ ಶೋಲ್ಡರ್ ರೂಮ್ 1250mm ಇದ್ದು S-ಕ್ರಾಸ್ ನ ಹೋಲಿಕೆಯಲ್ಲಿ ಸಮಂಜಸವಾಗಿದೆ , ಹಿಂಬದಿಯ ಬೆಂಚ್ 100mm ಹೆಚ್ಚು ಇದ್ದು ಒಟ್ಟಾರೆ 1350mm ಇದೆ. ಡುಯಲ್ ಟೋನ್ ಪೆಟ್ರೋಲ್ ಮತ್ತು ಡೀಸೆಲ್ ಕಾರ್ ಗಳು ಆರೆಂಜ್ ಆಂತರಿಕ ಅಸ್ಸೇನ್ಟ್ ಗಳನ್ನೂ ಹೊಂದಿದೆ ಅಂದು ದಟ್ಟ ಬಣ್ಣದ ಆಂತರಿಕಗಳ ನೀರಸಭಾವನೆಯನ್ನು ಹೋಗಲಾಡಿಸುತ್ತದೆ.
ಟೆಕ್ನಾಲಜಿ
ಹುಂಡೈ ಕ್ರೆಟಾ ದಲ್ಲಿ ಕೆಲವು ಚಿಕ್ಕ ಬದಲಾವಣೆಗಳನ್ನು ಮಾಡಲಾಗಿದೆ ಆದರೆ ಗಮನಾರ್ಹ ಬದಲಾವಣೆ ಇದೆ ಕಂಫರ್ಟ್ ವಿಷಯಗಳಲ್ಲಿ. ಹೊಸ ನವೀಕರಣಗಳಲ್ಲಿ ಕ್ರೂಸ್ ಕಂಟ್ರೋಲ್, ಸನ್ ರೂಫ್, ಸಿಕ್ಸ್- ವೆ ವಿದ್ಯುತ್ ಅಳವಡಿಕೆಯ ಡ್ರೈವರ್ ಸೀಟ್, ವಯರ್ಲೆಸ್ ಚಾರ್ಜಿನ್ಗ್ ಮತ್ತು ಆಟೋ ಡಿಮ್ಮಿಂಗ್ IRVM. ISOFIX ಚೈಲ್ಡ್ ಸೀಟ್ ಗಳನ್ನು ಕೇವಲ SX AT ಪೆಟ್ರೋಲ್ ಮತ್ತು ಡೀಸೆಲ್ ಮಾಡೆಲ್ ಗಳಲ್ಲಿ ಕೊಡಲಾಗಿದೆ, ಬಹಳಷ್ಟು ತಯಾರಕರು ಇದನ್ನು ಸ್ಟ್ಯಾಂಡರ್ಡ್ ಆಗಿ ಕೊಡುತ್ತಾರೆ , ಮತ್ತು ಇದು ಹಿಂದೆ ಆಯ್ಕೆ ಪಟ್ಟಿಯಲ್ಲಿ ಇತ್ತು. ನಾವು ಹೊಸ ಕ್ರೆಟಾ ದಲ್ಲಿ ನಿರೀಕ್ಷಿಸಿದ್ದ ಕೆಲವು ಫೀಚರ್ ಗಳು ಎಂದರೆ, ವೆಂಟಿಲೇಟೆಡ್ ಸೀಟ್ ಗಳು, ಆಟೋ ಹೆಡ್ ಲ್ಯಾಂಪ್ ಗಳು, ರೈನ್ ಸೆನ್ಸಿಂಗ್ ವೈಪರ್ ಗಳು, ಇವೆಲ್ಲ ಹೊಸ ಫೀಚರ್ ಗಳ ಪಟ್ಟಿಯಲ್ಲಿ ಮಿಸ್ ಆಗಿವೆ.
ಕಾರ್ಯದಕ್ಷತೆ
ಹುಂಡೈ ನವರು ಅಸ್ಟೇನು ಬದಲಾವಣೆ ಮಾಡಿಲ್ಲ ಎಂಜಿನ್ ವಿಷಯದಲ್ಲಿ , ಕೆಲವು ಟ್ಯೂನ್ ಅಪ್ ಗಳನ್ನೂ ಬಿಟ್ಟು ಮತ್ತು ಮಾಹಿತಿಗಳ ಪ್ರಕಾರ ಮೈಲೇಜ್ ಅನ್ನು ಶೇಕಡಾ 4 ಹೆಚ್ಚಿಸಿದೆ 20.5kmpl ಗೆ (19.67kmpl ಹಳೆಯ ಕಾರ್ ನಲ್ಲಿ ). ಕಾರ್ಯದಕ್ಷತೆಯ ವಿಷಯಕ್ಕೆ ಬಂದಾಗ 1.6-ಲೀಟರ್ ಡೀಸೆಲ್ ಎಂಜಿನ್ ಈಗಲೂ ಸಹ ಹೆಚ್ಚು ಶಕ್ತಿಯುತವಾಗಿದೆ ಈ ವಿಭಾಗದಲ್ಲಿ 128PS@4000rpm ಮತ್ತು 260Nm @1500-3000rpm ಜೊತೆಗೆ, ಹಾಗಾಗಿ ಹುಂಡೈ ಗೆ ಅಷ್ಟೇನೂ ಬದಲಾವಣೆ ಮಾಡುವ ಅವಶ್ಯಕತೆ ಇರಲಿಲ್ಲ.
ನಗರಗಳಲ್ಲಿ ಎಂಜಿನ್ 2nd ಅಥವಾ 3rd ಗೇರ್ ನಲ್ಲಿ ಬಹಳಷ್ಟು ಪವರ್ ಹೊರಸೂಸುತ್ತದೆ ಮತ್ತು ನಯವಾಗಿ ವೇಗಗತಿಯನ್ನು ಹೆಚ್ಚಿಸುತ್ತದೆ ಅವಶ್ಯಕತೆ ಇದ್ದಾಗ. ಹೈವೆ ಗಳಲ್ಲಿ ನಿಮಗೆ ಎಂಜಿನ್ ಅನ್ನು 2000rpm ಮಟ್ಟದಲ್ಲಿ ಇಡಬೇಕೆನಿಸಬಹುದು ಮತ್ತು ಅಲ್ಲಿ ಹೆಚ್ಚು ಪವರ್ ಸಿಗುತ್ತದೆ ಕೂಡ. ಹಾಗು ಅಲ್ಲಿ ಬಹಳಷ್ಟು ಪವರ್ ದೊರೆಯುತ್ತದೆ ಶೀಘ್ರವಾಗಿ ಓವರ್ಟೇಕ್ ಮಾಡಲು, ಅವಶ್ಯಕತೆ ಇದ್ದಾಗ.
ವೇಗಗತಿ ಪಡೆಯುವಿಕೆ
0-100kmph - 10.83 ಸೆಕೆಂಡ್ ಗಳು
30-80kmph (3rd) - 7.93 ಸೆಕೆಂಡ್ ಗಳು
40-100kmph (4th) - 13.58 ಸೆಕೆಂಡ್ ಗಳು
ರೈಡ್ ಮತ್ತು ಹ್ಯಾಂಡಲಿಂಗ್
ಕ್ರೆಟದಲ್ಲಿ ಬಹಳಷ್ಟು ತಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿಲ್ಲದಿರುವುದರಿಂದ, ಇದರಲ್ಲಿ ಡ್ರೈವಿಂಗ್ ಡೈನಾಮಿಕ್ಸ್ಬ ಹಳಷ್ಟು ಚೆನ್ನಾಗಿ ಇದೆ. ನಗರಗಳಲ್ಲಿ ಸಸ್ಪೆನ್ಷನ್ ಬಹಳಷ್ಟು ಚೆನ್ನಾಗಿ ಕೆಲಸ ಮಾಡುತ್ತದೆ ಪ್ಯಾಸೆಂಜರ್ ಗಳಿಗೆ ಸಣ್ಣ ಮತ್ತು ಮಾಧ್ಯಮಿಕ ಭೂಮ್ಪ್ ಗಾಲ ಅನುಭವ ಆಗದಂತೆ. ದೊಡ್ಡ ಸ್ಪೀಡ್ ಬ್ರೇಕರ್ ಗಳಿಗಾಗಿ ಅವಶ್ಯಕತೆಗಿಂತಲೂ ಚೆನ್ನಾಗಿರುವ ಸಸ್ಪೆನ್ಷನ್ ಅಳವಡಿಕೆ ಇದೆ ಹಾಗಾಗಿ ಹೆಚ್ಚಾದ ಶಬ್ದ ಮತ್ತು ಗಡಿಬಿಡಿಯಂತಹ ಅನುಭವ ಆಗುವುದಿಲ್ಲ. ಇದು ಹೇಳಿದನಂತರ, ದೊಡ್ಡ ಮತಟ್ಟದ ಭೂಮ್ಪ್ ಗಳು ಇರುವಾಗ ಉದಾಹರಣೆಗೆ ಲೆವೆಲ್ ಬದಲಾವಣೆಗಳಲ್ಲಿ, ಅಗಲವಾದ ಅಂತರಗಳು ಮತ್ತು ಪಾಟ್ ಹೋಲ್ ಗಳು ಇರುವಕಡೆ, ನೀವು ಹೇಳಬಹುದು ಸಸ್ಪೆನ್ಷನ್ ಸ್ವಲ್ಪ ಕಠಿಣವಾಗಿದೆ ಎಂದು ಮತ್ತು ಸ್ವಲ್ಪ ಭೂಮ್ಪ್ ಗಳು ಕ್ಯಾಬಿನ್ ಒಳಕ್ಕೆ ಪ್ರವೇಶಿಸುತ್ತದೆ ಕೂಡ., ಜೊತೆಗೆ ಸ್ವಲ್ಪ ಸಸ್ಪೆನ್ಷನ್ ಮೇಲಿನ ಕಂಪ್ಲೇಂಟ್ ಗಳು ಕೂಡ ಹೊರಬರುತ್ತದೆ.
ಸ್ಟಿಯರಿಂಗ್ ಮತ್ತು ಕ್ಲಚ್ ನಯವಾಗಿದೆ ಮತ್ತು ಹುಂಡೈ ಗುಣಮಟ್ಟವುಳ್ಳದ್ದಾಗಿದೆ , ಹಾಗಾಗಿ ನಗರದಲ್ಲಿ ಡ್ರೈವ್ ಮಾಡಲು ಅಷ್ಟೇನೂ ಪರಿಶ್ರಮ ಪಡೆಬೇಕಾಗಿಲ್ಲ. ಆದರೆ, ಕೆಲವ್ರು ಕ್ಲಚ್ ಬಳಕೆಯಾ ವಿಷಯದಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಅದು ಮೃದುವಾಗಿದೆ ಆದರೆ ಅನುಭವಕ್ಕೆ ಬರುವುದಿಲ್ಲ ಹಾಗಾಗಿ ನೀವು ಅದು ಯಾವಾಗ ಕಷ್ಟವಾಗುತ್ತದೆ ಎಂದು ಹೇಳಲಾಗುವುದಿಲ್ಲ.
ಬ್ರೇಕಿಂಗ್
100-0kmph - 43.43 ಮೀಟರ್ ಗಳು
80-0kmph - 26.75 ಮೀಟರ್ ಗಳು
ಬ್ರೇಕ್ ಗಳು ಸದೃಢವಾಗಿವೆ ಮತ್ತು ಪ್ರೋಗ್ರೆಸಿವ್ ಆಗಿದೆ ಮತ್ತು ಎತ್ತರದ ಕಾರ್ ಆನು ವೇಗಗತಿಯಿಂದ ನಿಲ್ಲುವುದಕ್ಕೆ ಅಷ್ಟೇನೂ ಸಮಯ ತೆಗೆದುಕೊಳ್ಳುವುದಿಲ್ಲ. ಆದರೆ, ಪೆಡಲ್ ಸ್ವಲ್ಪ ಗಟ್ಟಿಯಾಗಿದೆ ಎಂದು ಅನಿಸುತ್ತದೆ - ಮತ್ತು ಅದು ಒಂದೇ ಒಂದು ಸಮಸ್ಯೆ ಆಗಿದೆ.
ಸುರಕ್ಷತೆಗಳು
ಡುಯಲ್ ಏರ್ಬ್ಯಾಗ್ ಗಳು ಮತ್ತು ABS with EBD ಗಳು ಈ ವ್ಯಾಪ್ತಿಯಲ್ಲಿ ಸ್ಟ್ಯಾಂಡರ್ಡ್ ಆಗಿ ದೊರೆಯುತ್ತದೆ , SX(O) ವೇರಿಯೆಂಟ್ ನಲ್ಲಿ ಆರು ಏರ್ಬ್ಯಾಗ್ ಕೊಡಲಾಗಿದೆ. ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ , ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್ ಕಂಟ್ರೋಲ್, ಮತ್ತು ಹಿಲ್ ಸ್ಟಾರ್ಟ್ ಅಸ್ಸಿಟ್ ಗಳು ಕೇವಲ SX(O) ನಲ್ಲಿ ದೊರೆಯುತ್ತದೆ. ISOFIX ಚೈಲ್ಡ್ ಸೀಟ್ ಮೌಂಟ್ ಗಳು ಕೇವಲ SX AT ಪೆಟ್ರೋಲ್ ಮತ್ತು ಡೀಸೆಲ್ ವೇರಿಯೆಂಟ್ ಕಾರ್ ಗಳಲ್ಲಿ ಲಭ್ಯವಿದೆ.
ವೇರಿಯೆಂಟ್ ಗಳು
ಹುಂಡೈ ಕ್ರೆಟಾ ದಲ್ಲಿ ಆರು ವೇರಿಯೆಂಟ್ ಗಳು ಲಭ್ಯವಿದೆ, ಪ್ರಾರಂಭದಲ್ಲಿ E, ನಂತರ E+, S, SX, SX (Dual Tone) ಮತ್ತು SX(O) ಗಳು ಇವೆ. 6- ಸ್ಪೀಡ್ ಕಾನ್ವೆಂಷನಲ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಕೇವಲ S & SX ಡೀಸೆಲ್ ಮತ್ತು SX ಗಳಲ್ಲಿ ಲಭ್ಯವಿದೆ.
ಅಂತಿಮ ಅನಿಸಿಕೆ
ಒಟ್ಟಾರೆ 2018 ಫೇಸ್ ಲಿಫ್ಟ್ ಹುಂಡೈ ಕ್ರೆಟಾ ಇತರ ಮಾಡೆಲ್ ಗಳ ನವೀಕರಣಕ್ಕೆ ಹೋಲಿಸಿದಾಗ ಮದ್ಯದಲ್ಲಿ ಇರುತ್ತದೆ. ಬಹಳಷ್ಟು ಕಾರ್ ಗಳಲ್ಲಿ ಸ್ವಲ್ಪವೇ ಬದಲಾವಣೆಗಳನ್ನು ಮಾಡಲಾಗಿತ್ತು ಮತ್ತು ಹಲವು ಕಾರ್ ಗಳಲ್ಲಿ ಹೆಚ್ಚು ಬದಲಾವಣೆಗಳನ್ನು ಮಾಡಲಾಗಿತ್ತು ಅದರ ಮಾಡೆಲ್ ಗಳಿಗೆ ನವೀಕರಣ ಮಾಡುವಾಗ. ಹುಂಡೈ ನವರು ಬಹಳಷ್ಟು ಬದಲಾವಣೆಗಳನ್ನು ಮಾಡಿದ್ದಾರೆ ನೋಟದಲ್ಲಿ ಮತ್ತು ಫೀಚರ್ ಗಳಲ್ಲಿ , ನಾವು ಇನ್ನಷ್ಟು ಬಯಸಿದ್ದಾಗಿಯೂ ಸಹ. ಮತ್ತು ಅದು ಒಪ್ಪಿಕೊಳ್ಳಬಹುದಾದ ವಿಷಯ -ಸರಿಯಿರುವ ವಿಷಯಗಳನ್ನು ಬದಲಿಸುವ ಅವಶ್ಯಕತೆ ಇರುವುದಿಲ್ಲ.
SX(O) ಡೀಸೆಲ್ ನ ಬೆಲೆ Rs 15.03 ಲಕ್ಷ ( ಎಕ್ಸ್ ಶೋ ರೂಮ್ ದೆಹಲಿ), Rs 51,000 ನಷ್ಟು ಹೆಚ್ಚು ಮಾಡಲಾಗಿದೆ, ಅದರ ಹಿಂದಿನ ಮಾಡೆಲ್ ಗೆ ಹೋಲಿಸಿದಾಗ. ಮತ್ತು ಅದು ಒಂದುಒಪ್ಪಬಹುದಾದ ಬೆಲೆ ಏರಿಕೆ ಆಗಿದೆ ಸನ್ ರೂಫ್, ವಿದ್ಯುತ್ ಅಳವಡಿಕೆಯ ಡ್ರೈವರ್ ಸೀಟ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಡಿಮ್ಮಿಂಗ್ IRVM ಗಳನ್ನೂ ಪರಿಗಣಿಸಿದಾಗ. ಮತ್ತು ನಾವು ಬಯಸಿದ್ದು ಇವಷ್ಟೇ ಅಲ್ಲದಿದ್ದರೂ, ಇದುಒಂದು ಮೌಲ್ಯಯುಕ್ತ ನವೀಕರಣವಾಗಿದೆ ಕ್ರೆಟಾ ವನ್ನು ಗ್ರಾಹಕರ ಕೊಳ್ಳಬಹುದಾದ ಪಟ್ಟಿಯಲ್ಲಿ ಆಗ್ರದಲ್ಲಿ ಇರಿಸಲು.