ಭಾರತದಲ್ಲಿ Hyundai Creta N Line ನ ಬಿಡುಗಡೆಯ ದಿನಾಂಕ ನಿಗದಿ
ಹುಂಡೈ ಕ್ರೇಟಾ ಎನ್ ಲೈನ್ ಗಾಗಿ rohit ಮೂಲಕ ಫೆಬ್ರವಾರಿ 26, 2024 10:32 am ರಂದು ಮಾರ್ಪಡಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಕ್ರೆಟಾ N ಲೈನ್ ಮಾರ್ಚ್ 11 ರಂದು ಮಾರುಕಟ್ಟೆಗೆ ಬರಲಿದೆ ಮತ್ತು ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 160 PS ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುವ ನಿರೀಕ್ಷೆಯಿದೆ.
- ಇದು ಹೊಸ ಹುಂಡೈ ಕ್ರೆಟಾದ ಟಾಪ್-ಸ್ಪೆಕ್ ವೇರಿಯಂಟ್ ಅನ್ನು ಆಧರಿಸಿದೆ.
- ಇದು ರೆಡ್ ಸ್ಕರ್ಟಿಂಗ್, ಸ್ಪೋರ್ಟಿಯರ್ ಎಕ್ಸಾಸ್ಟ್, 'N ಲೈನ್' ಬ್ಯಾಡ್ಜ್‌ಗಳು ಮತ್ತು ದೊಡ್ಡ 18-ಇಂಚಿನ ಅಲೊಯ್ ವೀಲ್ಸ್ ಅನ್ನು ಪಡೆಯುತ್ತದೆ.
- ಇದರ ಕ್ಯಾಬಿನ್ ರೆಡ್ ಇನ್ಸರ್ಟ್ ಮತ್ತು ಕಾಂಟ್ರಾಸ್ಟ್ ರೆಡ್ ಸ್ಟಿಚಿಂಗ್‌ನೊಂದಿಗೆ ಆಲ್ ಬ್ಲಾಕ್ ಥೀಮ್ ಅನ್ನು ಪಡೆಯಲಿದೆ.
- ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳು ಮತ್ತು ADAS ನಂತಹ ಸ್ಟ್ಯಾಂಡರ್ಡ್ ಆಗಿರುವ ಕ್ರೆಟಾದ ಫೀಚರ್ ಗಳನ್ನು ಪಡೆಯುವ ಸಾಧ್ಯತೆಯಿದೆ.
- 6-ಸ್ಪೀಡ್ MT ಮತ್ತು 7-ಸ್ಪೀಡ್ DCT ಆಯ್ಕೆಗಳೊಂದಿಗೆ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುವ ನಿರೀಕ್ಷೆಯಿದೆ.
ಜನವರಿ 2024 ರ ಅಂತ್ಯದ ವೇಳೆಗೆ ಬಹಿರಂಗವಾಗಿ ಸ್ಪೈ ಮಾಡಿದ ನಂತರ, ಹ್ಯುಂಡೈ ಕ್ರೆಟಾ N ಲೈನ್ ಈಗ ಅಂತಿಮವಾಗಿ ಬಿಡುಗಡೆ ದಿನಾಂಕವನ್ನು ಪಡೆದಿದೆ. ಇದು ಭಾರತದಲ್ಲಿ ಮಾರ್ಚ್ 11 ರಂದು ಮಾರುಕಟ್ಟೆಗೆ ಬರಲಿದೆ ಮತ್ತು ಫೇಸ್‌ಲಿಫ್ಟ್ ಆಗಿರುವ ಕ್ರೆಟಾದ ಫೀಚರ್-ಲೋಡ್ ಮಾಡಲಾದ ವೇರಿಯಂಟ್ ಗಳನ್ನು ಆಧರಿಸಿದೆ. ಹುಂಡೈ SUV ಯ ಸ್ಪೋರ್ಟಿಯರ್ ವರ್ಷನ್ ನಿಂದ ನೀವು ಏನೇನು ನಿರೀಕ್ಷಿಸಬಹುದು ಎಂಬುದು ಇಲ್ಲಿದೆ:
ವಿಶಿಷ್ಟವಾದ ಮುಂಭಾಗ
ಹಿಂದಿನ ಬಾರಿ ನೋಡಿದಾಗಿನಿಂದ, ಸ್ಪ್ಲಿಟ್-LED ಹೆಡ್‌ಲೈಟ್‌ಗಳನ್ನು ಒಳಗೊಂಡಿರುವ ರಿವೈಸ್ ಆಗಿರುವ ಮುಂಭಾಗದೊಂದಿಗೆ ಕ್ರೆಟಾ N ಲೈನ್ ಸಾಮಾನ್ಯ SUV ಯಿಂದ ಬೇರೆಯಾಗಿದೆ. ಇಲ್ಲಿ LED DRL ಸ್ಟ್ರಿಪ್ ಅನ್ನು ಅದರ ಮೇಲೆ ಇಡಲಾಗಿದೆ, ಜೊತೆಗೆ ಸಣ್ಣ ಗ್ರಿಲ್ ಮತ್ತು ದಪ್ಪ ಬಂಪರ್‌ನಂತಹ ಇತರ ಟ್ವೀಕ್‌ಗಳು ಸೇರಿವೆ.
ಸೈಡ್ ನಲ್ಲಿ ನೋಡಿದಾಗ, ರೆಡ್ ಬ್ರೇಕ್ ಕ್ಯಾಲಿಪರ್‌ಗಳನ್ನು ಒಳಗೊಂಡಿರುವ ರೆಡ್ ಸ್ಕರ್ಟಿಂಗ್ ಮತ್ತು ದೊಡ್ಡದಾದ 18-ಇಂಚಿನ N ಲೈನ್ ನಲ್ಲಿ ಮಾತ್ರ ಇರುವ ಅಲೊಯ್ ವೀಲ್ಸ್ ಕಾಣಸಿಗುತ್ತವೆ. ಹಿಂಭಾಗದಲ್ಲಿ, ಬದಲಾವಣೆಗಳು ಸೂಕ್ಷ್ಮವಾಗಿವೆ. ಇಲ್ಲಿ ಸ್ಪೋರ್ಟಿಯರ್-ಲುಕಿಂಗ್ ಡ್ಯುಯಲ್-ಟಿಪ್ ಎಕ್ಸಾಸ್ಟ್‌ನೊಂದಿಗೆ ರೀಡಿಸೈನ್ ಗೊಳಿಸಲಾದ ಬಂಪರ್ ಅನ್ನು ನೀಡಲಾಗಿದೆ. ಇಲ್ಲಿ ಕೆಲವು 'N ಲೈನ್' ಬ್ಯಾಡ್ಜ್‌ಗಳನ್ನು ಹೊರಭಾಗದಾದ್ಯಂತ ನೀಡುವ ನಿರೀಕ್ಷೆಯಿದೆ.
ಒಳಭಾಗದಲ್ಲಿ ಯಾವುದೇ ಬದಲಾವಣೆಗಳಾಗಿವೆಯೇ?
ರೆಗ್ಯುಲರ್ ಕ್ರೆಟಾದ ಕ್ಯಾಬಿನ್ ಚಿತ್ರವನ್ನು ರೆಫರೆನ್ಸ್ ಗಾಗಿ ಮಾತ್ರ ಬಳಸಲಾಗಿದೆ
ಸ್ಪೈ ಶಾಟ್ ಗಳಲ್ಲಿ ಗಮನಿಸಲಾದ ಪ್ರಮುಖ ವ್ಯತ್ಯಾಸವೆಂದರೆ ರಿಫ್ರೆಶ್ ಆಗಿರುವ ಇಂಟೀರಿಯರ್. ಇತರ N ಲೈನ್ ಮಾಡೆಲ್ ಗಳಲ್ಲಿ ಇರುವಂತೆ ಇಲ್ಲಿ ಕೂಡ ಹ್ಯುಂಡೈ ಇದರ ಕ್ಯಾಬಿನ್‌ಗೆ ಆಲ್ ಬ್ಲಾಕ್ ಲುಕ್ ಅನ್ನು ಆಯ್ಕೆ ಮಾಡಿದೆ. ಇದರ ಜೊತೆಗೆ, ಸೆಂಟ್ರಲ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ ಮತ್ತು ಡ್ಯಾಶ್‌ಬೋರ್ಡ್ ಅನ್ನು ರೆಡ್ ಅಕ್ಸೆಂಟ್ ಜೊತೆಗೆ ನೀಡಿದೆ ಮತ್ತು ಗೇರ್ ಲಿವರ್ ಮತ್ತು ಅಪ್ಹೋಲ್ಸ್ಟರಿ ಎರಡರಲ್ಲೂ ಕಾಂಟ್ರಾಸ್ಟ್ ರೆಡ್ ಸ್ಟಿಚಿಂಗ್ ಇದೆ. N ಲೈನ್ ಗೆ ಮಾತ್ರ ಸೀಮಿತವಾಗಿರುವ ಸ್ಟೀರಿಂಗ್ ವೀಲ್ ಕೂಡ ಲಭ್ಯವಿದೆ.
ನೀಡಿರುವ ಇಕ್ವಿಪ್ಮೆಂಟ್ ಗಳು
ಹ್ಯುಂಡೈ ತನ್ನ ಕ್ರೆಟಾ N ಲೈನ್ ಅನ್ನು ಸಾಮಾನ್ಯ SUV ಯ ಟಾಪ್ ವೇರಿಯಂಟ್ ಗಳ ಮೇಲೆ ಆಧರಿಸಿದೆ. ಆದ್ದರಿಂದ ಇದು ರೆಗ್ಯುಲರ್ ಕ್ರೆಟಾದಲ್ಲಿರುವ ಡ್ಯುಯಲ್ 10.25-ಇಂಚಿನ ಡಿಸ್ಪ್ಲೇ (ಒಂದು ಇನ್ಸ್ಟ್ರುಮೆಂಟೇಶನ್ ಗಾಗಿ ಮತ್ತು ಇನ್ನೊಂದು ಇನ್ಫೋಟೈನ್ಮೆಂಟ್ ಗಾಗಿ), ಡ್ಯುಯಲ್-ಝೋನ್ AC, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳನ್ನು ಪಡೆಯುವ ಸಾಧ್ಯತೆಯಿದೆ.
ಇದರ ಸುರಕ್ಷತಾ ಕಿಟ್ ನಲ್ಲಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಪಡೆಯುವ ನಿರೀಕ್ಷೆಯಿದೆ.
ಇದನ್ನು ಕೂಡ ಓದಿ: ಟಾಟಾ ಪಂಚ್ EV ಟಾಟಾ WPL 2024 ರ ಅಧಿಕೃತ ಕಾರು ಆಗಿ ಆಯ್ಕೆಯಾಗಿದೆ
ಕ್ರೆಟಾ N ಲೈನ್ ಪರ್ಫಾರ್ಮೆನ್ಸ್
ಹ್ಯುಂಡೈ ಕ್ರೆಟಾ N ಲೈನ್ ಗೆ ಸ್ಟ್ಯಾಂಡರ್ಡ್ ಮಾಡೆಲ್ ನಲ್ಲಿ ಕೂಡ ಇರುವ ಅದೇ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 PS/ 253 Nm) ಅನ್ನು ಒದಗಿಸಲಾಗುವುದು, ಆದರೆ 7-ಸ್ಪೀಡ್ DCT (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ಜೊತೆಗೆ 6-ಸ್ಪೀಡ್ ಮ್ಯಾನುವಲ್ ಆಯ್ಕೆಯನ್ನು ಕೂಡ ಪಡೆಯಬಹುದು. N ಲೈನ್ ವರ್ಷನ್ ನಲ್ಲಿ, ಇದು ಸ್ವಲ್ಪ ವಿಭಿನ್ನವಾದ ಸಸ್ಪೆನ್ಶನ್ ಸೆಟಪ್ ಮತ್ತು ಸಾಮಾನ್ಯ ಕ್ರೆಟಾದಿಂದ ಮತ್ತಷ್ಟು ವಿಭಿನ್ನಗೊಳಿಸಲು ಶಾರ್ಪ್ ಆಗಿರುವ ಹ್ಯಾಂಡಲಿಂಗ್ ಗಾಗಿ ಕ್ವಿಕ್ ಆಗಿರುವ ಸ್ಟೀರಿಂಗ್ ಅನ್ನು ಕೂಡ ಪಡೆಯಬಹುದು. ಹ್ಯುಂಡೈ ಇದನ್ನು ಸ್ಪೋರ್ಟಿಯರ್ ಆಗಿ ಕಾಣುವ ಎಕ್ಸಾಸ್ಟ್ ಸೆಟಪ್‌ನೊಂದಿಗೆ ನೀಡಬಹುದು.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಸ್ಪರ್ಧೆ
ಹ್ಯುಂಡೈ ಕ್ರೆಟಾ N ಲೈನ್ ಆರಂಭಿಕ ಬೆಲೆಯು ರೂ 17.50 ಲಕ್ಷ (ಎಕ್ಸ್ ಶೋರೂಂ) ಎಂದು ನಿರೀಕ್ಷಿಸಲಾಗಿದೆ. ಇದು ಕಿಯಾ ಸೆಲ್ಟೋಸ್ GTX+ ಮತ್ತು X-ಲೈನ್ ಜೊತೆಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ, ಇದರ ಜೊತೆಗೆ ಸ್ಕೋಡಾ ಕುಶಾಕ್, ಫೋಕ್ಸ್ ವ್ಯಾಗನ್ ಟೈಗನ್ GT ಲೈನ್ ಮತ್ತು MG ಆಸ್ಟರ್‌ಗಳಿಗೆ ಸ್ಪೋರ್ಟಿಯರ್ ಆಗಿ ಕಾಣುವ ಪರ್ಯಾಯ ಆಯ್ಕೆಯಾಗಲಿದೆ.
ಇನ್ನಷ್ಟು ಓದಿ: ಹ್ಯುಂಡೈ ಕ್ರೆಟಾ ಆನ್ ರೋಡ್ ಬೆಲೆ