Login or Register ಅತ್ಯುತ್ತಮ CarDekho experience ಗೆ
Login

ನೂತನ ಫೇಸ್‌ಲಿಫ್ಟ್ ಆವೃತ್ತಿಯನ್ನು ಪಡೆಯುತ್ತಿರುವ ಹ್ಯುಂಡೈ i20: 2023 ರ ಅಂತ್ಯದೊಳಗೆ ಭಾರತದಲ್ಲಿ ಬಿಡುಗಡೆ ಸಾಧ್ಯತೆ

published on ಮೇ 14, 2023 02:00 pm by sonny for ಹುಂಡೈ I20 2020-2023

ಇದು ಸ್ಪೋರ್ಟಿಯರ್ ಲುಕ್ ಮತ್ತು ಫೀಚರ್ ಅಪ್‌ಡೇಟ್‌ಗಳಿಗಾಗಿ ಸಣ್ಣ ವಿನ್ಯಾಸದ ಬದಲಾವಣೆಯನ್ನು ಹೊಂದಲಿದೆ. ಆದರೆ ಇದನ್ನು ಇಂಡಿಯಾ-ಸ್ಪೆಷಲ್ ಫೇಸ್‌ಲಿಫ್ಟ್ ನಲ್ಲಿ ಕಂಡು ಬರದೆಯೂ ಇರಬಹುದು.

  • ಹುಂಡೈ 2020 ರ ಅಂತ್ಯದ ವೇಳೆಗೆ ಭಾರತದಲ್ಲಿ ಮೂರನೇ ತಲೆಮಾರಿನ i20 ಅನ್ನು ಬಿಡುಗಡೆ ಮಾಡಿತು.
  • ವಾಹನವು ಅಪ್‌ಡೇಟ್ ಮಾಡಲಾದ ಫ್ರಂಟ್ ಫೇಸಿಯಾ, ಹೊಸ ರಿಯರ್ ಬಂಪರ್ ಮತ್ತು ಹೊಸ ಬಣ್ಣದ ಆಯ್ಕೆಗಳೊಂದಿಗೆ ತನ್ನ ಮೊದಲನೇ ನವೀಕೃತ ಅಪ್‌ಡೇಟ್ ಅನ್ನು ಪಡೆದುಕೊಂಡಿದೆ.
  • ಬಹು-ಬಣ್ಣದ ಆಂಬಿಯಂಟ್ ಲೈಟಿಂಗ್ ಅನ್ನು ಹೊರತುಪಡಿಸಿ ಅಂತರರಾಷ್ಟ್ರೀಯ ಮಾಡೆಲ್‌ನಲ್ಲಿ ಕ್ಯಾಬಿನ್ ಬದಲಾಗುವುದಿಲ್ಲ.
  • ಪವರ್‌ಟ್ರೇನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ, ಹಾಗೆಯೇ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ.
  • ಇದು 2023 ರ ಅಂತ್ಯದ ವೇಳೆಗೆ ಭಾರತದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

ಮೂರನೇ-ಪೀಳಿಗೆಯ ಹ್ಯುಂಡೈ i20 ಯು 2020 ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಾದಾರ್ಪಣೆಮಾಡಿತು ಮತ್ತು ಮತ್ತು ಈಗ ವಾಹನವು ಅಲ್ಲಿ ಹೊಸ ನವೀಕೃತ ಅಪ್‌ಡೇಟ್ ಅನ್ನು ಪಡೆದುಕೊಂಡಿದೆ. ಹೊಸ ಅಪ್‌ಡೇಟ್‌ನಿಂದಾಗಿ, ಇದು ಅನೇಕ ಸಣ್ಣ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ, ಜೊತೆಗೆ ಅದರ ಇಂಟೀರಿಯರ್ ಲೈಟಿಂಗ್‌ನಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. 2023 ರ ಅಂತ್ಯದ ವೇಳೆಗೆ ಕಂಪನಿಯು ಈ ಅಪ್‌ಡೇಟ್ ಮಾಡಲಾದ ಮಾಡೆಲ್ ಭಾರತದಲ್ಲಿ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ.

ಹೊಸದೇನು ಲಭ್ಯವಾಗಲಿದೆ?

i20 ಯ ಮಿಡ್-ಲೈಫ್ ಫೇಸ್‌ಲಿಫ್ಟ್‌ನ ವಿನ್ಯಾಸ ಬದಲಾವಣೆಗಳು ಸಾಕಷ್ಟು ಸೂಕ್ಷ್ಮವಾಗಿವೆ. ಮುಂಭಾಗದಲ್ಲಿ, ಹೊಸ ಬಂಪರ್, ಹೊಸ ಗ್ರಿಲ್, ಸೈಡ್ ಇನ್‌ಟೇಕ್‌ಗಳು ಮತ್ತು ಮುಂಭಾಗದಲ್ಲಿ ಹೊಸ ಹೆಡ್‌ಲ್ಯಾಂಪ್‌ಗಳಂತಹ ದೊಡ್ಡ ಬದಲಾವಣೆಯನ್ನು ಗಮನಿಸಬಹುದು. ಕಾರು ಈಗ ಮೊದಲಿಗಿಂತ ಶಾರ್ಪರ್ ಮತ್ತು ಸ್ಪೋರ್ಟಿಯಾಗಿ ಕಾಣುತ್ತದೆ. ರಿಯರ್ ಬಂಪರ್ ಅನ್ನು ಸಹ ಅಪ್‌ಡೇಟ್ ಮಾಡಲಾಗಿದೆ, ರಿಯರ್ ಸ್ಕಿಡ್ ಪ್ಲೇಟ್ ಮತ್ತು ರಿಯರ್ ಕಾಂಟ್ರಾಸ್ಟ್ ಬ್ಲ್ಯಾಕ್ ಅಂಶಗಳೊಂದಿಗೆ, ಇದು ಸ್ಪೋರ್ಟಿಯರ್ ನೋಟವನ್ನು ಪಡೆದುಕೊಳ್ಳುತ್ತದೆ.

ಹುಂಡೈ 16-ಇಂಚಿನ ಮತ್ತು 17-ಇಂಚಿನ ಅಲಾಯ್ ವ್ಹೀಲ್‌ಗಳ ಆಯ್ಕೆಯನ್ನು ಹೊಸ ಫೈವ್-ಪಾಯಿಂಟ್ ಸ್ಟಾರ್ ವಿನ್ಯಾಸದೊಂದಿಗೆ ಅಳವಡಿಸಿದೆ. i20 ಯ ನವೀಕೃತ ಅಂತರರಾಷ್ಟ್ರೀಯ ಮಾಡೆಲ್ ಲುಸಿಡ್ ಲೈಮ್ ಮೆಟಾಲಿಕ್, ಲುಮೆನ್ ಗ್ರೇ ಪರ್ಲ್ ಮತ್ತು ಮೆಟಾ ಬ್ಲೂ ಪರ್ಲ್ ಎಂಬ ಮೂರು ಹೊಸ ಬಾಹ್ಯ ಬಣ್ಣ ಆಯ್ಕೆಗಳನ್ನು ಸಹ ಪಡೆಯುತ್ತದೆ. ಲುಸಿಡ್ ಲೈಮ್ ಆಯ್ಕೆಯು ಅದೇ ಶೇಡ್‌ನಲ್ಲಿ ಕ್ಯಾಬಿನ್ ಮುಖ್ಯಾಂಶಗಳನ್ನು ಸಹ ಪಡೆದುಕೊಳ್ಳುತ್ತದೆ.

ಇದನ್ನೂ ಓದಿ: ಎಕ್ಸ್‌ಟರ್ ಅನ್ನು ಅನಾವರಣಗೊಳಿಸಿದ ಮತ್ತು ಅದರ ಟಾಟಾ-ಪಂಚ್ ಪ್ರತಿಸ್ಪರ್ಧಿ ಎಸ್‌ಯುವಿಗಾಗಿ ಬುಕಿಂಗ್‌ಗಳನ್ನು ಪ್ರಾರಂಭಿಸಿದ ಹ್ಯುಂಡೈ

ಪರಿಚಿತ ವೈಶಿಷ್ಟ್ಯಗಳ ಪಟ್ಟಿ

i20 ಯ ಅಂತಾರಾಷ್ಟ್ರೀಯ ಮಾಡೆಲ್ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ADAS ನಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ, ಆದರೆ ಅವುಗಳು ಅದರ ಭಾರತೀಯ ಮಾಡೆಲ್‌ನಲ್ಲಿ ಲಭ್ಯವಿಲ್ಲ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಸಂಪರ್ಕಿತ ಕಾರು ತಂತ್ರಜ್ಞಾನದೊಂದಿಗೆ ಉಳಿದ ಒಳಾಂಗಣ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಲಾಗಿಲ್ಲ.

ಆದಾಗ್ಯೂ, ಎಲ್‌ಇಡಿ ಕ್ಯಾಬಿನ್ ಲೈಟ್‌ಗಳು ಮತ್ತು ಬಹು-ಬಣ್ಣದ ಆಂಬಿಯಂಟ್ ಲೈಟಿಂಘ್‌ನಂತಹ ಅಪ್‌‍ಡೇಟ್‌ಗಳನ್ನು ಈ ವಾಹನದ ಭಾರತೀಯ ನವೀಕೃತ ಆವೃತ್ತಿಯಲ್ಲಿ ಕಾಣಬಹುದು. ಸುರಕ್ಷತೆಯ ವಿಷಯದಲ್ಲಿ, ನವೀಕೃತ ಮಾಡೆಲ್ ಹೆಚ್ಚಿನ ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಪಡೆಯಬಹುದು ಮತ್ತು ಈಗಾಗಲೇ ಟಾಪ್ ವೇರಿಯಂಟ್‌ನಲ್ಲಿ ಆರು ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ.

ಸಂಬಂಧಿತ: ಹ್ಯುಂಡೈನ ಎಲ್ಲಾ ಕಾರುಗಳಿಗೆ ಸಣ್ಣ ಆದರೆ ಪ್ರಮುಖ ಸುರಕ್ಷತಾ ಅಪ್‌ಡೇಟ್ ಅನ್ನು ಮಾಡಲಾಗಿದೆ

ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ

i20 ಅನ್ನು ಜಾಗತಿಕವಾಗಿ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ 6-ಸ್ಪೀಡ್ iMT ಅಥವಾ 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್‌ಗೆ ಸಂಯೋಜಿಸಲಾಗಿದೆ. ಇಂಡಿಯಾ-ಸ್ಪೆಕ್ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಅದೇ ಎಂಜಿನ್ 120 PS ಪವರ್ ಮತ್ತು 172 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಆದರೆ ಅದರ 1.2-ಲೀಟರ್ ಪೆಟ್ರೋಲ್ ಎಂಜಿನ್ 83 PS ಪವರ್ ಮತ್ತು 114 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಆಯ್ಕೆಯನ್ನು ಪಡೆಯುತ್ತದೆ. ಅದರ ನವೀಕೃತ ಆವೃತ್ತಿಯ ಪವರ್‌ಟ್ರೇನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ.

ಬಿಡುಗಡೆ ಮತ್ತು ಬೆಲೆಗಳು

ನವೀಕೃತ i20 ಜಾಗತಿಕವಾಗಿ ಮೂರನೇ ತ್ರೈಮಾಸಿಕದಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ ಮತ್ತು ಈ ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿ ಇದು ಲಭ್ಯವಾಗುವ ನಿರೀಕ್ಷೆಯಿದೆ. ಇದರ ಪ್ರಸ್ತುತ ಬೆಲೆಗಳು 7.46 ಲಕ್ಷ ರೂ.ದಿಂದ 11.88 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ, ದೆಹಲಿ) ಇದೆ. ಆದರೆ ಈ ವಾಹನದ ಬೆಲೆಯನ್ನು ಪ್ರಸ್ತುತ ಮಾಡೆಲ್‌ಗಿಂತ ಸ್ವಲ್ಪ ಹೆಚ್ಚು ಇರಿಸಬಹುದು ಎಂದು ಅಂದಾಜಿಸಲಾಗಿದೆ. i20 ಯು ಮಾರುತಿ ಬಲೆನೊ, ಟೊಯೊಟಾ ಗ್ಲಾಂಝಾ, ಟಾಟಾ ಆಲ್ಟ್ರೊಝ್ ಮತ್ತು ಸಿಟ್ರಾನ್ C3 ಯೊಂದಿಗೆ ಸ್ಪರ್ಧಿಸುತ್ತದೆ.

ಇದನ್ನೂ ಓದಿ: ಹ್ಯುಂಡೈ i20 ಆಟೋಮ್ಯಾಟಿಕ್

s
ಅವರಿಂದ ಪ್ರಕಟಿಸಲಾಗಿದೆ

sonny

  • 11 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ I20 2020-2023

Read Full News

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ