• English
  • Login / Register

ಈ ವಿವರವಾದ ಗ್ಯಾಲರಿಯಿಂದ Force Gurkha 5-door ಕುರಿತು ತಿಳಿದುಕೊಳ್ಳೋಣ

published on ಮೇ 02, 2024 08:52 pm by ansh for ಬಲ ಗೂರ್ಖಾ 5 ಡೋರ್

  • 28 Views
  • ಕಾಮೆಂಟ್‌ ಅನ್ನು ಬರೆಯಿರಿ

ಉದ್ದವಾದ ಗೂರ್ಖಾವು ಮರುವಿನ್ಯಾಸಗೊಳಿಸಲಾದ ಕ್ಯಾಬಿನ್, ಹೆಚ್ಚಿನ ಬಾಗಿಲುಗಳು, ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಹೆಚ್ಚು ಶಕ್ತಿಶಾಲಿ ಡೀಸೆಲ್ ಎಂಜಿನ್ ಅನ್ನು ಪಡೆಯುತ್ತದೆ.

5-door Force Gurkha Detailed In Pics

ವರ್ಷಗಳ ಅಭಿವೃದ್ಧಿಯ ನಂತರ 5-ಡೋರ್‌ನ ಫೋರ್ಸ್ ಗೂರ್ಖಾವನ್ನು ಅಂತಿಮವಾಗಿ ಅನಾವರಣಗೊಳಿಸಲಾಗಿದೆ ಮತ್ತು ಇದನ್ನು 2024ರ ಮೇ ತಿಂಗಳ ಮೊದಲ ವಾರದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದು ಹೆಚ್ಚುವರಿ ಬಾಗಿಲುಗಳು, ಹೊಸ ವೈಶಿಷ್ಟ್ಯಗಳು ಮತ್ತು ಹೆಚ್ಚು ಶಕ್ತಿಶಾಲಿ ಡೀಸೆಲ್ ಎಂಜಿನ್‌ನ ಹೊರತಾಗಿ ಬಾಹ್ಯ ವಿನ್ಯಾಸದಲ್ಲಿ ಸಣ್ಣ ಬದಲಾವಣೆಗಳೊಂದಿಗೆ ಬರುತ್ತದೆ. ನೀವು ಗೂರ್ಖಾ 5-ಬಾಗಿಲನ್ನು ಖರೀದಿಸಲು ಯೋಜಿಸುತ್ತಿದ್ದರೆ, ಅದನ್ನು ಮೊದಲು ಈ 15 ವಿವರವಾದ ಚಿತ್ರಗಳಲ್ಲಿ ಪರಿಶೀಲಿಸಿ.

ಹೊರಭಾಗ

5-door Force Gurkha Front

ಮುಂಭಾಗದಲ್ಲಿ, 3-ಡೋರ್‌ನ ಮೊಡೆಲ್‌ನಂತೆ ಇದ್ದು, ಏನೂ ಬದಲಾಗಿಲ್ಲ. ಗ್ರಿಲ್, ಬಾನೆಟ್ ಮತ್ತು ಬಂಪರ್‌ಗಳ ವಿನ್ಯಾಸವು ಹಾಗೆಯೇ ಉಳಿದಿದೆ. ಒರಟಾದ ಆಫ್-ರೋಡರ್‌ಗಾಗಿ ಏರ್ ಸ್ನಾರ್ಕೆಲ್ ಪ್ರಮಾಣಿತ ಕಿಟ್‌ನ ಭಾಗವಾಗಿದೆ.

5-door Force Gurkha Headlight

ಇಲ್ಲಿ, ನೀವು ಅದೇ ವೃತ್ತಾಕಾರದ ಎಲ್ಇಡಿ ಹೆಡ್‌ಲೈಟ್‌ಗಳನ್ನು ಪಡೆಯುತ್ತೀರಿ (ಈಗ ಕಾರ್ನರ್ ಮಾಡುವ ಫಂಕ್ಷನ್‌ನೊಂದಿಗೆ), ಮತ್ತು ಡಿಎಲ್‌ಆರ್‌ಗಳ ಸೆಟಪ್ ಅದರ 3-ಡೋರ್‌ನ ಪ್ರತಿರೂಪದಂತೆಯೇ ಇರುತ್ತದೆ.

5-door Force Gurkha Side

ಬದಿಯಿಂದ ಗಮನಿಸುವಾಗ, ಅತ್ಯಂತ ಸ್ಪಷ್ಟವಾದ ಬದಲಾವಣೆಯು ಹೆಚ್ಚುವರಿ ಹಿಂದಿನ ಬಾಗಿಲುಗಳ ಸೆಟ್ ಆಗಿದೆ. ಚಕ್ರ ಕಮಾನುಗಳು, ಕ್ಲಾಡಿಂಗ್ ಮತ್ತು ಸೈಡ್ ಸ್ಟೆಪ್ ಸೇರಿದಂತೆ ಎಲ್ಲವೂ 3-ಡೋರ್‌ನ ಆವೃತ್ತಿಗೆ ಹೋಲುತ್ತವೆ. ಆದಾಗ್ಯೂಗಿಯೂ, 5-ಬಾಗಿಲಿನ ಆವೃತ್ತಿಯಲ್ಲಿ ಮೂರನೇ ಸಾಲಿನ ವಿಂಡೋವು 3-ಬಾಗಿಲಿನ ಆವೃತ್ತಿಯಲ್ಲಿ ಇರುವುದಕ್ಕಿಂತ ಚಿಕ್ಕದಾಗಿದೆ ಮತ್ತು ಅದು ಸಹ ತೆರೆಯುತ್ತದೆ.

ಇದನ್ನೂ ಓದಿ: ಫೋರ್ಸ್ ಗೂರ್ಖಾ 3-ಡೋರ್ ಅನ್ನು ಹೆಚ್ಚಿನ ಸೌಕರ್ಯಗಳು ಮತ್ತು ಪರ್ಫಾರ್ಮೆನ್ಸ್‌ನೊಂದಿಗೆ ಆಪ್‌ಗ್ರೇಡ್‌

5-door Force Gurkha Alloy Wheel

ಅಲ್ಲದೆ, 5-ಡೋರ್‌ನ ಗೂರ್ಖಾವು  ಮರುವಿನ್ಯಾಸಗೊಳಿಸಲಾದ 18-ಇಂಚಿನ ಅಲಾಯ್‌ ವೀಲ್‌ಗಳನ್ನು ಪಡೆಯುತ್ತದೆ, ಇದನ್ನು 2024ರ 3-ಡೋರ್‌ನ ಆವೃತ್ತಿಗೂ ಸೇರಿಸಲಾಗಿದೆ. 

5-door Force Gurkha Rear

ಮುಂಭಾಗದಂತೆಯೇ, ಹಿಂಭಾಗವು ಸಹ ಯಾವುದೇ ವಿನ್ಯಾಸ ಬದಲಾವಣೆಗಳನ್ನು ಪಡೆಯುವುದಿಲ್ಲ. ಹಿಂಭಾಗದಲ್ಲಿ ಜೋಡಿಸಲಾದ ಸ್ಪೇರ್‌ ವೀಲ್‌ ಅನ್ನು ಹೊರತುಪಡಿಸಿ, ಬೂಟ್ ಲಿಪ್, ಬಂಪರ್‌ಗಳು ಮತ್ತು ಟೈಲ್ ಲೈಟ್‌ಗಳು ಸೇರಿದಂತೆ ಎಲ್ಲಾ ವಿನ್ಯಾಸದ ಅಂಶಗಳು ಹಳೆಯ 3-ಬಾಗಿಲಿನ ಆವೃತ್ತಿಯಂತೆಯೇ ಇರುತ್ತವೆ.

ಇಂಟೀರಿಯರ್

5-door Force Gurkha Dashboard

ಕ್ಯಾಬಿನ್ ಒಳಭಾಗದಲ್ಲಿ, ಒಟ್ಟಾರೆ ವಿನ್ಯಾಸವು 3-ಡೋರ್‌ನ ಆವೃತ್ತಿಯಂತೆಯೇ ಇರುತ್ತದೆ.  ಇದು ಅದರಂತೆ ಸೆಂಟರ್ ಕನ್ಸೋಲ್, ಕ್ಲೈಮೇಟ್ ಕಂಟ್ರೋಲ್‌ಗಳು ಮತ್ತು ಎಸಿ ವೆಂಟ್‌ಗಳು ಮತ್ತು ಸ್ಟೀರಿಂಗ್ ವೀಲ್ ಅನ್ನು ಸಹ ಪಡೆಯುತ್ತದೆ. ಡ್ಯಾಶ್‌ಬೋರ್ಡ್‌ನ ಏಕೈಕ ಬದಲಾವಣೆಯೆಂದರೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್.

ಇದನ್ನು ಸಹ ಓದಿ: Hyundai Creta EV 2025 ರಲ್ಲಿ ಮಾರುಕಟ್ಟೆಗೆ ಬರುವ ಸಾದ್ಯತೆ, ಇದಕ್ಕೆ ಕಾರಣಗಳು ಇಲ್ಲಿವೆ

5-door Force Gurkha Front Row

ಮುಂಭಾಗದ ಆಸನಗಳ ವಿನ್ಯಾಸವು ಒಂದೇ ಆಗಿರುತ್ತದೆ ಆದರೆ ಹಳೆಯ 3-ಡೋರ್‌ನಲ್ಲಿ ಬಳಸಲಾದ ನೀಲಿ ಬಣ್ಣಕ್ಕೆ ಹೋಲಿಸಿದರೆ, 5-ಡೋರ್‌ನ ಗೂರ್ಖಾದಲ್ಲಿ (ರೆಡ್‌ನಲ್ಲಿ ಫಿನಿಶ್‌ ಮಾಡಲಾದ) ಆಸನಗಳ ಮಾದರಿಯು ವಿಭಿನ್ನವಾಗಿದೆ. 

5-door Force Gurkha Second Row

ಗೂರ್ಖಾ 5-ಡೋರ್‌ನಲ್ಲಿ, ನೀವು ಎರಡನೇ ಸಾಲಿನಲ್ಲಿ ಬೆಂಚ್ ಸೀಟ್‌ಗಳನ್ನು ಪಡೆಯುತ್ತೀರಿ ಅದು ಕಪ್‌ಹೋಲ್ಡರ್‌ಗಳೊಂದಿಗೆ ಸೆಂಟರ್ ಆರ್ಮ್‌ರೆಸ್ಟ್‌ ಅನ್ನು ಹೊಂದಿದೆ.

5-door Force Gurkha Third Row

ಈ ಹೊಸ ಗೂರ್ಖಾದ ಪ್ರಮುಖ ಹೈಲೈಟ್‌ನ ಕಡೆಗೆ ಹೋಗುತ್ತಿದ್ದೇವೆ, ಅದುವೇ ಮೂರನೇ ಸಾಲು. ಇಲ್ಲಿ ನೀವು ಕ್ಯಾಪ್ಟನ್ ಸೀಟ್‌ಗಳನ್ನು ಪಡೆಯುತ್ತೀರಿ, ಇದರಿಂದಾಗಿ ಚಾಲಕ ಸೇರಿದಂತೆ ಒಟ್ಟು 7 ಪ್ರಯಾಣಿಕರು ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ, ಗೂರ್ಖಾದ ಮೂರನೇ ಸಾಲಿಗೆ ಹೋಗಲು, ನೀವು ಬೂಟ್ ಮೂಲಕ ಪ್ರವೇಶಿಸಬೇಕು, ಆದ್ದರಿಂದ ಎಲ್ಲಾ ಸೀಟ್‌ಗಳನ್ನು ಬಳಸುವಾಗ ನಿಮಗೆ ಲಗೇಜ್‌ಗೆ ಸ್ಥಳಾವಕಾಶವಿಲ್ಲ. ಆದರೆ ಉತ್ತಮ ಅಂಶವೆಂದರೆ, ಇದು ಈಗ ಒಪ್ಶನಲ್‌ ರೂಫ್‌ ಕೇರಿಯರ್‌ ಅನ್ನು ಪಡೆಯುತ್ತದೆ.

ವೈಶಿಷ್ಟ್ಯಗಳು

5-door Force Gurkha 9-inch Touchscreen

ಹೊಸ 5-ಡೋರ್‌ನ ಗೂರ್ಖಾ ಮತ್ತು 2024 ರ 3-ಡೋರ್‌ನ ಗೂರ್ಖಾ ಎರಡರಲ್ಲೂ ಮುಖ್ಯ ವೈಶಿಷ್ಟ್ಯ ಸೇರ್ಪಡೆಯೆಂದರೆ, ಹಳೆಯ 3-ಬಾಗಿಲಿನ ಆವೃತ್ತಿಯಲ್ಲಿಲ್ಲದ ಹೊಸ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಆಗಿದೆ. ಇದು ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುತ್ತದೆ.

5-door Force Gurkha Digital Driver's Display

ಇದು ಈಗ 7-ಇಂಚಿನ ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ಪಡೆಯುತ್ತದೆ ಮತ್ತು ಉಳಿದ ವೈಶಿಷ್ಟ್ಯಗಳೆಲ್ಲಾ ಹಳೆಯ 3-ಡೋರ್‌ನ ಗೂರ್ಖಾದಂತೆ ಇರಲಿದೆ, ಇದರಲ್ಲಿ ಮ್ಯಾನುಯಲ್ ಕ್ಲೈಮೇಟ್ ಕಂಟ್ರೋಲ್ (ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ) ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ORVM ಗಳು, ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್, ಡ್ಯುಯಲ್-ಫ್ರಂಟ್ ಏರ್‌ಬ್ಯಾಗ್‌ EBD ಜೊತೆಗೆ ABS, ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್‌ಗಳು ಸೇರಿವೆ. 

ಇದನ್ನು ಸಹ ಓದಿ: Mahindra Thar 5-doorನ ಒಳಭಾಗದ ಫೋಟೊಗಳು ಲೀಕ್‌ - ಇದು ADAS ಪಡೆಯುತ್ತದೆಯೇ?

ಪವರ್‌ಟ್ರೇನ್‌

5-door Force Gurkha Diesel Engine

ಫೋರ್ಸ್ ಗೂರ್ಖಾದ 5-ಡೋರ್‌ ಮತ್ತು 3-ಡೋರ್‌ ಎರಡೂ ಆವೃತ್ತಿಗಳಲ್ಲಿ ಡೀಸೆಲ್ ಎಂಜಿನ್ ಅನ್ನು ಆಪ್‌ಡೇಟ್‌ ಮಾಡಿದೆ. ಇದು ಈಗಲೂ 2.6-ಲೀಟರ್ ಎಂಜಿನ್‌ ಅನ್ನು ಪಡೆಯುತ್ತದೆ ಆದರೆ ಈಗ ಹೆಚ್ಚು ಶಕ್ತಿಶಾಲಿಯಾಗಿದೆ. ಏಕೆಂದರೆ ಅದು ಈಗ 140 ಪಿಎಸ್‌ ಮತ್ತು 320 ಎನ್‌ಎಮ್‌ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ. 

5-door Force Gurkha 5-speed Manual Transmission

ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಜೋಡಿಸಲಾಗಿದೆ.

5-door Force Gurkha Electronic Shift On Fly

ಆದಾಗಿಯೂ, ಆಫ್-ರೋಡರ್ ಈಗ ಎಲೆಕ್ಟ್ರಾನಿಕ್ ಶಿಫ್ಟ್-ಆನ್-ಫ್ಲೈ ಫಂಕ್ಷನ್‌ನೊಂದಿಗೆ ಬರುತ್ತದೆ, ಇದು ಟೂ-ವೀಲ್-ಡ್ರೈವ್‌ನಿಂದ ಹಿಂಬದಿ-ಚಕ್ರ-ಡ್ರೈವ್ ಮತ್ತು 4-ಲೋ (ಆಫ್-ರೋಡಿಂಗ್‌ಗಾಗಿ) ಸುಲಭವಾಗಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಇದು ಹಳೆಯ 3-ಡೋರ್‌ನ ಮೊಡೆಲ್‌ನಂತೆಯೇ ಮ್ಯಾನುಯಲ್‌ ಆಗಿ ಲಾಕ್ ಮಾಡುವ ಮುಂಭಾಗ ಮತ್ತು ಹಿಂಭಾಗದ ಲಾಕರ್‌ಗಳನ್ನು ಸಹ ಪಡೆಯುತ್ತದೆ.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

5-door Force Gurkha

 Force ತನ್ನ ಗೂರ್ಖಾ 5-ಡೋರ್ ಅನ್ನು 2024ರ ಮೇ ತಿಂಗಳ ಮೊದಲ ವಾರದಲ್ಲಿ ಬಿಡುಗಡೆ ಮಾಡಲಿದೆ ಮತ್ತು ಅದರ ಬೆಲೆಗಳು  16 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಮುಂಬರುವ ಮಹೀಂದ್ರಾ ಥಾರ್ 5-ಡೋರ್‌ಗೆ ರಗಡ್‌ ಆದ ಪರ್ಯಾಯವಾಗಿದ್ದು, ಮಾರುತಿ ಸುಜುಕಿ ಜಿಮ್ನಿಗೆ ದೊಡ್ಡ ಆಯ್ಕೆಯಾಗಿ ಸ್ಪರ್ಧೆ ನೀಡಲಿದೆ. 

ಇನ್ನಷ್ಟು ಓದಿ : ಫೋರ್ಸ್ ಗೂರ್ಖಾ ಡೀಸೆಲ್ 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಬಲ ಗೂರ್ಖಾ 5 Door

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience