• English
  • Login / Register

ಆಫ್‌ರೋಡ್‌ನ ಕಿಂಗ್‌ ಆಗಲು ರೆಡಿಯಾಗಿರುವ Force Gurkha 5-door ಬಿಡುಗಡೆ, ಬೆಲೆಗಳು 18 ಲಕ್ಷ ರೂ.ನಿಂದ ಪ್ರಾರಂಭ

ಬಲ ಗೂರ್ಖಾ ಗಾಗಿ shreyash ಮೂಲಕ ಮೇ 03, 2024 12:42 pm ರಂದು ಮಾರ್ಪಡಿಸಲಾಗಿದೆ

  • 34 Views
  • ಕಾಮೆಂಟ್‌ ಅನ್ನು ಬರೆಯಿರಿ

ಫೋರ್ಸ್ ಗೂರ್ಖಾದ ಹೊಸ 3-ಡೋರ್ ಆವೃತ್ತಿಯು ಅದರ 5-ಡೋರ್ ಆವೃತ್ತಿಯಂತೆ ಅದೇ ವೈಶಿಷ್ಟ್ಯ ಮತ್ತು ಪವರ್‌ಟ್ರೇನ್ ಆಪ್‌ಡೇಟ್‌ಗಳನ್ನು ಪಡೆಯುತ್ತದೆ

Force Gurkha 5-door and 3-door

  • ಬದಿಯಲ್ಲಿ ಎರಡು ಹೆಚ್ಚುವರಿ ಬಾಗಿಲುಗಳ ಹೊರತಾಗಿ, ಗೂರ್ಖಾ 5-ಡೋರ್‌ ಅದರ 3-ಡೋರ್‌ನ ಪ್ರತಿರೂಪದಂತೆಯೇ ಕಾಣುತ್ತದೆ. 
  • ಹೊರಭಾಗದ ಮುಖ್ಯಾಂಶಗಳು ವೃತ್ತಾಕಾರದ ಎಲ್ಇಡಿ ಹೆಡ್‌ಲೈಟ್‌ಗಳು, ಸ್ನಾರ್ಕೆಲ್ ಮತ್ತು ರೂಫ್ ರಾಕ್ ಅನ್ನು ಒಳಗೊಂಡಿವೆ.
  • ಒಳಭಾಗದಲ್ಲಿ, ಗೂರ್ಖಾ 5-ಡೋರ್‌ ತಾಜಾ ಡ್ಯುಯಲ್-ಟೋನ್ ಆಪ್ಹೊಲ್ಸ್‌ಟೆರಿ ಮತ್ತು ಮೂರನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್‌ಗಳೊಂದಿಗೆ 7-ಸೀಟ್ ಲೇಔಟ್ ಅನ್ನು ಪಡೆಯುತ್ತದೆ.
  • ಗೂರ್ಖಾ 5-ಡೋರ್ ಮತ್ತು 3-ಡೋರ್ ಎರಡೂ ಈಗ ದೊಡ್ಡ 9-ಇಂಚಿನ ಟಚ್‌ಸ್ಕ್ರೀನ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಹೊಸ ಶಿಫ್ಟ್-ಆನ್-ಫ್ಲೈ ವೈಶಿಷ್ಟ್ಯವನ್ನು ಪಡೆಯುತ್ತವೆ.
  • ಈ SUVಗಳು ಅದೇ 2.6-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಳಸುತ್ತವೆ, ಆದರೆ ಹೆಚ್ಚಿನ ಶಕ್ತಿಯನ್ನು ಹೊಂದಿದೆ: 140 PS ಮತ್ತು 320 Nm.

ಅನಾವರಣಗೊಂಡ ಕೆಲವೇ ದಿನಗಳಲ್ಲಿ, ಫೋರ್ಸ್ ಗೂರ್ಖಾ 5-ಡೋರ್ ಅನ್ನು18 ಲಕ್ಷ ರೂ.ಗೆ(ಪರಿಚಯಾತ್ಮಕ ಎಕ್ಸ್ ಶೋರೂಂ) ಬಿಡುಗಡೆ ಮಾಡಲಾಗಿದೆ. ಆದರೆ ಇದಷ್ಟೇ ಅಲ್ಲದೆ, ಪ್ರಸ್ತುತ 3-ಡೋರ್‌ನ ಗೂರ್ಖಾ ಕೂಡ ಅದೇ ವೈಶಿಷ್ಟ್ಯ ಮತ್ತು ಪವರ್‌ಟ್ರೇನ್ ಆಪ್‌ಡೇಟ್‌ಗಳನ್ನು ಪಡೆದುಕೊಂಡಿದೆ ಮತ್ತು ಈಗ ಇದರ ಬೆಲೆ 16.75 ಲಕ್ಷ ರೂ.ನಿಂದ (ಪರಿಚಯಾತ್ಮಕ ಎಕ್ಸ್ ಶೋರೂಂ) ಪ್ರಾರಂಭವಾಗಲಿದೆ.

ಡಿಸೈನ್ 

5-door Force Gurkha Front

ಫೋರ್ಸ್ ತನ್ನ ಗೂರ್ಖಾ 5-ಡೋರ್‌ ಆವೃತ್ತಿಯನ್ನು ಸಾಂಪ್ರದಾಯಿಕ ಬಾಕ್ಸ್ ಎಸ್‌ಯುವಿ ವಿನ್ಯಾಸದಲ್ಲಿ ನೀಡುತ್ತಿದೆ ಮತ್ತು ಇದು ಆದರ 3-ಡೋರ್‌ ಆವೃತ್ತಿಯಂತೆ ಕಾಣುತ್ತದೆ. ಮುಂಭಾಗದಲ್ಲಿ, ಇದು ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ವೃತ್ತಾಕಾರದ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು 'ಗೂರ್ಖಾ' ಮಾನಿಕರ್ ಅನ್ನು ಪ್ರದರ್ಶಿಸುವ ಆಯತಾಕಾರದ ಗ್ರಿಲ್ ಅನ್ನು ಒಳಗೊಂಡಿದೆ. ಅದರ 3-ಡೋರ್‌ನ ಪ್ರತಿರೂಪದಂತೆ, ಗೂರ್ಖಾ 5-ಬಾಗಿಲು ಕೂಡ A-ಪಿಲ್ಲರ್‌ನಲ್ಲಿ  ಫ್ಯಾಕ್ಟರಿ ಫಿಟ್ಟೆಡ್‌ ಸ್ನಾರ್ಕೆಲ್‌ನೊಂದಿಗೆ ಸಜ್ಜುಗೊಂಡಿದೆ.

Force Gurkha 5-door rear

ಸೈಡ್‌ನಿಂದ ಗಮನಿಸುವಾಗ ಇದು ಎರಡು ಹೆಚ್ಚುವರಿ ಬಾಗಿಲುಗಳು ಮತ್ತು ಹೊಸ 18-ಇಂಚಿನ ಅಲಾಯ್‌ ವೀಲ್‌ಗಳ ಜೊತೆಗೆ ಅದರ 3-ಬಾಗಿಲಿನ ಆವೃತ್ತಿಗಿಂತ ಗೂರ್ಖಾ 5-ಬಾಗಿಲಿನ ಉದ್ದವು ಸಾಕಷ್ಟು ಸ್ಪಷ್ಟವಾಗಿದೆ. ಈ ಎಸ್‌ಯುವಿಯ ಹಿಂಭಾಗದ ಫೆಂಡರ್‌ಗಳಲ್ಲಿ '4x4x4' ಬ್ಯಾಡ್ಜ್ ಅನ್ನು ಸಹ ಹೊಂದಿದೆ. ಹಿಂಭಾಗದಲ್ಲಿ ಗಮನಿಸುವಾಗ, ಇದು ಎಲ್ಇಡಿ ಟೈಲ್ ಲೈಟ್‌ಗಳು, ರೂಫ್-ಮೌಂಟೆಡ್ ಸ್ಪೇರ್ ವೀಲ್ ಮತ್ತು ರೂಫ್ ರಾಕ್ ಅನ್ನು ಪ್ರವೇಶಿಸಲು ಲ್ಯಾಡರ್ ಅನ್ನು ಹೊಂದಿದೆ. ಅದರ ಹೊಸ 5-ಡೋರ್‌ನ ಆವೃತ್ತಿಯಲ್ಲಿ, ಫೋರ್ಸ್ ಎಸ್‌ಯುವಿ ಈಗ ಐಕಾನಿಕ್ Mercedes-Benz G-Class SUV ಗೆ ಇನ್ನೂ ಬಲವಾದ ಹೋಲಿಕೆಯನ್ನು ಹೊಂದಿದೆ ಎಂಬುವುದು ನಾವು ಗಮನಿಸಿದ ಆಸಕ್ತಿದಾಯಕ ಅಂಶಗಳಲ್ಲಿ ಒಂದಾಗಿದೆ. 

2024 Gurkha 3-door rear

3-ಡೋರ್‌ನ ಆವೃತ್ತಿಯ ಫೋರ್ಸ್ ಗೂರ್ಖಾ ವಿನ್ಯಾಸವು ಅದರ ಹಿಂದಿನ ಆವೃತ್ತಿಯಂತೆಯೇ ಉಳಿದಿದೆ, ಆದರೆ ಇದು ಗೂರ್ಖಾ 5-ಡೋರ್‌ನಿಂದ ಹೊಸದಾದ ಸ್ಟೈಲ್‌ನ 18-ಇಂಚಿನ ಅಲಾಯ್‌ ವೀಲ್‌ಗಳನ್ನು ಎರವಲು ಪಡೆಯುತ್ತದೆ. 

ಇದನ್ನು ಸಹ ಓದಿ: ಈ ವಿವರವಾದ ಗ್ಯಾಲರಿಯಿಂದ Force Gurkha 5-door ಕುರಿತು ತಿಳಿದುಕೊಳ್ಳೋಣ

ಇಂಟಿರೀಯರ್‌ ಕುರಿತು

Force Gurkha 5-door cabin

ಒಳಭಾಗದಲ್ಲಿ, ಫೋರ್ಸ್ ಗೂರ್ಖಾದ 3-ಡೋರ್‌ ಮತ್ತು 5-ಡೋರ್‌ನ ಎರಡೂ ಆವೃತ್ತಿಗಳು ಒಂದೇ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ನೀಡುತ್ತವೆ. ಹಾಗೆಯೇ, ಗೂರ್ಖಾ 5-ಡೋರ್‌ ಮೊಡೆಲ್‌ ಹೆಚ್ಚುವರಿ ಸೀಟ್‌ನ ಸಾಲುಗಳು ಮತ್ತು ಆಪ್‌ಡೇಟ್‌ ಮಾಡಲಾದ ಅಪ್ಹೋಲ್ಸ್‌ಟೆರಿಯನ್ನು ಒಳಗೊಂಡಿದೆ. 5-ಡೋರ್‌ನ ಗೂರ್ಖಾವು ಎರಡನೇ ಸಾಲಿನಲ್ಲಿ ಬೆಂಚ್ ಸೀಟುಗಳನ್ನು ಮತ್ತು ಮೂರನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್‌ಗಳನ್ನು ಹೊಂದಿದೆ. ಇದು ಹಿಂಭಾಗದಲ್ಲಿ ರೂಫ್-ಮೌಂಟೆಡ್ ಎಸಿ ವೆಂಟ್‌ಗಳನ್ನು ಸಹ ಪಡೆಯುತ್ತದೆ.

ಫೋರ್ಸ್ ಗೂರ್ಖಾದ ಎರಡೂ ಆವೃತ್ತಿಗಳನ್ನು 9-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಮ್ಯಾನುಯಲ್ ಎಸಿ ಮತ್ತು ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇಯಂತಹ ಸೌಕರ್ಯಗಳೊಂದಿಗೆ ಸಜ್ಜುಗೊಳಿಸಿದೆ. ಗೂರ್ಖಾ 5-ಡೋರ್‌ ಎಲ್ಲಾ ನಾಲ್ಕು ಪವರ್ ವಿಂಡೋಗಳನ್ನು ಪಡೆಯುತ್ತದೆ, ಆದರೆ ಅದರ 3-ಡೋರ್‌ನ ಆವೃತ್ತಿಯು ಮುಂಭಾಗದಲ್ಲಿ ಮಾತ್ರ ಪವರ್ ವಿಂಡೋಗಳನ್ನು ಪಡೆಯುತ್ತದೆ. ಹಿಂದಿನ ಪ್ರಯಾಣಿಕರು ಫಿಕ್ಸ್‌ ಮಾಡಲಾದ ಪನೋರಮಿಕ್ ವಿಂಡೋವನ್ನು ಸಹ ಪಡೆಯುತ್ತಾರೆ.

 ಸುರಕ್ಷತೆಯ ದೃಷ್ಟಿಯಿಂದ, ಎರಡೂ ಎಸ್‌ಯುವಿಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಗಳನ್ನು ಹೊಂದಿವೆ.

ಹೆಚ್ಚು ಶಕ್ತಿಶಾಲಿ ಎಂಜಿನ್

ಆಪ್‌ಡೇಟ್‌ ಮಾಡಲಾದ ಗೂರ್ಖಾ ಎಸ್‌ಯುವಿಗಳು ಅದೇ 2.6-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಳಸುತ್ತದೆ, ಆದರೆ ಈ ಬಾರಿ ಹೆಚ್ಚಿನ ಪವರ್‌ ಅನ್ನು ನೀಡಲಾಗಿದೆ.  

ಎಂಜಿನ್ 

2.6-ಲೀಟರ್ ಡೀಸೆಲ್ ಎಂಜಿನ್

ಪವರ್ 

140 ಪಿಎಸ್

ಟಾರ್ಕ್‌

320 ಎನ್ಎಂ

ಟ್ರಾನ್ಸ್‌ಮಿಷನ್‌

5-ಸ್ಪೀಡ್‌ ಮ್ಯಾನುಯಲ್‌

ಗೂರ್ಖಾ 5-ಡೋರ್‌ ಮತ್ತು 3-ಡೋರ್‌ ಎರಡೂ ಆವೃತ್ತಿಗಳು 4x4 ಡ್ರೈವ್‌ಟ್ರೇನ್‌ನೊಂದಿಗೆ ಪ್ರಮಾಣಿತವಾಗಿ ಬರುತ್ತವೆ, ಕಡಿಮೆ-ರೇಂಜ್‌ನ ವರ್ಗಾವಣೆ ಸೌಲಭ್ಯವನ್ನು ಒಳಗೊಂಡಿರುತ್ತವೆ ಮತ್ತು ಮುಂಭಾಗ ಮತ್ತು ಹಿಂಭಾಗದ ಲಾಕರ್‌ಗಳನ್ನು ಮ್ಯಾನುಯಲ್‌ ಆಗಿ ಲಾಕ್ ಮಾಡುತ್ತವೆ. ಅಪ್‌ಡೇಟ್‌ನ ಭಾಗವಾಗಿ, ಅವರು ವವರ್ಗಾವಣೆ ಸೌಲಭ್ಯಕ್ಕಾಗಿ ಎಲೆಕ್ಟ್ರಾನಿಕ್ ಸ್ವಿಫ್ಟ್ ಅನ್ನು ಸಹ ಹೊಂದಿದೆ, ಇದನ್ನು ಶಿಫ್ಟ್-ಆನ್-ದಿ-ಫ್ಲೈ ಫಂಕ್ಷನ್‌ ಎಂದು ಕರೆಯಲಾಗುತ್ತದೆ, ಇದು 2H, 4H ಮತ್ತು 4L ನಡುವೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಎರಡೂ ಎಸ್‌ಯುವಿಗಳು 233 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ನೀಡುತ್ತವೆ ಮತ್ತು ಫ್ಯಾಕ್ಟರಿ-ಫಿಟ್‌ ಮಾಡಲಾಗಿರುವ ಸ್ನಾರ್ಕೆಲ್‌ನಿಂದಾಗಿ  ಅವುಗಳು 700 ಎಂಎಂವರೆಗೆ ನೀರಿನಲ್ಲಿ ಮುಳುಗಿ ಸಾಗುವ ಸಾಮರ್ಥ್ಯವನ್ನು ಹೊಂದಿವೆ.

ಪ್ರತಿಸ್ಪರ್ಧಿಗಳು

ಫೋರ್ಸ್ ಗೂರ್ಖಾ 5-ಡೋರ್ ಮುಂಬರುವ ಮಹೀಂದ್ರಾ ಥಾರ್ 5-ಡೋರ್ ಗೆ ಸ್ಪರ್ಧೆಯನ್ನು ನೀಡಲಿದೆ, ಹಾಗೆಯೇ ಇದನ್ನು ಮಾರುತಿ ಜಿಮ್ನಿಗೆ ದೊಡ್ಡ ಪರ್ಯಾಯವಾಗಿ ಪರಿಗಣಿಸಬಹುದು. ಮತ್ತೊಂದೆಡೆ ಫೋರ್ಸ್ ಗೂರ್ಖಾ 3-ಡೋರ್ ಸಾಮಾನ್ಯ ಮಹೀಂದ್ರಾ ಥಾರ್ ಗೆ ನೇರ ಪ್ರತಿಸ್ಪರ್ಧಿಯಾಗಲಿದೆ.

ಇನ್ನಷ್ಟು ಓದಿ : ಫೋರ್ಸ್ ಗೂರ್ಖಾ ಡೀಸೆಲ್

was this article helpful ?

Write your Comment on Force ಗೂರ್ಖಾ

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience