ಭಾರತದಲ್ಲಿ ಭಾರೀ ಮಾರಾಟದ ಮೈಲಿಗಲ್ಲನ್ನು ತಲುಪಿದ Hyundai Ioniq 5
ಹುಂಡೈ ಅಯಾನಿಕ್ 5 ಗಾಗಿ rohit ಮೂಲಕ ನವೆಂಬರ್ 29, 2023 02:10 pm ರಂದು ಪ್ರಕಟಿಸಲಾಗಿದೆ
- 48 Views
- ಕಾಮೆಂಟ್ ಅನ್ನು ಬರೆಯಿರಿ
ಅಯಾನಿಕ್ 5 ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ ಒಂದು ವರ್ಷದೊಳಗೆ 1,000-ಯುನಿಟ್ ಮಾರಾಟದ ಗಡಿಯನ್ನು ದಾಟಿದೆ
- ಹ್ಯುಂಡೈ ಅಯಾನಿಕ್ 5 ಅನ್ನು 2023 ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆ ಮಾಡಲಾಗಿತ್ತು.
- ಇದು ಭಾರತದಲ್ಲಿ ಲಭ್ಯವಿರುವ ಹ್ಯುಂಡೈನ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಕಾರು ಆಗಿದೆ.
- ಇದು 72.6 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಅದರ 217PS ಇ-ಮೋಟಾರ್‌ನಿಂದ 631 km ರೇಂಜ್ ಅನ್ನು ಒದಗಿಸುತ್ತದೆ.
- ಇದು ಡ್ಯುಯಲ್ 12.3-ಇಂಚಿನ ಸ್ಕ್ರೀನ್, ಆರು ಏರ್‌ಬ್ಯಾಗ್‌ಗಳು ಮತ್ತು ADAS ನಂತಹ ಫೀಚರ್‌ಗಳನ್ನು ಹೊಂದಿದೆ.
- ಭಾರತದಲ್ಲಿ ತಯಾರಿಸಲಾದ ಈ ವಾಹನದ ಬೆಲೆ ರೂ. 45.95 ಲಕ್ಷ (ಎಕ್ಸ್ ಶೋರೂಂ ದೆಹಲಿ) ಆಗಿದೆ.
ಜನವರಿಯಲ್ಲಿ ನಡೆದ ಆಟೋ ಎಕ್ಸ್‌ಪೋ 2023 ರಲ್ಲಿ ಬಿಡುಗಡೆಯಾದ ಹ್ಯುಂಡೈ ಅಯಾನಿಕ್ 5 ಭಾರತದಲ್ಲಿ ಸುಮಾರು ಒಂದು ವರ್ಷವನ್ನು ಪೂರ್ಣಗೊಳಿಸುತ್ತಿದೆ. ಜುಲೈ 2023 ರಲ್ಲಿ 500-ಯುನಿಟ್ ಮಾರಾಟ ಕಂಡಿದ್ದ ಈ ಎಲೆಕ್ಟ್ರಿಕ್ ಕ್ರಾಸ್‌ಓವರ್ ಬಳಿಕ ಐದು ತಿಂಗಳೊಳಗೆ 1,000-ಯುನಿಟ್ ಮಾರಾಟದ ಗಡಿಯನ್ನು ದಾಟಿದೆ. ಭಾರತದಲ್ಲಿ ಇಲ್ಲಿಯವರೆಗೆ EV ಯ ಪಯಣ ಹೇಗಿತ್ತು ಎನ್ನುವುದನ್ನು ಮುಂದೆ ತಿಳಿದುಕೊಳ್ಳೋಣ:
ಇಲ್ಲಿಯವರೆಗಿನ ಹ್ಯುಂಡೈನ ಅತ್ಯಂತ ದುಬಾರಿ ಕಾರು
2023 ರ ಆರಂಭದಲ್ಲಿ ಅಯಾನಿಕ್ 5 ಅನ್ನು ಬಿಡುಗಡೆ ಮಾಡಿದಾಗ, ಇದು ಭಾರತದಲ್ಲಿ ಮಾರಾಟವಾಗುವ ಹ್ಯುಂಡೈನ ಅತ್ಯಂತ ದುಬಾರಿ EV ಮತ್ತು ಕಾರಿನ ಪಟ್ಟಿಗೆ ಸೇರಿತು. ಡಿಸೆಂಬರ್ 2022 ರಲ್ಲಿ ಬುಕ್ಕಿಂಗ್ ಪ್ರಾರಂಭವಾದ ಕೇವಲ ಎರಡು ತಿಂಗಳೊಳಗೆ ಈ ಎಲೆಕ್ಟ್ರಿಕ್ ಕಾರು 650 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಸ್ವೀಕರಿಸಿತ್ತು.
ಇದು ಹ್ಯುಂಡೈನ ಅತ್ಯಂತ ದುಬಾರಿ ಕಾರು ಆಗಿರುವ ಅದರ ಬೆಲೆ ರೂ. 45.95 ಲಕ್ಷ (ಎಕ್ಸ್-ಶೋರೂಮ್) ಆಗಿದ್ದರೂ, ಇದು ಕೊಟ್ಟ ಹಣಕ್ಕೆ ತಕ್ಕನಾಗಿ ಬೆಲೆ ಬಾಳುತ್ತದೆ. ಆದರೆ, ಹ್ಯುಂಡೈ ಅಯಾನಿಕ್ 5 ನ ಪ್ರತಿಸ್ಪರ್ಧಿಯಾದ ಕಿಯಾ EV6 RWD ಬೆಲೆಯು ರೂ. 60.95 ಲಕ್ಷದಿಂದ ಪ್ರಾರಂಭವಾಗುತ್ತದೆ. EV6 ಅನ್ನು ಇಲ್ಲಿಗೆ ಆಮದು ಮಾಡಿಕೊಂಡು ಮಾರಾಟ ಮಾಡಲಾಗುತ್ತದೆ. ಅದರ ಹೆಚ್ಚಿನ ಬೆಲೆಗೆ ಕಾರಣ ಅದರ ಮೇಲೆ ವಿಧಿಸಲಾಗುವ ಹೆಚ್ಚುವರಿ ತೆರಿಗೆಗಳಾಗಿವೆ.
ಎಲೆಕ್ಟ್ರಿಕ್ ಪವರ್‌ಟ್ರೇನ್ ಮತ್ತು ಚಾರ್ಜಿಂಗ್ ವಿವರಗಳು
ಅಯಾನಿಕ್ 5 ರ ಭಾರತೀಯ ಆವೃತ್ತಿಯು 72.6 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಸಿಂಗಲ್ ಮೋಟಾರ್ ಅನ್ನು ಹೊಂದಿದ್ದು ಅದು 217 PS ಪವರ್ ಮತ್ತು 350 Nm ಟಾರ್ಕ್ ನೀಡುತ್ತದೆ. ಇದು ರಿಯರ್-ವೀಲ್ ಡ್ರೈವ್‌ಟ್ರೇನ್ (RWD) ನೊಂದಿಗೆ ಲಭ್ಯವಾಗಲಿದೆ. ಇದರ ARAI ಪ್ರಮಾಣೀಕೃತ ರೇಂಜ್ 631 km ಆಗಿದೆ.
ಈ ಎಲೆಕ್ಟ್ರಿಕ್ ವಾಹನದಲ್ಲಿ 150 kW ಮತ್ತು 50 kW ಎಂಬ ಎರಡು ಚಾರ್ಜಿಂಗ್ ಆಯ್ಕೆಗಳನ್ನು ನೀಡಲಾಗಿದೆ. ಈ ವಾಹನವನ್ನು 150 kW ಚಾರ್ಜರ್ ಬಳಸಿ 21 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು, ಆದರೆ 50 kW ಚಾರ್ಜರ್ ಬಳಸಿ 0 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಲು ಒಂದು ಗಂಟೆ ಬೇಕಾಗುತ್ತದೆ.
ಇದನ್ನೂ ಓದಿ: ಕ್ಯಾಲೆಂಡರ್ ವರ್ಷದ ಅಂತ್ಯದ ವೇಳೆಗೆ ಹೊಸ ಕಾರು ಖರೀದಿಯ ಎಲ್ಲಾ ಅನುಕೂಲಗಳು ಮತ್ತು ಅನಾನುಕೂಲಗಳು
ಫೀಚರ್‌ಗಳು
ಹ್ಯುಂಡೈ ಅಯಾನಿಕ್ 5 ಎಲೆಕ್ಟ್ರಿಕ್ ಕಾರು ಡ್ಯುಯಲ್ 12.3- ಇಂಚಿನ ಡಿಸ್‌ಪ್ಲೇಗಳು (ಒಂದು ಇನ್ಫೋಟೇನ್‌ಮೆಂಟ್ ಮತ್ತು ಇನ್ನೊಂದು ಡ್ರೈವರ್ ಇನ್‌ಸ್ಟ್ರುಮೆಂಟೇಶನ್‌ಗಾಗಿ), ಪವರ್ಡ್ ಫ್ರಂಟ್ ಮತ್ತು ರಿಯರ್ ಸೀಟುಗಳು, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್‌ನಂತಹ ಫೀಚರ್‌ಗಳನ್ನು ಹೊಂದಿದೆ.
ಸುರಕ್ಷತೆಗೆ ಸಂಬಂಧಿಸಿದಂತೆ, ಹ್ಯುಂಡೈ EV ಯು ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ಮಲ್ಟಿಪಲ್ ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಫೀಚರ್‌ಗಳನ್ನು ಹೊಂದಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈ ಅಯಾನಿಕ್ 5 ಕಾರನ್ನು ಭಾರತದಲ್ಲೇ ತಯಾರಿಸಲಾಗಿದ್ದು, ಇಲ್ಲಿ ಈ ಕಾರಿನ ಬೆಲೆ ರೂ. 45.95 ಲಕ್ಷ (ಎಕ್ಸ್ ಶೋರೂಂ ದೆಹಲಿ) ಆಗಿದೆ. ಇದರ ನೇರ ಪ್ರತಿಸ್ಪರ್ಧಿ ಕಿಯಾ EV6 ಆಗಿದ್ದರೂ ಇದು ವೋಲ್ವೋ XC40 ರೀಚಾರ್ಜ್, BMW i4 ಮತ್ತು ಮುಂಬರುವ ಸ್ಕೋಡಾ ಎನ್ಯಾಕ್ iV ಯೊಂದಿಗೆ ಪೈಪೋಟಿ ನಡೆಸಲಿದೆ.
ಇನ್ನಷ್ಟು ಓದಿ: ಹ್ಯುಂಡೈ ಅಯಾನಿಕ್ 5 ಆಟೋಮ್ಯಾಟಿಕ್
0 out of 0 found this helpful