ಹ್ಯುಂಡೈ ಅಯಾನಿಕ್ 5 ನೈಜ-ಪ್ರಪಂಚದ ರೇಂಜ್ ಪರಿಶೀಲನೆ – ಒಂದು ಚಾರ್ಜ್‌ನಲ್ಲಿ ಎಷ್ಟು ಕಿಲೋಮೀಟರ್ ಓಡಬಹುದು?
ಹುಂಡೈ ಅಯಾನಿಕ್ 5 ಗಾಗಿ tarun ಮೂಲಕ ಮೇ 08, 2023 09:54 pm ರಂದು ಪ್ರಕಟಿಸಲಾಗಿದೆ
- 23 Views
- ಕಾಮೆಂಟ್ ಅನ್ನು ಬರೆಯಿರಿ
600 ಕಿಲೋಮೀಟರ್‌ಗಿಂತ ಹೆಚ್ಚು ರೇಂಜ್ ಅನ್ನು ಅಯಾನಿಕ್ 5 ಕ್ಲೈಮ್ ಮಾಡಿದ್ದರೂ, ನೈಜ ಪ್ರಪಂಚದ ಚಾಲನಾ ಸಂದರ್ಭಗಳಲ್ಲಿ ಅದು ಎಷ್ಟು ಕ್ಲೈಮ್ ಮಾಡುತ್ತದೆ ಎಂಬುದನ್ನು ನಾವು ನೋಡೋಣ
ಹ್ಯುಂಡೈ ಅಯಾನಿಕ್ 5 ಭಾರತದಲ್ಲಿ ಮಾರಾಟಕ್ಕಿರುವ ದಕ್ಷಿಣ ಕೊರಿಯಾದ ಕಾರು ತಯಾರಕರ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಇದು ನಿಯೋ-ರೆಟ್ರೋ-ಶೈಲಿಯ ಎಸ್‌ಯುವಿ-ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕ್ರಾಸ್ಓವರ್ ಆಗಿದ್ದು ಇದರ ಬೆಲೆಯು ರೂ.44.95 ಲಕ್ಷ (ಎಕ್ಸ್-ಶೋರೂಮ್) ಆಗಿದೆ. ಈ ಅಯಾನಿಕ್ 5 ಹ್ಯುಂಡೈ ಇ-ಜಿಎಂಪಿ ಪ್ಲ್ಯಾಟ್‌ಫಾರ್ಮ್ ಅನ್ನು ಆಧರಿಸಿದ ಮೊದಲ ಮಾದರಿಯಾಗಿದ್ದು ವಿಶೇಷವಾಗಿ ಎಲೆಕ್ಟ್ರಿಕ್ ವಾಹನಗಳಿಗಾಗಿ ನಿರ್ಮಿಸಲಾಗಿದೆ. ನಾವು ಇತ್ತೀಚೆಗೆ ಇದರ ಬ್ಯಾಟರಿ ಮಟ್ಟವು ಶೂನ್ಯವನ್ನು ತಲುಪುವವರೆಗೆ ಈ ಪ್ರೀಮಿಯಂ ಇವಿಯನ್ನು ಓಡಿಸಿದ್ದೇವೆ. ತಾಂತ್ರಿಕ ವಿವರಗಳೊಂದಿಗೆ ಆರಂಭಿಸಿ ಅಯಾನಿಕ್ 5 ಕುರಿತು ಕೆಲವು ಸಂಶೋಧನೆಗಳು ಇಲ್ಲಿವೆ:
ಬ್ಯಾಟರಿ ಮತ್ತು ಮೋಟಾರ್ ವಿಶೇಷಣಗಳು
ಬ್ಯಾಟರಿ |
72.6kWh |
ಪವರ್ |
217PS |
ಟಾರ್ಕ್ |
350Nm |
0-100kmph (ಪರೀಕ್ಷಿಸಲಾಗಿದೆ) |
7.68 ಸೆಕೆಂಡುಗಳು |
ರೇಂಜ್ (ಕ್ಲೈಮ್ ಮಾಡಲಾಗಿದೆ) |
631 kms |
ಡ್ರೈವ್ |
ರಿಯರ್-ವ್ಹೀಲ್ ಡ್ರೈವ್ |
ಈ ಅಯಾನಿಕ್ 5, 72.6kWh ಬ್ಯಾಟರಿ ಪ್ಯಾಕ್‌ನೊಂದಿಗೆ 631 ಕಿಲೋಮೀಟರ್‌ಗಳವರೆಗೆ ಕ್ಲೈಮ್ ಮಾಡಿದೆ. ರಿಯರ್- ಆ್ಯಕ್ಸೆಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ 217PS ಮತ್ತು 350Nm ಪೀಕ್ ಟಾರ್ಕ್ ಅನ್ನು ಹೊಂದಿದೆ. ನಮ್ಮ ರೋಡ್ ಟೆಸ್ಟ್‌ನಲ್ಲಿ, ನಾವು 7.68 ಸೆಕಂಡುಗಳಲ್ಲಿ ಶೂನ್ಯದಿಂದ 100kmph ಸಾಧಿಸಲು ಸಾಧ್ಯವಾಯಿತು. ದೊಡ್ಡ ಬ್ಯಾಟರಿಗಾಗಿ ಅಧಿಕ ರೇಂಜ್‌ಗೆ ಸಾಮಾನ್ಯವಾಗಿ ಒಂದೇ ಮೋಟಾರ್ ಉತ್ತಮವಾದರೆ, ಅದರ ಅಪ್ರಯತ್ನ ಕಾರ್ಯಕ್ಷಮತೆಯಲ್ಲಿ ಗಣನೀಯ ಬದಲಾವಣೆಯನ್ನು ಕಾಣಬಹುದು.
ನೈಜ-ಪ್ರಪಂಚದ ರೇಂಜ್
ನಮ್ಮ ಇತ್ತೀಚಿನ ‘ಡ್ರೈವ್ ಟು ಡೆತ್’ ನಲ್ಲಿ, ನಾವು ಹೆದ್ದಾರಿಗಳಲ್ಲಿ, ನಗರದ ಟ್ರಾಫಿಕ್‌ನಲ್ಲಿ, ತಿರುಚಾದ ಘಾಟ್‌ಗಳಲ್ಲಿ, ಚಾಲನೆ ಮಾಡಿ ಬ್ಯಾಟರಿಯನ್ನು 100 ಪ್ರತಿಶತದಿಂದ 0 ಪ್ರತಿಶತಕ್ಕೆ ಇಳಿಸಿದೆವು. ಇದರಲ್ಲಿನ ಕ್ಲೈಮೆಟ್ ಕಂಟ್ರೋಲ್ ಅನ್ನು ಆರಾಮವೆನಿಸುವ 23 ಡಿಗ್ರಿಗಳಲ್ಲಿ ಮತ್ತು ಫ್ಯಾನ್ ವೇಗವನ್ನು 2 ರಲ್ಲಿ ಇರಿಸಲಾಗಿದ್ದು, ಇದು ನಮ್ಮ ಬೇಸಿಗೆಗೆ ಸೂಕ್ತವಾದ ಸೆಟ್ಟಿಂಗ್ ಆಗಿದೆ. ಆದಾಗ್ಯೂ, ನೀವು ಫ್ಯಾನ್ ವೇಗವನ್ನು ಹೆಚ್ಚಿಸಿದರೆ ಇದರ ಅಂದಾಜು ರೇಂಜ್ ಗಮನಾರ್ಹವಾಗಿ ಕುಸಿಯುತ್ತದೆ.
ಇದನ್ನೂ ಓದಿ: ತನ್ನ ಅಧಿಕೃತ ಬಿಡುಗಡೆಗೂ ಮೊದಲು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಎಕ್ಸ್‌ಟರ್
ಮೇಲೆ ತಿಳಿಸಿದ ಪ್ಯಾರಾಮೀಟರ್‌ಗಳಲ್ಲಿ ಮತ್ತು ನೈಜ-ಪ್ರಪಂಚದ ಚಾಲನಾ ಸ್ಥಿತಿಗಳಲ್ಲಿ, ಈ ಅಯಾನಿಕ್ 5 ಪುನಃ 431.9 ಕಿಲೋಮೀಟರ್‌ಗಳ ರೇಂಜ್ ಅನ್ನು ಪಡೆಯಿತು. ಇದು ಕ್ಲೈಮ್ ಮಾಡಿದ ಅಂಕಿ ಅಂಶ 631km ಗಿಂತ ಕಡಿಮೆಯಾಗಿದ್ದರೂ, ಬಳಕೆಗೆ ಸೂಕ್ತವಾಗಿದೆ. ಒಂದೊಮ್ಮೆ ನೀವು ಆ ಸಂಖ್ಯೆಯನ್ನು ವಿಸ್ತರಿಸಲು ಪ್ರಯತ್ನಿಸಿದರೆ, ಕೆಲವು ಕಾರ್ಯತಂತ್ರದ ಚಾಲನೆ ಮತ್ತು ಮಾರ್ಗದ ಯೋಜನೆಯಿಂದ ಅದು ವಾಸ್ತವಿಕವಾಗಿ ಸರಿಸುಮಾರು 500km ಗೆ ತಲುಪಬಹುದು.
ಶೂನ್ಯದ ಹತ್ತಿರ ತಲುಪಿದರೆ ಏನಾಗುತ್ತದೆ?
ಸಾಮಾನ್ಯವಾಗಿ, ಬ್ಯಾಟರಿಯು 20 ಅಥವಾ 15 ಪ್ರತಿಶತಕ್ಕಿಂತ ಕಡಿಮೆಯಾದಾಗ ಇವಿಗಳು ಕಾರ್ಯಕ್ಷಮತೆಯನ್ನು ಕಡಿಮೆಗೊಳಿಸುತ್ತವೆ ಮತ್ತು ಚಾರ್ಜ್ ಮಾಡದ ಹೊರತು ಸಾಕಷ್ಟು ರೇಂಜ್ ನೀಡುವುದಿಲ್ಲ. ಆದರೆ ಅಯಾನಿಕ್ 5 ವಿಷಯದಲ್ಲಿ, ಚಾರ್ಜ್‌ನ ಮಟ್ಟವು ಶೇಕಡಾ ಐದಕ್ಕೆ ಇಳಿಯುವವರೆಗೆ ಇದರ ಕಾರ್ಯಕ್ಷಮತೆಯು ಕುಗ್ಗುವುದಿಲ್ಲ. ಅಷ್ಟರ ನಂತರವೇ ಪಿಕಪ್‌ನಲ್ಲಿ ಗಮನಾರ್ಹ ಕುಸಿತವನ್ನು ನೀವು ಕಾಣಬಹುದು. ಇದರ ಚಾರ್ಜ್ ಶೇಕಡಾ ಶೂನ್ಯವನ್ನು ತಲುಪುತ್ತಿದ್ದಂತೆ ಕಾರ್ ಲಿಂಪ್ ಮೋಡ್‌ಗೆ ಪ್ರವೇಶಿಸುತ್ತದೆಯಾದರೂ ನಗರ ಪ್ರದೇಶಗಲ್ಲಿ ಚಾಲನೆಯನ್ನು ಮುಂದುವರಿಸಬಹುದಾಗಿದೆ. ಬ್ಯಾಟರಿಯು ಸಂಪೂರ್ಣವಾಗಿ ಶೂನ್ಯಕ್ಕೆ ಇಳಿದ ನಂತರ ನಾವು ಇನ್ನೂ ಎರಡು ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಓಡಿಸಲು ಸಾಧ್ಯವಾಯಿತು.
ಹ್ಯುಂಡೈ ಅಯಾನಿಕ್ 5 ನಲ್ಲಿ ನೀವು ಎಷ್ಟು ರೇಂಜ್ ಗಳಿಸಿದ್ದೀರಿ? ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ.
ಇನ್ನಷ್ಟು ಇಲ್ಲಿ ಓದಿ : ಹ್ಯುಂಡೈ ಅಯಾನಿಕ್ 5 ಆಟೋಮ್ಯಾಟಿಕ್