• English
  • Login / Register

ತನ್ನ ಅಧಿಕೃತ ಪಾದಾರ್ಪಣೆಗೂ ಮುನ್ನ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಎಕ್ಸ್‌ಟರ್

ಹುಂಡೈ ಎಕ್ಸ್‌ಟರ್ ಗಾಗಿ rohit ಮೂಲಕ ಮೇ 08, 2023 09:45 pm ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಎಕ್ಸ್‌ಟರ್ ಹ್ಯುಂಡೈನ ಭಾರತೀಯ ಲೈನ್‌ಅಪ್‌ನಲ್ಲಿ ಹೊಸ ಆರಂಭಿಕ ಹಂತದ ಎಸ್‌ಯುವಿ ಆಗಿರುತ್ತದೆ

Hyundai Exter spied

  •  ಹ್ಯುಂಡೈ ಇಂಡಿಯಾ ಇತ್ತೀಚೆಗೆ ಮೈಕ್ರೋ ಎಸ್‌ಯುವಿಯ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. 
  •  H-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟೈಲ್‌ಲೈಟ್ ಅಂಶಗಳು, ರೂಫ್ ರೈಲ್‌ಗಳು ಮತ್ತು ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ ಎಂಬುದನ್ನು ಸ್ಪೈ ಶಾಟ್‌ಗಳಿಂದ ತಿಳಿಯಬಹುದು.
  •  ಇದರ ನಿರೀಕ್ಷಿತ ಫೀಚರ್‌ಗಳಲ್ಲಿ ದೊಡ್ಡ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಆರು ಏರ್‌ಬ್ಯಾಗ್‌ಗಳು ಸೇರಿವೆ.
  •  ಗ್ರ್ಯಾಂಡ್ i10 ನಿಯೋಸ್‌ನ 1.2-ಲೀಟರ್ ಪೆಟ್ರೋಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ; ಮಾತ್ರವಲ್ಲದೇ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಪಡೆಯಬಹುದು.
  •  ಇದರ ಬೆಲೆಯು ರೂ. 6 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ಸಾಧ್ಯತೆಯಿದೆ.

 ಇತ್ತೀಚೆಗೆ ಹ್ಯುಂಡೈ ಎಕ್ಸ್‌ಟರ್‌ನ ಒಂದು ನೋಟವನ್ನು ಅದರ ಟೀಸರ್ ಸ್ಕೆಚ್‌ನಲ್ಲಿ ನಾವು ಪಡೆದುಕೊಂಡಿದ್ದೆವು. ಆದರೆ ಇವೆಲ್ಲವುಗಳ ನಂತರ ನಾವೀಗ ದಕ್ಷಿಣ ಕೊರಿಯಾದಲ್ಲಿ ಇವುಗಳ ನಿಜವಾದ ಸ್ವರೂಪದ ಮೊದಲ ನೋಟವನ್ನು ಹೊಂದಿದ್ದೇವೆ.

 

ಏನನ್ನು ಕಾಣಬಹುದು?

 ಸ್ಪೈ ಶಾಟ್‌ನಲ್ಲಿ ನಾವು ಗಮನಿಸುವ ಮೊದಲ ಅಂಶವೆಂದರೆ ಈ ಎಕ್ಸ್‌ಟರ್ ಅದರ ಟೀಸರ್ ಸ್ಕೆಚ್‌ಗೆ ಹೋಲಿಸಿದರೆ ಎಷ್ಟು ಸಾಮ್ಯತೆಯನ್ನು ಹೊಂದಿದೆ ಎಂಬುದು. ಇದು ಬಿಳಿ ಶೇಡ್ ಅನ್ನು ಹೊಂದಿದ್ದು ಈ ಎಸ್‌ಯುವಿಯ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ಮತ್ತು ಸ್ಕೆಚ್‌ನಲ್ಲಿ ನೋಡಿರುವಂತೆ  (ಕ್ರೋಮ್‌ನಿಂದ ಸುತ್ತುವರಿಯಲ್ಪಟ್ಟಿದ್ದರ ಜೊತೆಗೆ) H-ಆಕಾರದ ಎಲ್‌ಇಡಿ ಡಿಆರ್‌ಎಲ್ ಸೆಟಪ್‌ ಅನ್ನು ಕಾಣಬಹುದಾಗಿದೆ. ಸ್ಪೈ ಮಾಡಲ್ಪಟ್ಟ ಮಾಡೆಲ್  Y-ಆಕಾರದ, 4-ಸ್ಪೋಕ್ ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳು ಮತ್ತು ರೂಫ್ ರೈಲ್‌ಗಳನ್ನು ಹೊಂದಿದೆ.

Hyundai Exter rear spied 

 ಇದರ ಹಿಂಬದಿಯ ಫೀಚರ್‌ಗಳು ನೇರವಾದ ಟೈಲ್‌ಲೈಟ್ ಅನ್ನು ಹೊಂದಿದೆ ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಅನುಕರಿಸುವ H-ಆಕಾರದ ಮೋಟಿಫ್ ಅನ್ನು ಹೊಂದಿರುವ ಸಂಪರ್ಕಿತ ಟೈಲ್‌ಲೈಟ್‌ಗಳನ್ನು ಸಹ ಪಡೆಯುತ್ತದೆ. ಈ ಎಕ್ಸ್‌ಟರ್ ದೊಡ್ಡ ರೌಂಡ್ ಎಕ್ಸಾಸ್ಟ್ ಅನ್ನು ಹೊಂದಿರುವುದನ್ನು ನಾವು ಕಂಡಿದ್ದೆವು ಆದರೆ ಇದು ಇಂಡಿಯಾ-ಸ್ಪೆಕ್ ಮಾಡೆಲ್ ಬರುವ ಸಾಧ್ಯತೆಯಿಲ್ಲ.

ಇದನ್ನೂ ಓದಿ: ಹ್ಯುಂಡೈ ತನ್ನ ಗ್ರಾಹಕರಿಗೆ ಭಾರತದ 5 ನಗರಗಳಲ್ಲಿ ಕಾನ್ಸರ್ಟ್‌ಗಳನ್ನು ಆಯೋಜಿಸುತ್ತಿದೆ

 

ಹ್ಯುಂಡೈ ಎಕ್ಸ್‌ಟರ್ ಕ್ಯಾಬಿನ್ ಮತ್ತು ಫೀಚರ್‌ಗಳು 

ಎಕ್ಸ್‌ಟರ್‌ನ ಇಂಟೀರಿಯರ್‌ಗಾಗಿ ಕಾಯುವಿಕೆಯು ಮುಂದುವರಿದರೆ, ಹ್ಯುಂಡೈ ತನ್ನ ಈ ಮೈಕ್ರೋ ಎಸ್‌ಯುವಿಯನ್ನು ದೊಡ್ಡ ಟಚ್‌ಸ್ಕ್ರೀನ್ ಇನ್‌ಫೊಟೇನ್‌ಮೆಂಟ್ ಯೂನಿಟ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಡಿಜಿಟೈಸ್ಡ್ ಡ್ರೈವರ್ ಡಿಸ್‌ಪ್ಲೇ ಮತ್ತು ಕ್ರೂಸ್ ಕಂಟ್ರೋಲ್‌ನೊಂದಿಗೆ ಸಜ್ಜುಗೊಳಿಸಬಹುದೆಂದು ನಾವು ನಿರೀಕ್ಷಿಸಿದ್ದೇವೆ.

ಸುರಕ್ಷತೆಯ ದೃಷ್ಟಿಯಿಂದ, ಈ ಇಂಡಿಯಾ-ಸ್ಪೆಕ್ ಎಕ್ಸ್‌ಟರ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಇಬಿಡಿ ಜೊತೆಗೆ ಎಬಿಎಸ್ ಮತ್ತು ರಿವರ್ಸಿಂಗ್ ಕ್ಯಾಮರಾವನ್ನು ಪಡೆಯುವ ಸಾಧ್ಯತೆಯಿದೆ.

 

ಪೆಟ್ರೋಲ್ ಪವರ್ ಮಾತ್ರ ಪಡೆಯುವ ಸಾಧ್ಯತೆ

ಈ ಇಂಡಿಯಾ-ಸ್ಪೆಕ್ ಎಕ್ಸ್‌ಟರ್ ಗ್ರ್ಯಾಂಡ್ i10 ನಿಯೋಸ್‌ನ ಪೆಟ್ರೋಲ್ ಎಂಜಿನ್ ಅನ್ನು ಪಡೆಯುವ ಸಾಧ್ಯತೆಯಿದೆ: 1.2-ಲೀಟರ್ ನೈಸರ್ಗಿಕ ಆ್ಯಸ್ಪಿರೇಟೆಡ್ ಯೂನಿಟ್ (83PS/114Nm). ಇದು 5-ಸ್ಪೀಡ್ ಎಎಂಟಿ ಆಯ್ಕೆಯನ್ನು ಸಹ ಪಡೆಯುವ ನಿರೀಕ್ಷೆಯಿದೆ. ಗ್ರ್ಯಾಂಡ್ i10 ನಿಯೋಸ್‌ನಲ್ಲಿ ಕಂಡುಬರುವಂತೆ ಈ ಎಕ್ಸ್‌ಟರ್ ಸಿಎನ್‌ಜಿ ಕಿಟ್‌ನ ಆಯ್ಕೆಯೊಂದಿಗೆ ಬರಬಹುದು.

 

 

ಇದು ಶೋರೂಂಗೆ ಯಾವಾಗ ಬರುತ್ತದೆ?

Hyundai Exter teaser sketch

 ಹ್ಯುಂಡೈ ಜೂನ್ 2023 ರ ವೇಳೆಗೆ ಭಾರತದಲ್ಲಿ ಎಕ್ಸ್‌ಟರ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಇದರ ಆರಂಭಿಕ ಬೆಲೆಯು ರೂ. 6 ಲಕ್ಷ (ಎಕ್ಸ್-ಶೋರೂಂ) ಇರಲಿದೆ. ಈ ಮೈಕ್ಸೋ ಎಸ್‌ಯುವಿ ಟಾಟಾ ಪಂಚ್, ಮಾರುತಿ ಫ್ರಾಂಕ್ಸ್, ಸಿಟ್ರಾನ್ C3, ರೆನಾಲ್ಟ್ ಕೈಗರ್ ಮತ್ತು ನಿಸಾನ್ ಮ್ಯಾಗ್ನೈಟ್‌ಗೆ ಪ್ರತಿಸ್ಪರ್ಧಿಯಾಗಲಿದೆ.

 ಚಿತ್ರ ಮೂಲ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai ಎಕ್ಸ್‌ಟರ್

1 ಕಾಮೆಂಟ್
1
S
sumeet v shah
May 5, 2023, 6:29:34 PM

Your article was a great help for me to understand about this car in detail.

Read More...
    ಪ್ರತ್ಯುತ್ತರ
    Write a Reply
    Read Full News

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience