• English
    • Login / Register

    ಹುಂಡೈ ವೆನ್ಯೂ vs ಟಾಟಾ ನೆಕ್ಸಾನ್ : ಚಿತ್ರಗಳಲ್ಲಿ

    ಹುಂಡೈ ವೆನ್ಯೂ 2019-2022 ಗಾಗಿ dhruv ಮೂಲಕ ಮೇ 21, 2019 11:08 am ರಂದು ಮಾರ್ಪಡಿಸಲಾಗಿದೆ

    • 27 Views
    • ಕಾಮೆಂಟ್‌ ಅನ್ನು ಬರೆಯಿರಿ

    ನಾವು ಹುಂಡೈ ಅನ್ನು ಅದರ ಹತ್ತಿರದ ಪ್ರತಿಸ್ಪರ್ದಿಯಜೊತೆ ಹೋಲಿಕೆ ಮಾಡಿ ಈ ಎರೆಡು ಸಬ್ -4 ಮೀಟರ್  ಕಾರುಗಳಲ್ಲಿ ಯಾವುದು ಒತ್ತಮ ಎಂದು ನೋಡೋಣ.

    Hyundai Venue vs Tata Nexon: In Pics

    ಇತ್ತೀಚಿನ ವಿಷಯಸಂಗ್ರಹ: ಹುಂಡೈ ವೆನ್ಯೂ ಅಧಿಕೃತ ಬುಕಿಂಗ್ ಗಳು ಶುರುವಾಗಿದೆ. ಹೆಚ್ಚಿನ ವಿವರಗಳು ಇಲ್ಲಿವೆ.

    ಕೊರಿಯಾ ದ ಕಾರ್ ಮೇಕರ್ ಹುಂಡೈ ವೆನ್ಯೂ ವನ್ನು ಬಹಿರಂಗಪಡಿಸಿದೆ, ಇದು ಸಬ್ -4 ಮೀಟರ್ ಅರ್ಪಣೆ ಆಗಿದೆ ಮತ್ತು ಇದನ್ನು ಮುಂದಿನ ತಿಂಗಳು 21 ಮೇ ಗೆ ಬಿಡುಗಡೆ ಮಾಡಲಾಗುತ್ತದೆ. ನಾವು ಇದನ್ನು ಇದರ ಹತ್ತಿರದ ಪ್ರತಿಸ್ಪರ್ದಿ ಟಾಟಾ ನೆಕ್ಸಾನ್ ನ ಪಕ್ಕದಲ್ಲಿರಿಸಿ ನೋಡುತ್ತೇವೆ, ಎವೆರೆಡರಲ್ಲೂ ಎಷ್ಟು ವಿಭಿನ್ನತೆ ಇದೆ ಎಂದು.  

    ಮುಂಬಾಗ

    ವೆನ್ಯೂ ಮತ್ತು ನೆಕ್ಸಾನ್ ಎರೆಡರಲ್ಲೂ   ಮುಂಬದಿಯಲ್ಲಿ ನಯವಾದ ಡಿಸೈನ್ ಇದೆ ಮತ್ತು ಚೂಪಾದ ಕೊನೆಗಳು ಇಲ್ಲ. ಆದರೆ ವೆನ್ಯೂ ನಲ್ಲಿ ಹುಂಡೈ ನ ಕ್ಯಾಸ್ಕೇಡಿಂಗ್ ಗ್ರಿಲ್ ಟ್ವಿಸ್ಟ್ ಜೊತೆ ಇದೆ. ನೆಕ್ಸಾನ್ ನ ಮುಂಬದಿಯಲ್ಲಿ ಟಾಟಾ ದ ಮಾನವತಾವಾದಿಯ ಶೈಲಿಯ ಡಿಸೈನ್ ಇದೆ. ವೆನ್ಯೂ ದ ಗ್ರಿಲ್ ಮೆಶ್ ಶೈಲಿಯಲ್ಲಿದೆ, ಟಾಟಾ ನೆಕ್ಸಾನ್ ನಲ್ಲಿ ಹನಿಕಾಂಬ್ ಶೈಲಿಯಲ್ಲಿದೆ, ಮತ್ತು ವೆನ್ಯೂ ದಷ್ಟು ದೊಡ್ಡದಾಗಿಲ್ಲ. ಹಾಗು ನೆಕ್ಸಾನ್ ನ್ ಹೆಡ್ ಲ್ಯಾಂಪ್ ಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಮಾಡಲಾಗಿದೆ ಹಾಗು ವೆನ್ಯೂ ದಲ್ಲಿ ಸ್ಪ್ಲಿಟ್ ಹೆಡ್ ಲ್ಯಾಂಪ್ ಅಳವಡಿಸಲಾಗಿದೆ, ಮತ್ತು ಮುಖ್ಯವಾದ ಲ್ಯಾಂಪ್ ಅನ್ನು ಬಂಪರ್ ನಲ್ಲಿ ಅಳವಡಿಸಲಾಗಿದೆ.

    ಮೊದಲನೇ ಕ್ವಾರ್ಟರ್

    ವೆನ್ಯೂ ನೋಡಲು  ಸ್ವಲ್ಪ ಭವಿಷ್ಯದಲ್ಲಿ ಬರಬಹುದಾದ ಶೈಲಿಯಲ್ಲಿದೆ ಮತ್ತು ಈ ವಿಧದಲ್ಲಿ ಸ್ಪ್ಲಿಟ್ ಹೆಡ್ ಲ್ಯಾಂಪ್ ಗಳು ಮತ್ತು ದೊಡ್ಡ ಕ್ಯಾಸ್ಕೇಡಿಂಗ್ ಕ್ರೋಮ್ ಗ್ರಿಲ್ ಇದರಲ್ಲಿ ಪ್ರೀಮಿಯಂ ಆಗಿರುವ ನೋಟ ಹೊಂದಿದೆ. ನೆಕ್ಸಾನ್ ಇನ್ನೊಂದು ಬದಿಯಲ್ಲಿ  ದುಂಡಾದ ಕೋನಗಳನ್ನು ಹೊಂದಿದೆ, ಆದರೆ ಇದು ಎರೆಡು ವರ್ಷಗಳಿಂದ ಮಾರ್ಕೆಟ್ ನಲ್ಲಿ ಇದ್ದರೂ ಇದರ ಡಿಸೈನ್ ಹೊಸತಾಗಿ ಕಾಣಿಸುತ್ತದೆ. ಟಾಟಾ ಹುಂಡೈ ಗಿಂತಲೂ ಅಗಲವಾಗಿದೆ ಮತ್ತು ಅಳತೆಗಳು  1811mm, ಇದೆ ಹೊಳೀಕೆಯಲ್ಲಿ  ವೆನ್ಯೂ 1770mm ಅಗಲವಾಗಿದೆ.

    ಬದಿಗಳು

    ಬದಿಗಳಿಂದ ನೋಡಿದಾಗ, ನೆಕ್ಸಾನ್ ನ ರೂಫ್ ಲೈನ್ ಮೊನಚಾಗಿ ಕೆಳಕ್ಕೆ ತಿರುಗುತ್ತದೆ. ಇದರಲ್ಲಿ  ಪೆಟ್ಟಿಗೆ ಶೈಲಿಯ ಹೊರಗಿನ ಡಿಸೈನ್, ಕ್ರೆಟಾ ದಲ್ಲಿರುವಂತಿದೆ. ಎರೆಡೂ SUV ಗಳಲ್ಲಿ 16-ಅಲಾಯ್ ವೀಲ್ ಗಳು ಇವೆ. ವೆನ್ಯೂ ದ ವೀಲ್ ಗಳು ನೋಡಲು ಚೆನ್ನಾಗಿದೆ ಮತ್ತು ನೆಕ್ಸಾನ್ ನ ವೀಲ್ ಗಳು ಸ್ವಲ್ಪ ಮಟ್ಟಿಗೆ ಸಾಧಾರಣವಾಗಿದೆ ಎರೆಡರಲ್ಲಿ ಹೋಲಿಸಿದಾಗ.

    ವೆನ್ಯೂ ಜೊತೆ ಹೋಲಿಸಿದಾಗ ನೆಕ್ಸಾನ್ ಕೇವಲ 1mm  ಕಡಿಮೆ ಉದ್ದ ಇದೆ, ಅಳತೆಯಲ್ಲಿ   3994mm.   ಇದರ ವೀಲ್ ಬೇಸ್ ಕೂಡ  2mm ಕಡಿಮೆ ಇದೆ ವೆನ್ಯೂ ಗೆ ಹೋಲಿಸಿದರೆ. ಆಶ್ಚರ್ಯಕರವಾಗಿ ನೆಕ್ಸಾನ್ ಉದ್ದವಾಗಿದೆ (1607mm) ವೆನ್ಯೂ ಗಿಂತಲೂ (1590mm), ಕೋಪೆ ಶೈಲಿಯ ರೂಫ್ ಲೈನ್ ಹೊರತಾಗಿ.

    ಹಿಂಬದಿಯ ಕ್ವಾರ್ಟರ್

    ಪಟ್ಟಿಗೆ ಶೈಲಿಯ ಹೊರಗಿನ ಡಿಸೈನ್ ಒಂದಿಗೆ, ವೆನ್ಯೂ ನೋಡಲು ಸಾಂಪ್ರದಾಯಿಕ ಶೈಲಿಯ SUV ಆಗಿದೆ. ನೆಕ್ಸಾನ್ ಇನ್ನೊಂದುಬದಿಯಲ್ಲಿ ನೋಡಲಿ ಕ್ರಾಸ್ಒವರ್ ತರಹದ ನೋಟ ಹೊಂದಿದೆ, ಅದಕ್ಕೆ ಜಾರುವಿಕೆ ಶೈಲಿಯ ರೂಫ್ ಲೈನ್ ಕಾರಣವಾಗಿದೆ, ಮತ್ತು ಹಾಗಾಗಿ ಇದು ಇರುವುದಕ್ಕಿಂತ  ಸ್ವಲ್ಪ ಹೆಚ್ಚು ಎತ್ತರವಾಗಿ ಕಾಣುತ್ತದೆ.ನೆಕ್ಸಾನ್ ಡುಯಲ್ ಟೋನ್ ಬಣ್ಣಗಳೊಂದಿಗೂ ಸಹ ಬರುತ್ತದೆ ಮತ್ತು ಅದು ನೂತನವಾಗಿಯೂ ಕಾಣಿಸುತ್ತದೆ. ಹುಂಡೈ ನವರು ವೆನ್ಯೂ ನಲ್ಲಿ ಈ ರೀತಿಯ ಆಯ್ಕೆ ಇರುತ್ತದೆಯೇ ಎಂದು ಇಲ್ಲಿಯವರೆಗೂ  ಹೇಳಿಲ್ಲ.

    ಹಿಂಬದಿ

    ನೆಕ್ಸಾನ್ ನ ಹಿಂಬದಿಯ ಡಿಸೈನ್  ವಿಚಿತ್ರವಾಗಿದೆ. ವೆನ್ಯೂ ನಲ್ಲಿ ಸ್ವಲ್ಪ ಗಂಭೀರವಾದ ಶೈಲಿಯ ಮತ್ತು ಅತ್ಯಾಧುನಿಕವಾದ ಹಿಂಬದಿಯ  ಇದೆ. ಮತ್ತು, ವೆನ್ಯೂ ದ ರೇವೆರ್ಸೆ ಲೈಟ್ ಹಿಂಬದಿ ಬಂಪರ್ ನೊಂದಿಗೆ ಅಳವಡಿಸಲಾಗಿದೆ. ಎರೆಡೂ SUV  ಗಳು ಟೈಲ್ ಲೈಟ್ ನಲ್ಲಿ  LED  ಅಂಶ ಹೊಂದಿದೆ. ಆದರೆ ವೆನ್ಯೂ ದ ಟೈಲ್ ಲೈಟ್ ಗಳು ಹೆಚ್ಚು ಪ್ರೀಮಿಯಂ ಆಗಿವೆ ಮತ್ತು ಹರಡುವ ಸ್ಪಟಿಕದಂತಹ ಪರಿಣಾಮ ಬೀರುವ ವಸ್ತುಗಳನ್ನು ಟೈಲ್ ಲೈಟ್ ನಲ್ಲಿ ಹೊಂದಿದೆ.

    ಡ್ಯಾಶ್ ಬೋರ್ಡ್

    ವೆನ್ಯೂ ದ ಡ್ಯಾಶ್ ಬೋರ್ಡ್ ಪೂರ್ಣ ಕಪ್ಪುಬಣ್ಣದಲ್ಲಿ ಮಾಡಲಾಗಿದೆ, ನೆಕ್ಸಾನ್ ನಲ್ಲಿ ಡುಯಲ್ ಟೋಮ್ ಶೈಲಿ ಉಪಯೋಗಿಸಲಾಗಿದೆ. ನೆಕ್ಸಾನ್ ಡ್ಯಾಶ್ ಬೋರ್ಡ್ ಮತ್ತು ಸೆಂಟರ್ ಕನ್ಸೋಲ್ ನೋಡಲು ಅಸ್ತವ್ಯಸ್ತಗೊಂಡಂತಿದೆ, ವೆನ್ಯೂ ದಲ್ಲಿರುವುನ್ನು  ಪಕ್ಕದಲ್ಲಿರಿಸಿ ನೋಡಿದಾಗ.

    ಹಿಂಬದಿಯ ಸೀಟ್

    ಹುಂಡೈ  ವೆನ್ಯೂ ದಲ್ಲಿ ಲೆಥರ್ ನಂತಿರುವ ಫ್ಯಾಬ್ರಿಕ್ ಮೇಲ್ಪದರಗಳನ್ನು  ಉಪಯೋಗಿಸಲಾಗಿದೆ,ಹೋಲಿಕೆಯಲ್ಲಿ  ನೆಕ್ಸಾನ್ ನಲ್ಲಿ ಫ್ಯಾಬ್ರಿಕ್ ಮೇಲ್ಪದರ ಉಪಯೋಗಿಸಲಾಗಿದೆ. ಎರೆಡೂ SUV ಗಳಲ್ಲಿ ಸರಿಹೊಂದಿಸಬಹುದಾದ ಎರೆಡು  ಹಿಂಬದಿ ಹೆಡ್ ರೆಸ್ಟ್ ಗಳು ಮತ್ತು ಸೆಂಟರ್ ಆರ್ಮ್ ರೆಸ್ಟ್ ಗಳು ಇದೆ. ಎರೆಡೂ SUV ಗಳಲ್ಲಿ ರೇರ್ AC ವೆಂಟ್ ಕೊಡಲಾಗಿದೆ . ಹುಂಡೈ ನಲ್ಲಿ ಸನ್ ರೂಫ್ ಸಹ ಕೊಡಲಾಗಿದೆ, ಇದು ಕ್ಯಾಬಿನ್ ಅನ್ನು ಆಹ್ಲಾದಕರವಾಗಿರುವಂತೆ ಮಾಡುತ್ತದೆ

    was this article helpful ?

    Write your Comment on Hyundai ವೆನ್ಯೂ 2019-2022

    explore similar ಕಾರುಗಳು

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience