• English
    • Login / Register

    ಹಲವು ವೇರಿಯೆಂಟ್‌ಗಳು ಮತ್ತು ಬಣ್ಣದ ಆಯ್ಕೆಗಳೊಂದಿಗೆ ಭಾರತಕ್ಕೆ ಬರಲಿರುವ 2025ರ Skoda Kodiaq

    ಏಪ್ರಿಲ್ 10, 2025 12:32 pm ರಂದು bikramjit ಮೂಲಕ ಪ್ರಕಟಿಸಲಾಗಿದೆ

    26 Views
    • ಕಾಮೆಂಟ್‌ ಅನ್ನು ಬರೆಯಿರಿ

    ಹೊಸ ಜನರೇಶನ್‌ನ ಸ್ಕೋಡಾ ಕೊಡಿಯಾಕ್‌ನ ಎರಡೂ ವೇರಿಯೆಂಟ್‌ಗಳು ವಿಶಿಷ್ಟವಾದ ಶೈಲಿಯನ್ನು ಹೊಂದಿದ್ದು, ಇದು ಕ್ರಮವಾಗಿ ವಿಭಿನ್ನ ಖರೀದಿದಾರರ ಆಯ್ಕೆಗಳನ್ನು ಪೂರೈಸುತ್ತದೆ.

    • 2025ರ ಸ್ಕೋಡಾ ಕೊಡಿಯಾಕ್ ಕಾರು ಭಾರತದಲ್ಲಿ ಬಿಡುಗಡೆಯಾಗುವ ಮುನ್ನ ಅದರ ಹೊಸ ಮಾಹಿತಿ ಬಹಿರಂಗಗೊಂಡಿದೆ.

    • ಇದು ಸೆಲೆಕ್ಷನ್ ಎಲ್ & ಕೆ ಮತ್ತು ಸ್ಪೋರ್ಟ್‌ಲೈನ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿರುತ್ತದೆ.

    • ನೀವು ಏಳು ಸಿಂಗಲ್‌ಟೋನ್‌ ಬಣ್ಣ ಆಯ್ಕೆಗಳಿಂದ ಆಯ್ಕೆ ಮಾಡಬಹುದು, ಅವುಗಳಲ್ಲಿ ಎರಡು ವೇರಿಯೆಂಟ್‌ಗೆ ಆಧಾರಿತವಾಗಿದೆ.

    • ಈ ಪ್ರೀಮಿಯಂ ಮಿಡ್‌-ಸೈಜ್‌ನ ಎಸ್‌ಯುವಿಗೆ ಒಂದೇ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಶಕ್ತಿ ನೀಡುತ್ತದೆ.

    • ಬೆಲೆಗಳು 45 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.

    ಹೊಸ ಜನರೇಶನ್‌ನ ಸ್ಕೋಡಾ ಕೊಡಿಯಾಕ್ ಶೀಘ್ರದಲ್ಲೇ ನಮ್ಮ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಮತ್ತು ಜೆಕ್ ಮೂಲದ ಈ ಕಾರು ತಯಾರಕರು ಈಗ ಮುಂಬರುವ ಪ್ರೀಮಿಯಂ 7 ಸೀಟರ್‌ ಎಸ್‌ಯುವಿ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಇದನ್ನು ಸೆಲೆಕ್ಷನ್ ಎಲ್ & ಕೆ (ಲೌರಿನ್ ಮತ್ತು ಕ್ಲೆಮೆಂಟ್) ಮತ್ತು ಸ್ಪೋರ್ಟ್‌ಲೈನ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಹಾಗು ಏಳು ಬಣ್ಣಗಳ ಆಯ್ಕೆಗಳಲ್ಲಿ ನೀಡಲಾಗುವುದು. ಇದಲ್ಲದೆ, ಭಾರತಕ್ಕೆ ಬರುವ ಕೊಡಿಯಾಕ್ ಒಂದೇ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಿಂದ ನಿಯಂತ್ರಿಸಲ್ಪಡುತ್ತದೆ. ಬಹಿರಂಗಪಡಿಸಲಾದ ಎಲ್ಲಾ ಹೊಸ ವಿವರಗಳ ಸಾರಾಂಶ ಇಲ್ಲಿದೆ.

    ಕಲರ್‌ ಆಯ್ಕೆಗಳು

    ಹೊಸ ಜನರೇಶನ್‌ನ ಸ್ಕೋಡಾ ಕೊಡಿಯಾಕ್ ಭಾರತದಲ್ಲಿ ಏಳು ಸಿಂಗಲ್‌ಟೋನ್‌ ಬಣ್ಣಗಳಲ್ಲಿ ಲಭ್ಯವಿರುತ್ತದೆ:

    • ವೆಲ್ವೆಟ್ ರೆಡ್

    • ರೇಸ್ ಬ್ಲೂ

    • ಗ್ರ್ಯಾಫೈಟ್ ಗ್ರೇ

    • ಮ್ಯಾಜಿಕ್ ಬ್ಲಾಕ್

    • ಮೂನ್ ವೈಟ್

    • ಬ್ರಾಂಕ್ಸ್ ಗೋಲ್ಡ್

    • ಸ್ಟೀಲ್ ಗ್ರೇ

    2025 Skoda Kodiaq Front & Rear

    ಬ್ರಾಂಕ್ಸ್ ಗೋಲ್ಡ್ ಮತ್ತು ಸ್ಟೀಲ್ ಗ್ರೇ ಬಣ್ಣಗಳು ಕ್ರಮವಾಗಿ ಸೆಲೆಕ್ಷನ್ L&K ಮತ್ತು ಸ್ಪೋರ್ಟ್‌ಲೈನ್ ವೇರಿಯೆಂಟ್‌ಗಳಲ್ಲಿ ಎಕ್ಸ್‌ಕ್ಲೂಸಿವ್‌ ಆಗಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

    2025 Skoda Kodiaq Selection L&K Interior2025 Skoda Kodiaq Sportline Interior

    ಕೊಡಿಯಾಕ್ ತನ್ನ ಎರಡು ವೇರಿಯೆಂಟ್‌ಗಳಿಗೆ ಎರಡು ವಿಭಿನ್ನ ಇಂಟೀರಿಯರ್‌ ಥೀಮ್‌ಗಳನ್ನು ಹೊಂದಿದೆ. ಸೆಲೆಕ್ಷನ್ L&K ನಲ್ಲಿ, ಇದನ್ನು ಕಪ್ಪು/ಕಂದು ಬಣ್ಣದ ಕ್ಯಾಬಿನ್ ಥೀಮ್‌ನೊಂದಿಗೆ ನೀಡಲಾಗುವುದು, ಆದರೆ ಸ್ಪೋರ್ಟ್‌ಲೈನ್ ಸಂಪೂರ್ಣ ಕಪ್ಪು ಬಣ್ಣದ ಇಂಟೀರಿಯರ್‌ಅನ್ನು ಪಡೆಯುತ್ತದೆ.

    ಪವರ್‌ಟ್ರೈನ್

    ಹೊಸ ಜನರೇಶನ್‌ನ ಸ್ಕೋಡಾ ಕೊಡಿಯಾಕ್ ತನ್ನ ಅಂತರರಾಷ್ಟ್ರೀಯ ಪ್ರತಿರೂಪಕ್ಕಿಂತ ಭಿನ್ನವಾಗಿ ಭಾರತದಲ್ಲಿ ಒಂದೇ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿರುವುದನ್ನು ದೃಢಪಡಿಸಲಾಗಿದೆ, ಇದು 1.5-ಲೀಟರ್ ಮೈಲ್ಡ್‌-ಹೈಬ್ರಿಡ್ ಮತ್ತು 2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ಪಡೆಯುತ್ತದೆ. ಭಾರತಕ್ಕೆ ಬರಲಿರುವ ಕೊಡಿಯಾಕ್‌ನ ಎಂಜಿನ್‌ ವಿವರಗಳು ಹೀಗಿವೆ:

    ಎಂಜಿನ್‌ ಆಯ್ಕೆಗಳು

    2-ಲೀಟರ್ ಟರ್ಬೊ ಪೆಟ್ರೋಲ್

    ಪವರ್‌

    204 ಪಿಎಸ್

    ಟಾರ್ಕ್‌

    320 ಎನ್ಎಂ

    ಟ್ರಾನ್ಸ್‌ಮಿಷನ್‌*

    7-ಸ್ಪೀಡ್‌ ಡಿಸಿಟಿ ಆಟೋಮ್ಯಾಟಿಕ್‌

    ಇಂಧನ ದಕ್ಷತೆ

    ಪ್ರತಿ ಲೀ.14.86 ಕಿಮೀ 

    *ಡಿಸಿಟಿ - ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌

    ಫೀಚರ್‌ಗಳು ಮತ್ತು ಸುರಕ್ಷತೆ

    ಹೊಸ ಜನರೇಶನ್‌ನ ಸ್ಕೋಡಾ ಕೊಡಿಯಾಕ್ 12.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಕ್ರೂಸ್ ಕಂಟ್ರೋಲ್, ಡ್ಯುಯಲ್ ವೈರ್‌ಲೆಸ್ ಫೋನ್ ಚಾರ್ಜರ್‌ಗಳು, ಕೀಲೆಸ್ ಎಂಟ್ರಿ, ಕನೆಕ್ಟೆಡ್ ಕಾರ್ ಟೆಕ್‌ ಮತ್ತು 13-ಸ್ಪೀಕರ್ ಕ್ಯಾಂಟನ್ ಸೌಂಡ್ ಸಿಸ್ಟಮ್‌ನಂತಹ ಹಲವು ಆಧುನಿಕ ಫೀಚರ್‌ಗಳೊಂದಿಗೆ ಲೋಡ್ ಆಗಲಿದೆ.

    2025 Skoda Kodiaq Dashboard

    ಹೆಚ್ಚುವರಿಯಾಗಿ, 8-ವೇ ಪವರ್ ಹೊಂದಾಣಿಕೆ ಮತ್ತು ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟುಗಳಲ್ಲಿ ಮೆಮೊರಿ ಫಂಕ್ಷನ್‌ ಮತ್ತು ವಿಸ್ತೃತ ಥೈ ಸಪೋರ್ಟ್‌, ಸ್ಲೈಡಿಂಗ್ ಮತ್ತು ಒರಗಿಕೊಳ್ಳುವ ಎರಡನೇ ಸಾಲಿನ ಸೀಟುಗಳು, ಮೂರು-ಝೋನ್‌ ಆಟೋ ಎಸಿ ಮತ್ತು ಹಿಂಭಾಗದ ಕಿಟಕಿ ಸನ್‌ಶೇಡ್‌ಗಳಿಂದ ಪ್ರಯಾಣಿಕರ ಸೌಕರ್ಯವನ್ನು ನೋಡಿಕೊಳ್ಳಲಾಗುತ್ತದೆ.

    ಇದರ ಸುರಕ್ಷತಾ ಸೂಟ್‌ನಲ್ಲಿ 9 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟ್ರಾಕ್ಷನ್ ಕಂಟ್ರೋಲ್, ISOFIX, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್, ಹಿಲ್ ಅಸಿಸ್ಟ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಸೇರಿವೆ.

    ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

    2025 ರ ಸ್ಕೋಡಾ ಕೊಡಿಯಾಕ್ ಈ ವರ್ಷದ ಏಪ್ರಿಲ್ ದ್ವಿತೀಯಾರ್ಧದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದನ್ನು ಸ್ಥಳೀಯವಾಗಿ ಜೋಡಿಸಲಾಗುವುದು, ಮತ್ತು ಅದು ಬಂದ ನಂತರ, ಇದರ ಬೆಲೆ ಸುಮಾರು 45 ಲಕ್ಷ ರೂ.ಗಳಾಗಬಹುದು (ಎಕ್ಸ್-ಶೋರೂಂ). ಇದು ಜೀಪ್ ಮೆರಿಡಿಯನ್, ಟೊಯೋಟಾ ಫಾರ್ಚೂನರ್, ಎಂಜಿ ಗ್ಲೋಸ್ಟರ್ ಮತ್ತು ಮುಂಬರುವ ಎಂಜಿ ಮೆಜೆಸ್ಟರ್‌ನಂತಹ ಇತರ ಎಸ್‌ಯುವಿಗಳ ವಿರುದ್ಧ ಪ್ರಬಲ ಸ್ಪರ್ಧಿಯಾಗಲಿದೆ. 

    ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

    was this article helpful ?

    Write your Comment on Skoda ಕೊಡಿಯಾಕ್ 2025

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience