ಕಿಯಾ ಸೆಲ್ಟೋಸ್ ಆಂತರಿಕಗಳು: ಚಿತ್ರಗಳಲ್ಲಿ
ಕಿಯಾ ಸೆಲ್ಟೋಸ್ 2019-2023 ಗಾಗಿ dhruv ಮೂಲಕ ಆಗಸ್ಟ್ 14, 2019 02:39 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಸೆಲ್ಟೋಸ್ ಹೆಚ್ಚು ಫೀಚರ್ ಗಳಿಂದ ಭರಿತವಾಗಿದೆ ಮತ್ತು ನಾಕು ಕ್ಯಾಬಿನ್ ಅಂತರಿಕಗಳಲ್ಲಿ ನೋಡಿದೆವು, ಅದು ನಿಮ್ಮ ಪ್ರಯಾಣವನ್ನು ಆಹ್ಲಾದಭರಿತವಾಗಿರುವಂತೆ ಮಾಡುತ್ತದೆ.
- GT ಲೈನ್ ಟ್ರಿಮ್ ನಲ್ಲಿ ಕೆಂಪು ಕಾಂಟ್ರಾಸ್ಟ್ ಹೋಳಿಗೆಗಳನ್ನು ಕೊಡಲಾಗಿದೆ ಸೀಟ್ ಗಳ ಮೇಲೆ ಹಾಗು ಸ್ಟಿಯರಿಂಗ್ ವೀಲ್ ಮೇಲೆ.
- ಸೆಲ್ಟೋಸ್ ನಲ್ಲಿ ಏರ್ ಪೂರಿಫೈಎರ್ ಜೊತೆಗೆ ಇನ್ ಬಿಲ್ಟ್ ಆಗಿರುವ ಪೆರ್ಫ್ಯೂಮ್ ಇನ್ಫ್ಯೂಸೆರ್ ಅನ್ನು ಕೊಡಲಾಗಿದೆ.
- ಇದರಲ್ಲಿ ವಿಭಾಗದಲ್ಲಿನ ಮೊದಲಬಾರಿಗೆ ಹೆಡ್ ಅಪ್ ಡಿಸ್ಪ್ಲೇ ಕೊಡಲಾಗಿದೆ
- GT ಲೈನ್ ನಲ್ಲಿ ಆಯ್ಕೆಯಾಗಿ ಪೂರ್ಣ ಕಪ್ಪು ಕ್ಯಾಬಿನ್ ದೊರೆಯುತ್ತದೆ
- ಹಿಂಬದಿ ಪ್ಯಾಸೆಂಜರ್ ಗಳಿಗೆ ಮಾನ್ಯುಯಲ್ ಸನ್ ಶೇಡ್ ಗಳನ್ನು ಕೊಡಲಾಗಿದೆ.
ಕಿಯಾ ಸೆಲ್ಟೋಸ್ , ವನ್ನು ಆಗಸ್ಟ್ 22 ರಂದು ಬಿಡುಗಡೆ ಮಾಡಲಾಗುತ್ತದೆ, ಅದು ಕಾಂಪ್ಯಾಕ್ಟ್ SUV ಆಗಿದ್ದು ಅದು ಹುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್, ನಿಸ್ಸಾನ್ ಕಿಕ್ಸ್, ಮತ್ತು ಇತರ ಕಾಂಪ್ಯಾಕ್ಟ್ SUV ಗಳೊಂದಿಗೆ ಪ್ರತಿಸ್ಪರ್ದಿಸುತ್ತದೆ. ಸೆಲ್ಟಸ್ ಅನ್ನು ಎರೆಡು ಟ್ರಿಮ್ ಗಳಲ್ಲಿ ಕೊಡಲಾಗುತ್ತಿದೆ - ಟೆಕ್ ಲೈನ್ ಮತ್ತು GT ಲೈನ್.
ಕ್ಯಾಬಿನ್ ಒಳಗೆ, GT ಲೈನ್ ಅನ್ನು ಟೆಕ್ ಲೈನ್ ಇಂದ ಭಿನ್ನವಾಗಿ ಕಾಣುವಂತೆ ಮಾಡಲು ಕೆಂಪು ಕಾಂಟ್ರಾಸ್ಟ್ ಹೋಳಿಗೆಗಳನ್ನು ಕೊಡಲಾಗಿದೆ ಸ್ಟಿಯರಿಂಗ್ ವೀಲ್ ಹಾಗು ಡುಯಲ್ ಟೋನ್ ಸೀಟ್ ಗಳ ಮೇಲೆ, ಹಾಗು GT ಲೈನ್ ಬ್ಯಾಡ್ಜ್ ಗಾಲ ಮೇಲೆ, ಮತ್ತು ವಿಭಿನ್ನವಾದ ಸೀಟ್ ಕವರ್ ಪ್ಯಾಟರ್ನ್ ಕೊಡಲಾಗಿದೆ. ಹೆಚ್ಚುವರಿಯಾಗಿ, GT ಲೈನ್ ನಲ್ಲಿ ಪೂರ್ಣ ಕಪ್ಪು ಆಂತರಿಕಗಳು ಕೊಡಲಾಗಿದ್ದು ಟ್ರಿಮ್ ಗಳ ಸ್ಪರ್ಧಾತ್ಮಕವಾದ ಭಾವನೆಯನ್ನು ಎತ್ತಿಹಿಡಿಯುತ್ತದೆ. GT ಲೈನ್ ನಲ್ಲಿ ಮೆಟಲ್ ಫಿನಿಷ್ ಪೆಡಲ್ ಗಳನ್ನು ಸಹ ಕೊಡಲಾಗಿದೆ.
ಎರೆಡರಲ್ಲೂ ಫೀಚರ್ ಗಳ ಭಿನ್ನತೆ ಕೂಡ ಇದೆ- GT ಲೈನ್ ಎರೆಡರಲ್ಲಿ ಹೆಚ್ಚು ಸಲಕರಣೆಗಳಿಂದ ಕೂಡಿದೆ. ಟೆಕ್ ಲೈನ್ ಹಿಂತಲೂ ಹೆಚ್ಚಾಗಿ, ಇದರಲ್ಲಿ ಸೈಡ್ ಮತ್ತು ಕರ್ಟನ್ ಏರ್ ಬ್ಯಾಗ್ ಗಳನ್ನು ಕೊಡಲಾಗಿದೆ, ಒಂದು 360-ಡಿಗ್ರಿ ಕ್ಯಾಮೆರಾ, ಬ್ಲೈಂಡ್ ವ್ಯೂ ಮಾನಿಟರ್ ಸಿಸ್ಟಮ್ (ಸಿಸ್ಟಮ್ ರಿಲೇ ಗಳು ಕ್ಯಾಮೆರಾ ಜೊತೆಗೆ ಕೊಡಲಾಗಿದ್ದು ಅವನ್ನು 7-ಇಂಚು MIDಗೆ ಅಳವಡಿಸಲಾಗಿದೆ), ಹೆಡ್ ಅಪ್ ಡಿಸ್ಪ್ಲೇ ಮತ್ತು ಕ್ರೂಸ್ ಕಂಟ್ರೋಲ್ ಸಹ ಕೊಡಲಾಗಿದೆ.
ಡ್ಯಾಶ್ ಬೋರ್ಡ್ ಲೇಔಟ್ ಲೇ ಔಟ್
ಸೆಲ್ಟೋಸ್ ನಲ್ಲಿ ಫೀಚರ್ ಗಳಾದ ಡುಯಲ್ ಟೋನ್ ಡ್ಯಾಶ್ ಬೋರ್ಡ್ ಜೊತೆಗೆ ಮೇಲ್ಬಾಗದ ಅರ್ಧ ಭಾಗಕ್ಕೆ ಕಪ್ಪು ಹಾಗು ಕೆಳಭಾಗಕ್ಕೆ ಬಿಳಿ ಬಣ್ಣದಲ್ಲಿ ಫಿನಿಶಿಂಗ್ ಕೊಡಲಾಗಿದೆ. GT ಲೈನ್ ನಲ್ಲಿ ಆಯ್ಕೆಯಾಗಿ ಪೂರ್ಣ ಕಪ್ಪು ಆಯ್ಕೆ ಕೊಡಲಾಗಿದೆ. 10.25-ಇಂಚು ಟಚ್ ಸ್ಕ್ರೀನ್ ನೋಡಲು ಡ್ಯಾಶ್ ಬೋರ್ಡ್ ಮೇಲೆ ತೇಲುವಂತೆ ಕಾಣುತ್ತದೆ ಮತ್ತು ಅದು ಇನ್ಸ್ಟ್ರುಮೆಂಟ್ ಕ್ಲಸ್ಟರ್ ನ ಎಕ್ಸಟೆನ್ಶನ್ ಆಗಿದೆ, ಅದು ಮೆರ್ಸೆಡಿಸ್ ನೋಟವನ್ನು ಕೊಡುತ್ತದೆ.
ಸ್ಟಿಯರಿಂಗ್ ವೀಲ್
ಸೆಲ್ಟಸ್ ನಲ್ಲಿ ಫ್ಲಾಟ್ ಬಾಟಮ್ ಇರುವ ಸ್ಟಿಯರಿಂಗ್ ವೀಲ್ ಇದ್ದು ನೋಡಲು ಸ್ಪರ್ಧಾತ್ಮಕವಾಗಿದೆ. ಇದರಲ್ಲಿ ವಿಶೇಷವಾದ ಬಟನ್ ಗಳನ್ನೂ ಕೊಡಲಾಗಿದ್ದು ಅದು ಆಡಿಯೋ ಸಿಸ್ಟಮ್ ಅನ್ನು ಕಂಟ್ರೋಲ್ ಮಾಡಲು ಸಹಕಾರಿಯಾಗಿದೆ, ಇನ್ಸ್ಟ್ರುಮೆಂಟ್ ಕ್ಲಸ್ಟರ್, MID, ಹಾಗು ಕ್ರೂಸ್ ಕಂಟ್ರೋಲ್ ಉಪಯೋಗಿಸಲು ಸಹಕಾರಿಯಾಗಿದೆ. GT ಲೈನ್ ನಲ್ಲಿ, ಸ್ಟಿಯರಿಂಗ್ ವೀಲ್ ಮೇಲೆ ಕೆಂಪು ಹೋಲಿಗೆಗಳನ್ನು ಕೊಡಲಾಗಿದೆ, ಮತ್ತು ಕೆಳಭಾಗದಲ್ಲಿ ‘GT Line’ ಬ್ಯಾಡ್ಜ್ ಕೊಡಲಾಗಿದೆ. ಟೆಕ್ ಲೈನ್ ನಲ್ಲಿ ಸೆಲ್ಟೋಸ್ ಬ್ಯಾಡ್ಜ್ ಕೊಡಲಾಗಿದೆ.
ಇನ್ಸ್ಟ್ರುಮೆಂಟ್ ಕ್ಲಸ್ಟರ್
ಸೆಲ್ಟಸ್ ನಲ್ಲಿ ಅನಲಾಗ್ ಸ್ಪೀಡೋಮೀಟರ್ ಮತ್ತು ತಾಚೊ ಮೀಟರ್ ಕೊಡಲಾಗಿದೆ. ಒಪ್ಪಬಹುದಾದ ವಿಷಯವೆಂದರೆ ಅದು ಹಳತಾಗಿ ಕಾಣಿಸುವುದಿಲ್ಲ, ಡಿಜಿಟಲ್ ಸ್ಕ್ರೀನ್ ಗಳನ್ನು ಕೊಡಲಾಗಿರುವ ನವೀನ ಕಾರ್ ಗಳಿಗೆ ಹೋಲಿಸಿದಾಗ. ಮತ್ತು ಇದರಲ್ಲಿ ಪೂರ್ಣ ಕಪ್ಪು 7-ಇಂಚು MID ಕೊಡ್ಲಗಿದೆ. ಸ್ಕ್ರೀನ್ ಮೇಲೆ ಹಿಂದೆ ಮುಂದೆ ಮಾಡಿ ಎಲ್ಲ ವಿಷಯಗಳನ್ನು ತಿಳಿಯಬಹುದಾಗಿದೆ.
ಹೆಡ್ ಅಪ್ ಡಿಸ್ಪ್ಲೇ
ಸೆಲ್ಟಸ್ ನಲ್ಲಿ ಈ ವಿಭಾಗದ ಮೊದಲಾದ ಹೆಡ್ ಅಪ್ ಡಿಸ್ಪ್ಲೇ ಅನ್ನು ಕೊಡಲಾಗಿದೆ ಅದು ವಿಷಯಗಳಾದ ಸ್ಪೀಡ್ ಮತ್ತು ನೇವಿಗೇಶನ್ ಅನ್ನು ತೋರಿಸುತ್ತದೆ. ಹಾಗಾಗಿ ಡ್ರೈವರ್ ಕಣ್ಣನ್ನು ರಸ್ತೆಯ ಮೇಲೆ ಕೇಂದ್ರೀಕರಿಸಬಹುದಾಗಿದೆ ಮತ್ತು ಈ ವಿಷಯಗಳನ್ನು ತಿಳಿಯಲು ನೋಟ ಬದಲಾಯಿಸಬೇಕಾಗಿರುವುದಿಲ್ಲ. ಇದು ಕೇವಲ GT ಲೈನ್ ಟ್ರಿಮ್ ನಲ್ಲಿ ಸಿಗುತ್ತದೆ.
Also Read: 2019 Kia Seltos First Drive Review: Diesel & Petrol
ಟಚ್ ಸ್ಕ್ರೀನ್
ದೊಡ್ಡದಾದ 10.25-ಇಂಚು ಟಚ್ ಸ್ಕ್ರೀನ್ ಜೊತೆಗೆ UVO ಕನೆಕ್ಟ್ ಸಿಸ್ಟಮ್ ಕೊಡಲಾಗಿದೆ. ಅದು ಕಿಯಾ ದ ಕನೆಕ್ಟೆಡ್ ಕಾರ್ ಟೆಕ್ನಲಾಜಿ ಆವೃತ್ತಿ ಆಗಿದೆ. ಅದರ ಜೊತೆಗೆ 8-ಸ್ಪೀಕರ್ 400W ಬೋಸ್ ಸೌಂಡ್ ಸಿಸ್ಟಮ್ ಅನ್ನು ಹೆಚ್ಚಿನ ಆವೃತ್ತಿಗಳಲ್ಲಿ GT ಹಾಗು ಟೆಕ್ ಲೈನ್ ಟ್ರಿಮ್ ಗಳಲ್ಲಿ ಸಹ ಕೊಡಲಾಗಿದೆ. ಆಡಿಯೋ ಕಂಟ್ರೋಲ್ ಅಲ್ಲದೆ, ಟಚ್ ಸ್ಕ್ರೀನ್ ನಲ್ಲಿ ಕಂಟ್ರೋಲ್ ಗಳಾದ AC ಮತ್ತು ಇತರ ಫೀಚರ್ ಗಳನ್ನೂ ಕಂಟ್ರೋಲ್ ಮಾಡಬಹುದಾಗಿದೆ.
ಸೀಟ್ ಗಳು
ಸೆಲ್ಟೋಸ್ ನ ಸೀಟ್ ಗಳು ಹಗುರವಾದ ಪ್ಯಾಡಿಂಗ್ ಹಾಗು ಬದಿಗಳಲ್ಲಿ ಬಾಸ್ಟರಿಂಗ್ ಹೊಂದಿದೆ, ಅದು ಪ್ಯಾಸೆಂಜರ್ ಗಳಿಗೆ ನಿಖರವಾಗಿ ಕೂಡಲು ಸಹಕಾರಿಯಾಗಿದೆ. ಟೆಕ್ ಲೈನ್ ಟ್ರಿಮ್ ನಲ್ಲಿ ಹೆಕ್ಸಾಗೊನಲ್ ಮಾದರಿಗಳನ್ನು ಕೊಡಲಾಗಿದೆ ಮತ್ತು ಅವುಗಳಿಗೆ ಬಿಳಿ ಮೇಲ್ಪದರಗಳನ್ನು ಕೊಡಲಾಗಿದೆ. GT ಲೈನ್ ಟ್ರಿಮ್ ಮೇಲೆ ಸಾಲು ಸಾಲಾಗಿ ಗೆರೆಗಳನ್ನು ಕೊಡಲಾಗಿದ್ದು ಅವು ಡುಯಲ್ ಟೋನ್ ಬಣ್ಣಗಳ ಪದರಗಳನ್ನು ಹೊಂದಿದೆ (ಕಪ್ಪು ಮತ್ತು ಬಿಳಿ )ಮತ್ತು ಕೆಂಪು ಹೊಲಿಗೆಗಳನ್ನು ಹೊಂದಿದೆ. ಸೀಟ್ ಗಳಿಗೆ ಮುರು ಪದರಗಳ ವೆಂಟಿಲೇಷನ್ ಕೊಡಲಾಗಿದೆ. ಡ್ರೈವರ್ ಸೀಟ್ ವಿದ್ಯುತ್ ಅಳವಡಿಕೆಯೊಂದಿಗೆ ಸರಿಪಡಿಸಬಹುದಾಗಿದೆ.
ಏರ್ ಪ್ಯೂರಿಫೈಎರ್ ಮತ್ತು ರೇರ್ AC ವೆಂಟ್ ಗಳು
ಕಿಯಾ ದವರು ಏರ್ ಪ್ಯೂರಿಫೈಎರ್ ಅನ್ನು ಅಯ್ಖ್ಯೆಯಾಗಿ ಪೆರ್ಫ್ಯೂಮ್ ಡಿಫ್ಫ್ಯೂಸೆರ್ ಜೊತೆಗೆ ಕೊಡಲಾಗಿದೆ. ನೀವು ಗಾಳಿಯ ಗುಣಮಟ್ಟವನ್ನು ಉಸಿರಾಡುವಾಗ ಪರೀಕ್ಷಿಸಬಹುದು ಆ ಯೂನಿಟ್ ಕೆಲಸ ಮಾಡುತ್ತಿರುವಾಗ. ನೀವು ಪ್ಯೂರಿಫೈಎರ್ ಅನ್ನು ಕಂಟ್ರೋಲ್ ಮಾಡಬಹುದಾಗಿದೆ UVO ಕನೆಕ್ಟ್ ಆಫ್ ಗಳೊಂದಿಗೆ ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಮ್ ಒಂದಿಗೆ ರೇರ್ ಪ್ಯಾಸೆಂಜರ್ ಗಳಿಗೆ ಹೊಂದುವಂತೆ ಏರ್ ವೆಂಟ್ ಕೊಡಲಾಗಿದೆ, ಬ್ಲೊವೆರ್ ಕಂಟ್ರೋಲ್ ಕೊಡಲಾಗಿಲ್ಲ.
ಸನ್ ರೂಫ್
ಸೆಲ್ಟೋಸ್ ನಲ್ಲಿ ಕ್ಯಾಬಿನ್ ವಿಶಾಲವಾಗಿ ಕಾಣುವಂತೆ ಮಾಡುವ ಸನ್ ರೂಫ್ ಕೊಡಲಾಗಿದೆ, ವಿಶೇಷವಾಗಿ GT ಲೈನ್ ಟ್ರಿಮ್ ಜೊತೆಗೆ ಪೂರ್ಣ ಕಪ್ಪು ಕ್ಯಾಬಿನ್. ಆದರೆ ಇದು ಪನೋರಮಿಕ್ ಆಗಿಲ್ಲ.
ಸನ್ ಶೇಡ್ ಗಳು
ಹಿಂಬದಿಯ ಪ್ಯಾಸೆಂಜರ್ ವಿಂಡೋ ಗಳು ಮಾನ್ಯುಯಲ್ ಸನ್ ಶೇಡ್ ಒಂದಿಗೆ ಬರುತ್ತದೆ, ಅದು ಬೇಸಿಗೆಯಲ್ಲಿ ಹೆಚ್ಚು ಉಪಕಾರಿಯಾಗಿದೆ ಮತ್ತು ಅದು ಖಾಸಿಗಿತನ ಕಾಪಾಡಲು ಅನುಕೂಲವಾಗುತ್ತದೆ.
ಆರ್ಮ್ ರೆಸ್ಟ್ ಗಳು
ಮುಂಬದಿ ಹಾಗು ಹಿಂಬದಿ ಫಾಸ್ಸೆಂಗ್ರ್ ಗಳಿಗೆ ಆರ್ಮ್ ರೆಸ್ಟ್ ಕೊಡಲಾಗಿದೆ, ಆರ್ಮ್ ರೆಸ್ಟ್ ನಲ್ಲಿ ಸ್ಟೋರೇಜ್ ಸಹ ಕೊಡಲಾಗಿದೆ ಮತ್ತು ಆರ್ಮ್ ರೆಸ್ಟ್ ನಲ್ಲಿ ಎರೆಡು ಕಪ್ ಹೋಲ್ಡರ್ ಗಳನ್ನು ಕೊಡಲಾಗಿದೆ.
ಹಿಂಬದಿ ಸೀಟ್ ಗಳು
ಹಿಂಬದಿ ಸೀಟ್ ಗಳಿಗೆ ಸರಿಹೊಂದಿಸಬಹುದಾದ ಹೆಡ್ ರೆಸ್ಟ್ ಕೊಡಲಾಗಿದೆ ಎಲ್ಲ ಮೂರೂ ಪ್ಯಾಸೆಂಜರ್ ಗಳಿಗೆ. ಆದರೆ, ಮದ್ಯದ ಸೀಟ್ ಗಳಿಗೆ 3-ಪಾಯಿಂಟ್ ಸೀಟ್ ಬೆಲ್ಟ್ ಕೊಡಲಾಗಿಲ್ಲ.
ಬೂಟ್ ಸ್ಪೇಸ್
ಕಿಯಾ ಸೆಲ್ಟೋಸ್ ನಲ್ಲಿ 433 ಬೂಟ್ ಸ್ಪೇಸ್ ದೊರೆಯುತ್ತದೆ, ಅದು ರೆನಾಲ್ಟ್ ಡಸ್ಟರ್ ನಂತರ ಈ ವಿಭಾಗದಲ್ಲಿ ಹೆಚ್ಚು ಸ್ಥಳಾವಕಾಶ ಹೊಂದಿರುವ ಕಾರ್ ಆಆಗಿದೆ.
Also Read:Kia Seltos GT Line vs HT Line In Pictures: Which One To Pick?