Login or Register ಅತ್ಯುತ್ತಮ CarDekho experience ಗೆ
Login

ನಟ ರಣಬೀರ್ ಕಪೂರ್ ಅವರ ಕಾರು ಸಂಗ್ರಹಕ್ಕೆ ಹೊಚ್ಚ ಹೊಸ Lexus LM ಸೇರ್ಪಡೆ

ಲೆಕ್ಸಸ್ ಎಲ್.ಎಂ ಗಾಗಿ ansh ಮೂಲಕ ಜೂನ್ 05, 2024 08:27 pm ರಂದು ಪ್ರಕಟಿಸಲಾಗಿದೆ

7-ಸೀಟರ್ ಐಷಾರಾಮಿ MPV ಆಗಿರುವ ಲೆಕ್ಸಸ್ LM, 2.5-ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ ಮತ್ತು ನಿಮಗೆ ಬೇಕಾಗುವ ಎಲ್ಲಾ ಪ್ರೀಮಿಯಂ ಫೀಚರ್ ಗಳನ್ನು ನೀಡುತ್ತದೆ.

ಅನಿಮಲ್, ಬ್ರಹ್ಮಾಸ್ತ್ರ, ಮತ್ತು ಯೇ ಜವಾನಿ ಹೈ ದೀವಾನಿ ಮುಂತಾದ ಚಲನಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ ನಟ ರಣಬೀರ್ ಕಪೂರ್ ಇದೀಗ ಲೆಕ್ಸಸ್ LM ಅನ್ನು ಖರೀದಿಸಿದ್ದಾರೆ. 5 ಕೋಟಿ ರೂಪಾಯಿಗಳಿಗಿಂತ (ಎಕ್ಸ್ ಶೋ ರೂಂ) ಹೆಚ್ಚು ಬೆಲೆಯ ಬೆಂಟ್ಲಿ ಕಾಂಟಿನೆಂಟಲ್ GT ಅನ್ನು ಖರೀದಿಸಿದ ಸ್ವಲ್ಪ ಸಮಯದಲ್ಲೇ ನಟ ಈ ಐಷಾರಾಮಿ ಮೈಫ್ವ್ ಅನ್ನು ಖರೀದಿಸಿದ್ದಾರೆ. ರಣಬೀರ್ ಅವರ LM ಗೆ ಸೋನಿಕ್ ಟೈಟಾನಿಯಂ ಶೇಡ್‌ನಲ್ಲಿ ಫಿನಿಷ್ ಅನ್ನು ನೀಡಲಾಗಿದೆ ಮತ್ತು ಈ ಐಷಾರಾಮಿ LM ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿವರಗಳು ಇಲ್ಲಿದೆ

ಪವರ್‌ಟ್ರೇನ್

LM ಒಟ್ಟು 250 PS ಉತ್ಪಾದನೆ ಮಾಡುವ 2.5-ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನಲ್ಲಿ ಚಲಿಸುತ್ತದೆ. ಈ ಹೈಬ್ರಿಡ್ ಸಿಸ್ಟಮ್ e-CVT ಗೇರ್ ಬಾಕ್ಸ್ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ನೀಡುತ್ತದೆ.

ಸೀಟಿಂಗ್ ಸಾಮರ್ಥ್ಯ

ಲೆಕ್ಸಸ್ ತನ್ನ LM ಅನ್ನು ಎರಡು ಸೀಟಿಂಗ್ ಕಾಂಫಿಗರೇಷನ್ ನಲ್ಲಿ ನೀಡುತ್ತದೆ: 4-ಸೀಟರ್ ವರ್ಷನ್, ಇದು ಹಿಂಬದಿಯಲ್ಲಿ ಲೌಂಜ್ ಸೀಟ್ ಗಳು, ಮನರಂಜನಾ ವ್ಯವಸ್ಥೆ ಮತ್ತು ಎರಡು ಸಾಲುಗಳ ನಡುವೆ ವಿಭಜನೆಯನ್ನು ಹೊಂದಿದೆ ಮತ್ತು 7-ಸೀಟರ್ ವರ್ಷನ್, ಇದು ಎರಡನೇ ಸಾಲಿನಲ್ಲಿ ಲಾಂಜ್ ಸೀಟ್‌ಗಳನ್ನು ಮತ್ತು ಮೂರನೇ ಸಾಲಿನಲ್ಲಿ ಬೆಂಚ್ ಸೀಟ್‌ಗಳನ್ನು ಹೊಂದಿದೆ. ಸದ್ಯಕ್ಕೆ, ರಣಬೀರ್ ಕಪೂರ್ ಅವರು 4-ಸೀಟ್ ವರ್ಷನ್ ಅನ್ನು ಖರೀದಿಸಿದ್ದಾರೆಯೇ ಅಥವಾ 7-ಸೀಟ್ ವರ್ಷನ್ ಅನ್ನು ಖರೀದಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಫೀಚರ್ ಗಳು ಮತ್ತು ಸುರಕ್ಷತೆ

ಐಷಾರಾಮಿ MPV ಯ ಫೀಚರ್ ಗಳಲ್ಲಿ 14-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ನಾಲ್ಕು-ಜೋನ್ ಕ್ಲೈಮೇಟ್ ಕಂಟ್ರೋಲ್, 23-ಸ್ಪೀಕರ್ ಮಾರ್ಕ್ ಲೆವಿನ್ಸನ್ ಸೌಂಡ್ ಸಿಸ್ಟಮ್, 48-ಇಂಚಿನ ಹಿಂಭಾಗದ ಎಂಟರ್ಟೈನ್ಮೆಂಟ್ ಸ್ಕ್ರೀನ್, ಹೀಟೆಡ್ ಮತ್ತು ವೆಂಟಿಲೇಟೆಡ್ ಮುಂಭಾಗ ಮತ್ತು ಹಿಂಭಾಗದ ಸೀಟುಗಳು ಮತ್ತು ಹೀಟೆಡ್ ಸ್ಟೀರಿಂಗ್ ವೀಲ್ ಒಳಗೊಂಡಿದೆ.

ಇದನ್ನು ಕೂಡ ಓದಿ: ಲೆಕ್ಸಸ್ NX 350h ಓವರ್‌ಟ್ರೇಲ್ ಭಾರತದಲ್ಲಿ ರೂ 71.17 ಲಕ್ಷಕ್ಕೆ ಬಿಡುಗಡೆಯಾಗಿದೆ

ಪ್ರಯಾಣಿಕರ ಸುರಕ್ಷತೆಯ ವಿಷಯದಲ್ಲಿ LM 8 ಏರ್‌ಬ್ಯಾಗ್‌ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ, ಮತ್ತು ಸುಧಾರಿತ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್‌ಗಳು (ADAS) ಫೀಚರ್ ಗಳಾದ ಲೇನ್ ಕೀಪ್ ಅಸಿಸ್ಟ್, ಹೈ ಬೀಮ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರ್‌ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್ ನಂತಹ ಫೀಚರ್ ಗಳನ್ನು ನೀಡುತ್ತದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಲೆಕ್ಸಸ್ LM ಬೆಲೆಯು 2 ಕೋಟಿಯಿಂದ 2.5 ಕೋಟಿ (ಎಕ್ಸ್ ಶೋರೂಂ) ನಡುವೆ ಇದೆ ಮತ್ತು ಇದು BMW X7 ಮತ್ತು ಮರ್ಸಿಡೀಸ್-ಬೆಂಜ್ GLS ನಂತಹ 3-ಸಾಲಿನ SUV ಗಳಿಗೆ ಪ್ರತಿಸ್ಪರ್ಧಿಯಾಗಿದೆ

ಇನ್ನಷ್ಟು ಓದಿ: ಲೆಕ್ಸಸ್ LM ಆಟೋಮ್ಯಾಟಿಕ್

Share via

Write your Comment on Lexus ಎಲ್.ಎಂ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್
Rs.26.90 - 29.90 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.10.60 - 19.70 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ