ಭಾರತದಲ್ಲಿ ಬಿಡುಗಡೆಗೆ ಇನ್ನಷ್ಟು ಹತ್ತಿರವಾಗಿರುವ ಮಹೀಂದ್ರಾ ಗ್ಲೋಬಲ್ ಪಿಕಪ್ , ವಿನ್ಯಾಸದ ಪೇಟೆಂಟ್ ಗೆ ಅರ್ಜಿ ಸಲ್ಲಿಕೆ
ನವೆಂಬರ್ 09, 2023 07:28 pm ರಂದು rohit ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಆಗಸ್ಟ್ 2023ರಲ್ಲಿ ಪ್ರದರ್ಶಿಸಲಾದ ಕಾನ್ಸೆಪ್ಟ್ ನಲ್ಲಿ ಕಂಡಂತೆಯೇ ಸ್ಕಾರ್ಪಿಯೋ N ಆಧರಿತ ಪಿಕಪ್ ಹೊಂದಿರುವ ವಿನ್ಯಾಸವನ್ನೇ ಈ ಪೇಟೆಂಟ್ ಅರ್ಜಿಯಲ್ಲಿ ಕಾಣಬಹುದು
- ಮಹೀಂದ್ರಾ ಗ್ಲೋಬಲ್ ಪಿಕಪ್ ವಾಹನವು 2023ರ ಆಗಸ್ಟ್ ತಿಂಗಳಿನಲ್ಲಿ ಜಾಗತಿಕವಾಗಿ ಬಿಡುಗಡೆಯಾಯಿತು
- ಜಾಗತಿಕ ಮಾರುಕಟ್ಟೆಯಲ್ಲಿ ಭಾರತವೂ ಸಹ ಸಂಭಾವ್ಯ ಮಾರುಕಟ್ಟೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.
- ಇದನ್ನು 2026ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಭವವಿದ್ದು, ಬೆಲೆಯು ರೂ. 25 ಲಕ್ಷದಿಂದ ಪ್ರಾರಂಭಗೊಳ್ಳಲಿದೆ (ಎಕ್ಸ್-ಶೋರೂಂ).
- ಪೇಟೆಂಟ್ ಅರ್ಜಿಯಲ್ಲಿರುವ ಚಿತ್ರವು ಪರಿಕಲ್ಪನೆಯ ರೂಪದಲ್ಲಿರುವ ಹೆಡ್ ಲೈಟ್ ಗಳು ಮತ್ತು ಆಫ್ ರೋಡಿಂಗ್ ಸೌಲಭ್ಯಗಳು ಸೇರಿದಂತೆ ಅದೇ ವಿನ್ಯಾಸವನ್ನು ತೋರಿಸುತ್ತಿದೆ.
- ವರ್ಧಿತ 4X4 ಸಾಮರ್ಥ್ಯದೊಂದಿಗೆ ಸ್ಕೋರ್ಪಿಯೊ N ನ 2.2 ಲೀಟರ್ ಡೀಸೆಲ್ ಪವರ್ ಟ್ರೇನ್ ಜೊತೆಗೆ ಪರಿಷ್ಕೃತ ಆವೃತ್ತಿಯನ್ನು ಪಡೆಯುವ ಸಾಧ್ಯತೆ ಇದೆ.
ದಕ್ಷಿಣ ಆಫ್ರಿಕಾದಲ್ಲಿ 2023ರ ಆಗಸ್ಟ್ ತಿಂಗಳಿನಲ್ಲಿ ನಡೆದ ಮಹೀಂದ್ರಾದ ಬೃಹತ್ ಕಾರ್ಯಕ್ರಮವೊಂದರಲ್ಲಿ ನಮಗೆ ಎರಡು ಹೊಸ ಕಾರುಗಳು ಕಾಣ ಸಿಕ್ಕವು: ಅವೆಂದರೆ ಮಹೀಂದ್ರಾ ಗ್ಲೋಬಲ್ ಪಿಕಪ್ ಮಹೀಂದ್ರಾ ಥಾರ್.e (ಸಾಮಾನ್ಯವಾಗಿ ಇದನ್ನು EV ಎಂದು ಕರೆಯಲಾಗುತ್ತದೆ). ಈ ಕಾರು ತಯಾರಕ ಸಂಸ್ಥೆಯು ಎಲೆಕ್ಟ್ರಿಕ್ ಥಾರ್ ಪರಿಕಲ್ಪನೆಯ ವಿನ್ಯಾಸಕ್ಕೆ ಪೇಟೆಂಟ್ ಪಡೆದ ತಕ್ಷಣವೇ ಇದೀಗ ಮಹೀಂದ್ರಾ ಸ್ಕೋರ್ಪಿಯೊ N ಆಧರಿತ ಪಿಕಪ್ ವಾಹನಕ್ಕೂ ಈಗ ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸಲಾಗುತ್ತಿದೆ.
ಪೇಟೆಂಟ್ ಅರ್ಜಿಯಲ್ಲಿ ಏನನ್ನು ಕಾಣಬಹುದು?
ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹೀಂದ್ರಾದ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಮಾದರಿಯನ್ನೇ ಪೇಟೆಂಟ್ ಅರ್ಜಿಯಲ್ಲಿರುವ ಚಿತ್ರಗಳಲ್ಲಿ ಕಾಣಬಹುದು. ಇದು ತದ್ರೂಪಿ LED ಹೆಡ್ ಲೈಟ್ ಕ್ಲಸ್ಟರ್ ಗಳು ಮತ್ತು LED DRLಗಳು, ಹೊಸದಾಗಿ ವಿನ್ಯಾಸಗೊಳಿಸಿದ ಗ್ರಿಲ್, ಡ್ರೈವರ್ ಪಕ್ಕದಲ್ಲಿ ಎತ್ತರದ ಗಾಳಿ ಕೊಳವೆ ಹಾಗೂ ಹೆಚ್ಚುವರಿ LED ಲೈಟ್ ಗಳನ್ನು ಹೊಂದಿದೆ. ಇದು ಅಲೋಯ್ ವೀಲ್ ಗಳು, ಫ್ರಂಟ್ ಬಂಪರ್ ಮೌಂಟೆಡ್ ವಿಂಚ್ ಮತ್ತು ಸೈಡ್ ಸ್ಟೆಪ್ ಗಳಿಗೆ ಅದೇ ವಿನ್ಯಾಸವನ್ನು ಹೊಂದಿದೆ. ಇದರ ಬಿಡುಗಡೆಯ ವೇಳೆ ಇದರ ಆಫ್ ರೋಡಿಂಗ್ ಸೌಲಭ್ಯಗಳು ಮತ್ತು ವೈಶಿಷ್ಟ್ಯಗಳು ಸೇರಿದಂತೆ ಈ ಮಹೀಂದ್ರಾ ಗ್ಲೋಬಲ್ ಪಿಕಪ್ ವಾಹನದ ಎಲ್ಲಾ ಪ್ರಮುಖ ವಿವರಗಳ ಕುರಿತು ಮಾಹಿತಿಯನ್ನು ನೀಡಿದ್ದೇವೆ.
ಸ್ಕಾರ್ಪಿಯೊ N ಪವರ್ ಟ್ರೇನ್ ಬಳಕೆ
ಸ್ಕಾರ್ಪಿಯೊ N ವಾಹನದಲ್ಲಿರುವ 2.2 ಲೀಟರ್ ಡೀಸೆಲ್ ಎಂಜಿನ್ ನ ಪರಿಷ್ಕೃತ ವೇರಿಯಂಟ್ ಅನ್ನು ಬಳಸಿ ಗ್ಲೋಬಲ್ ಪಿಕಪ್ ಅನ್ನು ಚಲಾಯಿಸಲಾಗುತ್ತದೆ. ಇದು ಆಫ್ ರೋಡಿಂಗ್ ಗಾಗಿ 4 ವೀಲ್ ಡ್ರೈವ್ (4WD) ಅನ್ನು ಹೊಂದಿರಲಿದೆ ಎನ್ನುವ ಮಾಹಿತಿಯನ್ನು ಹೊರತುಪಡಿಸಿ ಮಹೀಂದ್ರಾ ಸಂಸ್ಥೆಯು ಈ ಪಿಕಪ್ ಕುರಿತ ತಾಂತ್ರಿಕ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಸ್ಕಾರ್ಪಿಯೊ N ಕಾರಿನ 4WD ವೇರಿಯಂಟ್ ನಲ್ಲಿ ಎಂಜಿನ್, 175 PS/400 Nm ಮೂಲಕ ಚಲಿಸಲಿದೆ. ಗ್ಲೋಬಲ್ ಪಿಕಪ್ ವಾಹನದ ಹೊಸ ಘಟಕವು ಅದೇ 6 ಸ್ಪೀಡ್ MT ಮತ್ತು 6 ಸ್ಪೀಡ್ AT ಟ್ರಾನ್ಸ್ ಮಿಶನ್ ಆಯ್ಕೆಗಳನ್ನು ಹೊಂದಿರಲಿದೆ.
ಇದನ್ನು ಸಹ ಓದಿರಿ: ಈ 7 SUVಗಳು ಈ ದೀಪಾವಳಿಯ ಸಂದರ್ಭದಲ್ಲಿ ಅತ್ಯಧಿಕ ರಿಯಾಯಿತಿಯನ್ನು ನೀಡುತ್ತಿವೆ
ಭಾರತದಲ್ಲಿ ಬಿಡುಗಡೆ ಮತ್ತು ಬೆಲೆ
ಮಹೀಂದ್ರಾ ಗ್ಲೋಬಲ್ ಪಿಕಪ್ ವಾಹನದ ಬಿಡುಗಡೆಯ ದಿನಾಂಕವನ್ನು ಇನ್ನೂ ದೃಢೀಕರಿಸದೆ ಇದ್ದರೂ ಇದು 2026ರಲ್ಲಿ ಭಾರತದ ರಸ್ತೆಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದು ಮಾರುಕಟ್ಟೆಯಲ್ಲಿ ಇಸುಜು V-ಕ್ರಾಸ್ ಮತ್ತು ಟೊಯೊಟಾ ಹೈಲಕ್ಸ್ ಜೊತೆಗೆ ಸ್ಪರ್ಧಿಸಲಿದ್ದು, ರೂ. 25 ಲಕ್ಷದಷ್ಟು (ಎಕ್ಸ್-ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿರಲಿದೆ. ಇದಕ್ಕಿಂತ ಮೊದಲೇ ನೀವು ಆಫ್ ರೋಡರ್ ಅನ್ನು ಖರೀದಿಸಲು ಬಯಸುವುದಾದರೆ 5 ಬಾಗಿಲುಗಳ ಮಹೀಂದ್ರಾ ಥಾರ್ ವಾಹನವು 2024ರಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ.
ಇದನ್ನು ಸಹ ಓದಿರಿ: ಅಕ್ಟೋಬರ್ 2023ರಲ್ಲಿ ಭಾರತದಲ್ಲಿ ಅತ್ಯಧಿಕ ಮಾರಾಟ ದಾಖಲಿಸಿದ 15 ಕಾರುಗಳಿವು