- + 7ಬಣ್ಣಗಳು
- + 31ಚಿತ್ರಗಳು
- shorts
- ವೀಡಿಯೋಸ್
ಮಹೀಂದ್ರ ಥಾರ್ ರಾಕ್ಸ್
ಮಹೀಂದ್ರ ಥಾರ್ ರಾಕ್ಸ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1997 ಸಿಸಿ - 2184 ಸಿಸಿ |
ಪವರ್ | 150 - 174 ಬಿಹೆಚ್ ಪಿ |
ಟಾರ್ಕ್ | 330 Nm - 380 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | 4ಡಬ್ಲ್ಯುಡಿ ಅಥವಾ ಹಿಂಬದಿ ವೀಲ್ |
ಮೈಲೇಜ್ | 12.4 ಗೆ 15.2 ಕೆಎಂಪಿಎಲ್ |
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಡ್ರೈವ್ ಮೋಡ್‌ಗಳು
- ಕ್ರುಯಸ್ ಕಂಟ್ರೋಲ್
- ಸನ್ರೂಫ್
- ಏರ್ ಪ್ಯೂರಿಫೈಯರ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- adas
- ವೆಂಟಿಲೇಟೆಡ್ ಸೀಟ್‌ಗಳು
- 360 degree camera
- blind spot camera
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್‌ಗಳು
ಥಾರ್ ರಾಕ್ಸ್ ಇತ್ತೀಚಿನ ಅಪ್ಡೇಟ್
ಥಾರ್ ರೋಕ್ಸ್ ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ಮಹೀಂದ್ರಾ ಥಾರ್ ರೋಕ್ಸ್ ಅನ್ನು ಭಾರತದಲ್ಲಿ 12.99 ಲಕ್ಷ ರೂ.ಗೆ (ಪರಿಚಯಾತ್ಮಕ, ಎಕ್ಸ್ ಶೋರೂಂ) ಬಿಡುಗಡೆ ಮಾಡಲಾಗಿದೆ, ಮತ್ತು ವೇರಿಯೆಂಟ್-ವಾರು ಬೆಲೆಗಳ ಮಾಹಿತಿಗಳು ಇಲ್ಲಿವೆ.
ಥಾರ್ ರೋಕ್ಸ್‌ನ ಬೆಲೆ ಎಷ್ಟು?
ಮಹೀಂದ್ರ ಥಾರ್ ರಾಕ್ಸ್‌ನ ಬೆಲೆಗಳು 12.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ. ಪ್ರವೇಶ ಮಟ್ಟದ ಡೀಸೆಲ್ ಮೊಡೆಲ್‌ನ ಬೆಲೆಯು 13.99 ಲಕ್ಷ ರೂ. ಆಗಿದೆ. ಥಾರ್ ರೋಕ್ಸ್‌ನ ಹಿಂಭಾಗದ-ಚಕ್ರ-ಡ್ರೈವ್ (RWD) ಆವೃತ್ತಿಗಳ ಬೆಲೆಗಳು 20.49 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ದೊಡ್ಡದಾದ ಥಾರ್‌ನ 4-ವೀಲ್-ಡ್ರೈವ್ (4ವೀಲ್‌ಡ್ರೈವ್) ಡೀಸೆಲ್ ಆವೃತ್ತಿಗಳ ಬೆಲೆಗಳನ್ನು ಮಹೀಂದ್ರಾ ಇನ್ನೂ ಪ್ರಕಟಿಸಿಲ್ಲ.
ಮಹೀಂದ್ರಾ ಥಾರ್ ರೋಕ್ಸ್‌ನಲ್ಲಿ ಎಷ್ಟು ಆವೃತ್ತಿಗಳಿವೆ?
ಮಹೀಂದ್ರಾ ಥಾರ್ ರೋಕ್ಸ್ MX ಮತ್ತು AX ಎಂಬ ಎರಡು ವಿಶಾಲವಾದ ಟ್ರಿಮ್‌ಗಳಲ್ಲಿ ಲಭ್ಯವಿದೆ. ಇವುಗಳನ್ನು ಈ ಕೆಳಗಿನ ಉಪ-ವೇರಿಯೆಂಟ್‌ಗಳಾಗಿ ವಿಂಗಡಿಸಲಾಗಿದೆ:
-
MX: MX1, MX3, ಮತ್ತು MX5
-
AX: AX3L, AX5L, ಮತ್ತು AX7L
ಥಾರ್ ರೋಕ್ಸ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಮಹೀಂದ್ರಾ ಥಾರ್ ರೋಕ್ಸ್ 10.25-ಇಂಚಿನ ಎರಡು ಸ್ಕ್ರೀನ್‌ಗಳನ್ನು (ಒಂದು ಡ್ರೈವರ್ ಡಿಸ್‌ಪ್ಲೇಗೆ ಮತ್ತು ಇನ್ನೊಂದು ಟಚ್‌ಸ್ಕ್ರೀನ್‌ಗೆ), ಪನರೋಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 9-ಸ್ಪೀಕರ್ ಹರ್ಮನ್ ಕಾರ್ಡನ್-ಟ್ಯೂನ್ಡ್ ಸೌಂಡ್ ಸಿಸ್ಟಮ್ ಮತ್ತು ಹಿಂಬದಿ ದ್ವಾರಗಳೊಂದಿಗೆ ಆಟೋ ಎಸಿ ಪಡೆಯುತ್ತದೆ. ದೊಡ್ಡದಾದ ಥಾರ್ ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಮತ್ತು ಪುಶ್ ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್‌ನಂತಹ ಸೌಕರ್ಯಗಳನ್ನು ಹೊಂದಿದೆ.
ಇದು ಎಷ್ಟು ವಿಶಾಲವಾಗಿದೆ?
ಮಹೀಂದ್ರಾ ಥಾರ್ ರೋಕ್ಸ್ 5-ಸೀಟರ್ ಆಫ್-ರೋಡರ್ ಆಗಿದ್ದು, ಇದರಲ್ಲಿ ಒಂದು ಸಣ್ಣ ಕುಟುಂಬವೊಂದಕ್ಕೆ ಆರಾಮವಾಗಿ ಕುಳಿತುಕೊಳ್ಳಬೇಕು. 3-ಡೋರ್‌ನ ಥಾರ್‌ಗಿಂತ ಭಿನ್ನವಾಗಿ, ಹೆಚ್ಚುವರಿ ಬಾಗಿಲುಗಳ ಕಾರಣದಿಂದ ಎರಡನೇ ಸಾಲಿನ ಸೀಟ್‌ಗಳಿಗೆ ಪ್ರವೇಶಿಸುವುದು ಅನುಕೂಲಕರವಾಗಿದೆ ಮತ್ತು ಥಾರ್ ರೋಕ್ಸ್ ಉತ್ತಮ ಬೂಟ್ ಜಾಗವನ್ನು ಸಹ ನೀಡುತ್ತದೆ, ನಾವು ಇದರ ವಿಸ್ತೃತ ವೀಲ್‌ಬೇಸ್‌ಗೆ ಧನ್ಯವಾದ ಹೇಳಲೇಬೇಕು.
ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?
ಮಹೀಂದ್ರಾ ಥಾರ್ ರೋಕ್ಸ್ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ, ಇವುಗಳ ವಿವರಗಳು:
-
2-ಲೀಟರ್ ಟರ್ಬೊ-ಪೆಟ್ರೋಲ್: 162 ಪಿಎಸ್, 330 ಎನ್‌ಎಮ್ (ಮ್ಯಾನುಯಲ್ ಗೇರ್‌ಬಾಕ್ಸ್)/177 ಪಿಎಸ್, 380 ಎನ್‌ಎಮ್ (ಆಟೋಮ್ಯಾಟಿಕ್)
-
2-ಲೀಟರ್ ಡೀಸೆಲ್: 152 ಪಿಎಸ್, 330 ಎನ್‌ಎಮ್ (ಮ್ಯಾನುಯಲ್ ಗೇರ್‌ಬಾಕ್ಸ್)/ 175 ಪಿಎಸ್, 370 ಎನ್‌ಎಮ್ (ಆಟೋಮ್ಯಾಟಿಕ್)
ಎರಡೂ ಎಂಜಿನ್ ಆಯ್ಕೆಗಳು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ. ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳು ರಿಯರ್-ವೀಲ್-ಡ್ರೈವ್‌ನೊಂದಿಗೆ ಪ್ರಮಾಣಿತವಾಗಿ ಬಂದರೆ, ಡೀಸೆಲ್ ಆವೃತ್ತಿಯು ಒಪ್ಶನಲ್ 4ವೀಲ್-ಡ್ರೈವ್ ವ್ಯವಸ್ಥೆಯನ್ನು ಸಹ ಪಡೆಯುತ್ತದೆ.
ಮಹೀಂದ್ರಾ ಥಾರ್ ರೋಕ್ಸ್ ಎಷ್ಟು ಸುರಕ್ಷಿತವಾಗಿದೆ?
ಮಹೀಂದ್ರಾ ಥಾರ್ ರೋಕ್ಸ್ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್-ಹೋಲ್ಡ್ ಕಂಟ್ರೋಲ್, ಹಿಲ್-ಡಿಸೆಂಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಥಾರ್ ರೋಕ್ಸ್ ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಸುಧಾರಿತ ಚಾಲಕ ಸಹಾಯದ ಫೀಚರ್‌ಗಳನ್ನು ಸಹ ಪಡೆಯುತ್ತದೆ. ಗ್ಲೋಬಲ್ ಎನ್‌ಸಿಎಪಿಯ ಕ್ರ್ಯಾಶ್ ಪರೀಕ್ಷೆಗಳಲ್ಲಿ, ಥಾರ್ 3-ಡೋರ್ ವಯಸ್ಕ ಮತ್ತು ಮಕ್ಕಳು ಪ್ರಯಾಣಿಸುವಾಗಿನ ರಕ್ಷಣೆಗಾಗಿ 5 ಸ್ಟಾರ್‌ಗಳಲ್ಲಿ 4 ಅನ್ನು ಪಡೆದುಕೊಂಡಿದೆ, ಹಾಗೆಯೇ 5-ಡೋರ್ ಥಾರ್ ರೋಕ್ಸ್‌ನ ಕ್ರ್ಯಾಶ್ ಸುರಕ್ಷತೆಯಲ್ಲಿ ಉತ್ತಮವಾಗಿದೆ.
ನನ್ನ ಪರ್ಯಾಯಗಳು ಯಾವುವು?
ಮಾರುತಿ ಸುಜುಕಿ ಜಿಮ್ನಿ ಮತ್ತು ಫೋರ್ಸ್ ಗೂರ್ಖಾ ಆಫ್-ರೋಡ್ ಎಸ್‌ಯುವಿಗಳಾಗಿದ್ದು, ನೀವು ಮಹೀಂದ್ರಾ ಥಾರ್‌ನಂತೆಯೇ ಅದೇ ಬೆಲೆಗೆ ಅವುಗಳನ್ನು ಖರೀದಿಸಬಹುದು. ನೀವು ಕೇವಲ ಎಸ್‌ಯುವಿಯ ಶೈಲಿ ಮತ್ತು ಎತ್ತರದ ಸೀಟಿಂಗ್ ಪೊಸಿಶನ್ ಅನ್ನು ಸ್ಥಾನವನ್ನು ಬಯಸಿದರೆ, ಹಾಗೆಯೇ ಹೆಚ್ಚು ಆಫ್-ರೋಡ್ ಅನ್ನು ಓಡಿಸಲು ಉದ್ದೇಶಿಸದಿದ್ದರೆ, ಎಮ್‌ಜಿ ಆಸ್ಟರ್, ಹೋಂಡಾ ಎಲಿವೇಟ್, ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾವನ್ನು ಸಹ ಪರಿಗಣಿಸಬಹುದು.
ಥಾರ್ ರಾಕ್ಸ್ ಎಮ್ಎಕ್ಸ್1 ರಿಯರ್-ವೀಲ್-ಡ್ರೈವ್(ಬೇಸ್ ಮಾಡೆಲ್)1997 ಸಿಸಿ, ಮ್ಯಾನುಯಲ್, ಪೆಟ್ರೋಲ್, 12.4 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹12.99 ಲಕ್ಷ* | ||
ಥಾರ್ ರಾಕ್ಸ್ ಎಮ್ಎಕ್ಸ್1 ರಿಯರ್-ವೀಲ್-ಡ್ರೈವ್ ಡೀಸೆಲ್2184 ಸಿಸಿ, ಮ್ಯಾನುಯಲ್, ಡೀಸಲ್, 15.2 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹13.99 ಲಕ್ಷ* | ||