ಆನ್ಲೈನ್ ನಲ್ಲಿ ಕಾಣಿಸಿಕೊಂಡ ಮಹೀಂದ್ರಾ ಥಾರ್ EV ಪೇಟೆಂಟ್ ಚಿತ್ರಗಳು, ಪ್ರೋಡಕ್ಷನ್-ಸ್ಪೇಷಲ್ ವಿನ್ಯಾಸ ಇದೇನಾ ?
ಮಹೀಂದ್ರ ಥಾರ್ ಇ ಗಾಗಿ rohit ಮೂಲಕ ನವೆಂಬರ್ 04, 2023 06:10 am ರಂದು ಪ್ರಕಟಿಸಲಾಗಿದೆ
- 30 Views
- ಕಾಮೆಂಟ್ ಅನ್ನು ಬರೆಯಿರಿ
ಪೇಟೆಂಟೆಡ್ ಚಿತ್ರಗಳು ಆಲ್ ಎಲೆಕ್ಟ್ರಿಕ್ ಮಹೀಂದ್ರಾ ಥಾರ್ ಕಾರಿನ ಕಾನ್ಸೆಪ್ಟ್ ನ ವಿನ್ಯಾಸವನ್ನೇ ಹೋಲುತ್ತವೆ
- ಮಹೀಂದ್ರಾ ಸಂಸ್ಥೆಯು 5 ಬಾಗಿಲುಗಳ EV (Thar.e ಎಂದು ಕರೆಯಲಾಗುತ್ತದೆ) ಯನ್ನು ದಕ್ಷಿಣ ಆಫ್ರಿಕಾದಲ್ಲಿ 2023ರ ಆಗಸ್ಟ್ ತಿಂಗಳಿನಲ್ಲಿ ಪ್ರದರ್ಶಿಸಿತ್ತು.
- ಇದು 2026ರ ಸುಮಾರಿಗೆ ಬಿಡುಗಡೆಯಾಗಲಿದ್ದು, ಬೆಲೆಯು ರೂ. 25 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದೆ.
- ಸ್ಕ್ವೇರ್ಡ್ LED DRL ಗಳು ಮತ್ತು ರಗ್ಡ್ ಅಲೋಯ್ ವೀಲ್ ಗಳು ಇತ್ಯಾದಿ ವಿನ್ಯಾಸಗಳನ್ನು ಪೇಟೆಂಟ್ ಚಿತ್ರಗಳು ಬಹಿರಂಗಪಡಿಸಿವೆ.
- ಇದರ ಡ್ಯಾಶ್ ಬೋರ್ಡ್ ಮತ್ತು ಆಸನದ ಚಿತ್ರಗಳ ಮೇಲೂ ಕಾಪಿರೈಟ್ ಪಡೆಯಲಾಗಿದ್ದು, ಅದೇ ವಿನ್ಯಾಸ ಮತ್ತು ವಿವರಗಳನ್ನು ಇವು ಒಳಗೊಂಡಿವೆ.
- ಥಾರ್ EV ಯು 400km ಗಿಂತಲೂ ಹೆಚ್ಚಿನ ಶ್ರೇಣಿಯನ್ನು ಹೊಂದಿರುವ ದೊಡ್ಡದಾದ ಬ್ಯಾಟರಿ ಪ್ಯಾಕ್ ಜೊತೆಗೆ ಹೊರಬರಲಿದೆ.
ಮಹೀಂದ್ರಾ ಸಂಸ್ಥೆಯು ಭಾರತದ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದಕ್ಷಿಣ ಆಫ್ರಿಕಾದಲ್ಲಿ ಮಹೀಂದ್ರಾ ಥಾರ್ EV ಪರಿಕಲ್ಪನೆಯನ್ನು ಪ್ರದರ್ಶಿಸಿ ಹೆಚ್ಚೇನೂ ದಿನಗಳು ಕಳೆದಿಲ್ಲ. ಈಗ ಮಹೀಂದ್ರಾದ ಪೇಟೆಂಟೆಡ್ 5 ಬಾಗಿಲುಗಳ Evಯ ಚಿತ್ರಗಳು ಹೊರಬಿದ್ದಿದ್ದು, 2026ರ ಬಿಡುಗಡೆಗೆ ಸಾಕಷ್ಟು ಮೊದಲೇ ಕಾಣಸಿಕ್ಕಿವೆ.
ಪೇಟೆಂಟೆಡ್ ಚಿತ್ರಗಳಲ್ಲಿ ಗಮನಿಸಲಾದ ವಿವರಗಳು
ಟ್ರೇಡ್ ಮಾರ್ಕ್ ಪಡೆದಿರುವ ಈ ಚಿತ್ರಗಳು, ದಕ್ಷಿಣ ಆಫ್ರಿಕಾದ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ 5 ಬಾಗಿಲುಗಳ ಥಾರ್ EV (ಅಥವಾ ಮಹೀಂದ್ರಾ ಸಂಸ್ಥೆಯು ಕರೆಯುವಂತೆ Thar.e) ಕಾರನ್ನೇ ತೋರಿಸುತ್ತವೆ. ಇದು ಅದೇ ಚೌಕಾಕಾರದ LED DRLಗಳು, ಮತ್ತು ಮೂರು LED ಬಾರ್ ಗಳು ಮತ್ತು ಗ್ರಿಲ್ ನಲ್ಲಿ ‘Thar.e’ ಅಕ್ಷರಗಳನ್ನು ಹೊಂದಿದೆ. ಬೃಹತ್ ವೀಲ್ ಆರ್ಚ್ ಗಳನ್ನು ತುಂಬುವ ರಗ್ಡ್ ಅಲೋಯ್ ವೀಲ್ ಗಳು ಮತ್ತು ಮುಂಭಾಗದ ದೊಡ್ಡ ಬಂಪರ್ ಅನ್ನು ಸಹ ಈ ಪೇಟೆಂಟೆಡ್ ಚಿತ್ರಗಳು ತೋರಿಸುತ್ತವೆ.
ಮಹೀಂದ್ರಾ ಸಂಸ್ಥೆಯು ಆಲ್ ಎಲೆಕ್ಟ್ರಿಕ್ ಥಾರ್ ನ ಡ್ಯಾಶ್ ಬೋರ್ಡಿಗೂ ಪೇಟೆಂಟ್ ಪಡೆದಿದೆ. ಈ ಡ್ಯಾಶ್ ಬೋರ್ಡ್ ನಲ್ಲಿ ದೊಡ್ಡದಾದ ಚೌಕಾಕಾರದ ಟಚ್ ಸ್ಕ್ರೀನ್ ಸಿಸ್ಟಂ ಮತ್ತು ಡಿಜಿಟಲ್ ಇನ್ಸ್ ಟ್ರುಮೆಂಟಲ್ ಕ್ಲಸ್ಟರ್ ಅನ್ನು ಕಾಣಬಹುದು. ಈ ಚಿತ್ರಗಳಲ್ಲಿ ಕಾಣಿಸದೆ ಇದ್ದರೂ, ಕಾನ್ಸೆಪ್ಟ್ ಆವೃತ್ತಿಯಲ್ಲಿ ನೋಡಿದಂತೆ ಥಾರ್ EV ಯು 2 ಸ್ಪೋಕ್ ಅಷ್ಟಭುಜಾಕೃತಿಯ ಸ್ಟೀಯರಿಂಗ್ ವೀಲ್ ಅನ್ನು ಹೊಂದಿರುವುದು ಖಚಿತವಾಗಿದೆ.
ಈ ಥಾರ್ EV ಯ ಮುಂಭಾಗದ ಮತ್ತು ಹಿಂಭಾಗದ ಚೌಕಾಕಾರದ ಮಾದರಿಯ ಬೆಂಚ್ ಸೀಟುಗಳನ್ನು ಕಾಪಿರೈಟ್ ಪಡೆದಿರುವ ಈ ಚಿತ್ರಗಳಲ್ಲಿ ಕಾಣಬಹುದು. ಅವು ಈ ಎಲೆಕ್ಟ್ರಿಕ್ ಆಫ್ ರೋಡರ್ ನಲ್ಲಿ ಕಾನ್ಸೆಪ್ಟ್ ಆವೃತ್ತಿಯಲ್ಲಿ ಗಮನಿಸಿದಂತೆಯೇ ಇವೆ. ಕಾನ್ಸೆಪ್ಟ್ ನಲ್ಲಿ ತೋರಿಸಿದಂತೆ ಮುಂದಿನ ಸೀಟು ಮಾತ್ರವೇ ಸಂಪರ್ಕಿತ ಹೆಡ್ ರೆಸ್ಟ್ ಅನ್ನು ಹೊಂದಿದ್ದು, ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ರೂಫ್ ಮೌಂಟೆಡ್ ಹೆಡ್ ರೆಸ್ಟ್ ಅನ್ನು ಪಡೆಯಲಿದ್ದಾರೆ.
ಇದನ್ನು ಸಹ ಓದಿರಿ: ಸ್ಪೈ ಶಾಟ್ ಗಳಲ್ಲಿ ಸೆರೆಯಾದ 5 ಬಾಗಿಲುಗಳ ಮಹೀಂದ್ರಾ ಥಾರ್, ಮರೆಮಾಚಿದ ಸ್ಥಿತಿಯಲ್ಲಿ ಕಾಣಿಸಿಕೊಂಡ ರಿಯರ್ ಪ್ರೊಫೈಲ್
ಇದರ ಪವರ್ ಟ್ರೇನ್ ಕುರಿತು ಏನೆಲ್ಲ ತಿಳಿದಿದೆ?
ಥಾರ್ EV ಯ ಎಲೆಕ್ಟ್ರಿಕ್ ಪವರ್ ಟ್ರೇನ್ ಕುರಿತು ಸದ್ಯಕ್ಕೆ ಹೆಚ್ಚೇನೂ ಮಾಹಿತಿ ದೊರೆತಿಲ್ಲ. ಆದರೆ ಇದು ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಪಡೆಯಲಿದ್ದು, 400km ಗಿಂತಲೂ ಹೆಚ್ಚಿನ ಶ್ರೇಣಿಯನ್ನು ಒದಗಿಸಲಿದೆ. ಡ್ಯುವಲ್ ಮೋಟರ್ ಸೆಟಪ್ ಅನ್ನು ನಿರೀಕ್ಷಿಸಲಾಗಿದ್ದು, ಟೆರನ್ ಪಾರ್ಟಿಕುಲರ್ ಡ್ರೈವ್ ಮೋಡ್ ಜೊತೆಗೆ ಪ್ರಮಾಣಿತ 4-ವೀಲ್ ಡ್ರೈವ್ ಟ್ರೇನ್ (4WD) ಇರಲಿದೆ.
-
ನಿಮ್ಮ ಯಾವುದೇ ಟ್ರಾಫಿಕ್ ಚಲನ್ ನ ಪಾವತಿ ಬಾಕಿ ಇದ್ದರೆ ಇಲ್ಲಿ ಪರಿಶೀಲಿಸಿ.
-
ಅಲ್ಲದೆ ನಿಮ್ಮ ಆದ್ಯತೆಯ ಕಾರಿನ EMI ಅನ್ನು ಪರಿಶೀಲಿಸಲು ನಮ್ಮ ಕಾರ್ EMI ಕ್ಯಾಲ್ಕುಲೇಟ್ ಅನ್ನು ಬಳಸಿರಿ.
ನಿರೀಕ್ಷಿತ ಬೆಲೆ
ಐದು ಬಾಗಿಲುಗಳ ಆಲ್ ಎಲೆಕ್ಟ್ರಿಕ್ ಮಹೀಂದ್ರಾ ಥಾರ್ ವಾಹನದ ಬೆಲೆಯು ರೂ. 25 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದೆ. ಸದ್ಯಕ್ಕೆ ಮಹೀಂದ್ರಾ ಥಾರ್ EV ಗೆ ಯಾವುದೇ ಸಂಭಾವ್ಯ ಸ್ಪರ್ಧಿಗಳು ಮಾರುಕಟ್ಟೆಯಲ್ಲಿಲ್ಲ.
ಇದನ್ನು ಸಹ ಓದಿರಿ:ಟಾಟಾ ನ್ಯಾನೋ ಕಾರಿಗಾಗಿ ಮೀಸಲಾಗಿದ್ದ ಸಿಂಗೂರ್ ಘಟಕದ ಪ್ರಕರಣದಲ್ಲಿ ಗೆಲುವು ಸಾಧಿಸಿದ ಟಾಟಾ ಮೋಟರ್ಸ್
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಹೀಂದ್ರಾ ಥಾರ್ ಅಟೋಮ್ಯಾಟಿಕ್
0 out of 0 found this helpful