• English
  • Login / Register

5-door Mahindra Thar ಸ್ಪೈ ಶಾಟ್, ಮರೆಮಾಚಿದ ಸ್ಥಿತಿಯಲ್ಲಿ ಮತ್ತೊಮ್ಮೆ ಕಾಣಸಿಕ್ಕಿದೆ ಹಿಂಭಾಗದ ಪ್ರೊಫೈಲ್

ಮಹೀಂದ್ರ ಥಾರ್‌ ರಾಕ್ಸ್‌ ಗಾಗಿ ansh ಮೂಲಕ ಅಕ್ಟೋಬರ್ 27, 2023 10:05 am ರಂದು ಪ್ರಕಟಿಸಲಾಗಿದೆ

  • 29 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಹೀಂದ್ರಾದ ಉದ್ದನೆಯ ಥಾರ್ ಕೇವಲ ಹೆಚ್ಚುವರಿ ಡೋರ್‌ಗಳು ಮತ್ತು ಉದ್ದನೆಯ ವ್ಹೀಲ್‌ಬೇಸ್ ಅನ್ನು ಹೊಂದಿರುವುದಲ್ಲದೇ ಇನ್ನಷ್ಟು ಫೀಚರ್‌ಭರಿತವಾಗಿರಲಿದೆ

Mahindra Thar 5-door Spied

  •  ಇನ್ನಷ್ಟು ಬಲಶಾಲಿ ಹಿಂಭಾಗದ ಪ್ರೊಫೈಲ್ ಮತ್ತು ನಯವಾದ ಲೈಟ್ ಅಂಶಗಳನ್ನು ಪಡೆದಿದೆ. 
  •  ಹೊಸ ಕ್ಯಾಬಿನ್ ಥೀಮ್ ಮತ್ತು ಸನ್‌ರೂಫ್ ಸೇರಿದಂತೆ ಕೆಲವು ಹೊಸ ಫೀಚರ್‌ಗಳನ್ನು ಹೊಂದಿರುವ ನಿರೀಕ್ಷೆ ಇದೆ.
  •  2-ಲೀಟರ್ ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್ ಇಂಜಿನ್‌ಗಳನ್ನು ಪಡೆದಿರುವ ಸಾಧ್ಯತೆ ಇದೆ.
  •  ರೂ 15 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯೊಂದಿಗೆ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆ.

 5-ಡೋರ್ ಮಹೀಂದ್ರಾ ಥಾರ್ ಅನ್ನು ಮುಂದಿನ ವರ್ಷ ಬಿಡುಗಡೆಯಾಗುವುದಕ್ಕೂ ಮೊದಲೇ ಕಾರುತಯಾರಕರು ವ್ಯಾಪಕವಾಗಿ ಪರೀಕ್ಷಿಸಿದ್ದು ಈ ಆಫ್‌-ರೋಡರ್‌ನ ಹೊಸ ಸ್ಪೈಶಾಟ್‌ಗಳು ಆನ್‌ಲೈನ್‌ನಲ್ಲಿ ಪದೇ ಪದೇ ಕಾಣಿಸುತ್ತಿದೆ. ಇತ್ತೀಚೆಗೆ ಇದು ಕಾಣಿಸಿಕೊಂಡಾಗ ಇದರ ಮುಂಭಾಗದ ಪ್ರೊಫೈಲ್‌ನಲ್ಲಿ ಹೊಸ LED ಹೆಡ್‌ಲ್ಯಾಂಪ್ ಮತ್ತು DRL ಸೆಟಪ್ ಅನ್ನು ಗುರುತಿಸಲಾಗಿದೆ. ಇದರ ಹಿಂಭಾಗದ ಪ್ರೊಫೈಲ್ ಅನ್ನು ಮತ್ತೊಮ್ಮೆ ವಿವರವಾಗಿ ನೋಡಲಾಗಿದೆ. ಈ ದೊಡ್ಡದಾದ ಮಹೀಂದ್ರಾ ಥಾರ್‌ನ ಸಂಪೂರ್ಣ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

 

ಬಲಿಷ್ಠ ಡಿಸೈನ್

Mahindra Thar 5-Door

ಆಫ್‌-ರೋಡರ್ 3-ಡೋರ್ ಮಹೀಂದ್ರಾ ಥಾರ್ ಒರಟು ಹಾಗೂ ಬಲಿಷ್ಠ ನೋಟವನ್ನೇ ಹೊಂದಿದ್ದು 5-ಡೋರ್ ಆವೃತ್ತಿ ಕೂಡಾ ಹೀಗೇ ಇರಲಿದೆ. ಹಿಂಭಾಗದ ಪ್ರೊಫೈಲ್ ನಯವಾದ LED ಟೇಲ್ ಲೈಟ್‌ಗಳನ್ನು ಪಡೆದಿದ್ದು ಸ್ಟಾಂಡರ್ಡ್ 3-ಡೋರ್‌ಗಿಂತ ಭಿನ್ನವಾಗಿದೆ ಮಾತ್ರವಲ್ಲ ಉತ್ಪಾದನೆಗೆ-ಸಿದ್ಧವಾದ 5-ಸ್ಪೋಕ್ ಅಲಾಯ್ ವ್ಹೀಲ್‌ಗಳೂ ಇದರಲ್ಲಿವೆ.

 ಸೈಡ್ ಪ್ರೊಫೈಲ್ ಹೆಚ್ಚು ಕಮ್ಮಿ ಅದರಂತೆಯೇ ಇದ್ದರೂ, ಉದ್ದನೆಯ ವ್ಹೀಲ್‌ಬೇಸ್ ಮತ್ತು ಎರಡು ಹೆಚ್ಚುವರಿ ಡೋರ್‌ಗಳನ್ನು ಪಡೆದಿದೆ. ಫೇಶಿಯಾ ಕೂಡಾ 6-ಸ್ಲಾಟ್ ಗ್ರಿಲ್ ಮತ್ತು ವೃತ್ತಾಕಾರದ LED ಲೈಟಿಂಗ್ ಸೆಟಪ್‌ನೊಂದಿಗೆ ಬಲಿಷ್ಠವಾಗಿದೆ. ಅಲ್ಲದೇ, ಈ ಆವೃತ್ತಿಯು ಸಿಂಗಲ್-ಪೇನ್ ಸನ್‌ರೂಫ್‌ನೊಂದಿಗೆ ಬರುತ್ತದೆ.

 

ಈ ದೊಡ್ಡ ಥಾರ್‌ನ ಒಳಗೆ ಏನಿದೆ

 ಮಹೀಂದ್ರಾ ಹೊರಭಾಗದಲ್ಲಿ ಮಾತ್ರವಲ್ಲದೇ, ಒಳಭಾಗದಲ್ಲಿಯೂ ಬದಲಾವಣೆಗಳನ್ನು ಮಾಡಲಿದೆ. ಇತ್ತೀಚಿನ ಸ್ಪೈಶಾಟ್‌ಗಳು ಸೆಂಟರ್ ಕನ್ಸೋಲ್‌ನಲ್ಲಿ ದೊಡ್ಡದಾದ ಟಚ್‌ಸ್ಕ್ರೀನ್ ಅನ್ನು ಬಹಿರಂಗಪಡಿಸಿದ್ದು ಕ್ಯಾಬಿನ್ ಥೀಮ್ ಕೂಡಾ ಹೊಸದಾಗಿರಲಿದೆ.

ಇದನ್ನೂ ಓದಿ:  ಟಾಟಾ ಸಫಾರಿ ಫೇಸ್‌ಲಿಫ್ಟ್‌ಗಿಂತ ಮಹೀಂದ್ರಾ XUV700 ನಲ್ಲಿರುವ ಹೆಚ್ಚುವರಿ 5 ಸಂಗತಿಗಳು

 ಫೀಚರ್‌ಗಳ ಪಟ್ಟಿಯಲ್ಲಿ ದೊಡ್ಡ ಟಚ್‌ಸ್ಕ್ರೀನ್‌ ಇನ್ಫೋಟೇನ್‌ಮೆಂಟ್ ಸಿಸ್ಟಮ್ ಮತ್ತು ಸನ್‌ರೂಫ್ ಹೊರತುಪಡಿಸಿದರೆ, ಇದು ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಹಿಂಭಾಗದ AC ವೆಂಟ್‌ಗಳನ್ನೂ ಪಡೆದಿರಬಹುದು. ಪ್ರಯಾಣಿಕ ಸುರಕ್ಷತೆಗಾಗಿ ಮಹೀಂದ್ರಾ ಇದಕ್ಕೆ 6 ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್‌ಹೋಲ್ಡ್ ಅಸಿಸ್ಟ್ ಮತ್ತು ಡೆಸೆಂಟ್ ಕಂಟ್ರೋಲ್ ಹಾಗೂ ಹಿಂಭಾಗದ ಪಾರ್ಕಿಂಗ್ ಕ್ಯಾಮರಾವನ್ನು ನೀಡಿದೆ.

 

ಇಂಜಿನ್ ಸಾಮರ್ಥ್ಯ

Mahindra Thar Engine

ಈ ಉದ್ದನೆಯ ಥಾರ್‌ಗೆ ಮಹೀಂದ್ರಾ 3-ಡೋರ್ ಆವೃತ್ತಿಯ 2-ಲೀಟರ್ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಇಂಜಿನ್ ಅನ್ನೇ ನೀಡಿದೆ. ಈ ಇಂಜಿನ್‌ಗಳು ಉನ್ನತ ಹಂತದವಾಗಿರಬಹುದು ಮತ್ತು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡಬಹುದು. ಸ್ಟಾಂಡರ್ಡ್ ಥಾರ್‌ನಂತೆ, ಈ 5-ಡೋರ್ ಆವೃತ್ತಿಗೆ ರಿಯರ್-ವ್ಹೀಲ್-ಡ್ರೈವ್ (RWD) ಮತ್ತು 4-ವ್ಹೀಲ್ ಡ್ರೈವ್ (4WD) ಸೆಟಪ್‌ಗಳನ್ನು ನೀಡಬಹುದು.

 ಇದನ್ನೂ ಓದಿ: ನವೀಕೃತ ಮಹೀಂದ್ರಾ XUV300 ಮತ್ತೆ ಪತ್ತೆ, ಹೊಸ ಅಲಾಯ್ ವ್ಹೀಲ್‌ಗಳು ಮತ್ತು ಸಂಪರ್ಕಿತ LED ಟೇಲ್‌ಲ್ಯಾಂಪ್‌ಗಳು ಬಹಿರಂಗ

 

ಬಿಡುಗಡೆ, ಬೆಲೆ ಮತ್ತು ಪ್ರತಿಸ್ಪರ್ಧಿಗಳು

Mahindra Thar 5-door

 5-ಡೋರ್ ಮಹೀಂದ್ರಾ ಥಾರ್‌ನ ಬಿಡುಗಡೆ ದಿನಾಂಕವನ್ನು ಇನ್ನೂ ನಿರ್ದಿಷ್ಟಪಡಿಸಲಾಗಿಲ್ಲವಾದರೂ, ಮಾರ್ಚ್ 2024ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದು 3-ಡೋರ್ ಆವೃತ್ತಿಗಿಂತ ದುಬಾರಿಯಾಗಿರಲಿದ್ದು ಬೆಲೆಗಳನ್ನು ರೂ 15 ಲಕ್ಷದಿಂದ (ಎಕ್ಸ್-ಶೋರೂಂ) ನಿರೀಕ್ಷಿಸಲಾಗಿದೆ. ಇದು ಮಾರುತಿ ಜಿಮ್ನಿ ಮತ್ತು 5-ಡೋರ್ ಫೋರ್ಸ್ ಗುರ್ಖಾಗೆ ಪ್ರತಿಸ್ಪರ್ಧೆ ನೀಡಲಿದೆ.

 ಇನ್ನಷ್ಟು ಓದಿ: ಥಾರ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mahindra ಥಾರ್‌ ROXX

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience