ಟಾಟಾ ನ್ಯಾನೋ ಕಾರಿಗಾಗಿ ಮೀಸಲಾಗಿದ್ದ ಸಿಂಗೂರ್ ಘಟಕದ ಪ್ರಕರಣದಲ್ಲಿ ಗೆಲುವು ಸಾಧಿಸಿದ ಟಾಟಾ ಮೋಟರ್ಸ್
ನವೆಂಬರ್ 02, 2023 06:39 am ರಂದು rohit ಮೂಲಕ ಪ್ರಕಟಿಸಲಾಗಿದೆ
- 25 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಮೋಟರ್ಸ್ ಸಂಸ್ಥೆಗೆ ರೂ. 766 ಕೋಟಿ ಮೊತ್ತವನ್ನು ಪಾವತಿಸುವಂತೆ ಮಧ್ಯಸ್ಥಿಕೆ ನ್ಯಾಯಾಧೀಕರಣವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶಿಸಿದೆ
ಸಿಂಗೂರು ಘಟಕದ ಕುರಿತು ಸುಮಾರು ಒಂದು ದಶಕಕ್ಕೂ ಹೆಚ್ಚಿನ ಕಾಲ ಟಾಟಾ ಮೋಟರ್ಸ್ ಮತ್ತು ಪಶ್ಚಿಮ ಬಂಗಾಳ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ (‘WBIDC’) ನಡುವಿನ ದೀರ್ಘ ಹೋರಾಟದ ನಂತರ, ರೂ. 766 ಕೋಟಿಗೂ ಅಧಿಕ ಮೊತ್ತದ ಮಧ್ಯಸ್ಥಿಕೆ ವ್ಯಾಜ್ಯದಲ್ಲಿ ತನಗೆ ಗೆಲುವು ದೊರೆತಿದೆ ಎಂದು ಟಾಟಾ ಸಂಸ್ಥೆಯು ಹೇಳಿಕೊಂಡಿದೆ.
ಪ್ರಕರಣದ ಹಿನ್ನೆಲೆ ಏನು?
ವಿಶ್ವದ ಅತ್ಯಂತ ಅಗ್ಗದ ಟಾಟಾ ನ್ಯಾನೋ ಕಾರನ್ನು ತಯಾರಿಸುವ ಘಟಕವನ್ನು ಸ್ಥಾಪಿಸುವುದಕ್ಕಾಗಿ ಈ ಕಾರು ತಯಾರಕ ಸಂಸ್ಥೆಗೆ 2006ರಲ್ಲಿ ಸುಮಾರು 1,000 ಎಕರೆಯಷ್ಟು ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಟಾಟಾ ಮೋಟಾರ್ಸ್ ಸಂಸ್ಥೆಯು 2007ರ ಆರಂಭದಲ್ಲಿ ಈ ಘಟಕದ ನಿರ್ಮಾಣವನ್ನು ಪ್ರಾರಂಭಿಸಿತ್ತು. ಆದರೆ ಕೆಲವೇ ದಿನಗಳಲ್ಲಿ ಇಲ್ಲಿನ ಪರಿಸ್ಥಿತಿಯು ಬಿಗಡಾಯಿಸಿತು. ಭೂಸ್ವಾಧೀನಕ್ಕೆ ಆರಂಭದಲ್ಲೇ ರೈತರು ಮತ್ತು ರಾಜಕಾರಣಿಗಳಿಂದ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ 2006ರ ಕೊನೆಗೆ ಅನೇಕ ಪ್ರತಿಭಟನೆಗಳು ನಡೆದು ಪರಿಸ್ಥಿತಿಯು ಬಿಗಡಾಯಿಸುತ್ತಲೇ ಹೋಯಿತು. ಯಾವುದೇ ಪರಿಹಾರೋಪಾಯ ಕಾಣದ ಕಾರಣ ಸಿಂಗೂರು ಘಟಕವನ್ನು ತೊರೆದು ದೂರಕ್ಕೆ ಸರಿಯುವ ಕಠಿಣ ನಿರ್ಧಾರವನ್ನು ಟಾಟಾ ಮೋಟರ್ಸ್ ಸಂಸ್ಥೆಯು ತೆಗೆದುಕೊಂಡಿತು.
ಎಲ್ಲವೂ ಸುಗಮವಾಗಿ ನಡೆದಿದ್ದರೆ ಈ ಘಟಕದಲ್ಲಿ ರೂ. 1,000 ಕೋಟಿಯಷ್ಟು ಮೊತ್ತವನ್ನು ಹೂಡಿಕೆ ಮಾಡುವ ಯೋಜನೆಯನ್ನು ಈ ಕಾರು ತಯಾರಕ ಸಂಸ್ಥೆಯು ಹೊಂದಿತ್ತು.
ಇದನ್ನು ಸಹ ಓದಿರಿ: ಟಾಟಾ ಕರ್ವ್ SUV ಯ ಫ್ಲಶ್ ಟೈಪ್ ಡೋರ್ ಹ್ಯಾಂಡಲ್ ಗಳ ಸ್ಪಷ್ಟ ಚಿತ್ರಣ ಇಲ್ಲಿದೆ
ನ್ಯಾನೋ ಕಾರಿನ ತಯಾರಿಕೆಯಲ್ಲಿ ವಿಳಂಬ
ಟಾಟಾ ಮೋಟರ್ಸ್ ಸಂಸ್ಥೆಯು ನ್ಯಾನೋ ಕಾರನ್ನು 2008ರ ಆರಂಭದಲ್ಲೇ ಪ್ರದರ್ಶಿಸಿತ್ತು. ಅಲ್ಲದೆ ಅದೇ ವರ್ಷದಲ್ಲಿ ಇದರ ಉತ್ಪಾದನೆಯನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿತ್ತು. ಸಿಂಗೂರು ಘಟಕಕ್ಕೆ ಸಂಬಂಧಿಸಿದ ವಿವಾದದ ಕಾರಣ ತನ್ನ ನೆಲೆಯನ್ನು ಸ್ಥಳಾಂತರಿಸುವ ಕುರಿತು ರತನ್ ಟಾಟಾ ಅವರೇ ಘೋಷಣೆ ಮಾಡಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ನ್ಯಾನೋ ಕಾರಿನ ತಯಾರಿಯಲ್ಲಿ ಇನ್ನಷ್ಟು ವಿಳಂಬ ಉಂಟಾಗಿತ್ತು.
ನಂತರದ ವರ್ಷಗಳಲ್ಲಿ ಈ ಪುಟ್ಟ ಹ್ಯಾಚ್ ಬ್ಯಾಕ್ ಕಾರನ್ನು ಉತ್ತರಾಖಂಡದ ಪಂತ್ ನಗರದಲ್ಲಿದ್ದ ಟಾಟಾದ ಅಂದಿನ ಪ್ರಯಾಣಿಕ ವಾಹನಗಳ ತಯಾರಿಕಾ ಕೇಂದ್ರದಲ್ಲಿ ಸಿದ್ಧಪಡಿಸಲಾಯಿತು. ಕೆಲವೇ ತಿಂಗಳುಗಳಲ್ಲಿ ಟಾಟಾ ನ್ಯಾನೋ ಕಾರಿಗೆ 2 ಲಕ್ಷಕ್ಕೂ ಹೆಚ್ಚಿನ ಬುಕಿಂಗ್ ದೊರೆತಿದ್ದು, ಮೊದಲ ಬ್ಯಾಚಿನ ಒಂದು ಲಕ್ಷಕ್ಕೂ ಹೆಚ್ಚಿನ ಕಾರುಗಳನ್ನು 2009ರ ಜುಲೈ ತಿಂಗಳಿನಲ್ಲಿ ಮಾಲೀಕರಿಗೆ ಹಸ್ತಾಂತರಿಸಲಾಯಿತು.
ಮಹಾರಾಷ್ಟ್ರ ಮತ್ತು ಗುಜರಾತ್ ಸೇರಿದಂತೆ ಅನೇಕ ರಾಜ್ಯಗಳು ಈ ಕಾರಿನ ತಯಾರಿಕಾ ಘಟಕಕ್ಕೆ ಭೂಮಿಯನ್ನು ಒದಗಿಸಲು ತುದಿಗಾಲಲ್ಲಿ ನಿಂತಿದ್ದವು. ಈ ಕಾರು ತಯಾರಿಕಾ ಸಂಸ್ಥೆಯು ಅಂತಿಮವಾಗಿ ಗುಜರಾತಿನ ಸನಂದ್ ನಲ್ಲಿ ಹೊಸ ಕಾರ್ಖಾನೆಯೊಂದನ್ನು ತೆರೆಯಿತು. ಆರಂಭಿಕ ವರ್ಷದಲ್ಲಿ ಈ ಕಾರ್ಖಾನೆಯು ಪ್ರಾಥಮಿಕವಾಗಿ ನ್ಯಾನೋ ಕಾರುಗಳನ್ನು ಸಿದ್ಧಪಡಿಸುತ್ತಿತ್ತು. ಈ ಕೇಂದ್ರವು ನಂತರದ ದಿನಗಳಲ್ಲಿ ತಿಯಾಗೊ, ತಿಗೊರ್ ಮುಂತಾದ ಕಾಂಪ್ಯಾಕ್ಟ್ ಕಾರುಗಳು ಹಾಗೂ ತಿಯಾಗೊ EV ಮತ್ತು ತಿಗೊರ್ EV ಇತ್ಯಾದಿ ಹೊಸ ಕಾರುಗಳನ್ನು ಸಿದ್ಧಪಡಿಸಿತು. ತೀರಾ ಇತ್ತೀಚೆಗೆ ಟಾಟಾ ಸಂಸ್ಥೆಯು ಫೋರ್ಡ್ ಇಂಡಿಯಾದ ಸನಂದ್ ಘಟಕವನ್ನು ಖರೀದಿಸಿದ್ದು, ಬೇ ಬೇರೆ Evಗಳನ್ನು ಇಲ್ಲಿ ಸಿದ್ಧಪಡಿಸುವ ಇರಾದೆಯನ್ನು ಇರಿಸಲಾಗಿದೆ.
-
ನಿಮ್ಮ ಯಾವುದೇ ಟ್ರಾಫಿಕ್ ಚಲನ್ ನ ಪಾವತಿ ಬಾಕಿ ಇದ್ದರೆ ಇಲ್ಲಿ ಪರಿಶೀಲಿಸಿ.
-
ಅಲ್ಲದೆ ನಿಮ್ಮ ಆದ್ಯತೆಯ ಕಾರಿನ EMI ಅನ್ನು ಪರಿಶೀಲಿಸಲು ನಮ್ಮ ಕಾರ್ EMI ಕ್ಯಾಲ್ಕುಲೇಟ್ ಅನ್ನು ಬಳಸಿರಿ.
ಕಥೆಯ ಇನ್ನೊಂದು ಮುಖ
ಈ ವಿವಾದದ ಕುರಿತು ಮಾತನಾಡುವಾಗ ಒಂದು ಪ್ರಮುಖ ಪ್ರಶ್ನೆಯು ನಮಗೆ ಎದುರಾಗುತ್ತದೆ: ಎಲ್ಲವೂ ಟಾಟಾ ಸಂಸ್ಥೆಯು ಎಣಿಸಿದಂತೆಯೇ ನಡೆದಿದ್ದರೆ ಟಾಟಾ ನ್ಯಾನೋ ಕಾರು ಇನ್ನಷ್ಟು ಯಶಸ್ಸನ್ನು ಪಡೆಯುತ್ತಿತ್ತೇ? ಪರಿಸ್ಥಿತಿಯು ಇನ್ನಷ್ಟು ಅನುಕೂಲಕರವಾಗಿ ಮೂಡಿ ಬರುತ್ತಿತ್ತು ಎಂದು ನೀವು ಹೇಳಬಹುದು. ಸಿಂಗೂರ್ ಡೀಲಿನಿಂದ ದೂರ ಸರಿಯುವ ವಿಚಾರದಲ್ಲಿ ಟಾಟಾ ಸಂಸ್ಥೆಯು ಕ್ಷಿಪ್ರವಾಗಿ ನಿರ್ಧಾರವನ್ನು ತೆಗೆದುಕೊಂಡರೂ, ಆಗಲೇ ಬಂಡವಾಳ, ಪ್ರಯತ್ನ ಮತ್ತು ಸಮಯ ಸೇರಿದಂತೆ ಈ ಕಾರು ತಯಾರಕ ಸಂಸ್ಥೆಯು ಅಲ್ಲಿ ಸಾಕಷ್ಟು ಹೂಡಿಕೆಯನ್ನು ಮಾಡಿತ್ತು. ಈ ಹೂಡಿಕೆಯನ್ನು ಸರಿಯಾಗಿ ಬಳಸಿಕೊಂಡಿದ್ದರೆ, ಆಗಿನ ಏರಿಸಿದ ಬೆಲೆಯಲ್ಲಿ ಇದಕ್ಕೆ ದೊರೆತ ಲಾಭಕ್ಕಿಂತ ಹೆಚ್ಚಿನ ಲಾಭವು ಈ ಸಂಸ್ಥೆಗೆ ದೊರೆಯುತ್ತಿತ್ತು.
ಅಲ್ಲದೆ, ನ್ಯಾನೋ ಕಾರಿನ ಡೀಸೆಲ್ ಆವೃತ್ತಿಯನ್ನು ಹೊರತರುವ ಉದ್ದೇಶವನ್ನು ಈ ಕಾರು ತಯಾರಕ ಸಂಸ್ಥೆಯು ಹೊಂದಿತ್ತು. ಅಲ್ಲದೆ ಒಟ್ಟಾರೆ ಬಂಡವಾಳವು, ಈ ಹ್ಯಾಚ್ ಬ್ಯಾಕ್ ಕಾರನ್ನು ರಫ್ತು ಮಾಡಲು ಯೋಗ್ಯವೆನಿಸಿದ ಕಾರನ್ನಾಗಿ ರೂಪಿಸುತ್ತಿತ್ತು. ಈ ಕಾರನ್ನು ಟಾಟಾ ಸಂಸ್ತೆಯು ಸಂಪೂರ್ಣ ಎಲೆಕ್ಟ್ರಿಕ್ ರೂಪದಲ್ಲಿ ಹೊರತರಲು ಯತ್ನಿಸಿದರೆ ಮಾತ್ರವೇ ʻಟಾಟಾ ನ್ಯಾನೋʼ ಹೆಸರನ್ನು ನಾವು ಮತ್ತೆ ರಸ್ತೆಯಲ್ಲಿ ಕಾಣಬಹುದು.
ಸಿಂಗೂರ್ ಯೋಜನೆಯು ಯಾವುದೇ ಅಡಚಣೆಯಿಲ್ಲದೆ ಮುಂದುವರಿದಿದ್ದರೆ ಟಾಟಾ ನ್ಯಾನೋ ಕಾರು ಒಂದು ಉತ್ತಮ ಉತ್ಪನ್ನವಾಗಿ ರೂಪುಗೊಳ್ಳುತ್ತಿತ್ತು ಎಂದು ನಿಮಗೆ ಅನಿಸುತ್ತದೆಯೇ? ನಿಮ್ಮ ಪ್ರತಿಕ್ರಿಯೆಗಳನ್ನು ನಮಗೆ ತಿಳಿಸಿರಿ.