ಮಹೀಂದ್ರಾ XEV 7e (XUV700 EV) ಪ್ರೊಡಕ್ಷನ್-ಸ್ಪೆಕ್ ಚಿತ್ರಗಳು ಲೀಕ್, XEV 9e ನಿಂದ ಪ್ರೇರಿತ ಕ್ಯಾಬಿನ್
ಮಹೀಂದ್ರ xev ಈ8 ಗಾಗಿ shreyash ಮೂಲಕ ಡಿಸೆಂಬರ್ 03, 2024 09:11 pm ರಂದು ಪ್ರಕಟಿಸಲಾಗಿದೆ
- 53 Views
- ಕಾಮೆಂಟ್ ಅನ್ನು ಬರೆಯಿರಿ
XEV 7e ಮಹೀಂದ್ರಾ ಎಕ್ಸ್‌ಯುವಿ700ನ ಆಲ್-ಎಲೆಕ್ಟ್ರಿಕ್ ಆವೃತ್ತಿಯಾಗಿದೆ ಮತ್ತು XEV 9e ಎಸ್‌ಯುವಿ-ಕೂಪ್‌ಗೆ ಎಸ್‌ಯುವಿ ಪ್ರತಿರೂಪವಾಗಿದೆ
-
ಹೊರಭಾಗದ ಹೈಲೈಟ್‌ಗಳಲ್ಲಿ ತಲೆಕೆಳಗಾದ ಎಲ್-ಆಕಾರದ ಕನೆಕ್ಟೆಡ್ ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್ ಅನ್ನು ಒಳಗೊಂಡಿವೆ.
-
ಟ್ರಿಪಲ್ ಸ್ಕ್ರೀನ್ ಸೆಟಪ್ ಮತ್ತು ಪ್ರಕಾಶಿತ 'ಇನ್ಫಿನಿಟಿ' ಮಹೀಂದ್ರಾ ಲೋಗೋದೊಂದಿಗೆ 2-ಸ್ಪೋಕ್ ಸ್ಟೀರಿಂಗ್ ವೀಲ್ ಸೇರಿದಂತೆ XEV 9e- ಪ್ರೇರಿತ ಕ್ಯಾಬಿನ್ ಅನ್ನು ಪಡೆಯುತ್ತದೆ.
-
ಬೋರ್ಡ್‌ನಲ್ಲಿರುವ ಇತರ ಫೀಚರ್‌ಗಳು ಮಲ್ಟಿ-ಝೋನ್ ಎಸಿ, ಮೆಮೊರಿ ಫಂಕ್ಷನ್‌ನೊಂದಿಗೆ ಮುಂಭಾಗದ ಸೀಟ್‌ನಲ್ಲಿ ಪವರ್ ಮತ್ತು ವೆಂಟಿಲೇಶನ್ ಮತ್ತು ADAS ಅನ್ನು ಒಳಗೊಂಡಿವೆ.
-
59 ಕಿ.ವ್ಯಾಟ್ ಮತ್ತು 79 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುವ ಸಾಧ್ಯತೆಯಿದೆ, ಇದು ಸುಮಾರು 650 ಕಿಮೀ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ.
-
ಇದರ ಬೆಲೆ 20.9 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.
ಭಾರತೀಯ ಕಾರು ತಯಾರಿಕಾ ಕಂಪೆನಿಯಲ್ಲಿ ಜನಪ್ರೀಯವಾಗಿರುವ ಮಹೀಂದ್ರಾ ಇತ್ತೀಚೆಗೆ ಎರಡು ಹೊಸ ಬ್ರಾಂಡ್ ಹೆಸರುಗಳ ಅಡಿಯಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಕೊಡುಗೆಗಳನ್ನು ಬಿಡುಗಡೆ ಮಾಡಿತು, ಅದರಲ್ಲಿ ಒಂದು 'XEV'. ಮಹೀಂದ್ರಾ ಈಗಾಗಲೇ XUV700 ಎಸ್‌ಯುವಿಯನ್ನು ಎಲೆಕ್ಟ್ರಿಕ್ ಮಾಡುವ ತನ್ನ ಯೋಜನೆಗಳನ್ನು ಬಹಿರಂಗಪಡಿಸಿದೆ, ಇದು ಅದರ XEV ಕಾರುಗಳ ಪಟ್ಟಿಯ ಭಾಗವಾಗಿರಬಹುದು. ಈಗ, ಮಹೀಂದ್ರಾ ಆಲ್-ಎಲೆಕ್ಟ್ರಿಕ್ XUV700ಗಾಗಿ ಟ್ರೇಡ್‌ಮಾರ್ಕ್ ಅನ್ನು ಸಲ್ಲಿಸಿದೆ, ಅದು ಇದನ್ನು XEV 7e ಎಂದು ಕರೆಯಬಹುದೆಂದು ಅಂದಾಜಿಸಲಾಗಿದೆ. ಇದನ್ನು 2022ರಲ್ಲಿ ಪರಿಕಲ್ಪನೆಯಾಗಿ ತೋರಿಸಿದಾಗ ಇದನ್ನು ಮೊದಲು XUV.e8 ಎಂದು ಕರೆಯಲಾಗುತ್ತಿತ್ತು. ಇತ್ತೀಚೆಗೆ, XEV 7eಯ ಪ್ರೊಡಕ್ಷನ್-ಸ್ಪೆಕ್ ಆವೃತ್ತಿಯ ಚಿತ್ರಗಳು ಸೋರಿಕೆಯಾಗಿದ್ದು, ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಇವುಗಳು ಅದರ ಬಾಹ್ಯ ಮತ್ತು ಇಂಟೀರಿಯರ್ ಎರಡನ್ನೂ ಬಹಿರಂಗಪಡಿಸಿದೆ.
ಎಕ್ಸ್‌ಟಿರಿಯರ್
ಮೊದಲ ನೋಟದಲ್ಲಿ, XUV700 ನ ಆಲ್-ಎಲೆಕ್ಟ್ರಿಕ್ ಆವೃತ್ತಿಯು ಇತ್ತೀಚೆಗೆ ಬಿಡುಗಡೆಯಾದ ಮಹೀಂದ್ರಾ XEV 9e ನೊಂದಿಗೆ ಸಾಕಷ್ಟು ಹೋಲಿಕೆಗಳನ್ನು ಹೊಂದಿದೆ ಎಂದು ನೀವು ಗಮನಿಸಬಹುದು. ತಲೆಕೆಳಗಾದ L-ಆಕಾರದ ಕನೆಕ್ಟೆಡ್ ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್‌ನಿಂದಾಗಿ ಮುಂಭಾಗವು ವಿಶೇಷವಾಗಿ XEV 9eನಂತೆಯೇ ಕಾಣುತ್ತದೆ.
ಆದರೆ, XEV 7e ಒಂದು ಎಸ್‌ಯುವಿಯಾಗಿದ್ದು, ಮತ್ತು ಅದರ ಬಾಡಿಯ ಆಕೃತಿಯು XUV700 ನಂತೆಯೇ ಇರುತ್ತದೆ ಆದರೆ XEV 9e ಒಂದು ಎಸ್‌ಯುವಿ-ಕೂಪ್ ಆಗಿದೆ. XEV 7e ನ ಹಿಂಭಾಗದ ಸಂಪೂರ್ಣ ನೋಟವನ್ನು ನಾವು ಪಡೆದಿಲ್ಲವಾದರೂ, ಬೂಟ್ ಇಮೇಜ್ ಅನ್ನು ಆಧರಿಸಿ, ಸುತ್ತುವ ಎಲ್ಇಡಿ ಟೈಲ್ ಲೈಟ್‌ಗಳು XUV700ನಲ್ಲಿರುವಂತೆಯೇ ಕಾಣುತ್ತದೆ.
XEV 9e ಪ್ರೇರಿತ ಕ್ಯಾಬಿನ್
XEV 7e ನ ಕ್ಯಾಬಿನ್ ಇತ್ತೀಚೆಗೆ ಬಿಡುಗಡೆಯಾದ ಮಹೀಂದ್ರಾ XEV 9e ನ ಕ್ಯಾಬಿನ್‌ಗೆ ಬಹುತೇಕ ಹೋಲುತ್ತದೆ. ಇದು ಸೆಂಟರ್ ಕನ್ಸೋಲ್‌ನಲ್ಲಿ ಪಿಯಾನೋ ಕಪ್ಪು ಇನ್ಸರ್ಟ್‌ನೊಂದಿಗೆ ಅದೇ ಡ್ಯುಯಲ್-ಟೋನ್ ಕಪ್ಪು ಮತ್ತು ಬಿಳಿ ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ. ಡ್ಯಾಶ್‌ಬೋರ್ಡ್‌ನ ಮುಖ್ಯ ಹೈಲೈಟ್ ಅಂದರೆ, ಡ್ರೈವರ್‌ನ ಡಿಸ್‌ಪ್ಲೇ, ಇನ್ಫೋಟೈನ್‌ಮೆಂಟ್ ಮತ್ತು ಪ್ಯಾಸೆಂಜರ್ ಡಿಸ್‌ಪ್ಲೇಗಾಗಿ ಅದರ ಟ್ರಿಪಲ್ ಸ್ಕ್ರೀನ್ ಸೆಟಪ್ (ಬಹುಶಃ 12.3-ಇಂಚಿನ ಪ್ರತಿ). ಇದು ಪ್ರಕಾಶಿತ 'ಇನ್ಫಿನಿಟಿ' ಲೋಗೋದೊಂದಿಗೆ 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಸಹ ಪಡೆಯುತ್ತದೆ.
ಸೋರಿಕೆಯಾದ ಫೋಟೊಗಳ ಆಧಾರದ ಮೇಲೆ, XEV 7e ಮಲ್ಟಿ-ಜೋನ್ ಎಸಿ, ಪ್ರೀಮಿಯಂ ಸೌಂಡ್ ಸಿಸ್ಟಮ್, ಮೆಮೊರಿ ಫಂಕ್ಷನ್‌ನೊಂದಿಗೆ ಪವರ್ ಮತ್ತು ವೆಂಟಿಲೇಶನ್ ಇರುವ ಮುಂಭಾಗದ ಸೀಟುಗಳು ಮತ್ತು ಪನರೋಮಿಕ್ ಸನ್‌ರೂಫ್‌ನಂತಹ ಸೌಕರ್ಯಗಳೊಂದಿಗೆ ಬರುತ್ತದೆ. ಇದರ ಸುರಕ್ಷತಾ ಕಿಟ್ ಲೆವೆಲ್ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿರುತ್ತದೆ, ಆದರೆ XEV 9e ನಲ್ಲಿ ನೋಡಿದಂತೆ ಇದು 7 ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ.
ಇದನ್ನೂ ಸಹ ಓದಿ: Mahindra ಕಾರಿನಲ್ಲಿ ಮೊದಲ ಬಾರಿಗೆ ನೀಡಲಾಗುತ್ತಿರುವ 10 ಫೀಚರ್‌ಗಳ ವಿವರಗಳು ಇಲ್ಲಿವೆ
ಪವರ್‌ಟ್ರೈನ್ ಮಾಹಿತಿಗಳು
XEV 7e ನ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ವಿಶೇಷಣಗಳ ಬಗ್ಗೆ ಮಹೀಂದ್ರಾ ಯಾವುದೇ ವಿವರಗಳನ್ನು ಬಹಿರಂಗಪಡಿಸದಿದ್ದರೂ, XEV 9e ನೊಂದಿಗೆ ನೀಡಲಾದ ಅದೇ ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಇದು ಒಳಗೊಂಡಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:
ಬ್ಯಾಟರಿ ಪ್ಯಾಕ್ |
59 ಕಿ.ವ್ಯಾಟ್ |
79 ಕಿ.ವ್ಯಾಟ್ |
ಕ್ಲೈಮ್ ಮಾಡಲಾದ ರೇಂಜ್ (MIDC ಹಂತ I+II) |
542 ಕಿ.ಮೀ. |
656 ಕಿ.ಮೀ |
ಎಲೆಕ್ಟ್ರಿಕ್ ಮೋಟರ್‌ಗಳ ಸಂಖ್ಯೆ |
1 |
1 |
ಪವರ್ |
231 ಪಿಎಸ್ |
286 ಪಿಎಸ್ |
ಟಾರ್ಕ್ |
380 ಎನ್‌ಎಮ್ |
380 ಎನ್‌ಎಮ್ |
ಡ್ರೈವ್ ಟೈಪ್ |
RWD |
RWD |
ಕ್ಲೈಮ್ ಮಾಡಲಾದ ರೇಂಜ್‌ನ ಅಂಕಿಅಂಶಗಳು XEV 7e ಗೆ ಬದಲಾಗಬಹುದು ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಮಹೀಂದ್ರಾ ತನ್ನ ICE (ಇಂಧನ ಚಾಲಿತ ಎಂಜಿನ್) ಆವೃತ್ತಿಯಲ್ಲಿ ಈಗಾಗಲೇ ಲಭ್ಯವಿರುವುದರಿಂದ ಆಲ್-ಎಲೆಕ್ಟ್ರಿಕ್ XUV700 ಜೊತೆಗೆ ಆಲ್-ವೀಲ್-ಡ್ರೈವ್ (AWD) ಡ್ರೈವ್‌ಟ್ರೇನ್‌ನ ಆಯ್ಕೆಯನ್ನು ಸಹ ನೀಡಬಹುದು.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ XEV 7e ಬೆಲೆಗಳು 20.9 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಟಾಟಾ ಸಫಾರಿ ಇವಿಗೆ ನೇರ ಪ್ರತಿಸ್ಪರ್ಧಿಯಾಗಿದ್ದು, XEV 9e ಗೆ ಇದು ಎಸ್‌ಯುವಿ ಪರ್ಯಾಯವಾಗಿದೆ.
ಕಾರುಗಳ ಲೋಕದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ WhatsApp ಚಾನಲ್ ಅನ್ನು ಮಿಸ್ ಮಾಡದೇ ಫಾಲೋ ಮಾಡಿ
ಇದರ ಇನ್ನಷ್ಟು ಓದಿ: ಮಹೀಂದ್ರಾ XUV700 ಡೀಸೆಲ್