• English
    • Login / Register

    Maruti e Vitaraದ ಎಲ್ಲಾ ವೇರಿಯಂಟ್‌ಗಳ ಪವರ್‌ಟ್ರೇನ್ ಆಯ್ಕೆಗಳ ವಿವರಗಳು ಇಲ್ಲಿವೆ

    ಮಾರುತಿ ಇ ವಿಟಾರಾ ಗಾಗಿ shreyash ಮೂಲಕ ಫೆಬ್ರವಾರಿ 04, 2025 12:16 pm ರಂದು ಪ್ರಕಟಿಸಲಾಗಿದೆ

    • 70 Views
    • ಕಾಮೆಂಟ್‌ ಅನ್ನು ಬರೆಯಿರಿ

    ಮಾರುತಿ ಇ ವಿಟಾರಾ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ, ಅವುಗಳೆಂದರೆ 49 kWh ಮತ್ತು 61 kWh - ಇದು 500 ಕಿ.ಮೀ ಗಿಂತ ಹೆಚ್ಚಿನ ರೇಂಜ್ ಅನ್ನು ನೀಡುತ್ತದೆ

    Maruti e Vitara

    ಮಾರುತಿ ಇ ವಿಟಾರಾವನ್ನು ಭಾರತದಲ್ಲಿ 2025 ರ ಆಟೋ ಎಕ್ಸ್‌ಪೋದಲ್ಲಿ ಅದರ ಮಾರ್ಕೆಟ್ ರೆಡಿ ವರ್ಷನ್‌ನಲ್ಲಿ ಪ್ರದರ್ಶಿಸಲಾಯಿತು. ಇದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಮತ್ತು ಕೆಲವು ನಗರಗಳಲ್ಲಿ ಆಫ್‌ಲೈನ್ ಬುಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿವೆ. ಬೆಲೆಯನ್ನು ಬಹಿರಂಗಗೊಳ್ಳುವ ಮೊದಲು, ಇ ವಿಟಾರಾದ ಪ್ರತಿಯೊಂದು ವೇರಿಯಂಟ್ ಯಾವ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಆಯ್ಕೆಗಳನ್ನು ನೀಡಬಹುದು ಎಂಬುದರ ಕುರಿತು ನಮ್ಮ ಹತ್ತಿರ ವಿವರಗಳಿವೆ. ಮಾರುತಿ ಇ ವಿಟಾರಾವನ್ನು ಮೂರು ವೇರಿಯಂಟ್‌ಗಳಲ್ಲಿ ನೀಡಲಿದೆ: ಡೆಲ್ಟಾ, ಝೀಟಾ ಮತ್ತು ಆಲ್ಫಾ.

     ಪವರ್‌ಟ್ರೇನ್‌ಗಳ ವೇರಿಯಂಟ್-ವಾರು ವಿವರಗಳನ್ನು ನೀಡುವ ಮೊದಲು, ಅವುಗಳ ಸ್ಪೆಸಿಫಿಕೇಷನ್‌ಗಳನ್ನು ನೋಡೋಣ:

     ಬ್ಯಾಟರಿ ಪ್ಯಾಕ್

    49 kWh

    61 kWh

     ಕ್ಲೇಮ್ ಮಾಡಿರುವ ರೇಂಜ್

     500 ಕಿ.ಮೀ.ಗಿಂತ ಹೆಚ್ಚು

     ಪವರ್

    144 PS

    174 PS

     ಟಾರ್ಕ್

    192.5 Nm

    192.5 Nm

     ಡ್ರೈವ್ ಪ್ರಕಾರ

     ಫ್ರಂಟ್-ವೀಲ್-ಡ್ರೈವ್

     ಫ್ರಂಟ್-ವೀಲ್-ಡ್ರೈವ್

     ಇ ವಿಟಾರಾವನ್ನು 7 kW AC ಚಾರ್ಜರ್ ಅಥವಾ 70 kW DC ಫಾಸ್ಟ್ ಚಾರ್ಜರ್ ಬಳಸಿ ಚಾರ್ಜ್ ಮಾಡಬಹುದು.

     ವೇರಿಯಂಟ್-ವಾರು ಪವರ್‌ಟ್ರೇನ್‌ಗಳು

     ಬನ್ನಿ, ಈಗ ಬ್ಯಾಟರಿ ಪ್ಯಾಕ್‌ಗಳ ವೇರಿಯಂಟ್-ವಾರು ವಿವರಗಳನ್ನು ನೋಡೋಣ:

     ವೇರಿಯಂಟ್

     ಡೆಲ್ಟಾ

     ಝೀಟಾ

     ಆಲ್ಫಾ

    49 kWh

    61 kWh

    ರಫ್ ಆಗಿರುವ ಲುಕ್

    Maruti e Vitara headlights

     ಮಾರುತಿ ಇ ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಲಿಷ್ಠ ಮತ್ತು ಸದೃಢವಾಗಿ ಕಾಣುವಂತೆ ವಿನ್ಯಾಸಗೊಳಿಸಿದೆ. ಮುಂಭಾಗದಲ್ಲಿ, ಇದು Y- ಆಕಾರದ LED DRL ಗಳನ್ನು, LED ಹೆಡ್‌ಲೈಟ್‌ಗಳನ್ನು ಸಂಪರ್ಕಿಸುವ ಹೊಳೆಯುವ ಬ್ಲಾಕ್ ಎಲಿಮೆಂಟ್‌ನೊಂದಿಗೆ ಬ್ಲಾಂಕ್ಡ್ ಆಫ್ ಗ್ರಿಲ್ ಮತ್ತು ಇಂಟಿಗ್ರೇಟ್ ಆಗಿರುವ ಫಾಗ್ ಲೈಟ್‌ಗಳನ್ನು ಹೊಂದಿರುವ ಬೋಲ್ಡ್ ಬಂಪರ್ ಅನ್ನು ಹೊಂದಿದೆ. ಬದಿಯಿಂದ ನೋಡಿದಾಗ, ಇದು ಫ್ಲೇರ್ಡ್ ವೀಲ್ ಆರ್ಚ್‌ಗಳನ್ನು ಹೊಂದಿದ್ದು, 18-ಇಂಚಿನ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ. ಹಿಂಭಾಗದ ಡೋರ್ ಹ್ಯಾಂಡಲ್‌ಗಳನ್ನು ಸಿ-ಪಿಲ್ಲರ್ ಮೇಲೆ ಜೋಡಿಸಲಾಗಿದೆ. ಇದು ಹಿಂಭಾಗದಲ್ಲಿ ಹೊಳೆಯುವ ಬ್ಲಾಕ್ ಪ್ಲಾಸ್ಟಿಕ್ ಸ್ಟ್ರಿಪ್‌ನಿಂದ ಸಂಪರ್ಕಗೊಂಡಿರುವ 3-ಪೀಸ್ LED ಟೈಲ್ ಲೈಟ್‌ಗಳನ್ನು ಹೊಂದಿದೆ.

     ಕ್ಯಾಬಿನ್ ಮತ್ತು ಫೀಚರ್‌ಗಳು

    IMG_257

     ಒಳಗಡೆ, ಇ ವಿಟಾರಾ ಎರಡು ಇಂಟಿಗ್ರೇಟೆಡ್ ಸ್ಕ್ರೀನ್‌ಗಳನ್ನು ಹೊಂದಿರುವ ಸರಳ ಡ್ಯಾಶ್‌ಬೋರ್ಡ್ - ಟಚ್‌ಸ್ಕ್ರೀನ್ ಮತ್ತು ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಅನ್ನು ಹೊಂದಿದೆ.

     ಇ ವಿಟಾರಾ 10.25-ಇಂಚಿನ ಟಚ್‌ಸ್ಕ್ರೀನ್, 10.1-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 10-ವೇ ಪವರ್ಡ್ ಡ್ರೈವರ್ ಸೀಟ್, ಮಲ್ಟಿ-ಕಲರ್ ಆಂಬಿಯೆಂಟ್ ಲೈಟಿಂಗ್ ಮತ್ತು ಫಿಕ್ಸೆಡ್ ಗ್ಲಾಸ್ ರೂಫ್‌ನಂತಹ ಫೀಚರ್‌ಗಳನ್ನು ಒಳಗೊಂಡಿರಬಹುದು. ಸುರಕ್ಷತೆಗಾಗಿ ಇ ವಿಟಾರಾ 7 ಏರ್‌ಬ್ಯಾಗ್‌ಗಳೊಂದಿಗೆ ಬರುತ್ತದೆ ಮತ್ತು ಲೆವೆಲ್ 2 ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು (ADAS) ಒಳಗೊಂಡಿರುವ ಮೊದಲ ಮಾರುತಿ ಮಾಡೆಲ್ ಆಗಿದೆ.

     ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು

     ಮಾರುತಿ ಇ ವಿಟಾರಾ ಕಾರಿನ ಬೆಲೆಯು 17 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಆರಂಭವಾಗುವ ನಿರೀಕ್ಷೆಯಿದೆ. ಇ ವಿಟಾರಾ, ಹುಂಡೈ ಕ್ರೆಟಾ ಎಲೆಕ್ಟ್ರಿಕ್, ಟಾಟಾ ಕರ್ವ್ EV, MG ZS EV ಮತ್ತು ಮಹೀಂದ್ರಾ BE 6 ಗಳಿಗೆ ಪ್ರತಿಸ್ಪರ್ಧಿಯಾಗಿದೆ.

     ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.

    was this article helpful ?

    Write your Comment on Maruti ಇ ವಿಟಾರಾ

    explore ಇನ್ನಷ್ಟು on ಮಾರುತಿ ಇ ವಿಟಾರಾ

    space Image

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    We need your ನಗರ to customize your experience