ಮಾರುತಿ ಇ ವಿಟಾರಾ: ಏನನ್ನು ನಿರೀಕ್ಷಿಸಬಹುದು ?
ಮಾರುತಿ ಇ vitara ಗಾಗಿ yashein ಮೂಲಕ ಡಿಸೆಂಬರ್ 24, 2024 10:02 pm ರಂದು ಪ್ರಕಟಿಸಲಾಗಿದೆ
- 59 Views
- ಕಾಮೆಂಟ್ ಅನ್ನು ಬರೆಯಿರಿ
ಮುಂಬರುವ ಮಾರುತಿ ಇ ವಿಟಾರಾ ಸುಮಾರು 20 ಲಕ್ಷ ರೂಪಾಯಿಗಳಿಗೆ ಮಾರಾಟವಾಗುವ ನಿರೀಕ್ಷೆಯಿದೆ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಇವಿಯನ್ನು ಎದುರಿಸಲಿದೆ
ಮಾರುತಿಯು ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಕಾರುಗಳು ಮತ್ತು ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿದ್ದರೂ, ಅದು ಎಲೆಕ್ಟ್ರಿಕ್ ಕಾರುಗಳ ಲೋಕದಲ್ಲಿ ಅಸ್ತಿತ್ವವನ್ನು ಹೊಂದಿರಲಿಲ್ಲ. ಇ ವಿಟಾರಾ ಕಾರು ಮಾರುತಿಯ ಮೊದಲ ಎಲೆಕ್ಟ್ರಿಕ್ ವಾಹನವಾಗಿರುವುದರಿಂದ ಅದು ಈಗ ಬದಲಾಗಲಿದೆ. ಜನವರಿ 17 ಮತ್ತು 22 ರ ನಡುವೆ ನಡೆಯಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಇ ವಿಟಾರಾ ತನ್ನ ಪಾದಾರ್ಪಣೆ ಮಾಡಲಿದೆ.
ಅಲ್ಲಿಯವರೆಗೆ, ಮಾರುತಿಯಿಂದ ಮುಂಬರುವ ಎಲೆಕ್ಟ್ರಿಕ್ ಎಸ್‌ಯುವಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ ಮತ್ತು ಎಕ್ಸ್‌ಟೀರಿಯರ್, ಇಂಟೀರಿಯರ್, ಪವರ್‌ಟ್ರೇನ್, ಫೀಚರ್‌ಗಳು ಮತ್ತು ಬೆಲೆಗಳ ವಿಷಯದಲ್ಲಿ ನಾವು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ನೋಡೋಣ.
ರಗಡ್ ಆಗಿರುವ ಡಿಸೈನ್
ಇ ವಿಟಾರಾ ಮಾರುತಿ ಬಿಡುಗಡೆ ಮಾಡಿದ ಮೊದಲ ಟೀಸರ್ ವೈ-ಆಕಾರದ ಎಲ್ಇಡಿ ಡಿಆರ್‌ಎಲ್‌ಗಳನ್ನು ಪ್ರದರ್ಶಿಸುವ ಎಲೆಕ್ಟ್ರಿಕ್ ಎಸ್‌ಯುವಿಯ ಮುಂಭಾಗವನ್ನು ಬಹಿರಂಗಪಡಿಸಿದೆ. ಮೇಲೆ ತಿಳಿಸಿದ ಲೈಟಿಂಗ್ ಅಂಶಗಳ ಹೊರತಾಗಿ, ಇತ್ತೀಚೆಗೆ ಜಾಗತಿಕವಾಗಿ ಬಹಿರಂಗಗೊಂಡ ಸುಜುಕಿ ಇ ವಿಟಾರಾವು ಕಪ್ಪು-ಬಣ್ಣದ ದಪ್ಪವಾದ ಬಂಪರ್ ಮತ್ತು ಬಂಪರ್‌ನ ಕೆಳಗಿನ ವಿಭಾಗದಲ್ಲಿ ಫಾಗ್ ಲ್ಯಾಂಪ್‌ಗಳನ್ನು ಒಳಗೊಂಡಿತ್ತು. ಭಾರತ-ಸ್ಪೆಕ್ ಆವೃತ್ತಿಯ ಒಟ್ಟಾರೆ ವಿನ್ಯಾಸ ಅಂಶಗಳು ಜಾಗತಿಕ ಮೊಡೆಲ್‌ನಂತೆಯೇ ಇರುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ.
ಸೈಡ್‌ನಿಂದ ಗಮನಿಸುವಾಗ, ಇದು 18-ಇಂಚಿನ ಬ್ಲ್ಯಾಕ್ಡ್-ಔಟ್ ಅಲಾಯ್ ವೀಲ್‌ಗಳನ್ನು (AWD ಜೊತೆಗೆ 19-ಇಂಚಿನ) ಮತ್ತು ಸಾಕಷ್ಟು ಬಾಡಿ ಕ್ಲಾಡಿಂಗ್ ಅನ್ನು ಪಡೆಯಬಹುದೆಂದು ನಿರೀಕ್ಷಿಸಬಹುದು. ಹಿಂಭಾಗದ ಬಾಗಿಲಿನ ಹ್ಯಾಂಡಲ್‌ಗಳನ್ನು ಸಿ-ಪಿಲ್ಲರ್‌ನಲ್ಲಿ ಅಳವಡಿಸಲಾಗಿದ್ದು, ಇದು ಹೆಚ್ಚು ಆಧುನಿಕ ನೋಟವನ್ನು ನೀಡುತ್ತದೆ
ಹಿಂಭಾಗವು ಕನೆಕ್ಟೆಡ್ ಎಲ್ಇಡಿ ಟೈಲ್ ಲೈಟ್‌ಗಳು, ಶಾರ್ಕ್ ಫಿನ್ ಆಂಟೆನಾ ಮತ್ತು ರೂಫ್-ಮೌಂಟೆಡ್ ಸ್ಪಾಯ್ಲರ್ ಅನ್ನು ಹೊಂದಿದೆ.
ಪ್ರೀಮಿಯಂ ಫೀಚರ್‌ಗಳೊಂದಿಗೆ ಅತ್ಯಾಧುನಿಕ ಇಂಟೀರಿಯರ್
ಜಾಗತಿಕ-ಸ್ಪೆಕ್ ಆವೃತ್ತಿಯಲ್ಲಿ ನೋಡಿದಂತೆ, ಒಳಾಂಗಣವು ಡ್ಯುಯಲ್-ಟೋನ್ ಥೀಮ್ ಮತ್ತು ಡ್ಯುಯಲ್-ಸ್ಕ್ರೀನ್ ಸೆಟಪ್ ಅನ್ನು ಹೊಂದಿರುತ್ತದೆ (ಒಂದು ಇನ್ಫೋಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಡ್ರೈವರ್‌ನ ಡಿಸ್‌ಪ್ಲೇಗಾಗಿ). ಕ್ಯಾಬಿನ್‌ನಲ್ಲಿ ಸ್ಪೋರ್ಟಿ-ಲುಕಿಂಗ್ ಹೊಂದಿರುವ 2-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಲಂಬವಾಗಿ-ಆಧಾರಿತ ಎಸಿ ವೆಂಟ್‌ಗಳನ್ನು ಕ್ರೋಮ್ ಆಕ್ಸೆಂಟ್‌ಗಳಿಂದ ಸುತ್ತುವರೆದಿದೆ.
ಇದು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಹೆಡ್-ಅಪ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕನೆಕ್ಟೆಡ್ ಕಾರ್ ತಂತ್ರಜ್ಞಾನದಂತಹ ಫೀಚರ್‌ಗಳೊಂದಿಗೆ ಬರಬಹುದು ಎಂದು ನಿರೀಕ್ಷಿಸಬಹುದು.
ಸುರಕ್ಷತೆಯ ವಿಷಯದಲ್ಲಿ, ಇದು ಬಹುಶಃ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಆಟೋ-ಹೋಲ್ಡ್ ಮತ್ತು ಪಾರ್ಕಿಂಗ್ ಬ್ರೇಕ್‌ನೊಂದಿಗೆ ಲೆವೆಲ್-2 ADASನಂತಹ ಫೀಚರ್‌ಗಳನ್ನು ಪಡೆಯುತ್ತದೆ. ಇಂಡಿಯಾ-ಸ್ಪೆಕ್ ಆವೃತ್ತಿಯು ADAS ಅನ್ನು ಪಡೆದರೆ, ಸುಧಾರಿತ ಮತ್ತು ಪ್ರೀಮಿಯಂ ಸುರಕ್ಷತಾ ಫೀಚರ್ ಅನ್ನು ಪಡೆಯುವ ಮೊದಲ ಮಾರುತಿ ಕಾರು ಇದು ಆಗಲಿದೆ.
ಇದರ ಪವರ್‌ಟ್ರೈನ್ ಬಗ್ಗೆ
ಎಸ್‌ಯುವಿಯ ಜಾಗತಿಕ ಆವೃತ್ತಿಯೊಂದಿಗೆ ಲಭ್ಯವಿರುವ ಅದೇ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಇ ವಿಟಾರಾದ ಭಾರತ-ಸ್ಪೆಕ್ ಆವೃತ್ತಿಯನ್ನು ಮಾರುತಿ ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ವಿಶೇಷಣಗಳ ನೋಟ ಇಲ್ಲಿದೆ:
ಬ್ಯಾಟರಿ |
49 ಕಿ.ವ್ಯಾಟ್ |
61 ಕಿ.ವ್ಯಾಟ್ |
|
ಡ್ರೈವ್‌ಟ್ರೈನ್ |
2ವೀಲ್ ಡ್ರೈವ್ |
2ವೀಲ್ ಡ್ರೈವ್ |
4ವೀಲ್ ಡ್ರೈವ್ |
ಪವರ್ |
144 ಪಿಎಸ್ |
174 ಪಿಎಸ್ |
249 ಪಿಎಸ್ |
ಟಾರ್ಕ್ |
189 ಎನ್‌ಎಮ್ |
189 ಎನ್‌ಎಮ್ |
300 ಎನ್‌ಎಮ್ |
ನಿಖರವಾದ ಕ್ಲೈಮ್ ಮಾಡಿದ ರೇಂಜ್ ಅನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ ಇದು 600 ಕಿಮೀ ರೇಂಜ್ ಅನ್ನು ತಲುಪಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.
ಪ್ರತಿಸ್ಪರ್ಧಿಗಳು ಮತ್ತು ನಿರೀಕ್ಷಿತ ಬೆಲೆ
ಮಾರುತಿ ಇ ವಿಟಾರಾದ ಬೆಲೆಯು ಸುಮಾರು 20 ಲಕ್ಷ ರುಪಾಯಿ (ಎಕ್ಸ್ ಶೋ ರೂಂ) ಇರಬಹುದೆಂದು ನಿರೀಕ್ಷಿಸಲಾಗಿದೆ. ಇದು ಟಾಟಾ ಕರ್ವ್ ಇವಿ, ಮಹೀಂದ್ರಾ ಬಿಇ 6, ಎಮ್‌ಜಿ ಜೆಡ್‌ಎಸ್ ಇವಿ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಇವಿಯೊಂದಿಗೆ ಸ್ಪರ್ಧಿಸಲಿದೆ.