ಭಾರತದಲ್ಲಿ Maruti e Vitara ಬಿಡುಗಡೆಯಾದ ನಂತರ ಸುಮಾರು 100 ದೇಶಗಳಿಗೆ ರಫ್ತು ಮಾಡಲು ಯೋಜನೆ
ಏಪ್ರಿಲ್ 03, 2025 03:57 pm dipan ಮೂಲಕ ಮಾರ್ಪಡಿಸಲಾಗಿದೆ
- 13 Views
- ಕಾಮೆಂಟ್ ಅನ್ನು ಬರೆಯಿರಿ
ಈ ಘೋಷಣೆಯ ಜೊತೆಗೆ, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 2024-25ನೇ ಹಣಕಾಸು ವರ್ಷದಲ್ಲಿ ಶೇಕಡಾ 17 ಕ್ಕಿಂತ ಹೆಚ್ಚು ಕಾರುಗಳನ್ನು ರಫ್ತು ಮಾಡಲಾಗಿದೆ ಎಂದು ಮಾರುತಿ ಹೇಳಿಕೊಂಡಿದೆ
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಪ್ರದರ್ಶಿಸಲಾದ ನಂತರ, ಬಾರತದ ನಂಬರ್.01 ಕಾರು ತಯಾರಕ ಕಂಪೆನಿಯಾದ ಮಾರುತಿಯು ತನ್ನ ಮೊದಲ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನವಾದ (EV) ಮಾರುತಿ ಇ ವಿಟಾರಾವನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವ ನಿರೀಕ್ಷೆಯಿದೆ. ಆ ನಿಟ್ಟಿನಲ್ಲಿ, ಇದು ಭಾರತದಲ್ಲಿ ಬಿಡುಗಡೆಯಾಗುವ ನಂತರ ಸುಮಾರು 100 ದೇಶಗಳಿಗೆ ಎಲೆಕ್ಟ್ರಿಕ್ ಎಸ್‌ಯುವಿಯನ್ನು ರಫ್ತು ಮಾಡಲಾಗುವುದು ಎಂದು ಮಾರುತಿ ಈಗ ಹೇಳಿದೆ. ಈ ರಫ್ತುಗಳು ಪ್ರಸಕ್ತ ಹಣಕಾಸು ವರ್ಷ (FY) 2025-26 ರಲ್ಲಿ ಪ್ರಾರಂಭವಾಗಲಿದ್ದು, ಯುರೋಪ್ ಮತ್ತು ಜಪಾನ್‌ನ ಮಾರುಕಟ್ಟೆಗಳನ್ನು ಒಳಗೊಂಡಿರುತ್ತವೆ.
2024-25ರ ಹಣಕಾಸು ವರ್ಷದಲ್ಲಿ ಸತತ ನಾಲ್ಕನೇ ವರ್ಷವೂ ಪ್ರಯಾಣಿಕ ವಾಹನಗಳ ಅಗ್ರ ರಫ್ತುದಾರ ಎಂದು ಮಾರುತಿಯು ಘೋಷಿಸಿದ್ದು, ರಫ್ತಿನಲ್ಲಿ ಶೇಕಡಾ 43 ರಷ್ಟು ಪಾಲನ್ನು ಹೊಂದಿದೆ. ಇದು ಮೊದಲ ಬಾರಿಗೆ ಕ್ಯಾಲೆಂಡರ್ ವರ್ಷ (2024) ಮತ್ತು ಹಣಕಾಸು ವರ್ಷ (2024-25) ಎರಡರಲ್ಲೂ ರಫ್ತಿನಲ್ಲಿ 3 ಲಕ್ಷ ಯೂನಿಟ್‌ಗಳನ್ನು ಮೀರಿದೆ. ಈ ಅವಧಿಯಲ್ಲಿ ಮಾರುತಿ ಫ್ರಾಂಕ್ಸ್, ಮಾರುತಿ ಜಿಮ್ನಿ, ಮಾರುತಿ ಬಲೆನೊ, ಮಾರುತಿ ಸ್ವಿಫ್ಟ್ ಮತ್ತು ಮಾರುತಿ ಡಿಜೈರ್ ಹೆಚ್ಚು ರಫ್ತು ಮಾಡಲಾದ ಮೊಡೆಲ್‌ಗಳಾಗಿವೆ. ಮಾರುತಿ ಇ ವಿಟಾರಾ ಈಗ ಕಾರು ತಯಾರಕರು ತನ್ನ ಇತರ ದೇಶದ ಮಾರುಕಟ್ಟೆಗಳಿಗೆ ರಫ್ತು ಮಾಡುವ ಕಾರುಗಳ ಸಾಲಿಗೆ ಸೇರಲಿದೆ.
ಹಾಗೆಯೇ, ಮಾರುತಿ ಇ ವಿಟಾರಾದ ಸಂಕ್ಷಿಪ್ತ ವಿವರಗಳು ಇಲ್ಲಿದೆ:
ಮಾರುತಿ ಇ ವಿಟಾರಾ: ಒಂದು ಅವಲೋಕನ
ಮಾರುತಿ ಇ ವಿಟಾರಾ ಸಾಕಷ್ಟು ಆಧುನಿಕ ವಿನ್ಯಾಸವನ್ನು ಹೊಂದಿದ್ದು, ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, Y-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು, 18-ಇಂಚಿನ ಏರೋಡೈನಾಮಿಕ್ ಆಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್‌ಗಳು ಮತ್ತು ಹೊಳಪು ಕಪ್ಪು ಪಟ್ಟಿಯ ಮೂಲಕ ಸಂಪರ್ಕಗೊಂಡಿರುವ 3-ಪೀಸ್ ಎಲ್‌ಇಡಿ ಸುತ್ತುವರಿಯುವ ಟೈಲ್ ಲೈಟ್‌ಗಳನ್ನು ಒಳಗೊಂಡಿದೆ.
ಒಳಭಾಗದಲ್ಲಿ, ಇದು ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಅನ್ನು ಡ್ಯುಯಲ್ ಡಿಸ್‌ಪ್ಲೇಗಳು ಮತ್ತು ಎರಡು-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿದೆ. ಇದು ಕ್ಯಾಬಿನ್‌ನಂತೆಯೇ ಅದೇ ಥೀಮ್‌ನೊಂದಿಗೆ ಸೆಮಿ-ಲೆದರೆಟ್ ಸೀಟ್ ಕವರ್‌ಅನ್ನು ಪಡೆಯುತ್ತದೆ.
ಇ ವಿಟಾರಾ 10.25-ಇಂಚಿನ ಟಚ್‌ಸ್ಕ್ರೀನ್, 10.1-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಪ್ರೀಮಿಯಂ ಸೌಂಡ್ ಸಿಸ್ಟಮ್ ಸೇರಿದಂತೆ ಫೀಚರ್‌ಗಳನ್ನು ಪಡೆಯಲಿದೆ. ಇದು 10-ವೇ ಚಾಲಿತ ಚಾಲಕ ಸೀಟು, ಬಹು-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು ಫಿಕ್ಸ್‌ಡ್ ಪನೋರಮಿಕ್ ಗ್ಲಾಸ್ ರೂಫ್‌ಅನ್ನು ಸಹ ಹೊಂದಿದೆ.
ಸುರಕ್ಷತೆಯ ದೃಷ್ಟಿಯಿಂದ, ಇದು 7 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ ಸೆಟಪ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್ ಸೇರಿದಂತೆ ಫೀಚರ್‌ಗಳೊಂದಿಗೆ ಲೆವೆಲ್-2 ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು (ADAS) ಪಡೆಯುತ್ತದೆ.
ಇದನ್ನೂ ಓದಿ: 2025ರ ಏಪ್ರಿಲ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಅಥವಾ ಅನಾವರಣಗೊಳ್ಳಲಿರುವ ಟಾಪ್ 5 ಕಾರುಗಳು
2025ರ ಆಟೋ ಎಕ್ಸ್‌ಪೋದಲ್ಲಿ, ಮಾರುತಿ ಇ ವಿಟಾರಾ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿರುತ್ತದೆ ಎಂದು ದೃಢಪಡಿಸಿತ್ತು, ಅದರ ವಿವರಗಳು ಈ ಕೆಳಗಿನಂತಿವೆ:
ಬ್ಯಾಟರಿ ಪ್ಯಾಕ್ |
49 ಕಿ.ವ್ಯಾಟ್ |
61 ಕಿ.ವ್ಯಾಟ್ |
ಎಲೆಕ್ಟ್ರಿಕ್ ಮೋಟಾರ್‌ಗಳ ಸಂಖ್ಯೆ |
1 |
1 |
ಪವರ್ |
144 ಪಿಎಸ್ |
174 ಪಿಎಸ್ |
ಟಾರ್ಕ್ |
192.5 ಎನ್‌ಎಮ್ |
192.5 ಎನ್‌ಎಮ್ |
ಕ್ಲೈಮ್ ಮಾಡಲಾದ ರೇಂಜ್ |
ಘೋಷಣೆಯಾಗಬೇಕಷ್ಟೇ |
500 ಕಿ.ಮೀ.ಗಿಂತ ಹೆಚ್ಚು |
ಡ್ರೈವ್‌ಟ್ರೈನ್ |
FWD* |
FWD |
*FWD = ಫ್ರಂಟ್-ವೀಲ್-ಡ್ರೈವ್
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಾರುತಿ ಇ ವಿಟಾರಾ ಬೆಲೆ 17 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ, ಭಾರತಾದ್ಯಂತ) ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಇದು ಹುಂಡೈ ಕ್ರೆಟಾ ಎಲೆಕ್ಟ್ರಿಕ್, ಟಾಟಾ ಕರ್ವ್ ಇವಿ, ಎಂಜಿ ಝಡ್ಎಸ್ ಇವಿ ಮತ್ತು ಮಹೀಂದ್ರಾ ಬಿಇ 6 ಗಳಿಗೆ ಪೈಪೋಟಿ ನೀಡಲಿದೆ.
ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್ ಮಾಡ್ಬೇಡಿ