Login or Register ಅತ್ಯುತ್ತಮ CarDekho experience ಗೆ
Login

25,000 ಕ್ಕೂ ಮಿಕ್ಕಿ ಬುಕಿಂಗ್‌ ಪಡೆದ ಮಾರುತಿ ಜಿಮ್ನಿ..!

published on ಮೇ 14, 2023 02:00 pm by ansh for ಮಾರುತಿ ಜಿಮ್ನಿ

ಈ 5-ಡೋರ್ ಸಬ್‌ಕಾಂಪ್ಯಾಕ್ಟ್ ಆಫ್-ರೋಡರ್ ಅನ್ನು ಜೂನ್ ಪ್ರಾರಂಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ

  • 5-ಡೋರ್ ಜಿಮ್ನಿಗೆ ಜನವರಿ 2023ರ ಆಟೋ ಎಕ್ಸ್‌ಪೋದಲ್ಲಿ ಬುಕಿಂಗ್‌ಗಳು ತೆರೆದಿವೆ.
  • ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ 105PS, 1.5-ಲೀಟರ್ ಪೆಟ್ರೋಲ್ ಯೂನಿಟ್‌ನಿಂದ ಚಾಲಿತವಾಗಿದೆ.
  • 4WD ಅನ್ನು ಸ್ಟಾಂಡರ್ಡ್ ಆಗಿ ಪಡೆದಿದ್ದು, ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
  • ಮುಂಬರುವ ವಾರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಶೋರೂಂಗಳಲ್ಲಿ ಈಗಾಗಲೇ ಡಿಸ್‌ಪ್ಲೇ ಮಾಡಲಾಗಿದೆ.
  • ಮಾರುತಿ ಇದನ್ನು ರೂ 10 ಲಕ್ಷದಿಂದ (ಎಕ್ಸ್-ಶೋರೂಂ) ಬೆಲೆ ನಿಗದಿಪಡಿಸಬಹುದು.

ಭಾರತದಲ್ಲಿ ಮಾರುತಿ ಜಿಮ್ನಿಯ ಆಗಮನಕ್ಕಾಗಿ ನಾವು ಬಹಳ ಸಮಯದಿಂದ ಕಾಯುತ್ತಿದ್ದು ಈ ಆಫ್‌ರೋಡರ್ ತನ್ನ 5-ಡೋರ್ ಅವತಾರದಲ್ಲಿ ಕಡೆಗೂ ಈ ವರ್ಷಾರಂಭದಲ್ಲಿ ನಮ್ಮಲ್ಲಿಗೆ ಬಂದಿಳಿದಿದೆ. ಆಟೋ ಎಕ್ಸ್‌ಪೋ 2023ರಲ್ಲಿ ಜಾಗತಿಕವಾಗಿ ಅನಾವರಣಗೊಳಿಸಿ, 5-ಡೋರ್ ಜಿಮ್ನಿಗೆ ಮಾರುತಿ ಬುಕಿಂಗ್‌ಗಳನ್ನು ತೆರೆದಿದ್ದು ಅಂದಿನಿಂದ ಈ ಆಫ್‌-ರೋಡರ್ ಸುಮಾರು 24,500ಕ್ಕೂ ಹೆಚ್ಚಿನ ಬುಕಿಂಗ್‌ಗಳನ್ನು ಪಡೆದಿದೆ.

ಪವರ್‌ಟ್ರೇನ್

ಜಿಮ್ನಿಯು 105PS ಮತ್ತು 134Nm ಉತ್ಪಾದಿಸುವ ಆದೇ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಪಡೆದಿದೆ. ಇದರ ಪ್ರಮುಖ ಪ್ರತಿಸ್ಪರ್ಧಿಗಳಾದ ಮಹೀಂದ್ರಾ ಥಾರ್‌ಗಿಂತ ಭಿನ್ನವಾಗಿ ಈ ಇಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮ್ಯಾಟಿಕ್‌ನೊಂದಿಗೆ ಜೋಡಿಸಲಾಗಿದ್ದು, ಜಿಮ್ನಿಯಲ್ಲಿ 4-ವ್ಹೀಲ್ ಡ್ರೈವ್‌ಟ್ರೇನ್ ಸ್ಟಾಂಡರ್ಡ್ ಆಗಿ ಬರುತ್ತದೆ.

ಫೀಚರ್‌ಗಳು ಮತ್ತು ಸುರಕ್ಷತೆ

ಆರಾಮದಾಯಕತೆ ಮತ್ತು ಅನುಕೂಲತೆಗಳ ವಿಷಯದಲ್ಲಿ ಜಿಮ್ನಿಯು ಉತ್ತಮವಾಗಿ ಸುಸಜ್ಜಿತಗೊಂಡಿದೆ. ಇದು ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಹೊಂದಿರುವ 9-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಮುಂಭಾಗದ ಹಾಗೂ ಹಿಂದಿನ ಎತ್ತರ ಹೊಂದಿಸಬಹುದಾದ ಹೆಡ್‍ರೆಸ್ಟ್‌ಗಳನ್ನು ಹೊಂದಿದೆ.

ಇದನ್ನೂ ಓದಿ: 6 ಚಿತ್ರಗಳಲ್ಲಿ ಮಾರುತಿ ಫ್ರಾಂಕ್ಸ್ ಡೆಲ್ಟಾ+ ವೇರಿಯೆಂಟ್ ವಿವರ

ಸುರಕ್ಷತೆಗಾಗಿ, ಇದು ಆರು ಏರ್‌ಬ್ಯಾಗ್‌ಗಳು, EBD ಜೊತೆಗಿನ ABS, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಹೋಲ್ಡ್ ಮತ್ತು ಡಿಸೆಂಟ್ ಕಂಟ್ರೋಲ್ ಮತ್ತು ರಿಯರ್‌ವ್ಯೂ ಕ್ಯಾಮರಾವನ್ನು ಸ್ಟಾಂಡರ್ಡ್ ಆಗಿ ಪಡೆದಿದೆ.

ಬೆಲೆ, ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು

ಮಾರುತಿಯು ಭಾರತದಲ್ಲಿ 5-ಡೋರ್ ಜಿಮ್ನಿಯನ್ನು ಜೂನ್ ಪ್ರಾರಂಭದಲ್ಲಿ ಬಿಡುಗಡೆ ಮಾಡಬಹುದು ಮತ್ತು ಇದರ ಆರಂಭಿಕ ಬೆಲೆ 10 ಲಕ್ಷ (ಎಕ್ಸ್-ಶೋರೂಂ) ಇರಬಹುದೆಂಬ ನಿರೀಕ್ಷೆ ಇದೆ. ಇದು ಮಹೀಂದ್ರಾ ಥಾರ್‌ ಮತ್ತು ಫೋರ್ಸ್ ಗುರ್ಖಾಗೆ ಪೈಪೋಟಿ ನೀಡಲಿದೆ.

a
ಅವರಿಂದ ಪ್ರಕಟಿಸಲಾಗಿದೆ

ansh

  • 15 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಜಿಮ್ನಿ

S
shaik khasim ali
May 11, 2023, 3:34:56 PM

East or west jimny is the best...please book my number 89786 70188 please

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ