ಈ ಏಪ್ರಿಲ್‌ನಲ್ಲಿ Nexa ಕಾರುಗಳ ಮೇಲೆ 1.4 ಲಕ್ಷ ರೂ.ಗಳವರೆಗೆ ರಿಯಾಯಿತಿ ನೀಡುತ್ತಿರುವ Maruti
ಏಪ್ರಿಲ್ 08, 2025 06:48 pm ರಂದು kartik ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿಯು ಜಿಮ್ನಿ, ಗ್ರ್ಯಾಂಡ್ ವಿಟಾರಾ ಮತ್ತು ಇನ್ವಿಕ್ಟೊ ಮೇಲೆ 1 ಲಕ್ಷ ರೂ.ಗಿಂತ ಹೆಚ್ಚಿನ ರಿಯಾಯಿತಿಯನ್ನು ನೀಡುತ್ತಿದೆ
ಮಾರುತಿಯು 2025ರ ಏಪ್ರಿಲ್‌ನಲ್ಲಿ ನೆಕ್ಸಾ ಕಾರುಗಳಿಗೆ ಆಫರ್‌ಗಳನ್ನು ಹೊರತಂದಿದೆ. ಈ ರಿಯಾಯಿತಿಗಳಲ್ಲಿ ಕ್ಯಾಶ್ ಡಿಸ್ಕೌಂಟ್‌ಗಳು, ಕಾರ್ಪೊರೇಟ್ ಡಿಸ್ಕೌಂಟ್‌ಗಳು ಮತ್ತು ಸ್ಕ್ರ್ಯಾಪೇಜ್ ಬೋನಸ್‌ಗಳು ಸೇರಿವೆ. ಗ್ರಾಹಕರು ತಮ್ಮ ಹಳೆಯ ವಾಹನಗಳನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳುವಾಗ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಬಹುದು ಮತ್ತು ಕೆಲವು ಮೊಡಲ್‌ಗಳಲ್ಲಿ ಲಭ್ಯವಿರುವ ವಿಶೇಷ ಅಪ್‌ಗ್ರೇಡ್ ಬೋನಸ್‌ಗಳನ್ನು ಸಹ ಪಡೆಯಬಹುದು. 2025ರ ಏಪ್ರಿಲ್‌ನಲ್ಲಿ ನೆಕ್ಸಾದಲ್ಲಿ ನೀಡಲಾಗುವ ಎಲ್ಲಾ ಆಫರ್‌ಗಳು ಮತ್ತು ರಿಯಾಯಿತಿಗಳ ವಿವರವಾದ ಪಟ್ಟಿ ಇಲ್ಲಿದೆ.
ಇಗ್ನಿಸ್
ಆಫರ್ |
ಮೊತ್ತ |
ಕ್ಯಾಶ್ ಡಿಸ್ಕೌಂಟ್‌ಗಳು |
30,000 ರೂ.ವರೆಗೆ |
ಕಾರ್ಪೋರೇಟ್ ಡಿಸ್ಕೌಂಟ್‌ಗಳು |
2,100 ರೂ. |
ಸ್ಕ್ರ್ಯಾಪೇಜ್ ಬೋನಸ್‌ಗಳು |
30,000 ರೂ.ವರೆಗೆ |
ಒಟ್ಟು ಡಿಸ್ಕೌಂಟ್‌ಗಳು |
62,100 ರೂ.ವರೆಗೆ |
-
ಮಾರುತಿ ಇಗ್ನಿಸ್‌ನ ಎಎಮ್‌ಟಿ ವೇರಿಯೆಂಟ್‌ಗಳು ಮೇಲೆ ತಿಳಿಸಿದ ಆಫರ್‌ಗಳನ್ನು ಹೊಂದಿದೆ.
-
ಮ್ಯಾನ್ಯುವಲ್ ವೇರಿಯೆಂಟ್‌ಗಳು 25,000 ರೂ.ನಷ್ಟು ಕಡಿಮೆ ಕ್ಯಾಶ್ ಡಿಸ್ಕೌಂಟ್‌ಅನ್ನು ನೀಡುತ್ತವೆ, ಒಟ್ಟು ಪ್ರಯೋಜನಗಳು 57,100 ರೂ.ಗಳವರೆಗೆ ಇರುತ್ತವೆ.
-
ಮಾರುತಿ 15,000 ರೂ.ಗಳ ವಿನಿಮಯ ಬೋನಸ್ ಅಥವಾ 30,000 ರೂ.ಗಳ ಸ್ಕ್ರ್ಯಾಪೇಜ್ ಬೋನಸ್‌ಅನ್ನು ಸಹ ನೀಡುತ್ತಿದೆ. ಈ ಪ್ರಯೋಜನಗಳಲ್ಲಿ ಒಂದನ್ನು ಮಾತ್ರ ಒಮ್ಮೆಗೆ ಪಡೆಯಬಹುದು ಎಂಬುದನ್ನು ನಾವಿಲ್ಲಿ ಗಮನಿಸಬೇಕು.
-
ಕಾರ್ಪೊರೇಟ್ ಅಥವಾ ಗ್ರಾಮೀಣ ರಿಯಾಯಿತಿ ಕೂಡ ಲಭ್ಯವಿದೆ, ಅದರಲ್ಲಿ ಒಂದನ್ನು ಮಾತ್ರ ಆಯ್ದುಕೊಳ್ಳಬಹುದು.
ಬಲೆನೋ
ಆಫರ್ |
ಮೊತ್ತ |
ಕ್ಯಾಶ್ ಡಿಸ್ಕೌಂಟ್‌ಗಳು |
25,000 ರೂ.ವರೆಗೆ |
ಸ್ಕ್ರ್ಯಾಪೇಜ್ ಬೋನಸ್‌ಗಳು |
25,000 ರೂ.ವರೆಗೆ |
ಗ್ರಾಮೀಣ ರಿಯಾಯಿತಿ |
2,100 ರೂ. |
ಒಟ್ಟು ಡಿಸ್ಕೌಂಟ್‌ಗಳು |
50,000 ರೂ.ವರೆಗೆ |
-
ಮೇಲೆ ಪಟ್ಟಿ ಮಾಡಿದಂತೆ ಬಲೆನೊದ ಬೇಸ್-ಸ್ಪೆಕ್ ಸಿಗ್ಮಾ ಮತ್ತು ಎಎಮ್‌ಟಿ ವೇರಿಯೆಂಟ್‌ಗಳು ಹೆಚ್ಚಿನ ಪ್ರಯೋಜನಗಳನ್ನು ಆಕರ್ಷಿಸುತ್ತವೆ.
-
ಇತರ ವೇರಿಯೆಂಟ್‌ಗಳನ್ನು 20,000 ರೂ.ಗಳ ಕಡಿಮೆ ಕ್ಯಾಶ್ ಡಿಸ್ಕೌಂಟ್‌ನೊಂದಿಗೆ ನೀಡಲಾಗುತ್ತದೆ.
-
ಮಾರುತಿ ಬಲೆನೊ ಮೇಲೆ ಕಾರ್ಪೊರೇಟ್ ರಿಯಾಯಿತಿ ನೀಡುತ್ತಿಲ್ಲ ಆದರೆ 2,100 ರೂ. ಗ್ರಾಮೀಣ ಪ್ರಯೋಜನವನ್ನು ಇನ್ನೂ ನೀಡುತ್ತಿದೆ.
-
ಬಲೆನೊದ ರೀಗಲ್ ಕಿಟ್ 10,000 ರೂ.ಗಳವರೆಗಿನ ಪ್ರಯೋಜನವನ್ನು ನೀಡುತ್ತದೆ.
ಸಿಯಾಝ್
ಆಫರ್ |
ಮೊತ್ತ |
ಕ್ಯಾಶ್ ಡಿಸ್ಕೌಂಟ್‌ಗಳು |
10,000 ರೂ. |
ಸ್ಕ್ರ್ಯಾಪೇಜ್ ಬೋನಸ್‌ಗಳು |
30,000 ರೂ.ವರೆಗೆ |
ಒಟ್ಟು ಡಿಸ್ಕೌಂಟ್‌ಗಳು |
40,000 ರೂ.ವರೆಗೆ |
-
ಸಿಯಾಝ್‌ನ ಎಲ್ಲಾ ವೇರಿಯೆಂಟ್‌ಗಳು ಮೇಲೆ ತಿಳಿಸಿದಂತೆಯೇ ಕ್ಯಾಶ್ ಡಿಸ್ಕೌಂಟ್‌ಅನ್ನು ಪಡೆಯುತ್ತವೆ.
-
ಸ್ಕ್ರ್ಯಾಪೇಜ್ ಡಿಸ್ಕೌಂಟ್ ನಾಲ್ಕು ವೇರಿಯೆಂಟ್‌ಗಳಲ್ಲಿಯೂ ಒಂದೇ ಆಗಿರುತ್ತದೆ.
ಫ್ರಾಂಕ್ಸ್
ಆಫರ್ |
ಮೊತ್ತ |
ಕ್ಯಾಶ್ ಡಿಸ್ಕೌಂಟ್‌ಗಳು |
30,000 ರೂ.ವರೆಗೆ |
ಸ್ಕ್ರ್ಯಾಪೇಜ್ ಬೋನಸ್‌ಗಳು |
15,000 ರೂ.ವರೆಗೆ |
ಒಟ್ಟು ಡಿಸ್ಕೌಂಟ್‌ಗಳು |
45,000 ರೂ.ವರೆಗೆ |
-
ಫ್ರಾಂಕ್ಸ್‌ನಲ್ಲಿ ಅತಿ ಹೆಚ್ಚು ರಿಯಾಯಿತಿಗಳು ಟರ್ಬೊ ವೇರಿಯೆಂಟ್‌ನಲ್ಲಿ ಹೊಂದಿದೆ, ಇದು ಉಚಿತವಾಗಿ ವೆಲಾಸಿಟಿ ಕಿಟ್ (ರೂ. 43,000 ಮೌಲ್ಯದ) ಅನ್ನು ಸಹ ಪಡೆಯುತ್ತದೆ.
-
ಎಂಟ್ರಿ-ಲೆವೆಲ್‌ನ ಸಿಗ್ಮಾ ಹೊರತುಪಡಿಸಿ, ರೆಗ್ಯುಲರ್ ವೇರಿಯೆಂಟ್‌ಗಳ ಯಾವುದೇ ಪವರ್‌ಟ್ರೇನ್‌ಗಳಿದ್ದರೂ, 10,000 ರೂ.ಗಳ ಕಡಿಮೆ ನಗದು ಬೋನಸ್ ಅನ್ನು ಒಳಗೊಂಡಿವೆ.
-
ಸಿಗ್ಮಾ ವೇರಿಯೆಂಟ್ ಮತ್ತು ಸಿಎನ್‌ಜಿ ವೇರಿಯೆಂಟ್‌ಗಳು ಯಾವುದೇ ಕ್ಯಾಶ್ ಡಿಸ್ಕೌಂಟ್‌ಗಳನ್ನು ಪಡೆಯುವುದಿಲ್ಲ; ಆದರೆ, ಅವು ಇನ್ನೂ ಸ್ಕ್ರ್ಯಾಪೇಜ್ ಅಥವಾ ವಿನಿಮಯ ಬೋನಸ್‌ಗೆ ಅರ್ಹವಾಗಿವೆ.
ಗ್ರ್ಯಾಂಡ್ ವಿಟಾರಾ
ಆಫರ್ |
ಮೊತ್ತ |
ಕ್ಯಾಶ್ ಡಿಸ್ಕೌಂಟ್‌ಗಳು |
50,000 ರೂ.ವರೆಗೆ |
ಸ್ಕ್ರ್ಯಾಪೇಜ್ ಬೋನಸ್‌ಗಳು |
65,000 ರೂ.ವರೆಗೆ |
ಹೆಚ್ಚುವರಿ ಬೋನಸ್‌ಗಳು |
20,000 ರೂ.ವರೆಗೆ |
ಒಟ್ಟು ಡಿಸ್ಕೌಂಟ್‌ಗಳು |
1.35 ಲಕ್ಷ ರೂ.ವರೆಗೆ |
-
ಗ್ರ್ಯಾಂಡ್ ವಿಟಾರಾದ ಬಲಿಷ್ಠ ಹೈಬ್ರಿಡ್ ವೇರಿಯೆಂಟ್‌ಗಳು ಮೇಲೆ ತಿಳಿಸಿದಂತೆ ಅತ್ಯಧಿಕ ರಿಯಾಯಿತಿಗಳನ್ನು ಹೊಂದಿದೆ, ಜೊತೆಗೆ ಉಚಿತ 5 ವರ್ಷಗಳ ವಿಸ್ತೃತ ವ್ಯಾರಂಟಿಯನ್ನು ಸಹ ನೀಡುತ್ತವೆ.
-
ಗ್ರ್ಯಾಂಡ್ ವಿಟಾರಾದ ಡೆಲ್ಟಾ, ಜೀಟಾ ಮತ್ತು ಆಲ್ಫಾ ವೇರಿಯೆಂಟ್‌ಗಳು ಕಡಿಮೆ ಕ್ಯಾಶ್ ಡಿಸ್ಕೌಂಟ್‌ಗಳನ್ನು ಹೊಂದಿದೆ.
-
ಗ್ರ್ಯಾಂಡ್ ವಿಟಾರಾದ ಸಿಗ್ಮಾ ಮತ್ತು ಸಿಎನ್‌ಜಿ ವೇರಿಯೆಂಟ್‌ಗಳು ಯಾವುದೇ ಕ್ಯಾಶ್ ಡಿಸ್ಕೌಂಟ್‌ಗಳನ್ನು ಪಡೆಯುವುದಿಲ್ಲ ಆದರೆ ಎಕ್ಸ್‌ಚೇಂಜ್ ಅಥವಾ ಸ್ಕ್ರ್ಯಾಪೇಜ್ ಬೋನಸ್‌ಗಳಿಗೆ ಅರ್ಹವಾಗಿವೆ.
ಎಕ್ಸ್‌ಎಲ್ 6
ಆಫರ್ |
ಮೊತ್ತ |
ಕ್ಯಾಶ್ ಡಿಸ್ಕೌಂಟ್ |
ಇಲ್ಲ |
ಸ್ಕ್ರ್ಯಾಪೇಜ್ ಬೋನಸ್ |
25,000 ರೂ.ವರೆಗೆ |
ಒಟ್ಟು ಡಿಸ್ಕೌಂಟ್‌ಗಳು |
25,000 ರೂ.ವರೆಗೆ |
-
ಮಾರುತಿ XL6 ಯಾವುದೇ ಕ್ಯಾಶ್ ಡಿಸ್ಕೌಂಟ್‌ಗಳನ್ನು ಪಡೆಯುವುದಿಲ್ಲ.
-
ಇದನ್ನು ಇನ್ನೂ ಸ್ಕ್ರ್ಯಾಪೇಜ್ ಅಥವಾ ವಿನಿಮಯ ಬೋನಸ್‌ನೊಂದಿಗೆ ನೀಡಲಾಗುತ್ತದೆ, ಅದರಲ್ಲಿ ಒಂದನ್ನು ಮಾತ್ರ ಪಡೆಯಬಹುದು.
ಜಿಮ್ನಿ
ಆಫರ್ |
ಮೊತ್ತ |
ಕ್ಯಾಶ್ ಡಿಸ್ಕೌಂಟ್‌ಗಳು |
1 ಲಕ್ಷ ರೂ.ವರೆಗೆ |
ಸ್ಕ್ರ್ಯಾಪೇಜ್ ಬೋನಸ್ |
N/A |
ಒಟ್ಟು ಡಿಸ್ಕೌಂಟ್‌ಗಳು |
1 ಲಕ್ಷ ರೂ.ವರೆಗೆ |
-
ಮಾರುತಿ ಜಿಮ್ನಿಯ ಆಲ್ಫಾ ವೇರಿಯೆಂಟ್ 1 ಲಕ್ಷ ರೂ.ಗಳ ಕ್ಯಾಶ್ ಡಿಸ್ಕೌಂಟ್‌ಗಳನ್ನು ನೀಡುತ್ತದೆ.
-
ಝೀಟಾ ವೇರಿಯೆಂಟ್ ಯಾವುದೇ ಡಿಸ್ಕೌಂಟ್‌ಗಳನ್ನು, ನಗದು ಅಥವಾ ಇತರ ಪ್ರಯೋಜನಗಳನ್ನು ಪಡೆಯುವುದಿಲ್ಲ.
-
ಜಿಮ್ನಿಯಲ್ಲಿ ಎಕ್ಸ್‌ಚೇಂಜ್, ಸ್ಕ್ರ್ಯಾಪೇಜ್ ಅಥವಾ ಕಾರ್ಪೊರೇಟ್ ಬೋನಸ್‌ನಂತಹ ಇತರ ಪ್ರಯೋಜನಗಳು ಲಭ್ಯವಿಲ್ಲ.
-
ಮಾರುತಿ ಜಿಮ್ನಿಯ ಬೆಲೆ 12.76 ಲಕ್ಷ ರೂ.ಗಳಿಂದ 14.81 ಲಕ್ಷ ರೂ.ಗಳವರೆಗೆ ಇದೆ.
ಇನ್ವಿಕ್ಟೋ
ಆಫರ್ |
ಮೊತ್ತ |
ಕ್ಯಾಶ್ ಡಿಸ್ಕೌಂಟ್ |
25,000 ರೂ.ವರೆಗೆ |
ಸ್ಕ್ರ್ಯಾಪೇಜ್ ಬೋನಸ್ |
1.15 ಲಕ್ಷ ರೂ.ವರೆಗೆ |
ಒಟ್ಟು ಡಿಸ್ಕೌಂಟ್‌ಗಳು |
1.40 ಲಕ್ಷ ರೂ.ವರೆಗೆ |
-
ಇನ್ವಿಕ್ಟೊದ ಆಲ್ಫಾ ವೇರಿಯೆಂಟ್ 25,000 ರೂ.ಗಳ ಕ್ಯಾಶ್ ಡಿಸ್ಕೌಂಟ್‌ನೊಂದಿಗೆ ಬರುತ್ತದೆ.
-
ಝೀಟಾ ವೇರಿಯೆಂಟ್ ಯಾವುದೇ ಕ್ಯಾಶ್ ಡಿಸ್ಕೌಂಟ್‌ಗಳನ್ನು ಪಡೆಯುವುದಿಲ್ಲ.
-
ಇನ್ವಿಕ್ಟೊ 1.15 ಲಕ್ಷ ರೂ.ಗಳ ಸ್ಕ್ರ್ಯಾಪೇಜ್ ಬೋನಸ್ ಅಥವಾ 1 ಲಕ್ಷ ರೂ.ಗಳ ವಿನಿಮಯ ಬೋನಸ್‌ನೊಂದಿಗೆ ಬರುತ್ತದೆ, ಅದರಲ್ಲಿ ಒಂದನ್ನು ಮಾತ್ರ ಬಳಸಿಕೊಳ್ಳಬಹುದು.
-
ಮಾರುತಿ ಇನ್ವಿಕ್ಟೊ ಕಾರಿನ ಬೆಲೆ 25.51 ಲಕ್ಷ ರೂಪಾಯಿಗಳಿಂದ 29.22 ಲಕ್ಷ ರೂಪಾಯಿಗಳವರೆಗೆ ಇದೆ.
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋ ರೂಂ ಆಗಿದೆ.
ರಾಜ್ಯ ಅಥವಾ ನಗರವನ್ನು ಅವಲಂಬಿಸಿ ರಿಯಾಯಿತಿಗಳು ಬದಲಾಗಬಹುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ನೆಕ್ಸಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.
ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್ ಮಾಡ್ಬೇಡಿ