ಮಾರುತಿ ಸುಜುಕಿ ಎರ್ಟಿಗಾ 1.5-ಲೀಟರ್ ಪೆಟ್ರೋಲ್ MT ಮೈಲೇಜ್: ನೈಜ vs ಅಧಿಕೃತ ಬೆಂಗಳೂರು
ಮಾರುತಿ ಎರ್ಟಿಗಾ 2015-2022 ಗಾಗಿ sonny ಮೂಲಕ ಜುಲೈ 17, 2019 11:43 am ರಂದು ಪ್ರಕಟಿಸಲಾಗಿದೆ
- 51 Views
- ಕಾಮೆಂಟ್ ಅನ್ನು ಬರೆಯಿರಿ
ಮೈಲ್ಡ್ ಹೈಬ್ರಿಡ್ ಪವರ್ಟ್ರೈನ್ ನಿಜವಾಗಿಯೂ ಎಷ್ಟು ದಕ್ಷವಾಗಿದೆ ನಿಜ ಉಪಯೋಗದಲ್ಲಿ? ನಾವು ತಿಳಿಯೋಣ
- ಎರ್ಟಿಗಾ ವನ್ನು ಮೂರು ಎಂಜಿನ್ ಆವೃತ್ತಿಯಲ್ಲಿ ಕೊಡಲಾಗಿದೆ: ಒಂದು ಪೆಟ್ರೋಲ್ ಮತ್ತು ಎರೆಡು ಡೀಸೆಲ್
- ಪೆಟ್ರೋಲ್ ಎಂಜಿನ್ ಅನ್ನು ಸುಜುಕಿ ಯ ಮೈಲ್ಡ್ ಹೈಬ್ರಿಡ್ ಟೆಕ್ ಜೊತೆ ಸಂಯೋಜಿಸಲಾಗಿದ್ದು ಅದನ್ನು 5- ಸ್ಪೀಡ್ ಮಾನ್ಯುಯಲ್ ಹಾಗು 4-ಸ್ಪೀಡ್ AT ಆಯ್ಕೆಯಲ್ಲಿ ಕೊಡಲಾಗಿದೆ
- ಮಾರುತಿ ಹೇಳುವಂತೆ ಎರ್ಟಿಗಾ ಪೆಟ್ರೋಲ್ MT ಯಲ್ಲಿ 19.34kmpl ಸಿಗುತ್ತದೆ.
- ನಮ್ಮ ನೈಜ ಪ್ರಪಂಚದ ಪರೀಕ್ಷೆಗಳಲ್ಲಿ ತೋರುವಂತೆ ಮಾರುತಿ ಎರ್ಟಿಗಾ ಮೈಲೇಜ್ 13.4kmpl ಇದೆ ಮತ್ತು ಹೈವೇ ಮೈಲೇಜ್ 16.03kmpl ಇದೆ.
ಎರೆಡನೆ ಪೀಳಿಗೆಯ ಮಾರುತಿ ಎರ್ಟಿಗಾ MPV ಯನ್ನು 2018 ಕೊನೆಯಬಾಗದಲ್ಲಿ ಪೆಟ್ರೋಲ್ ಎಂಜಿನ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಯಿತು. 1.5-ಲೀಟರ್ K15 ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಅನ್ನು 5- ಸ್ಪೀಡ್ ಮಾನ್ಯುಯಲ್ ಹಾಗು 4-ಸ್ಪೀಡ್ ಟಾರ್ಕ್ ಕಾನ್ವೆರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಜೊತೆಗೆ ಬರುತ್ತದೆ. ಇದನ್ನು ಎರೆಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿಯೂ ಸಹ ಕೊಡಲಾಗುತ್ತಿದೆ: ಒಂದು 1.3-ಲೀಟರ್ ಯೂನಿಟ್ ಜೊತೆಗೆ ಸ್ಮಾರ್ಟ್ ಹೈಬ್ರಿಡ್ ಟೆಕ್ ಮತ್ತು ಒಂದು ಹೊಸದಾಗಿ ಮಾಡಲ್ಪಟ್ಟ 1.5-ಲೀಟರ್ ಯೂನಿಟ್ ಕೂಡ. ಎರ್ಟಿಗಾ ದ ಬೆಲೆ ಸದ್ಯದಲ್ಲಿ Rs 7.45 ಲಕ್ಷ ದಿಂದ Rs 11.21 ಲಕ್ಷದವರೆಗೂ ಇದೆ(ಎಕ್ಸ್ ಶೋ ರೂಮ್ ದೆಹಲಿ )
ಆದರೆ, ಮಾರುತಿ ಯವರು ಹೇಳಿಕೆ ನೀಡಿರುವಂತೆ ಅವರು ಡೀಸೆಲ್ ಪವರ್ ಹೊಂದಿರುವ ಕಾರ್ ಗಳನ್ನು ಏಪ್ರಿಲ್ 2020 ವೇಳೆಗೆ ಸ್ಥಗಿಸಗೊಳಿಸಲಿದ್ದಾರೆ, ನಾವು ನಿಮಗೆ ಪೆಟ್ರೋಲ್ MT ಎರ್ಟಿಗಾ MPV ಅಧಿಕೃತ ಮೈಲೇಜ್ ಮತ್ತು ನೈಜವಾದ ಮೈಲೇಜ್ ಅಂಕಿ ಅಂಶಗಳ ವಿವರ ಕೊಡುತ್ತಿದ್ದೇವೆ. ಅಂಕಿ ಅಂಶಗಳು ಕೆಳಗಿನಂತಿವೆ.
Engine |
1462cc |
Power |
105PS |
Torque |
138Nm |
Transmission |
5-speed manual |
Claimed fuel efficiency |
19.34kmpl |
Tested fuel efficiency (City) |
13.40kmpl |
Tested fuel efficiency (Highway) |
16.03kmpl |
50% in city & 50% on highway |
25% in city & 75% on highway |
75% in city & 25% on highway |
14.59kmpl |
15.28kmpl |
13.97kmpl |
ಅಂಕಿ ಅಂಶಗಳು ತೋರಿಸುವಂತೆ ನೈಜ ಪ್ರಪಂಚದ ಪರೀಕ್ಷೆಗಳಲ್ಲಿ ಮೈಲೇಜ್ ಅಧಿಕೃತವಾದ ಮೈಲೇಜ್ ಗಿಂತಲೂ ಕಡಿಮೆ ದೊರೆಯುತ್ತದೆ ಸಿಟಿ ಹಾಗು ಹೈವೇ ಪರೀಕ್ಷೆಗಳಲ್ಲಿ. ಕೇವಲ ನಗರದಲ್ಲಿನ ಡ್ರೈವಿಂಗ್ ಪರಿಗಣಿಸಿದಾಗ, ಅದರಲ್ಲೂ ಎರ್ಟಿಗಾ ಪೆಟ್ರೋಲ್ MT ಯಲ್ಲಿ 5 kmpl ಕಡಿಮೆ ದೊರೆಯುತ್ತದೆ ಸೂಕ್ತವಾದ ವಾತಾವರಣಗಳಲ್ಲಿ ಪರೀಕ್ಷೆ ಮಾಡಿದಾಗಲೂ ಸಹ.
ನೀವು ಸಿಟಿ ಯಲ್ಲಿ ಹೆಚ್ಚು ಡ್ರೈವ್ ಮಾಡುವವರಾಗಿದ್ದರೆ ನೀವು ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎರ್ಟಿಗಾ ದಿಂದ 14kmpl ನಿರೀಕ್ಷಿಸಬಹುದು. ಅಷ್ಟರಲ್ಲಿ ನಿಮ್ಮ ಉಪಯೋಗ ಹೆಚ್ಚಾಗಿ ಹೈವೇ ಗಳಲ್ಲಿ ಇದ್ದರೆ ಮತ್ತಿ ಸಿಟಿ ಡ್ರೈವಿಂಗ್ ನಲ್ಲಿ ಕಡಿಮೆ ಇದ್ದಾರೆ ಮೈಲೇಜ್ ಸಂಖ್ಯೆಗಳು 15kmpl ಗಿಂತಲೂ ಹೆಚ್ಚು ಆಗಬಹುದು. ನಿಮ್ಮ ಸಂಚಲನೆ ಎರೆಡೂ ಬಗೆಗಳ ಒಟ್ಟಾರೆಯಂತಿದ್ದರೆ ಪೆಟ್ರೋಲ್ ಮಾನ್ಯುಯಲ್ ಎರ್ಟಿಗಾ ನಿಮಗೆ 14.59kmpl ವರೆಗೂ ಕೊಡುತ್ತದೆ.
ನಮ್ಮಲ್ಲಿ ರೋಡ್ ಟೆಸ್ಟ್ ಮಾಡುವ ಟೀಮ್ ನಯವಾಗಿ ಡ್ರೈವ್ ಮಾಡುತ್ತಿದ್ದರು ಮೈಲೇಜ್ ಪರೀಕ್ಷೆ ಮಾಡುತ್ತಿರುವಾಗ ಹಾಗಾಗಿ ನೀವು ಡ್ರೈವ್ ಮಾಡುವಾಗಿನ ಮೈಲೇಜ್ ಸ್ವಲ್ಪ ಅತ್ತ ಇತ್ತ ಬದಲಾಗಬಹುದು. ನೀವು ಎರೆಡನೆ ಪೀಳಿಗೆಯ1.5-ಲೀಟರ್ ಮೈಲ್ಡ್ ಹೈಬ್ರಿಡ್ ಪವರ್ ಟ್ರೈನ್ ಇರುವ ಮಾರುತಿ ಎರ್ಟಿಗಾ ಹೊಂದಿದ್ದರೆ, ನೀವು ಪಡೆದ ಮೈಲೇಜ್ ಅನ್ನು ನಮ್ಮ ಜೊತೆ ಹಂಚಿಕೊಳ್ಳಿ ಕೆಳಗಿನ ವಿಭಾಗದಲ್ಲಿ ಕಾಮೆಂಟ್ ಮಾಡುವುದರೊಂದಿಗೆ.
0 out of 0 found this helpful