• English
  • Login / Register

Maruti Suzuki eVX Electric SUV: ಭಾರತದಲ್ಲಿ ಪರೀಕ್ಷೆಯ ವೇಳೆ ಮತ್ತೊಮ್ಮೆ ಪ್ರತ್ಯಕ್ಷ

ಮಾರುತಿ ಇ vitara ಗಾಗಿ rohit ಮೂಲಕ ನವೆಂಬರ್ 20, 2023 07:15 am ರಂದು ಪ್ರಕಟಿಸಲಾಗಿದೆ

  • 62 Views
  • ಕಾಮೆಂಟ್‌ ಅನ್ನು ಬರೆಯಿರಿ

ಪರೀಕ್ಷಾರ್ಥ ವಾಹನವನ್ನು ಸಾಕಷ್ಟು ಮರೆಮಾಚಿದ್ದರೂ, ಇದು EV ಯ ಉದ್ದಳತೆ ಮತ್ತು ಕೆಲವೊಂದು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ.

Maruti Suzuki eVX spied

  • ಮಾರುತಿ ಸುಜುಕಿ ಸಂಸ್ಥೆಯು eVX ಅನ್ನು ಪರಿಕಲ್ಪನೆಯ ರೂಪದಲ್ಲಿ ಅಟೋ ಎಕ್ಸ್ಪೊ 2023 ರಲ್ಲಿ ಬಿಡುಗಡೆ ಮಾಡಿತ್ತು.
  • ಪರೀಕ್ಷಾರ್ಥ ವಾಹನವು 360 ಡಿಗ್ರಿ ಕ್ಯಾಮರಾ ವ್ಯವಸ್ಥೆ ಮತ್ತು ಅಂತರಾಷ್ಟ್ರೀಯ ಮಾದರಿಯಲ್ಲಿ ಕಂಡ ಅಲೋಯ್‌ ವೀಲ್‌ ಗಳನ್ನೇ ಹೊಂದಿತ್ತು.
  • ಇದರ ಕ್ಯಾಬಿನ್‌ ನಲ್ಲಿ ಸಂಪರ್ಕಿತ ಡಿಸ್ಪ್ಲೇಗಳು ಮತ್ತು 2 ಸ್ಪೋಕ್ ಸ್ಟೀಯರಿಂಗ್‌ ವೀಲ್‌ ಅನ್ನು ನೋಡಬಹುದು.
  • ಇದು 60kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿರಲಿದ್ದು, 550km ನಷ್ಟು ಶ್ರೇಣಿಯನ್ನು ಹೊಂದಿರಲಿದೆ.
  • ಭಾರತದಲ್ಲಿ ಇದು 2025ರ ಸುಮಾರಿಗೆ ಬಿಡುಗಡೆಯಾಗಲಿದ್ದು, ಬೆಲೆಯು ರೂ. 25 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದೆ.

 ಮಾರುತಿ ಸುಜುಕಿ eVX ಎಲೆಕ್ಟ್ರಿಕ್ SUV ಯು ಇತ್ತೀಚೆಗಷ್ಟೇ ಜಪಾನ್‌ ಮೊಬಿಲಿಟಿ ಶೋ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದೆ. ಜೂನ್‌ 2023ರಲ್ಲಿ ಅಂತರಾಷ್ಟ್ರೀಯ ತಾಣಗಳಲ್ಲಿ ಇದರ ಪರೀಕ್ಷೆಯು ಪ್ರಾರಂಭಗೊಂಡ ನಂತರ,‌ ಭಾರತದಲ್ಲೂ ಈ ಎಲೆಕ್ಟ್ರಿಕ್ SUV ಯ ಪರೀಕ್ಷಾರ್ಥ ಓಡಾಟವು ಪ್ರಾರಂಭಗೊಂಡಿದೆ. ಭಾರತದಲ್ಲಿ ಈ ಕಾರು ತಯಾರಕ ಸಂಸ್ಥೆಯ ಮೊದಲ ಸಂಪೂರ್ಣ ಎಲೆಕ್ಟ್ರಿಕ್‌ ವಾಹನ ಇದಾಗಿದ್ದು, ಇದರ ಬಿಡುಗಡೆಗಾಗಿ 2025ರ ತನಕ ಕಾಯಬೇಕು.

 

ಏನೆಲ್ಲ ಕಂಡುಬಂದಿದೆ?

ಸ್ಪೈ ಶಾಟ್‌ ಗಳಲ್ಲಿ, eVX ನ ಪರೀಕ್ಷಾರ್ಥ ವಾಹನವನ್ನು ಕಪ್ಪು ಬಣ್ಣದಲ್ಲಿ ಮರೆಮಾಚಿದ್ದರೂ, ಮೇಕ್‌ ಶಿಫ್ಟ್‌ ಟೇಲ್‌ ಗೇಟ್‌ ಗಳು ಇದರಲ್ಲಿ ಎದ್ದು ಕಾಣುತ್ತವೆ. ಉಳಿದಂತೆ ಇದರ ಹಿಂಭಾಗ ಮತ್ತು ಪಕ್ಕದ ಪ್ರೊಫೈಲ್‌ ಗಳಷ್ಟೇ ಕಾಣುತ್ತವೆ. ಹೊಸ ಸ್ಪೈ ಶಾಟ್‌ ಗಳು ಇದರ ಉದ್ದಳತೆಯ ಕುರಿತು ಸುಳಿವು ನೀಡುತ್ತಿದ್ದು ಇದು ಮಾರುತಿ ಗ್ರಾಂಡ್‌ ವಿಟಾರ ಕಾರಿನ ಅಳತೆಯನ್ನೇ ಹೋಲುವಂತೆ ಕಾಣುತ್ತಿದೆ.

Maruti Suzuki eVX 360-degree camera spied

 ಅಲ್ಲದೆ ಈ SUV ಯ ಮುಂಭಾಗದಲ್ಲಿ ಎಡ ಫೆಂಡರ್‌ ನಲ್ಲಿ ಚಾರ್ಜಿಂಗ್‌ ಪೋರ್ಟ್‌ ಅನ್ನು ಕಾಣಬಹುದು. ಈ ಪರೀಕ್ಷಾರ್ಥ ವಾಹನದಲ್ಲಿ 360 ಡಿಗ್ರಿ ಕ್ಯಾಮರಾ ವ್ಯವಸ್ಥೆಯೂ ಇದ್ದು (ಎಡ ORVM ಮೇಲಿರುವ ಕ್ಯಾಮರಾ ಈ ಕುರಿತು ಸುಳಿವು ನೀಡುತ್ತಿದೆ) ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಿಸಿದ ಮಾದರಿಯಲ್ಲಿ ಇರುವ ಅಲೋಯ್‌ ವೀಲ್‌ ಗಳೇ ಇದರಲ್ಲಿವೆ. ದೊರೆತಿರುವ ಚಿತ್ರಗಳಲ್ಲಿ ಇದರ ಫೇಶಿಯಾವು ಸರಿಯಾಗಿ ಕಾಣಿಸಿಕೊಳ್ಳದೆ ಇದ್ದರೂ, ಟ್ರಯಾಂಗುಲರ್‌ ಎಲಿಮೆಂಟ್‌ ಮತ್ತು ದೊಡ್ಡ ಗಾತ್ರದ ಬಂಪರ್‌ ಗಳ ಜೊತೆಗೆ LED ಹೆಡ್‌ ಲೈಟ್‌ ಗಳು ಮತ್ತುDRL ಗಳನ್ನು ಇದು ಹೊಂದಿರಲಿದೆ.

 

ಒಳಾಂಗಣ ಮತ್ತು ವೈಶಿಷ್ಟ್ಯಗಳು

Maruti Suzuki eVX concept interior

 ಸ್ಪೈ ಶಾಟ್‌ ಗಳು ಎಲೆಕ್ಟ್ರಿಕ್‌ SUV ಯ ಒಳಾಂಗಣದ ಕುರಿತು ಯಾವುದೇ ಮಾಹಿತಿಯನ್ನು ನೀಡದೆ ಇದ್ದರೂ, ಸುಜುಕಿ ಸಂಸ್ಥೆಯು ಈ ವಿಕಸಿತ ಆವೃತ್ತಿಯ ಕ್ಯಾಬಿನ್‌ ಅನ್ನು ಜಪಾನ್‌ ಅಟೋ ಶೋ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿತ್ತು. ಸಂಯೋಜಿತ ಡಿಸ್ಪ್ಲೇಗಳು ಇದರ ಪ್ರಮುಖ ಆಕರ್ಷಣೆ ಎನಿಸಿದ್ದು, ಇದರಲ್ಲಿ ಒಂದನ್ನು ಇನ್ಫೊಟೈನ್‌ ಮೆಂಟ್‌ ಗೆ ಮೀಸಲಿಟ್ಟರೆ ಇನ್ನೊಂದನ್ನು ಡಿಜಿಟಲ್‌ ಇನ್ಸ್‌ ಟ್ರುಮೆಂಟಲ್‌ ಕ್ಲಸ್ಟರ್‌ ಆಗಿ ರೂಪಿಸಲಾಗಿದೆ. ಈ ಸ್ಕ್ರೀನ್‌ ಗಳ ಜೊತೆಗೆ eVX ಕಾರಿನ ಒಳಾಂಗಣವು ಸಾಂಪ್ರದಾಯಿಕ AC ವೆಂಟ್‌ ಗಳನ್ನು ತೋರಿಸುವ ದೀರ್ಘ ಹಾಗೂ ಲಂಬಾಂತರ ಸ್ಲಾಟ್‌ ಗಳು, ನೊಗದಂತೆ ಕಾಣಿಸಿಕೊಳ್ಳುವ ವಿಶಿಷ್ಟ 2 ಸ್ಪೋಕ್‌ ಸ್ಟೀಯರಿಂಗ್‌ ವೀಲ್‌, ರೋಟರಿ ಡಯಲ್‌ ಅನ್ನು ಹೊಂದಿರುವ ಸೆಂಟ್ರಲ್‌ ಕನ್ಸೋಲ್‌ (ಬಹುಶಃ ಗೇರ್‌ ಆಯ್ಕೆಗಾಗಿ ಇರಬೇಕು) ಅನ್ನು ಹೊಂದಿದೆ.

 

ಇದರ ಎಲೆಕ್ಟ್ರಿಕ್‌ ಪವರ್‌ ಟ್ರೇನ್‌ ನ ವಿವರಗಳು

 ಸುಜುಕಿ ಸಂಸ್ಥೆಯು  eVX ನ ಎಲೆಕ್ಟ್ರಿಕ್‌ ಪವರ್‌ ಟ್ರೇನ್‌ ನ ಉತ್ಪಾದನಾ ಆವೃತ್ತಿಯ ಕುರಿತು ನಿರ್ದಿಷ್ಟ ಮಾಹಿತಿಯನ್ನು ನೀಡದೆ ಇದ್ದರೂ, ಈ EV ಯು 60kWh ಬ್ಯಾಟರಿ ಪ್ಯಾಕ್‌ ಜೊತೆಗೆ ಬರಲಿದೆ ಎಂದು ಸುಜುಕಿ ಸಂಸ್ಥೆಯು ಅಟೋ ಎಕ್ಸ್ಪೊ 2023 ರಲ್ಲಿ ತಿಳಿಸಿದೆ. ಈ ಬ್ಯಾಟರಿಯು 550km ನಷ್ಟು ಶ್ರೇಣಿಯನ್ನು ಒದಗಿಸಲಿದೆ. ಅಲ್ಲದೆ eVX ಕಾರು ಡ್ಯುವಲ್‌ ಮೋಟರ್‌ ಸೆಟಪ್‌ ಅನ್ನು ಹೊಂದಿರಲಿದ್ದು, ಆಲ್‌ ವೀಲ್‌ ಡ್ರೈವ್‌ ಫಂಕ್ಷನಾಲಿಟಿಗೆ ಅನುವು ಮಾಡಿ ಕೊಡಲಿದೆ.

ಇದನ್ನು ಸಹ ನೋಡಿರಿ: ನೀವು ಟಾಟಾ ಟಿಯಾಗೊ EV ಯನ್ನು 20 ಶೇಕಡಾಕ್ಕಿಂತಲೂ ಕಡಿಮೆ ಬ್ಯಾಟರಿಯೊಂದಿಗೆ ಒಂದು ವಾರದ ಕಾಲ ಪಾರ್ಕ್‌ ಮಾಡಿದರೆ ಏನಾಗುತ್ತದೆ ಎಂಬುದನ್ನು ಇಲ್ಲಿ ವೀಕ್ಷಿಸಿ

 

ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ

Maruti Suzuki eVX spied

 ಮಾರುತಿ ಸುಜುಕಿ eVX‌ ಕಾರನ್ನು 2025ರಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಭವವಿದ್ದು, ಬೆಲೆಯು ರೂ. 25 ಲಕ್ಷದಿಂದ ಪ್ರಾರಂಭಗೊಳ್ಳಲಿದೆ (ಎಕ್ಸ್-ಶೋರೂಂ). ಇದು ನೇರವಾಗಿ MG ZS EV ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ ಜೊತೆಗೆ ಸ್ಪರ್ಧಿಸಲಿದ್ದು, ಹೊಸ ಟಾಟಾ ನೆಕ್ಸನ್ EV ಮತ್ತು ಮಹೀಂದ್ರಾ XUV400 ಯ ಬದಲಿಗೆ ಪ್ರೀಮಿಯಂ ಆಯ್ಕೆ ಎನಿಸಲಿದೆ.

 ಚಿತ್ರದ ಮೂಲ

was this article helpful ?

Write your Comment on Maruti ಇ vitara

explore ಇನ್ನಷ್ಟು on ಮಾರುತಿ ಇ vitara

space Image

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ ಇ vitara
    ಮಾರುತಿ ಇ vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience