• English
    • Login / Register

    ಮಾರುತಿ ಸುಜುಕಿ S -ಕ್ರಾಸ್ ಪಡೆಯುತ್ತಿದೆ ಹೊಸ ಫೀಚರ್ ಗಳು: ಬೆಲೆಯನ್ನು ರೂ 54,000 ವರೆಗೂ ಹೆಚ್ಚಿಸಲಾಗಿದೆ.

    ಮಾರುತಿ ಎಸ್.ಕ್ರಾಸ್ 2017-2020 ಗಾಗಿ dinesh ಮೂಲಕ ಏಪ್ರಿಲ್ 22, 2019 12:09 pm ರಂದು ಪ್ರಕಟಿಸಲಾಗಿದೆ

    • 13 Views
    • ಕಾಮೆಂಟ್‌ ಅನ್ನು ಬರೆಯಿರಿ

    Maruti S- Cross

    ಕೆಲವು ವಾರಗಳ ಹಿಂದೆ ನಾವು ವರದಿಮಾಡಿದಂತೆ ಮಾರುತಿ ಯು ಕೆಲವು ಹೊಸ ಫೀಚರ್ ಗಳನ್ನು S -ಕ್ರಾಸ್ ನಲ್ಲಿ ಅಳವಡಿಸಲು ಚಿಂತಿಸುತ್ತಿದೆ ಎಂದು. ಮತ್ತು ಈಗ, ಕೊನೆಯದಾಗಿ ಇದನ್ನು ಹೊರತಂದಿದೆ ಕೂಡ. ಈ ಅಪ್ಡೇಟ್ ನೊಂದಿಗೆ S -ಕ್ರಾಸ್ ನಲ್ಲಿ ಕೆಲವು  ಫೀಚರ್ ಗಳಾದ ಸ್ಪೀಡ್ ಅಲರ್ಟ್ ಸಿಸ್ಟಮ್, ಸೀಟ್ ಬೆಲ್ಟ್ ರಿಮೈಂಡರ್ ಕೋ-ಪ್ಯಾಸೆಂಜರ್ ಗಾಗಿ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ ಗಳನ್ನೂ ಸ್ಟ್ಯಾಂಡರ್ಡ್ ಆಗಿ ಅಳವಡಿಸಿದೆ. ಇವೆಲ್ಲದರ ಜೊತೆಗೆ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS with EBD ಮತ್ತು ISOFIX ಚೈಲ್ಡ್ ಸೀಟ್ ಆಂಕರ್ ಗಳು, ಈಗಾಗಲೇ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ.

    Maruti S- Cross

    ಮಾರುತಿ ಯು S -ಕ್ರಾಸ್ ನ ಕೆಲವು ಫೀಚರ್ ಗಳನ್ನೂ ನವೀಕರಣಗೊಳಿಸಿದೆ. ಬೇಸ್ ಸ್ಪೆಕ್ ಸಿಗ್ಮ ಕೇವಲ ಪಾರ್ಕಿಂಗ್ ಸೆನ್ಸರ್ ಗಳನ್ನೂ ಪಡೆದರೆ, ಡೆಲ್ಟಾ ವೇರಿಯೆಂಟ್ ನಲ್ಲಿ ಬಹಳಷ್ಟು  ನವೀಕರಣಗಳನ್ನು ಕೊಡಲಾಗಿದೆ. ಇದರಲ್ಲಿ 16-ಇಂಚು ಅಲಾಯ್ ವೀಲ್ ಗಳು, ಸ್ಮಾರ್ಟ್ ಕೀ ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ನೊಂದಿಗೆ, ಆಟೋ AC , ವಿದ್ಯುತ್ನಿಂದ ಅಳವಡಿಸಬಹುದಾದ ORVM ಗಳು, ಟರ್ನ್ ಇಂಡಿಕೇಟರ್ ಗಳೊಂದಿಗೆ, ಕ್ರೂಸ್ ಕಂಟ್ರೋಲ್ ಮತ್ತು ರೇರ್ ಸ್ಕ್ರೀನ್ ವಾಷರ್, ಮತ್ತು ವೈಪರ್ ಡಿ  ಫಾಗರ್ ನೊಂದಿಗೆ. ಮೇಲ್ಪಂಕ್ತಿಯ ಟಾಪ್ ಸ್ಪೆಕ್ ಹೊಂದಿರುವ ವೇರಿಯೆಂಟ್ ಗಳಾದ ಝೀಟಾ ಮತ್ತು ಅಲ್ಫಾ ದಲ್ಲಿ ಬದಲಾವಣೆಗಳನ್ನು ಮಾಡಲಾಗಿಲ್ಲ.

    ನವೀಕರಣಗೊಂಡ ಫೀಚರ್ ಗಳೊಂದಿಗೆ, ಮಾರುತಿ S -ಕ್ರಾಸ್ ನ ಬೆಲೆಯನ್ನು ಸಹ ಹೆಚ್ಚಿಸಿದೆ. ಹೆಚ್ಚಿನ ಬೆಲೆಯಾ ವ್ಯಾಪ್ತಿ Rs 12,000 ವರೆಗೆ  Rs 54,000 ಇದೆ., ವೇರಿಯೆಂಟ್ ಗಳ  ಮೇಲೆ ನಿರ್ದಾರವಾಗುತ್ತದೆ ಕೂಡ. ಕೆಳಗಿನ ಪಟ್ಟಿಯಲ್ಲಿ S -ಕ್ರಾಸ್ ನ  ಹೊಸತರ ಹಾಗು ಹಳೆಯ ವೇರಿಯೆಂಟ್ ಗಳ  ಹೋಲಿಕೆಯನ್ನು ಕೊಡಲಾಗಿದೆ.

     

    Variant

    Old Price

    New Price

    Difference

    Sigma

    Rs 8.62 lakh

    Rs 8.85 lakh

    +23,000

    Delta

    Rs 9.43 lakh

    Rs 9.97 lakh

    +54,000

    Zeta

    Rs 9.99 lakh

    Rs 10.45 lakh

    +46,000

    Alpha

    Rs 11.33 lakh

    Rs 11.45 lakh

    +12,000

     

    ಸಿಗ್ಮ ದ  ಬೆಲೆ ಯು Rs 23,000. ವರೆಗೆ ಹೆಚ್ಚಿದೆ.ಹಲವು ಹೊಸ ಫೀಚರ್ ಗಳಾದ ಸ್ಪೀಡ್ ಅಲರ್ಟ್ ಸಿಸ್ಟಮ್, ಸೀಟ್ ಬೆಲ್ಟ್ ರಿಮೈಂಡರ್ ಕೋ-ಪ್ಯಾಸೆಂಜರ್ ಗಾಗಿ, ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ ಗಳು ಈಗ ಲಭ್ಯವಿದ್ದು, ಹೆಚ್ಚಿನ ಬೆಲೆಗೆ ಇವು ಪೂರಕವಾಗಿದೆ.

     Maruti S- Cross

    ಡೆಲ್ಟಾ ವೇರಿಯೆಂಟ್ ನಲ್ಲಿ ಬಹಳಷ್ಟು ಒಳ್ಳೆಯ ಫೀಚರ್ ಗಳನ್ನೂ  ಅಳವಡಿಸಲಾಗಿದೆ ಇದು ಅರ್ಧ ಲಕ್ಷ ಬೆಲೆಯನ್ನು ಸಮರ್ಥಿಸುತ್ತದೆ. ಇದು ಹಿಂದಿನ  ಝೀಟಾ ನಂತೆಯೇ  ಸೂಕ್ತ ವಾದ ಸಲಕರಣೆಗಳನ್ನು ಹೊಂದಿದೆ . ವಾಸ್ತವದಲ್ಲಿ S -ಕ್ರಾಸ್ ಡೆಲ್ಟಾ ಬೆಲೆಯು ಬಹುತೇಕ ಹಿಂದಿನ S -ಕ್ರಾಸ್  ಝೀಟಾ ನಂತೆಯೇ ಇದೆ. ಹಾಗಾಗಿ  S -ಕ್ರಾಸ್  ಝೀಟಾ ಕೊಳ್ಳಬೇಕೆಂದಿದ್ದ ಗ್ರಾಹಕರು ಈಗ ಡೆಲ್ಟಾ  ವನ್ನು ಕೊಳ್ಳಬಹುದು.

    Maruti S- Cross

     ಝೀಟಾ ಮತ್ತು ಅಲ್ಫಾ ವೇರಿಯೆಂಟ್ ಗಳು ಹೆಚ್ಚಿನ ಬೆಲೆಯಾದ Rs 46,000 and Rs 12,000 ಪಟ್ಟಿಯನ್ನು ಪಡೆಯುತ್ತದೆ, ಸ್ಪೀಡ್ ಅಲರ್ಟ್ ಸಿಸ್ಟಮ್ ಮತ್ತು  ಕೋ ಪ್ಯಾಸೆಂಜರ್ ಗಾಗಿ ಕೊಟ್ಟಿರುವ ಸೀಟ್ ಬೆಲ್ಟ್ ರಿಮೈಂಡರ್ ಗಾಗಿ ಹೆಚ್ಚಿನ ಬೆಲೆ ಕೊಡಬೇಕಾಗುತ್ತದೆ. ಝೀಟಾ ದ ಹೆಚ್ಚಿನ ಬೆಲೆ ಅಷ್ಟೇನು  ಸಮಂಜಸವಾಗಿಲ್ಲ. ಇದು ಅಲ್ಫಾ ದ್ಲಲೂ ಕೂಡ ಸ್ವಲ್ಪ ಹೆಚ್ಚು ಎಂದೇ ಎನಿಸುತ್ತದೆ.

    was this article helpful ?

    Write your Comment on Maruti ಎಸ್.ಕ್ರಾಸ್ 2017-2020

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience