ಮಾರುತಿ ಸುಜುಕಿ S ಪ್ರೆಸ್ಸೋ CNG ಯನ್ನು ಪರೀಕ್ಷೆ ಮಾಡುವಾಗ ಮೊದಲಬಾರಿಗೆ ನೋಡಲಾಗಿದೆ
ಮಾರುತಿ ಈ ಹಿಂದೆ ಘೋಷಿಸಿದಂತೆ ಅದರ ಎಲ್ಲ ಹ್ಯಾಚ್ ಬ್ಯಾಕ್ ಗಳು CNG ವೇರಿಯೆಂಟ್ ಗಳನ್ನು ಸಹ ಪಡೆಯಲಿದೆ
- ಮಾರುತಿ S-ಪ್ರೆಸ್ಸೋ CNG ಪರೀಕ್ಷಿಸಪಡುತ್ತಿದ್ದ ಮಾಡೆಲ್ ಅನ್ನು ಎಮಿಷನ್ ಪರೀಕ್ಷೆ ಸಲಕರಣೆಗಳೊಂದಿಗೆ ಕಾಣಲಾಗಿದೆ.
- S-ಪ್ರೆಸ್ಸೋ CNG ಯಲ್ಲಿ 1.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆ ಇದೆ
- ಮಾರುತಿ ಕೇವಲ 5- ಸ್ಪೀಡ್ ಮಾನ್ಯುಯಲ್ ಅನ್ನು S-ಪ್ರೆಸ್ಸೋ CNG ಯಲ್ಲಿ ಅಳವಡಿಸಲಿದೆ
- ಬೂಟ್ ಸ್ಪೇಸ್ ಈಗಿರುವ 270 ಲೀಟರ್ ಗಿಂತ ಕಡಿಮೆ ಆಗಲಿದೆ
- ಮಾರುತಿ S-ಪ್ರೆಸ್ಸೋ CNG ಹೆಚ್ಚಿನ ಪ್ರೀಮಿಯಂ ಆದ ರೂ 50,000 ಇಂದ ರೂ 60,000 ವರೆಗೂ ಪಡೆಯಲಿದೆ ಪೆಟ್ರೋಲ್ ವೇರಿಯೆಂಟ್ ಗೆ ಅನುಗುಣವಾಗಿ
- ಮಾರುತಿ S-ಪ್ರೆಸ್ಸೋ CNG ಅನ್ನು ಶೋ ರೂಮ್ ಗಳಿಗೆ 2020 ನ ಮೊದಲ ಅರ್ಧದಲ್ಲಿ ತರಲಿದೆ.
ಮಾರುತಿ ಇತ್ತೀಚಿಗೆ ಆರಂಭಿಕ ಹಂತದ ಕ್ರಾಸ್ ಹ್ಯಾಚ್ ಬ್ಯಾಕ್ , S-ಪ್ರೆಸ್ಸೋ ಅನ್ನು ಬಿಡುಗಡೆ ಮಾಡಿತು, ಅದು ಇಷ್ಟರಲ್ಲೇ CNG ಇಂಧನ ಸಹ ಪಡೆಯಲಿದೆ, ಇತ್ತೀಚಿನ ಬೇಹುಗಾರಿಕೆ ಚಿತ್ರಗಳಂತೆ. ಮರೆಮಾಚುವಿಕೆ ಇಲ್ಲದ ಮಾಡೆಲ್ ಅನ್ನು ಎಮಿಷನ್ ಪರೀಕ್ಷೆ ಸಲಕರಣೆಗಳೊಂದಿಗೆ ಕಾಣಲಾಯಿತು, ಅದು ಟೈಲ್ ಪೈಪ್ ಹಾಗು ಬೂಟ್ ನಲ್ಲಿರುವ CNG ಸಿಲಿಂಡರ್ ಗೆ ಸಂಪರ್ಕ ಹೊಂದಿದೆ.
ಮಾರುತಿ S-ಪ್ರೆಸ್ಸೋ BS6-ಕಂಪ್ಲೇಂಟ್ ಆಗಿರುವ 1.0-ಲೀಟರ್ , 3-ಸಿಲಿಂಡರ್ ಪೆಟ್ರೋಲ್ ಎಂಜಿನ್ 67PS ಪವರ್ ಹಾಗು 90Nm ಟಾರ್ಕ್ ಕೊಡುತ್ತದೆ. ಈ ಸಂಖ್ಯೆಗಳಲ್ಲಿ ಸ್ವಲ್ಪ ಕಡಿತ ಕಾಣಬಹುದು ಏಕೆಂದರೆ ಆಲ್ಟೊ K10 CNG ಇದೆ ಇಂಜಿನ್ ಹೊಂದಿದೆ , ಆದರೆ ಅದು BS4 ಆವೃತ್ತಿ ಆಗಿದ್ದು 60PS ಪವರ್ ಹಾಗು 78Nm ಟಾರ್ಕ್ ಕೊಡುತ್ತದೆ.
ಮಾರುತಿ ಆಲ್ಟೊ K10 ನ [ಪೆಟ್ರೋಲ್-CNG ವೇರಿಯೆಂಟ್ ಕೇವಲ 5-ಮಾನ್ಯುಯಲ್ ಒಂದಿಗೆ ಬರುತ್ತದೆ ಮತ್ತು ನಾವು ಅದೇ ಗೇರ್ ಬಾಕ್ಸ್ ಅನ್ನು S-ಪ್ರೆಸ್ಸೋ ದಲ್ಲೂ ಸಹ ಕಾಣಬಹುದಾಗಿದೆ, AMT ಇರುವುದಿಲ್ಲ. ಅಧಿಕೃತವಾಗಿ ಹೇಳಲಾದ ಮೈಲೇಜ್ ಈ 1.0-ಲೀಟರ್ ಪೆಟ್ರೋಲ್ ಯೂನಿಟ್ CNG ಒಂದಿಗೆ ಆಲ್ಟೊ ದಲ್ಲಿ 32.96km/kg ಕೊಡುತ್ತದೆ. ನೀವು S-ಪ್ರೆಸ್ಸೋ ಅದೇ ತರಹದ ಸಂಖ್ಯೆಗಳೊಂದಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.
S- ಪ್ರೆಸ್ಸೋ ನ ಬೂಟ್ ಅಳತೆ ಸ್ಟ್ಯಾಂಡರ್ಡ್ 270 ಲೀಟರ್ ನಿಂದ ಕಡಿಮೆ ಆಗುವ ಸಾಧ್ಯತೆ ಇದೆ CNG ಸಿಲಿಂಡರ್ ಅಳವಡಿಕೆಯೊಂದಿಗೆ. S-ಪ್ರೆಸ್ಸೋ ನ ಸಹೋದರ ಆದ ಆಲ್ಟೊ K10 ನಲ್ಲಿ 60-ಲೀಟರ್ ನೀರಿಗೆ ಸರಿಸಮನಾದ ವಿಶಾಲತೆ ಹೊಂದಿದೆ.
ಮಾರುತಿ S- ಪ್ರೆಸ್ಸೋ CNG ಬಿಡುಗಡೆ ಬಗ್ಗೆ ಯಾವ ಮಾತು ಹೇಳಲಾಗಿಲ್ಲ, ಆದರೆ ಅದನ್ನು ಶೋ ರೂಮ್ ಗಳಲ್ಲಿ 2020 ಪ್ರಾರಂಭದಲ್ಲಿ ನಿರೀಕ್ಷಿಸಬಹುದು. ಬೆಲೆ ಪಟ್ಟಿ ಸುಮಾರು ರೂ 50,000 ಇಂದ ರೂ 60,000 ವರೆಗೆ ಅಧಿಕವಾಗಬಹುದು ಎಂದು ನಿರೀಕ್ಷಿಸಬಹುದು ಅದರ ಕೇವಲ ಪೆಟ್ರೋಲ್ ವೇರಿಯೆಂಟ್ ಹ್ಯಾಚ್ ಬ್ಯಾಕ್ ಪರಿಗಣಿಸಿದಾಗ.