Mahindra Bolero Neo Plus ವರ್ಸಸ್ Mahindra Bolero Neo: ನಿಮಗಾಗಿ ತಂದಿದ್ದೇವೆ ಟಾಪ್ 3 ವ್ಯತ್ಯಾಸಗಳ ವಿವರ
ಮಹೀಂದ್ರ ಬೊಲೆರೋ ನಿಯ ೋ ಗಾಗಿ shreyash ಮೂಲಕ ಏಪ್ರಿಲ್ 18, 2024 05:10 pm ರಂದು ಪ್ರಕಟಿಸಲಾಗಿದೆ
- 33 Views
- ಕಾಮೆಂಟ್ ಅನ್ನು ಬರೆಯಿರಿ
ಎಕ್ಸ್‌ಟ್ರಾ ಸೀಟ್ ಗಳ ಜೊತೆಗೆ, ಬೊಲೆರೊ ನಿಯೋ ಪ್ಲಸ್ ದೊಡ್ಡ ಟಚ್‌ಸ್ಕ್ರೀನ್ ಮತ್ತು ದೊಡ್ಡ ಡೀಸೆಲ್ ಎಂಜಿನ್ ಅನ್ನು ಕೂಡ ನೀಡುತ್ತಿದೆ
ಮಹೀಂದ್ರ ಬೊಲೆರೊ ನಿಯೊದ 9 ಸೀಟರ್ ವೇರಿಯಂಟ್ ಆಗಿರುವ ಮಹೀಂದ್ರ ಬೊಲೆರೊ ನಿಯೊ ಪ್ಲಸ್ ಅನ್ನು ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಮಹೀಂದ್ರ ಬೊಲೆರೊ ನಿಯೊದ ಈ ವರ್ಷನ್ ಎರಡು ವೇರಿಯಂಟ್ ಗಳಲ್ಲಿ ಲಭ್ಯವಿದೆ: P4 ಮತ್ತು P10. ದೊಡ್ಡದಾದ ಸೈಜ್ ಮತ್ತು ಹೆಚ್ಚುವರಿ ಸೀಟ್ ಗಳ ಜೊತೆಗೆ, ಬೊಲೆರೊ ನಿಯೋ ಪ್ಲಸ್ ಅದರ ಸಣ್ಣ 7-ಸೀಟರ್ ಎಡಿಷನ್ ಗೆ ಹೋಲಿಸಿದರೆ ಫೀಚರ್ ಗಳು ಮತ್ತು ಎಂಜಿನ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಬನ್ನಿ, ಅವುಗಳ ವಿವರಗಳನ್ನು ನೋಡೋಣ:
ಡೈಮೆನ್ಷನ್ ಗಳು ಮತ್ತು ಸೀಟಿಂಗ್ ಡಿಸೈನ್
ಡೈಮೆನ್ಷನ್ ಗಳು |
ಮಹೀಂದ್ರ ಬೊಲೆರೊ ನಿಯೋ ಪ್ಲಸ್ |
ಮಹೀಂದ್ರ ಬೊಲೆರೊ ನಿಯೋ |
ಉದ್ದ |
4400 ಮಿ.ಮೀ |
3995 ಮಿ.ಮೀ |
ಅಗಲ |
1795 ಮಿ.ಮೀ |
1795 ಮಿ.ಮೀ |
ಎತ್ತರ |
1812 ಮಿ.ಮೀ |
1817 ಮಿ.ಮೀ |
ವೀಲ್ ಬೇಸ್ |
2680 ಮಿ.ಮೀ |
2680 ಮಿ.ಮೀ |
ಸೀಟ್ ಗಳ ಕಾಂಫಿಗರೇಷನ್ |
7-ಸೀಟರ್ |
9-ಸೀಟರ್ |
ಮಹೀಂದ್ರ ಬೊಲೆರೊ ನಿಯೊ ಪ್ಲಸ್ ಬೊಲೆರೊ ನಿಯೊಗಿಂತ 515 ಎಂಎಂ ಉದ್ದವಾಗಿದೆ, ಆದರೆ ಅಗಲ ಮತ್ತು ವೀಲ್‌ಬೇಸ್ ನಲ್ಲಿ ಯಾವುದೇ ಬದಲಾವಣೆಯಿಲ್ಲ. ಇದು ಉದ್ದವಾಗಿರುವುದರಿಂದ, ಬೊಲೆರೊ ನಿಯೊ ಪ್ಲಸ್ ಹೆಚ್ಚುವರಿ ಸೈಡ್-ಫೇಸಿಂಗ್ ಸೀಟ್‌ಗಳನ್ನು ಹೊಂದಿದ್ದು, ಹಾಗಾಗಿ ಇದು 9 ಸೀಟರ್ SUVಯಾಗಿದೆ. ಆದರೆ, ನಿಯೋ ಅದರ 9-ಸೀಟರ್ ವರ್ಷನ್ ಗಿಂತ ಸ್ವಲ್ಪ ಎತ್ತರವಾಗಿದೆ.
ಫೀಚರ್ ಗಳಲ್ಲಿ ಏನೇನು ಬದಲಾಗಿದೆ?


SUV ಗಳ ನಡುವಿನ ಫೀಚರ್ ಗಳಲ್ಲಿನ ಪ್ರಮುಖ ವ್ಯತ್ಯಾಸವೆಂದರೆ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಕ್ರೂಸ್ ಕಂಟ್ರೋಲ್. ಬೊಲೆರೊ ನಿಯೋ ಪ್ಲಸ್ ದೊಡ್ಡ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತದೆ ಆದರೆ ಕ್ರೂಸ್ ಕಂಟ್ರೋಲ್ ಇಲ್ಲಿ ಲಭ್ಯವಿಲ್ಲ. ಮತ್ತೊಂದೆಡೆ, ಬೊಲೆರೊ ನಿಯೋ ಕ್ರೂಸ್ ಕಂಟ್ರೋಲ್ ಜೊತೆಗೆ ಸಣ್ಣದಾದ 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ಪಡೆಯುತ್ತದೆ, ಇದು ಹೆದ್ದಾರಿಯಲ್ಲಿ ದೀರ್ಘಕಾಲ ಪ್ರಯಾಣ ಮಾಡುವವರಿಗೆ ಸೂಕ್ತವಾಗಿದೆ.
ಇದನ್ನು ಕೂಡ ಓದಿ: ಮಹೀಂದ್ರಾ XUV 3XO (XUV300 ಫೇಸ್‌ಲಿಫ್ಟ್) ಚಿತ್ರಗಳು ಮತ್ತೆ ಲೀಕ್ ಆಗಿವೆ, ಕನೆಕ್ಟೆಡ್ ಕಾರ್ ಟೆಕ್ ಪಡೆಯಲಿದೆ
ಎಂಜಿನ್ ಮತ್ತು ಟ್ರಾನ್ಸ್‌ಮಿಷನ್
ಬೊಲೆರೊ ನಿಯೋ ಪ್ಲಸ್ ತನ್ನ 7-ಸೀಟರ್ ವರ್ಷನ್ ಗೆ ಹೋಲಿಸಿದರೆ ದೊಡ್ಡ ಡೀಸೆಲ್ ಎಂಜಿನ್ ಹೊಂದಿದೆ. ಎರಡೂ SUVಗಳ ಎಂಜಿನ್ ಸ್ಪೆಸಿಫಿಕೇಷನ್ ಗಳನ್ನು ಕೆಳಗೆ ವಿವರಿಸಲಾಗಿದೆ:
ಸ್ಪೆಸಿಫಿಕೇಷನ್ |
ಬೊಲೆರೊ ನಿಯೋ ಪ್ಲಸ್ |
ಬೊಲೆರೊ ನಿಯೋ |
ಇಂಜಿನ್ |
2.2-ಲೀಟರ್ ಡೀಸೆಲ್ |
1.5-ಲೀಟರ್ ಡೀಸೆಲ್ |
ಪವರ್ |
120 ಪಿಎಸ್ |
100 ಪಿಎಸ್ |
ಟಾರ್ಕ್ |
280 ಎನ್‌ಎಮ್ |
260 ಎನ್‌ಎಮ್ |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT |
5-ಸ್ಪೀಡ್ MT |
9-ಸೀಟರ್ ಬೊಲೆರೊ ನಿಯೊ ಶಕ್ತಿಶಾಲಿಯಾದ ಡೀಸೆಲ್ ಎಂಜಿನ್ ಅನ್ನು ಹೊಂದಿದೆ ಮತ್ತು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಕೂಡ ಬರುತ್ತದೆ.
ಬೆಲೆ ಮತ್ತು ವೇರಿಯಂಟ್ ಗಳು
ಬೊಲೆರೊ ನಿಯೋ ಪ್ಲಸ್ |
ಬೊಲೆರೊ ನಿಯೋ |
ರೂ. 11.39 ಲಕ್ಷದಿಂದ ರೂ. 12.49 ಲಕ್ಷ |
ರೂ. 9.90 ಲಕ್ಷದಿಂದ ರೂ. 12.15 ಲಕ್ಷ |
ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿವೆ
ಬೊಲೆರೊ ನಿಯೋ ಪ್ಲಸ್ ಎರಡು ವೇರಿಯಂಟ್ ಗಳಲ್ಲಿ ಬರುತ್ತದೆ - P4 ಮತ್ತು P10 - ಮತ್ತು ಬೊಲೆರೊ ನಿಯೋ ನಾಲ್ಕು ವೇರಿಯಂಟ್ ಗಳಲ್ಲಿ ಲಭ್ಯವಿದೆ: N4, N8, N10, ಮತ್ತು N10 (O). ಮಹೀಂದ್ರ ಸ್ಕಾರ್ಪಿಯೊ N ಮತ್ತು ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್‌ಗೆ ಹೋಲಿಸಿದರೆ ಈ ಎರಡೂ SUVಗಳು ಕಡಿಮೆ ಬೆಲೆಯ ಪರ್ಯಾಯ ಆಯ್ಕೆಗಳಾಗಿವೆ.
ಇನ್ನಷ್ಟು ಓದಿ: ಮಹೀಂದ್ರ ಬೊಲೆರೊ ನಿಯೋ ಡೀಸೆಲ್