ಮಾರುತಿ ವಿತರ ಬ್ರೆಝ ಫೇಸ್ ಲಿಫ್ಟ್. ಅದು ಹೇಗೆ ವಿಭಿನ್ನವಾಗಿರುತ್ತದೆ?
ಮಾರುತಿ ವಿಟರಾ ಬ್ರೆಜ್ಜಾ 2016-2020 ಗಾಗಿ dhruv ಮೂಲಕ ನವೆಂಬರ್ 26, 2019 01:48 pm ರಂದು ಪ್ರಕಟಿಸಲಾಗಿದೆ
- 21 Views
- ಕ ಾಮೆಂಟ್ ಅನ್ನು ಬರೆಯಿರಿ
ಅದು ಕೇವಲ ಫೇಸ್ ಲಿಫ್ಟ್ ಆಗಿದ್ದು, ನವೀಕರಣಗೊಂಡ ವಿತರ ಬ್ರೆಝ ಬಹಳಷ್ಟು ಬದಲಾವಣೆಗಳನ್ನು ಹೊಂದಲಿದೆ ಈಗಿರುವ ಮಾಡೆಲ್ ಗೆ ಭಿನ್ನವಾಗಿ.
- ಫೇಸ್ ಲಿಫ್ಟ್ ಆಗಿರುವ ವಿತರ ಬ್ರೆಝ ಕೇವಲ ಪೆಟ್ರೋಲ್ ಮಾಡೆಲ್ ಆಗಿರುತ್ತದೆ
- ಅದು ಬಹುಶ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಬಳಸಬಹುದು ಸಿಯಾಜ್ ಮತ್ತು ಎರ್ಟಿಗಾ ಗಳಂತೆ
- ಹೊಸ ವಿನ್ಯಾಸಗಳನ್ನು ಬಂಪರ್ ಹಾಗು ಮುಂಬದಿ ಗ್ರಿಲ್ ಗೆ ಪಡೆಯಬಹುದು
- ಮಾರುತಿ LED ಹೆಡ್ ಲ್ಯಾಂಪ್ ಸೇರಿ ಬಹಳಷ್ಟು ಫೀಚರ್ ಗಳನ್ನು ಸೇರಿಸಬಹುದು ಎಂದು ನಿರೀಕ್ಷಿಸಬಹುದು
- ಬೆಲೆ ಪಟ್ಟಿ ಈಗಿರುವ ಮಾಡೆಲ್ ನಂತೆಯೇ ಉಳಿಯುವ ಸಾಧ್ಯತೆ ಇದೆ
- ವಿತರ ಬ್ರೆಝ ಬೇಸ್ ವೇರಿಯೆಂಟ್ ಅಗ್ಗವಾಗಬಹುದು ಫೇಸ್ ಲಿಫ್ಟ್ ಬಿಡುಗಡೆ ಆದ ನಂತರ
- ಅದನ್ನು ಡೀಸೆಂಬರ್ 2019 ಅಥವಾ 2020 ಆಟೋ ಎಕ್ಸ್ಪೋ ಮುಂಚೆ ಬಿಡುಗಡೆ ಮಾಡಬಹುದು
ಮಾರುತಿ ವಿಟಾರ ಬ್ರೆಝ ಬಹಳ ಕಾಲದಿಂದ ನವೀಕರಣಗೊಂಡಿರಲಿಲ್ಲ ಮತ್ತು ಅದು ಈಗ ಕಾಣಬರುತ್ತಿದೆ. ಫೀಚರ್ ಗಳ ಪಟ್ಟಿ ಪ್ರತಿಸ್ಪರ್ದಿಗಳಿಗೆ ಹೋಲಿಸಿದರೆ ಕಡಿಮೆ ಇದೆ ಮತ್ತು ಅದರ ವಿನ್ಯಾಸ ಹಳತಾಗುತ್ತಿದೆ. ಹಾಗಾಗಿ, ನಾವು ಯಾವ ಬದಲಾವಣೆಗಳನ್ನು ಫೇಸ್ ಲಿಫ್ಟ್ ನಲ್ಲಿ ನಿರೀಕ್ಷಿಸಬಹುದು?
ಪವರ್ ಟ್ರೈನ್
ಮಾರುತಿ ಸಾರ್ವಜನಿಕವಾಗಿ ಹೇಳಿಕೆ ನೀಡಿದಂತೆ ಅದು ಡೀಸೆಲ್ ಕಾರ್ ಗಳನ್ನು BS6 ಅವಧಿಯಲ್ಲಿ ಮಾರಾಟ ಮಾಡುವುದಿಲ್ಲ. ಹಾಗಾಗಿ ಡೀಸೆಲ್ ಕೇವಲ ಮಾಡೆಲ್ ಗಳ ಮೇಲೆ ಅನುಮಾನ ಮೂಡುವಂತೆ ಆಗಿದೆ, ಅದರಲ್ಲಿ ವಿಟಾರಾ ಬ್ರೆಝ ಸಹ ಸೇರಿದೆ. ಅದು ಸದ್ಯಕ್ಕೆ 1.3-ಲೀಟರ್ ಡೀಸೆಲ್ ಎಂಜಿನ್ (90PS/200Nm) ಹೊಂದಿದೆ ಅದು ಮಾರುತಿಯ ಇತರ ಮಾಡೆಲ್ ಗಳಲ್ಲೂ ಸಹ ಲಭ್ಯವಿದೆ ಟ್ರಾನ್ಸ್ಮಿಷನ್ ಆಯ್ಕೆ 5-ಸ್ಪೀಡ್ ಮಾನ್ಯುಯಲ್ ಹಾಗು ಒಂದು AMT.
ಫೇಸ್ ಲಿಫ್ಟ್ ಹೊರಬಂದಾಗ, ಇವುಗಳೆಲ್ಲ ಸ್ಥಗಿತಗೊಳ್ಳಬಹುದು. ಫೇಸ್ ಲಿಫ್ಟ್ ಆಗಿರುವ ವಿತರ ಬ್ರೆಝ ಪೆಟ್ರೋಲ್ ಎಂಜಿನ್ ನಿಂದ ಪವರ್ ಪಡೆಯಲಿದೆ. ಪ್ರಶ್ನೆಯಲ್ಲಿರುವ ಎಂಜಿನ್ 1.5- ಲೀಟರ್ ಪೆಟ್ರೋಲ್ ಮೋಟಾರ್ (105PS/138Nm) ಜೊತೆಗೆ ಮೈಲ್ಡ್ ಹೈಬ್ರಿಡ್ ಟೆಕ್ ಅನ್ನು ಸಿಯಾಜ್ ಮತ್ತು ಎರ್ಟಿಗಾ ಗಳಲ್ಲಿ ಕೊಡಲಾಗುತ್ತದೆ. ಮಾರುತಿ ಸಿಯಾಜ್ ನಿಂದ ಪಡೆಯಲಾದ 5- ಸ್ಪೀಡ್ ಮಾನ್ಯುಯಲ್ ಮತ್ತು 4-ಸ್ಪೀಡ್ ಟಾರ್ಕ್ ಕಾನ್ವೆರ್ಟರ್ ಟ್ರಾನ್ಸ್ಮಿಷನ್ ಆಯ್ಕೆ ಕೊಡುತ್ತದೆ.
ಡಿಸೈನ್
ವಿಟಾರಾ ಬ್ರೆಝ ಬೇಹುಗಾರಿಕೆ ಚಿತ್ರಗಳು ತೋರುವಂತೆ, ಒಟ್ಟಾರೆ ಕಾರ್ ನ ವಿನ್ಯಾಸ ಬದಲಾವಣೆ ಆಗುವುದಿಲ್ಲ. ಬದಲಾಗಿ, ಮಾರುತಿ ಸರಳವಾದ ಬದಲಾವಣೆಗಳನ್ನು ಈ SUV ನವೀಕರಣಕ್ಕಾಗಿ ಕೊಡಲಿದೆ. ನಮ್ಮ ನಿರೀಕ್ಷೆಯಂತೆ ಭಾರತದ ಕಾರ್ ಮೇಕರ್ ಮುಂಬದಿ ಹಾಗು ಹಿಂಬದಿ ಬಂಪರ್ ಗಳನ್ನು ಸ್ವಲ್ಪ ಬದಲಿಸಬಹುದು ಹಾಗು ಮುಂಬದಿ ಗ್ರಿಲ್ ಅನ್ನು ಸಹ ಬದಲಿಸಬಹುದು , ಮತ್ತು ಹೊಸ ಅಲಾಯ್ ವೀಲ್ ಗಳನ್ನು ಕೊಡಬಹುದು.
ಫೀಚರ್ ಗಳು
ವಿಟಾರಾ ಬ್ರೆಝ ವನ್ನು 2015 ನಲ್ಲಿ ಬಿಡುಗಡೆ ಮಾಡಿದಾಗ, ಅದರ ಫೀಚರ್ ಗಳ ಪಟ್ಟಿ ಪ್ರತಿಸ್ಪರ್ದಿಗಳಿಗೆ ಅನುಗುಣವಾಗಿತ್ತು. ಆದರೆ ಅದರ 2019 ಗಾಗಿ ಅಧಿಕ ಪ್ರತಿಸ್ಪರ್ದಿಗಳು ಲಭ್ಯವಿದೆ ಮತ್ತು ಅವುಗಳು ಇದೆ ಬೆಲೆ ಪಟ್ಟಿಯಲ್ಲಿ ಲಭ್ಯವಿದೆ.
ನಮ್ಮ ನಿರೀಕ್ಷೆಯಂತೆ ಮಾರುತಿ ಯವರು ಫೇಸ್ ಲಿಫ್ಟ್ ವಿಟಾರಾ ಬ್ರೆಝ ದಲ್ಲಿ ಸ್ಮಾರ್ಟ್ ಪ್ಲೇ ಸ್ಟುಡಿಯೋ ಇನ್ಫೋಟೈನ್ಮೆಂಟ್ ಸಿಸ್ಟಮ್ ಕೊಡಲಿದೆ. ನಾವು ಹೆಚ್ಚುವರಿ ಫೀಚರ್ ಗಳಾದ ಕ್ರೂಸ್ ಕಂಟ್ರೋಲ್,ಮತ್ತು LED ಹೆಡ್ ಲ್ಯಾಂಪ್ ಗಳನ್ನು ನಿರೀಕ್ಷಿಸಿದ್ದೇವೆ, ಅವುಗಳು ವಿತರ ಬ್ರೆಝ ಗಿಂತಲೂ ಕಡಿಮೆ ಬೆಲೆ ಪಟ್ಟಿ ಹೊಂದಿರುವ ಮಾರುತಿ ಮಾಡೆಲ್ ಗಳಲ್ಲಿ ಲಭ್ಯವಿದೆ. ಮಾರುತಿ ಯವರು ಸನ್ ರೂಫ್, ಅನ್ನು ಸಹ ಕೊಡಬಹುದು , ಅದರ ಬಹಳಷ್ಟು ಪ್ರತಿಸ್ಪರ್ದಿಗಳು ಅದನ್ನು ಒಂದು ಅಥವಾ ಇನ್ನೊಂದು ಬಗೆಯಲ್ಲಿ ಕೊಡುತ್ತಿರುವುದನ್ನು ಪರಿಗಣಿಸಿದಾಗ.
ಬೆಲೆ
ವಿತರ ಬ್ರೆಝ ತನ್ನ ಡೀಸೆಲ್ SUV ಇಂದ ಪೆಟ್ರೋಲ್ SUV ಗೆ ಹೋಗುತ್ತಿದ್ದು, ನಾವು ಹೆಚ್ಚು ಬೆಲೆ ಏರಿಕೆ ನಿರೀಕ್ಷಿಸುವುದಿಲ್ಲ. ಸದ್ಯಕ್ಕೆ ಲಭ್ಯವಿರುವ ವಿಟಾರಾ ಬ್ರೆಝ ಬೆಲೆ ಪಟ್ಟಿ ರೂ 7.62 ಲಕ್ಷ ಮತ್ತು ರೂ 10.64 ಲಕ್ಷ ಇರುತ್ತದೆ (ಎರೆಡೂ ಎಕ್ಸ್ ಶೋ ರೂಮ್ ಹೊಸ ದೆಹಲಿ ) ಮತ್ತು ನಮ್ಮ ನಿರೀಕ್ಷೆಯಂತೆ ಫೇಸ್ ಲಿಫ್ಟ್ ನ ಬೆಲೆ ಪಟ್ಟಿ ರೂ 7.5 ಲಕ್ಷ ದಿಂದ ರೂ 11 ಲಕ್ಷ ವರೆಗೆ ಇರಬಹುದು. ಮಾರುತಿ ವಿಟಾರಾ ಬ್ರೆಝ ಬೇಸ್ ವೇರಿಯೆಂಟ್ ಬೆಲೆಯನ್ನು ಕಡಿಮೆ ಮಾಡಬಹುದು ಏಕೆಂದರೆ ಅದು ಟಾಟಾ ನೆಕ್ಸಾನ್ ಒಂದಿಗೆ ಸ್ಪರ್ದಿಸಲು ಅನುಕೂಲವಾಗುತ್ತದೆ.
ಬಿಡುಗಡೆ ದಿನಾಂಕ
ಬಿಡುಗಡೆಗೊಳಿಸಬಹುದಾದ ದಿನಾಂಕ ಇನ್ನು ಲಭ್ಯವಿಲ್ಲದಿದ್ದರು ಸಹ, ಮಾರುತಿ ವಿಟಾರಾ ಬ್ರೆಝ ಫೇಸ್ ಲಿಫ್ಟ್ ಅನ್ನು ಒಂದು ತಿಂಗಳ ಒಳಗೆ ಬಿಡುಗಡೆ ಮಾಡಿದರೆ ಆಶ್ಚರ್ಯಪಡಬೇಕಾಗಿಲ್ಲ ಅದು ಡಿಸೆಂಬರ್ 2019. ಭಾರತದ ಕಾರ್ ಮೇಕರ್ ಈ ವರ್ಷದಲ್ಲಿ ಬಿಡುಗಡೆ ಮಾಡದಿದ್ದರೆ ನಮ್ಮ ನೀರಿಕ್ಷೆಯಂತೆ ಅದನ್ನು 2020 ಆಟೋ ಎಕ್ಸ್ಪೋ ವೇಳೆಗೆ ಬಿಡುಗಡೆ ಮಾಡಬಹುದು ಅದು ಫೆಬ್ರವರಿ ಪ್ರಾರಂಭದಲ್ಲಿ ಇರುತ್ತದೆ.
0 out of 0 found this helpful