• English
  • Login / Register

ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ ಆಗಿರುವ ಸ್ಕೋಡಾ ರೋಡಿಯಾಕ್‌ನ ಒಳಗಿದೆ ಹಾಸಿಗೆ, ವರ್ಕ್ ಡೆಸ್ಕ್ ಹಾಗೂ ಇನ್ನಷ್ಟು!

ಸ್ಕೋಡಾ ಎನ್ಯಾಕ್ iV ಗಾಗಿ shreyash ಮೂಲಕ ಜೂನ್ 30, 2023 02:33 pm ರಂದು ಪ್ರಕಟಿಸಲಾಗಿದೆ

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

ಸಾಕಷ್ಟು ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿಯಿಂದ ವಾಸಯೋಗ್ಯ ಕೆಲಸದ ಸ್ಥಳದವರೆಗೆ, ಸ್ಕೋಡಾ ವೊಕೇಶನಲ್ ಸ್ಕೂಲ್‌ನಿಂದ ಹೊಸ ಬಿಡುಗಡೆ

Skoda Roadiaq

2020 ರಲ್ಲಿ ಸಾಂಕ್ರಾಮಿಕ ರೋಗವು ಅಪ್ಪಳಿಸಿದ ಕಾರಣದಿಂದ ದೂರದಿಂದಲೇ ಕೆಲಸ ಮಾಡುವುದು ಒಂದು ಸವಾಲು ಮತ್ತು ಅವಕಾಶ ಎರಡೂ ಆಗಿ ಪರಿಣಮಿಸಿತ್ತು. ಆಫ್-ಗ್ರಿಡ್‌ಗೆ ಹೋಗದೆಯೇ ವ್ಯಕ್ತಿಯು ಸಾಹಸಮಯ ಜೀವನವನ್ನು ಬದುಕಬಹುದಾದರೆ ಹೇಗಿರುತ್ತದೆ? ಮ್ಲಾಡಾ ಬೋಲೆಸ್ಲಾವ್‌ನಲ್ಲಿರುವ ಸ್ಕೋಡಾ ವೊಕೇಶನಲ್ ಸ್ಕೂಲ್‌ನ 29 ವಿದ್ಯಾರ್ಥಿಗಳು ಕೆಲಸ ಮಾಡಿದ ರೀತಿ ಇದು. ಈ ಬ್ರ್ಯಾಂಡ್‌ನ ಪ್ರಥಮ ಸಂಪೂರ್ಣ ಎಲೆಕ್ಟ್ರಿಕ್ ಎಸ್‌ಯುವಿ ಸ್ಕೋಡಾ ಎನ್ಯಾಕ್ iV ಅನ್ನು ಆಧರಿಸಿದ ಒಂಭತ್ತನೇ ತರಗತಿಯ ವಿದ್ಯಾರ್ಥಿಯ ಪರಿಕಲ್ಪನೆಯ ವಾಹನವಾಗಿರುವ ಸ್ಕೋಡಾ ರೋಡಿಯಾಕ್ ಅನ್ನು ಭೇಟಿ ಮಾಡಿ. ಆಧುನಿಕ ದಿನದ ಉದ್ಯೋಗಿಯ ಅಗತ್ಯಗಳನ್ನು ಪೂರೈಸಲು ಮೊಬೈಲ್ ಕಚೇರಿಯಾಗಿ ಕಾರ್ಯನಿರ್ವಹಿಸಲು ಇದನ್ನು ರೂಪಿಸಲಾಗಿದೆ. ಈ ಯೋಜನೆಯನ್ನು ಆಗಸ್ಟ್ 2022ರಲ್ಲಿ ಪ್ರಾರಂಭಿಸಲಾಯಿತು ಮತ್ತು ಹಲವಾರು ಸ್ಕೋಡಾ ವಿಭಾಗಗಳು ಹಾಗೂ ಕ್ಯಾಂಪಿಂಗ್ ಸಲಕರಣೆಗಳ ತಜ್ಞರ ಸಹಾಯದಿಂದ ವಿದ್ಯಾರ್ಥಿಗಳಿಂದ ಒಟ್ಟು 2000 ಗಂಟೆಗಳ ಕೆಲಸವನ್ನು ಇದಕ್ಕಾಗಿ ಮೀಸಲಿರಿಸಲಾಗಿದೆ.

ಸ್ಕೋಡಾ ರೋಡಿಯಾಕ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಶೇಷ ವಿಷಯಗಳು ಇಲ್ಲಿವೆ.

 ಹೊರೆಗ ಮಾಡಲಾದ ಬದಲಾವಣೆಗಳು

Meet Skoda Roadiaq Concept:  Enyaq Electric SUV Fitted With A Bed, A Work Desk And More

ರೋಡಿಯಾಕ್‌ ಅನ್ನು ವಾಹನದಲ್ಲಿ ಸಾಗುತ್ತಾ ಕೆಲಸ ಮಾಡುವ ಅವಕಾಶದಿಂದ ಕ್ಯಾಂಪಿಂಗ್‌ ನಡೆಸಲು ಕೂಡಾ ಉಪಯೋಗಿಸಬಹುದಾಗಿದೆ. ಇದು ಹೊಸ ರೀತಿಯ ರೂಫ್ ರಚನೆ ಮತ್ತು ಟೈಲ್‌ಗೇಟ್ ಅನ್ನು ಪಡೆಯುತ್ತದೆ ಮತ್ತು ಇದು ವಾಹನಕ್ಕೆ ಟೆಂಟ್ ಅನ್ನು ಜೋಡಿಸಲು ಸಹಾಯ ಮಾಡುತ್ತದೆ. ಇದು ರೋಡಿಯಾಕ್‌ನ ವ್ಹೀಲ್‌ಬೇಸ್ ಅನ್ನು  2,770 mm ಗೆ, ಮತ್ತು ಎತ್ತರವನ್ನು 2,050 mm ಗೆ ಹೆಚ್ಚಿಸಿದೆ. ಇದು 21-ಇಂಚಿನ ಸೂಪರ್‌ನೋವಾ ಅಲಾಯ್ ವ್ಹೀಲ್‌ಗಳನ್ನು ಮತ್ತು 190ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಮುಂಭಾಗವು ಯಾವುದೇ ವಿನ್ಯಾಸ ಬದಲಾವಣೆಗಳನ್ನು ಹೊಂದಿಲ್ಲ ಆದರೆ ಈ ಪರಿಕಲ್ಪನೆಯು ಎಮರಾಲ್ಡ್ ಗ್ರೀನ್ ಮತ್ತು ಮೂನ್ ವೈಟ್‌ನ ತಂಪಾದ ಎರಡು ಟೋನ್-ಫಿನಿಶ್ ಅನ್ನು ಹೊಂದಿದೆ.

ಕೆಟ್ಟ ಹವಾಮಾನ ಪರಿಸ್ಥಿತಿಗಳಲ್ಲಿ ಈ ಟೆಂಟ್ ಆಶ್ರಯವನ್ನು ಒದಗಿಸುವುದು ಮಾತ್ರವಲ್ಲದೆ, ವಾಹನದ ಹಿಂಭಾಗದಲ್ಲಿ ಸ್ಥಾಪಿಸಲಾದ ಅಡುಗೆಮನೆಯನ್ನು ಬಳಸುವ ಅನುಕೂಲವನ್ನು ಹೆಚ್ಚಿಸುತ್ತದೆ. ಹಿಂಬದಿಯ ಎಡಬಾಗಿಲಿನಲ್ಲಿ ಪುನಃ ಕೆಲಸ ಮಾಡಲಾಗಿದ್ದು, ಬಾಗಿಲಿನ ಹಿಡಿಕೆಯನ್ನೂ ತೆಗೆದುಹಾಕಲಾಗಿದೆ. ಸಬ್‌ಬ್ಲೈಂಡ್‌ಗಳು ಕ್ಯಾಂಪರ್‌ನೊಳಗೆ ಹೆಚ್ಚಿನ ಗೌಪ್ಯತೆಯನ್ನು ನೀಡುತ್ತದೆ.

 ಇದನ್ನೂ ಓದಿ: 2024 ಸ್ಕೋಡಾ ಕಾಡಿಯಾಕ್ ಎಂಜಿನ್ ಮತ್ತು ಗೇರ್‌ಬಾಕ್ಸ್ ವಿವರಗಳು ಬಹಿರಂಗ

ಸಂಚಾರಿ ಲಿವಿಂಗ್ ರೂಮ್

Meet Skoda Roadiaq Concept:  Enyaq Electric SUV Fitted With A Bed, A Work Desk And More

 ಸ್ಕೋಡಾ ರೋಡಿಯಾಕ್‌ನ ಒಳಾಂಗಣವನ್ನು ಸುಲಭವಾಗಿ ಕಚೇರಿಯಾಗಿ ಮತ್ತು ನಂತರ ವಾಸಿಸುವ ಸ್ಥಳವಾಗಿ ಪರಿವರ್ತಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಕಾಕ್‌ಪಿಟ್ ಮಾತ್ರ ಈ ಪರಿಕಲ್ಪನೆಯನ್ನು ಆಧರಿಸಿದ ಮೂಲ ಕಾರನ್ನು ಇನ್ನೂ ಹೋಲುತ್ತದೆ, ಉಳಿದವು ಹಲವಾರು ಕಸ್ಟಮ್-ನಿರ್ಮಿತ ಫಿಟ್ಟಿಂಗ್‌ಗಳನ್ನು ಹೊಂದಿದೆ.

ರೋಡಿಯಾಕ್‌ನ ಹಿಂಭಾಗದಲ್ಲಿ, 27-ಇಂಚಿನ ಮಾನಿಟರ್ ಮತ್ತು ಮೌಸ್ ಹಾಗೂ ಕೀಬೋರ್ಡ್‌ನಂತಹ ಚಿಕ್ಕಚಿಕ್ಕ ಸಂಗತಿಯೊಂದಿಗೆ ಡಿಸ್ಕ್ ಅನ್ನು ಬಲಭಾಗದಲ್ಲಿ ಅಳವಡಿಸಲಾಗಿದೆ. ಇದು ಎಲ್ಲಾ ಸಾಧನಗಳಿಗೆ ಕ್ಯಾಬಿನೆಟ್‌ಗಳು ಮತ್ತು ಪವರ್ ಔಟ್‌ಲೆಟ್ ಅನ್ನು ಸಹ ಹೊಂದಿದೆ. ಶಾಶ್ವತ ಹೈ-ಸ್ಪೀಡ್ ಇಂಟರ್‌ನೆಟ್ ಸಂಪರ್ಕದ ಸಲುವಾಗಿ ಕಾರನ್ನು ಸ್ವತಃ ವೈರ್ ಅಪ್ ಮಾಡಲಾಗಿದೆ.

ಎಡಭಾಗದಲ್ಲಿ ಚಾಲಕನ ಸೀಟಿಗೆ ಅಂತರವನ್ನು ಕಾಯ್ದುಕೊಂಡು ಸೆಂಟ್ರಲ್ ಕನ್ಸೋಲ್‌ವರೆಗೆ ವಿಸ್ತರಿಸಿರುವ ಒಂದೇ ಹಾಸಿಗೆಯಿದೆ. ಮಾರ್ಪಡಿಸಿದ ರೂಫ್‌ಗೆ ಧನ್ಯವಾದಗಳನ್ನು ಅರ್ಪಿಸೋಣ ಏಕೆಂದರೆ ಈಗ ಮೂರು ಪಾರ್ಶ್ವದಲ್ಲಿಯೂ ಶೇಖರಣಾ ಸ್ಥಳಾವಕಾಶವಿದೆ ಮತ್ತು ಸಾಮಾನ್ಯ ಸನ್‌ರೂಫ್ ಅನ್ನು ಸಣ್ಣ ಬೆಳಕಿಂಡಿಯಿಂದ ಬದಲಾಯಿಸಲಾಗಿದ್ದು ಅದು ಕ್ಯಾಬಿನ್‌ಗೆ ಗಾಳಿಯಾಡುವಂತೆ ಮಾಡಲು ಸಹಾಯ ಮಾಡುತ್ತದೆ. ಹಾಸಿಗೆಯು ಅನೇಕ ಪವರ್ ಔಟ್‌ಲೆಟ್‌ಗಳನ್ನು ಸಹ ಸಂಯೋಜಿಸುತ್ತದೆ. ಇದು 12V ಸಾಕೆಟ್ ಮೂಲಕ ಕಾರ್ಯನಿರ್ವಹಿಸಬಹುದಾದ ಎಸ್‌ಪ್ರೆಸ್ಸೋ ಕಾಫಿ ಮಷಿನ್ ಅನ್ನು ಪಡೆಯುವುದು ಮಾತ್ರವಲ್ಲದೇ, ಶವರ್ ಅನ್ನು ಸಹ ಲಗತ್ತಿಸಲಾಗಿದೆ!

ಇದನ್ನೂ ಪರಿಶೀಲಿಸಿ: ನಾಲ್ಕು ಸಂಪೂರ್ಣ ಇವಿಗಳ ಜೊತೆಗೆ ಹೊಸ-ಜನರೇಷನ್ ಸ್ಕೋಡಾ ಸೂಪರ್ಬ್ ಮತ್ತು ಕೋಡಿಯಾಕ್‌ನ ಟೀಸರ್ ಬಿಡುಗಡೆ

 ಸುಸ್ಥಿರ ವಸ್ತುಗಳ ಬಳಕೆ

Meet Skoda Roadiaq Concept:  Enyaq Electric SUV Fitted With A Bed, A Work Desk And More

ಒಳಗೆ, ಸೀಟಿನ ಬಟ್ಟೆಯ ಫ್ಯಾಬಿಕ್, ಡೋರ್ ಟ್ರಿಮ್‌ಗಳು ಮತ್ತು ಇನ್‌ಸ್ಟ್ರೂಮೆಂಟ್ ಪ್ಯಾನಲ್‌ಗಾಗಿ ಬಳಸಲಾಗುವ ವಸ್ತುಗಳನ್ನು ಸಂಪೂರ್ಣವಾಗಿ ಮರುಬಳಕೆ ಮಾಡಲಾಗುತ್ತದೆ. ಇವೆಲ್ಲವನ್ನೂ ಒಂದೇ ರೀತಿಯ ವಸ್ತುಗಳಿಂದ ಅಥವಾ ಫೈಬರ್‌ನಿಂದ ಮಾಡಲಾಗಿದ್ದು, ಇದು ಮರುಬಳಕೆ ಪ್ರಕ್ರಿಯೆಯನ್ನು ಹೆಚ್ಚು ಸುಗಮಗೊಳಿಸುತ್ತದೆ. ರೋಡಿಯಾಕ್‌ನಲ್ಲಿ ಒದಗಿಸಲಾದ ಕುಶನ್ ಕವರ್‌ಗಳು ಮತ್ತು ಹೊದಿಕೆಯನ್ನು 3D ತಂತ್ರಜ್ಞಾನವನ್ನು ಬಳಸಿ ಹೆಣೆಯಲಾಗಿದ್ದು, ಇದು ಉತ್ಪನ್ನವನ್ನು ನೇರವಾಗಿ ಒಂದೇ ವಸ್ತುವಿನಿಂದ ನೇಯ್ಗೆ ಮಾಡುವ ತ್ಯಾಜ್ಯ-ಮುಕ್ತ ಪ್ರಕ್ರಿಯೆಯಾಗಿದೆ. 

 ಸೌರ ವಿದ್ಯುತ್ ಸಹಾಯ

Meet Skoda Roadiaq Concept:  Enyaq Electric SUV Fitted With A Bed, A Work Desk And More

 ರೋಡಿಯಾಕ್ ನಿಮ್ಮ ಜೀವನವನ್ನು ಸುಗಮಗೊಳಿಸುವ ಸಾಕಷ್ಟು ಸೌಕರ್ಯಗಳನ್ನು ಹೊಂದಿದೆ. ಮತ್ತು ನಿಮ್ಮ ಅಗತ್ಯಗಳಿಗೆ ಶಕ್ತಿ ಒದಗಿಸಲು ಸಾಕಷ್ಟು ವಿದ್ಯುತ್‌ನ ಅಗತ್ಯವಿರುತ್ತದೆ. ವಾಹನದ ಲಿವಿಂಗ್ ಕಂಪಾರ್ಟ್‌ಮೆಂಟ್‌ನಲ್ಲಿ ಲಭ್ಯವಿರುವ ಚಾರ್ಜ್‌ಗೆ ಪೂರಕವಾಗಿ ಸಹಾಯ ಮಾಡುವ ಸೌರಕೋಶವನ್ನು ಸಹ ಇದು ಪಡೆಯುತ್ತದೆ, ಮತ್ತು ಇದು ಅದರ ಚಾಲನಾ ಶ್ರೇಣಿಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.

 ಅಲ್ಲದ, ಬಾಹ್ಯ ವಿದ್ಯುತ್ ಸರಬರಾಜನ್ನು ವಾಹನದೊಳಗಿನ ಎಲ್ಲಾ ಉಪಕರಣಗಳಿಗೆ ಶಕ್ತಿ ತುಂಬಲು ಬಳಸಬಹುದು, ಇದರಿಂದಾಗಿ ಒಂದೇ ವಿದ್ಯುತ್ ಮೂಲದ ಮೇಲೆ ಸಂಪೂರ್ಣ ಅವಲಂಬನೆಯನ್ನು ನಿವಾರಿಸಬಹುದು.

 ಬ್ಯಾಟರಿ ಮತ್ತು ರೇಂಜ್

Meet Skoda Roadiaq Concept:  Enyaq Electric SUV Fitted With A Bed, A Work Desk And More

 ಸ್ಕೋಡಾ ರೋಡಿಯಾಕ್ ಎನ್ಯಾಕ್ 80x ಸ್ಪೋರ್ಟ್‌ಲೈನ್ ವೇರಿಯೆಂಟ್ ಅನ್ನು ಆಧರಿಸಿದೆ. ಇದು ತನ್ನ 82kWh ಬ್ಯಾಟರಿ ಪ್ಯಾಕ್‌ನಿಂದ 495km ವರೆಗೆ WLTP ಕ್ಲೈಮ್ ಮಾಡಲಾದ ರೇಂಜ್ ಅನ್ನು ಒದಗಿಸುತ್ತದೆ, ಮತ್ತು ಇದು ಡ್ಯುಯಲ್-ಮೋಟಾರ್-ಡ್ರೈವ್ ಸಿಸ್ಟಮ್ ಅನ್ನು ಸಹ ಪಡೆದಿದೆ. ಮುಂಭಾಗದ ಆ್ಯಕ್ಸಲ್ 108PS ಮತ್ತು 162Nm ಬಿಡುಗಡೆಗೊಳಿಸುವ ಸಿಂಕ್-ರಹಿತ ಎಲೆಕ್ಟ್ರಿಕ್ ಮೋಟಾರ್ ಅನ್ನು ಬಳಸಿದರೆ, ಸಿಂಕ್ ಆಗಿರುವ ಎಲೆಕ್ಟ್ರಿಕ್ ಮೋಟಾರ್ ಹಿಂಭಾಗದ ವ್ಹೀಲ್ ಚಾಲನೆಯಲ್ಲಿ 203PS ಮತ್ತು 310Nm ಬಿಡುಗಡೆ ಮಾಡುತ್ತದೆ. ಇದು 265PS ಮತ್ತು 425Nm ಸಂಯೋಜಿತ ಗರಿಷ್ಠ ಉತ್ಪಾದನೆಯನ್ನು ಹೊಂದಿದೆ.

 ಸ್ಕೋಡಾ ರೋಡಿಯಾಕ್ ಒಂದು ಆಸಕ್ತಿದಾಯಕ ಪರಿಕಲ್ಪನೆಯಾಗಿದ್ದು ಅದು ಎನ್ಯಾಕ್‌ನ ಹೊಸ ಆವೃತ್ತಿಗೆ ಕಾರಣವಾಗಬಹುದು, ಆದರೆ ಭವಿಷ್ಯದ ಎಲ್ಲಾ ಎಲೆಕ್ಟ್ರಿಕ್ ಕ್ಯಾಂಪರ್‌ಗಳಿಗಾಗಿ ಬಳಸಲಾಗುವ ವಿವಿಧ ಕಸ್ಟಮ್ ನಿರ್ಮಿತ ಅಂಶಗಳ ಸಾಮರ್ಥ್ಯವನ್ನು ತೋರಿಸುತ್ತದೆ. ಸ್ಕೋಡಾ ರೋಡಿಯಾಕ್ ಪರಿಕಲ್ಪನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Skoda ಎನ್ಯಾಕ್ iV

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience