2024 ಸ್ಕೋಡಾ ಕೋಡಿಯಾಕ್ ಇಂಜಿನ್ ಮತ್ತು ಗೇರ್‌ಬಾಕ್ಸ್ ವಿವರಗಳು ಬಹಿರಂಗ
ಸ್ಕೋಡಾ ಕೊಡಿಯಾಕ್ 2024 ಗಾಗಿ rohit ಮೂಲಕ ಜೂನ್ 27, 2023 02:33 pm ರಂದು ಪ್ರಕಟಿಸಲಾಗಿದೆ
- 15 Views
- ಕಾಮೆಂಟ್ ಅನ್ನು ಬರೆಯಿರಿ
ಎರಡನೇ-ಪೀಳಿಗೆ ಸ್ಕೋಡಾ ಕೋಡಿಯಾಕ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್‌ಗಳೆರಡರಲ್ಲಿ, ಅದೇ ರೀತಿ ಪ್ಲಗ್-ಇನ್ ಹೈಬ್ರಿಡ್‌ನಲ್ಲೂ ನೀಡಲಾಗುತ್ತದೆ
-
ಸ್ಕೋಡಾ ಶೀಘ್ರದಲ್ಲೇ ಎರಡನೇ-ಪೀಳಿಗೆ ಕೋಡಿಯಾಕ್ ಅನ್ನು ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ.
-
ಪವರ್‌ಟ್ರೇನ್ ಆಯ್ಕೆಗಳು 1.5-ಲೀಟರ್ ಟರ್ಬೋ-ಪೆಟ್ರೋಲ್ ಮತ್ತು 2-ಲೀಟರ್ ಡೀಸೆಲ್ ಇಂಜಿನ್‌ಗಳನ್ನು ಒಳಗೊಂಡಿದೆ.
-
ಫ್ರಂಟ್ ವ್ಹೀಲ್ ಡ್ರೈವ್ ಮತ್ತು AWD ಡ್ರೈವ್‌ಟ್ರೇನ್‌ಗಳೆರಡನ್ನೂ ನೀಡಲಾಗುತ್ತದೆ.
-
ಕ್ಲೈಮ್ ಮಾಡಲಾದ 100km ನ EV-ಮಾತ್ರ ರೇಂಜ್‌ನೊಂದಿಗೆ ಮೊದಲ ಬಾರಿಗೆ ಪ್ಲಗ್-ಇನ್ ಹೈಬ್ರಿಡ್ ಆಯ್ಕೆಯನ್ನು ಪಡೆಯುತ್ತದೆ.
-
ಪಟ್ಟಿಯಲ್ಲಿರುವ ಫೀಚರ್‌ಗಳು 12.9-ಇಂಚು ಟಚ್‌ಸ್ಕ್ರೀನ್ ಮತ್ತು 10.25-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಅನ್ನು ಒಳಗೊಂಡಿದೆ.
-
ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ; ಪ್ರಸ್ತುತ ಇರುವ ಮಾಡೆಲ್‌ಗಿಂತ ದುಬಾರಿಯಾಗಿರಲಿದೆ.
ಈ ಸ್ಕೋಡಾ ಕೋಡಿಯಾಕ್ ಅನ್ನು ಶೀಘ್ರದಲ್ಲೇ ಎರಡನೇ-ಪೀಳಿಗೆ ಅವತಾರ್‌ನಲ್ಲಿ ಜಾಗತಿಕವಾಗಿ ಪರಿಚಯಿಸಲಾಗುತ್ತಿದೆ ಮತ್ತು ಈ ಕಾರುತಯಾರಕ ಸಂಸ್ಥೆಯು ಈಗಾಗಲೇ ಈ SUVಯ ಪ್ರಮುಖ ವಿವರಗಳನ್ನು ಹೊರಹಾಕುತ್ತಿದ್ದಾರೆ. ಇತ್ತೀಚಿನ ಅಪ್‌ಡೇಟ್ ಹೊಸ ಕೋಡಿಯಾಕ್‌ನ ಪವರ್‌ಟ್ರೇನ್ ವಿವರಗಳನ್ನು ಮತ್ತು ಪಟ್ಟಿಯಲ್ಲಿರುವ ಫೀಚರ್‌ಗಳನ್ನು ಪ್ರಕಟಪಡಿಸಿದೆ. ಅವುಗಳು ಯಾವುವು ಎಂಬುದನ್ನು ಪರಿಶೀಲಿಸೋಣ:
ಪೆಟ್ರೋಲ್, PHEV ಮತ್ತು ಡೀಸೆಲ್ ಇಂಜಿನ್ ಆಯ್ಕೆಗಳು
ಸ್ಕೋಡಾ ಈ ಗ್ಲೋಬಲ್-ಸ್ಪೆಕ್ ಕೋಡಿಯಾಕ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಜೊತೆಗೆ ಪ್ಲಗ್-ಇನ್ ಹೈಬ್ರಿಡ್ ಆವೃತ್ತಿಯಲ್ಲೂ ನೀಡುತ್ತದೆ. ಕೆಲವು ಸ್ಪೆಸಿಫಿಕೇಶನ್‌ಗಳ ನೋಟ ಈ ಕೆಳಗಿನಂತಿನವೆ:
ಸ್ಪೆಸಿಫಿಕೇಶನ್‌ಗಳು |
1.5-ಲೀಟರ್-ಟರ್ಬೋ ಪೆಟ್ರೋಲ್ ಮೈಲ್ಡ್-ಹೈಬ್ರಿಡ್ |
2- ಲೀಟರ್ ಟರ್ಬೋ ಪೆಟ್ರೋಲ್ |
2- ಲೀಟರ್ ಡೀಸೆಲ್ |
2- ಲೀಟರ್ ಡೀಸೆಲ್ |
1.5- ಲೀಟರ್ ಟರ್ಬೋ-ಪೆಟ್ರೋಲ್ ಪ್ಲಗ್-ಇನ್ ಹೈಬ್ರಿಡ್ |
ಪವರ್ |
150PS |
204PS |
150PS |
193PS |
204PS |
ಟ್ರಾನ್ಸ್‌ಮಿಷನ್ |
7-ಸ್ಪೀಡ್ DSG |
7- ಸ್ಪೀಡ್ DSG |
7- ಸ್ಪೀಡ್ DSG |
7- ಸ್ಪೀಡ್ DSG |
6-speed DSG |
ಡ್ರೈವ್‌ಟ್ರೇನ್ |
FWD |
AWD |
FWD |
AWD |
FWD |
-
ಈ ಕೋಡಿಯಾಕ್ ಅನ್ನು ಮೊದಲ ಬಾರಿಗೆ ಪ್ಲಗ್-ಇನ್ ಹೈಬ್ರಿಡ್ ಆವೃತ್ತಿಯಲ್ಲಿ ನೀಡಲಾಗುತ್ತದೆ.
-
ಇದು ನೀವು ವಿದ್ಯುತ್ ಚಾಲಿತವಾಗಿ 100km ತನಕ ಓಡಿಸಬಹುದಾದ 25.7kWh ಬ್ಯಾಟರಿ ಪ್ಯಾಕ್ ಪಡೆಯುತ್ತದೆ ಮಾತ್ರವಲ್ಲದೇ 50kW ತನಕದ DC ಫಾಸ್ಟ್ ಚಾರ್ಜಿಂಗ್ ಅನ್ನೂ ಬೆಂಬಲಿಸುತ್ತದೆ.
-
ಸ್ಕೋಡಾ ಇಂಡಿಯಾ, ಡೀಸೆಲ್ ಪವರ್‌ಟ್ರೇನ್‌ಗಳನ್ನು ತ್ಯಜಿಸಲು ನಿರ್ಧರಿಸಿದ ನಂತರ ಅದನ್ನು ಎರಡನೇ-ಪೀಳಿಗೆ ಇಂಡಿಯಾ-ಸ್ಪೆಕ್ ಕೋಡಿಯಾಕ್‌ನಲ್ಲಿ ನಿರೀಕ್ಷಿಸಬೇಡಿ.
ಡಿಸೈನ್‌ನ ಸಂಕ್ಷಿಪ್ತ ಅವಲೋಕನ
ಸ್ಕೋಡಾ ಈ ಎರಡನೇ-ಪೀಳಿಗೆ ಕೋಡಿಯಾಕ್‌ನ ಸಂಪೂರ್ಣವಾಗಿ ಮುಚ್ಚಲ್ಪಟ್ಟ ಅನೇಕ ಚಿತ್ರಗಳನ್ನು ಹಂಚಿಕೊಂಡಿದೆ. ಈ ಹೊಸ ಮಾಡೆಲ್‌ನ ವಿನ್ಯಾಸವು ಸಂಪೂರ್ಣವಾಗಿ ನವೀಕರಣಗೊಂಡಿದೆ ಎನ್ನುವುದಕ್ಕಿಂತ ಹೆಚ್ಚು ವಿಕಸನಗೊಂಡಿದೆ ಎಂದು ಹೇಳಬಹುದು. ಈ SUV ಅದೇ ಚಿಟ್ಟೆಯಾಕಾರದ ಗ್ರಿಲ್ (ಟ್ಯಾಡ್ ತುಸು ದೊಡ್ಡದಿದ್ದರೂ), ಸಂಯೋಜಿತ LED DRLಗಳೊಂದಿಗೆ ಸುತ್ತುವರಿದ LED ಹೆಡ್‌ಲೈಟ್‌ಗಳು, ಮರುವಿನ್ಯಾಸಗೊಳಿಸಿದ ಮುಂಭಾಗದ ಬಂಪರ್ ಮತ್ತು ಮಧ್ಯದಲ್ಲಿ ಮೌಂಟ್ ಮಾಡಲಾದ ADAS ಅನ್ನು ಉಳಿಸಿಕೊಂಡಿದೆ
ಪ್ರೊಫೈಲ್‌ನಲ್ಲಿ, ಈ SUVಯು ಉದ್ದನೆಯ ವ್ಹೀಲ್‌ಬೇಸ್ ಮತ್ತು ಹೊಸ ಅಲಾಯ್ ವ್ಹೀಲ್‌ಗಳನ್ನು ಹೊರತುಪಡಿಸಿದರೆ, ಉಳಿದಂತೆ ಪ್ರಸ್ತುತ ಇರುವ ಮಾಡೆಲ್‌ನಂತೆಯೇ ಕಾಣುತ್ತದೆ. ಹಿಂಭಾಗದಲ್ಲಿನ ವಿಶೇಷತೆಯೆಂದರೆ, ಚೂಪಾದ LED ಟೇಲ್‌ಲೈಟ್‌ಗಳು ಮತ್ತು ರೇಕ್ ವಿಂಡ್‌ಶೀಲ್ಡ್.
ಇದನ್ನೂ ಓದಿ: ಪ್ರತಿ ವರ್ಷ ಹೆಚ್ಚು ಹೆಚ್ಚು ಟೋಲ್‌ಗಳನ್ನು ಪಾವತಿಸಲು ಸಿದ್ಧರಾಗಿರಿ
ಇದರ ಆಯಾಮಗಳ ನೋಟ ಇಲ್ಲಿದೆ:
ಆಯಾಮಗಳು |
2024 ಸ್ಕೋಡಾ ಕೋಡಿಯಾಕ್ |
ಉದ್ದ |
4758mm |
ಅಗಲ |
1864mm |
ಎತ್ತರ |
1657mm |
ವ್ಹೀಲ್‌ಬೇಸ್ |
2791mm |
ಈ SUVಯು ಪ್ರಸ್ತುತ ಇರುವ ಮಾಡೆಲ್‌ಗಿಂತ 61mm ಉದ್ದವಿದ್ದು 910 ಲೀಟರ್ ತನಕದ ಲಗೇಜ್ ಸಾಮರ್ಥ್ಯವನ್ನು ಹೊಂದಿದೆ (ಆಯ್ಕೆ ಮಾಡಿದ ವೇರಿಯೆಂಟ್ ಆಧರಿಸಿ). ಇದು 5- ಮತ್ತು 7-ಸೀಟರ್ ಲೇಔಟ್‌ಗಳೆರಡರಲ್ಲೂ ಲಭ್ಯವಿದೆ.
ಏನೇನು ತಂತ್ರಜ್ಞಾನಗಳನ್ನು ಪಡೆದಿದೆ?
ಸ್ಕೋಡಾ ಈ ಹೊಸ ಕೋಡಿಯಾಕ್‌ನ ಸಂಪೂರ್ಣ ಫೀಚರ್‌ಗಳ ಪಟ್ಟಿಯನ್ನು ಪ್ರಕಟಪಡಿಸದಿದ್ದರೂ, ಕೆಲವು ಪ್ರಮುಖ ಸಾಧನಗಳ ವಿವರಗಳನ್ನು ಹಂಚಿಕೊಂಡಿದೆ. ಇದು 12.9 ಇಂಚು ಅಳತೆಯ ಟಚ್‌ಸ್ಕ್ರೀನ್ ಯೂನಿಟ್, 10.25-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಐಚ್ಛಿಕ ಹೆಡ್ಸ್-ಅಪ್ ಡಿಸ್‌ಪ್ಲೇ, ಮತ್ತು ರಿಮೋಟ್ ಪಾರ್ಕಿಂಗ್ ಅಸಿಸ್ಟ್ ಅನ್ನು ಒಳಗೊಂಡಿದೆ. ಹೊಸದಾಗಿ ಪರಿಚಯಿಸಲಾದ ಫೀಚರ್‌ಗಳೆಂದರೆ, ಎರಡನೇ ಸಾಲಿನಲ್ಲಿ 15W ನಲ್ಲಿ ಎರಡು ಸ್ಮಾರ್ಟ್‌ಫೋನ್ ಅನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದಾದ ತಂಪಾಗುವ, ಡ್ಯುಯಲ್ ಫೋನ್ ಬಾಕ್ಸ್ ಇರುತ್ತದೆ. ಅಲ್ಲದೇ ಇದು ಟಚ್‌ಸ್ಕ್ರೀನ್ ಡಿಸ್‌ಪ್ಲೇಗಳಿಗಾಗಿ ಕ್ಲೀನರ್ ಅನ್ನು ಹೊಂದಿರುತ್ತದೆ, ಹಾಗೆಯೇ ಅಂಬ್ರೆಲ್ಲಾ ಮತ್ತು ಐಸ್-ಸ್ಕ್ರೇಪರ್ ಅನ್ನು ಈಗ ಸುಸ್ಥಿರ ವಸ್ತುಗಳಿಂದ ಮಾಡಲಾಗಿದೆ.
ಇದನ್ನೂ ಓದಿ: 2023ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿರುವ 10 ಕಾರುಗಳ ವಿವರಗಳು
ಭಾರತದಲ್ಲಿ ಬಿಡುಗಡೆಯ ವಿವರಗಳು
ಸ್ಕೋಡಾ ಈ ಎರಡನೇ-ಪೀಳಿಗೆ ಕೋಡಿಯಾಕ್ ಅನ್ನು ನಮ್ಮ ದೇಶಕ್ಕೆ ಮುಂದಿನ ವರ್ಷದಲ್ಲಿ, ಪ್ರಸ್ತುತ ಇರುವ ಮಾಡೆಲ್‌ಗಿಂತ ಗಮನಾರ್ಹ ಪ್ರೀಮಿಯಂನಲ್ಲಿ ತರಬಹುದು(ರೂ 37.99 ಲಕ್ಷ ಮತ್ತು ರೂ 41.39 ಲಕ್ಷದ ನಡುವೆ ಬೆಲೆ ನಿಗದಿಪಡಿಸಲಾಗಿದೆ, ಎಕ್ಸ್ ಶೋರೂಂ ದೆಹಲಿ). ಈ ಹೊಸ ಸ್ಕೋಡಾ ಕೋಡಿಯಾಕ್ MG ಗ್ಲಾಸ್ಟರ್, ಜೀಪ್ ಮೆರಿಡಿಯನ್ ಮತ್ತು ಟೊಯೋಟಾ ಫಾರ್ಚೂನರ್‌ನೊಂದಿಗೆ ತನ್ನ ಸ್ಪರ್ಧೆಯನ್ನು ಮುಂದುವರಿಸಲಿದೆ.
ಇನ್ನಷ್ಟು ಓದಿ : ಸ್ಕೋಡಾ ಕೋಡಿಯಾಕ್ ಆಟೋಮ್ಯಾಟಿಕ್