ಹೊಸ ತಲೆಮಾರಿನ ಸೂಪರ್ಬ್ ಮತ್ತು ಕಾಡಿಯಾಕ್ ಹಾಗೂ 4 ಹೊಚ್ಚ ಹೊಸ ಇವಿಗಳ ಟೀಸರ್ ಬಿಡುಗಡೆಗೊಳಿಸಿದ ಸ್ಕೋಡಾ
ಸ್ಕೋಡಾ enyaq ಗಾಗಿ ansh ಮೂಲಕ ಮೇ 03, 2023 10:52 pm ರಂದು ಪ್ರಕಟಿಸಲಾಗಿದೆ
- 23 Views
- ಕಾಮೆಂಟ್ ಅನ್ನು ಬರೆಯಿರಿ
ಈ ಎಲ್ಲಾ ಮಾಡೆಲ್‌ಗಳು 2026 ರವರೆಗೆ ಸ್ಕೋಡಾದ ಜಾಗತಿಕ ಮಾರ್ಗಸೂಚಿಯ ಭಾಗವಾಗಿದೆ
- ಸ್ಕೋಡಾ ಮೊದಲ ಬಾರಿಗೆ ಹೊಸ-ತಲೆಮಾರಿನ ಸೂಪರ್ಬ್ ಮತ್ತು ಕಾಡಿಯಾಕ್‌ನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.
- ಈ ಎರಡೂ ಮಾಡೆಲ್‌ಗಳು ಅಧಿಕೃತ ಬಿಡುಗಡೆಯು 2023 ರ ದ್ವಿತೀಯಾರ್ಧದಲ್ಲಿ ಎಂದು ನಿಗದಿಪಡಿಸಲಾಗಿದೆ.
- ಈ ಎರಡೂ ಸಂಪೂರ್ಣ-ನಿರ್ಮಿತ ಮಾಡೆಲ್‌ಗಳಾಗಿ 2024 ರಲ್ಲಿ ಭಾರತಕ್ಕೆ ಆಮದಾಗುವ ಸಾಧ್ಯತೆಯಿದೆ.
- ಕಾರು ತಯಾರಕರು ವಿವಿಧ ವಿಭಾಗಗಳಲ್ಲಿ ಮುಂಬರುವ ನಾಲ್ಕು ಇವಿಗಳನ್ನು ಸಹ ಬಹಿರಂಗಪಡಿಸಿದ್ದಾರೆ.
- ಈ ಎಲ್ಲಾ ಇವಿಗಳು 2026 ರಲ್ಲಿ ಬಿಡುಗಡೆಯಾಗಲಿದ್ದು, ಇದು ಕರೋಕ್‌ನ ಇವಿಗೆ ಬದಲಿಯಾಗಿ ಪ್ರಾರಂಭವಾಗಲಿದೆ.
ನಾವು ಇತ್ತೀಚೆಗೆ ಭಾರತೀಯ ಲೈನ್ಅಪ್‌ನಿಂದ ಸ್ಕೋಡಾ ಸೂಪರ್ಬ್ ಅನ್ನು ಕಳೆದುಕೊಂಡಿದ್ದರೆ, ಇದರ ಮುಂಬರುವ ತಲೆಮಾರಿನ ನವೀಕರಣವನ್ನು 2026 ರವರೆಗೆ ಝೆಕ್ ಕಾರುತಯಾರಕರ ಮಾರ್ಗಸೂಚಿಯ ಆಧಾರದ ಮೇಲೆ ಅಧಿಕೃತವಾಗಿ ಟೀಸರ್ ಬಿಡುಗಡೆಗೊಳಿಸಲಾಗಿದೆ. 2026ರ ಅಂತ್ಯದಲ್ಲಿ ಬಿಡುಗಡೆಯಾಗಲಿರುವ ಇವಿಗಳ ಹೊಸ ಮಾಡೆಲ್‌ಗಳ ಜೊತೆಗೆ ಹೊಸ ತಲೆಮಾರಿನ ಕೊಡಿಯಾಕ್‌ನ ಮೊದಲ ನೋಟವನ್ನು ಸಹ ಪಡೆದುಕೊಂಡಿದ್ದೇವೆ.
ಹೊಸ ಸೂಪರ್ಬ್ ಮತ್ತು ಕೊಡಿಯಾಕ್
ಈ ನವೀಕರಿಸಿದ ಎರಡೂ ಸ್ಕೋಡಾ ಫ್ಲ್ಯಾಗ್‌ಶಿಪ್ ಮಾಡೆಲ್‌ಗಳ ಬಗ್ಗೆ ಟೀಸರ್‌ಗಳು ಹೆಚ್ಚಿನದನ್ನು ತಿಳಿಸುವುದಿಲ್ಲ. ಈ ಮಾಡೆಲ್‌ಗಳು ಎಲ್‌ಇಡಿ ಹೆಡ್‌ಲೈಟ್‌ಗಳ ಸ್ಲೀಕರ್ ಸೆಟ್ ಮತ್ತು ಸೂಕ್ಷ್ಮವಾದ ಎಕ್ಸ್‌ಟೀರಿಯರ್ ಬದಲಾವಣೆಯ ಭಾಗವಾಗಿ ಅದೇ ರೀತಿಯಾದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಹೊಂದಿವೆ. ಕಾರು ತಯಾರಕರು ಎರಡೂ ಮಾಡೆಲ್‌ಗಳ ಪವರ್‌ಟ್ರೇನ್ ಆಯ್ಕೆಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದು, ಸ್ಕೋಡಾ ಅವುಗಳನ್ನು ಪೆಟ್ರೋಲ್, ಡಿಸೇಲ್, ಮೈಲ್ಡ್ ಮತ್ತು ಪ್ಲಗ್-ಇನ್ ಹೈಬ್ರಿಡ್ ಆವೃತ್ತಿಗಳಲ್ಲಿ ನೀಡುತ್ತಿದೆ.
ಹೊಸ ತಲೆಮಾರಿನ ಮಾಡೆಲ್‌ಗಳಿಗೆ ಹೆಚ್ಚಿನ ಬದಲಾವಣೆಗಳು ಇಂಟೀರಿಯರ್‌ನಲ್ಲಿರುತ್ತದೆ ಎಂಬುದನ್ನು ಸ್ಕೋಡಾ ಬಹಿರಂಗಪಡಿಸಿದೆ. ಆದ್ದರಿಂದ ಅವು ಹೆಚ್ಚು ಪ್ರೀಮಿಯಂ ಕ್ಯಾಬಿನ್ ಹೊಂದಿರುತ್ತವೆ ಎಂಬುದನ್ನು ನಾವು ನಿರೀಕ್ಷಿಸಬಹುದು. ಅವು ಹೆಚ್ಚು ಫೀಚರ್-ಭರಿತವಾಗಿರುತ್ತದೆ ಮತ್ತು ತಂತ್ರಜ್ಞಾನದಿಂದ ತುಂಬಿರುತ್ತದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ.
ಇದನ್ನೂ ಓದಿ: ಹೊಸ ವಿಶೇಷ ಆವೃತ್ತಿಗಳನ್ನು ಪಡೆಯಲಿರುವ ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್
ಇವೇರಡೂ ಮಾಡೆಲ್‌ಗಳು ನವೀಕೃತ ಸ್ಕೋಡಾ ಆಕ್ಟೇವಿಯಾ ಜೊತೆಗೆ 2024 ರ ವೇಳೆಗೆ ಭಾರತವನ್ನು ತಲುಪುವ ನಿರೀಕ್ಷೆಯಿದೆ.
ನಾಲ್ಕು ಹೊಸ ಇವಿಗಳು
ಹೆಚ್ಚಿನ ಕಾರುತಯಾರಕರು ತಮ್ಮ ಎಲೆಕ್ಟ್ರಿಕ್ ಕಾರುಗಳ ಸಾಲುಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದ್ದು, ಸ್ಕೋಡಾ ಸಹ ವಿವಿಧ ಆಕಾರಗಳು ಮತ್ತು ಗಾತ್ರಗಳನ್ನು ಹೊಂದಿರುವ ಆರು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವ ತನ್ನ ಭವಿಷ್ಯದ ಯೋಜನೆಯನ್ನು ಬಹಿರಂಗಪಡಿಸಿದೆ. ಅವುಗಳನ್ನು ನಾಲ್ಕು ಹೊಚ್ಚಹೊಸ ಇವಿಗಳಾಗಿದ್ದು, ಇನ್ನೆರಡು ಎನ್ಯಾಕ್ ಮತ್ತು ಎನ್ಯಾಕ್ ಕೂಪ್‌ನ ನವೀಕೃತ ಆವೃತ್ತಿಗಳಾಗಿದೆ. ಸ್ಕೋಡಾದ ಹೊಚ್ಚ ಹೊಸ ಬ್ಯಾಟರಿ ಎಲೆಕ್ಟ್ರಿಕ್ ಮಾಡೆಲ್‌ಗಳು ಈ ಕೆಳಗಿನ ಪ್ರಕಾರಗಳಾಗಿವೆ:
-
2025 ರಲ್ಲಿ “ಸಣ್ಣ” - MQB A0 ಅನ್ನು ಆಧರಿಸಿ ಮತ್ತು 4.2 ಮೀಟರ್ ಉದ್ದದಲ್ಲಿ, ಇದು ಪ್ರವೇಶ ಮಟ್ಟದ ಇವಿ ಆಗಿರುತ್ತದೆ.
-
2024 ರಲ್ಲಿ “ಕಾಂಪ್ಯಾಕ್ಟ್” – ಎಲ್ರಾಕ್ ಎಂದು ಕರೆಯಲಾಗುವ ಕರೋಕ್‌ಗೆ ಎಲೆಕ್ಟ್ರಿಕ್ ಬದಲಿಯಾಗಿದೆ.
-
2026 ರಲ್ಲಿ “ಕಾಂಬಿ” – ಇದು ಆಕ್ಟೇವಿಯಾ ಕಾಂಬಿಯ ಗಾತ್ರದ ಸುತ್ತಲೂ ಸ್ಕೋಡಾದ ಐಕಾನಿಕ್ ಅನ್ನು ಭವಿಷ್ಯದಲ್ಲಿ ಹೊಂದಿರಲಿದೆ.
-
2026 ರಲ್ಲಿ “ಸ್ಪೇಸ್” - ಇದು 7-ಸೀಟರ್ ವಿಷನ್ ಎಸ್ ಎಸ್‌ಯುವಿ ಕಾನ್ಸೆಪ್ಟ್ ನ ಉತ್ಪಾದನಾ ಆವೃತ್ತಿಯಾಗಿದೆ.
ಸ್ಕೋಡಾ 2025 ರಲ್ಲಿ ನವೀಕೃತ ಎನ್ಯಾಕ್ ಲೈನ್‌ಅಪ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸುತ್ತದೆ.
ನಾವು ಮೊದಲು ಮುಂದಿನ-ತಲೆಮಾರಿನ ಸೂಪರ್ಬ್ ಮತ್ತು ಕೊಡಿಯಾಕ್ ಅನ್ನು ಮಾರುಕಟ್ಟೆಯಲ್ಲಿ ಕಾಣಬಹುದು ಮತ್ತು ಮುಂದಿನ ವರ್ಷಗಳಲ್ಲಿ ಅವುಗಳನ್ನು ಅನುಸರಿಸಲಿರುವ ಈ ಕಾರು ತಯಾರಕರ ಎಲೆಕ್ಟ್ರಿಕ್ ವಾಹನಗಳನ್ನು ನೋಡಬಹುದಾಗಿದೆ. ಪ್ರಸ್ತುತ ಎನ್ಯಾಕ್ iV ಹ್ಯುಂಡೈ ಲಾನಿಕ್ 5 ಮತ್ತು ಕಿಯಾ EV6 ಗೆ ಪ್ರತಿಸ್ಪರ್ಧಿಯಾಗಿ ಪ್ರೀಮಿಯಂ ಸಿಬಿಯು ಇವಿ ಕೊಡುಗೆಯಾಗಿ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆಯಿದೆ.
ಇನ್ನಷ್ಟು ಇಲ್ಲಿ ಓದಿ : ಸೂಪರ್ಬ್ ಆಟೋಮ್ಯಾಟಿಕ್