• English
    • Login / Register

    MG Windsor ಇವಿ ಮಾರಾಟದಲ್ಲಿ ವಿಶೇಷವಾದ ಸಾಧನೆ; ಬ್ಯಾಟರಿ ಬಾಡಿಗೆ ಯೋಜನೆಯ ಪರಿಣಾಮವೇ?

    ಏಪ್ರಿಲ್ 16, 2025 07:48 pm ರಂದು dipan ಮೂಲಕ ಪ್ರಕಟಿಸಲಾಗಿದೆ

    50 Views
    • ಕಾಮೆಂಟ್‌ ಅನ್ನು ಬರೆಯಿರಿ

    2024ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದಾಗಿನಿಂದ 20,000 ಕ್ಕೂ ಹೆಚ್ಚು ಯುನಿಟ್ ಮಾರಾಟದೊಂದಿಗೆ, ವಿಂಡ್ಸರ್ ಇವಿ ಭಾರತದಲ್ಲಿ ಈ ಮಾರಾಟದ ಗಡಿಯನ್ನು ದಾಟಿದ ಅತ್ಯಂತ ವೇಗದ ಇವಿ ಆಗಿದೆ

    MG Windsor EV crosses 20,000 sales milestone

    2024ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದಾಗಿನಿಂದ, MG ವಿಂಡ್ಸರ್ ಇವಿಯು ಭಾರತೀಯ ಖರೀದಿದಾರರಲ್ಲಿ ಬಲವಾದ ನೆಚ್ಚಿನದಾಗಿದೆ, ಕೇವಲ ಆರು ತಿಂಗಳಲ್ಲಿ 20,000 ಯುನಿಟ್ ಮಾರಾಟದ ಗಡಿಯನ್ನು ದಾಟಿದೆ. ಇದು ಭಾರತದಲ್ಲಿ 20,000 ಯುನಿಟ್ ಮಾರಾಟದ ಮೈಲಿಗಲ್ಲನ್ನು ತಲುಪಿದ ಅತ್ಯಂತ ವೇಗದ ಎಲೆಕ್ಟ್ರಿಕ್‌ ವೆಹಿಕಲ್‌ ಆಗಿದೆ. 

    ಇದರ ಬೆಳೆಯುತ್ತಿರುವ ಜನಪ್ರಿಯತೆಗೆ ಹಲವಾರು ಅಂಶಗಳು ಕಾರಣವಾಗಿವೆ, ಅವುಗಳಲ್ಲಿ ವಿಶಿಷ್ಟ ವಿನ್ಯಾಸ ಹಾಗೂ ಸರಳವಾದ ಮತ್ತು ವಿಶಾಲವಾದ ಇಂಟೀರಿಯರ್‌ ಸೇರಿವೆ. ಹಾಗೆಯೇ, ಅದರ ಬಲವಾದ ಬೇಡಿಕೆಗೆ ಪ್ರಮುಖ ಕೊಡುಗೆ ನೀಡುವ ಅಂಶವೆಂದರೆ MG ಯ ಬ್ಯಾಟರಿ ಬಾಡಿಗೆ ಯೋಜನೆಯೂ ಆಗಿರಬಹುದು. ಈ ಆಯ್ಕೆಯು ಕಾರಿನ ಮುಂಗಡ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಆದರೆ ಬ್ಯಾಟರಿ ಪ್ಯಾಕ್ ಬಳಸುವುದಕ್ಕಾಗಿ ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು ಅನೇಕ ಖರೀದಿದಾರರಿಗೆ ಕಾರನ್ನು ಹೆಚ್ಚು ಕೈಗೆಟುಕುವಂತೆ ಮಾಡಿದೆ.

    ಬ್ಯಾಟರಿ ಚಂದಾದಾರಿಕೆ ಯೋಜನೆಯೊಂದಿಗೆ ಮತ್ತು ಇಲ್ಲದೆಯೂ MG ವಿಂಡ್ಸರ್ EV ಯ ಬೆಲೆಗಳ ವಿವರವಾದ ನೋಟ ಇಲ್ಲಿದೆ.

    MG ವಿಂಡ್ಸರ್ ಇವಿ: ಬೆಲೆಗಳು

    MG Windsor EV front

    ವೇರಿಯೆಂಟ್‌

    ಬ್ಯಾಟರಿ ಬಾಡಿಗೆ ಯೋಜನೆ ಇಲ್ಲದ ಕಾರಿನ ಬೆಲೆ

    ಬ್ಯಾಟರಿ ಬಾಡಿಗೆ ಯೋಜನೆಯೊಂದಿಗೆ ಕಾರಿನ ಬೆಲೆ*

    ಬೆಲೆ ವ್ಯತ್ಯಾಸ (ಬ್ಯಾಟರಿ ಬಾಡಿಗೆ ವೆಚ್ಚವನ್ನು ಹೊರತುಪಡಿಸಿ)

    ಎಕ್ಸೈಟ್‌

    14 ಲಕ್ಷ ರೂ.

    10 ಲಕ್ಷ ರೂ.

    4 ಲಕ್ಷ ರೂ.

    ಎಕ್ಸ್‌ಕ್ಲೂಸಿವ್

    15 ಲಕ್ಷ ರೂ.

    11 ಲಕ್ಷ ರೂ.

      4 ಲಕ್ಷ ರೂ.

    ಎಸೆನ್ಸ್

    16 ಲಕ್ಷ ರೂ.

      12 ಲಕ್ಷ ರೂ.

      4  ಲಕ್ಷ ರೂ.

    *ಬ್ಯಾಟರಿ ಬಾಡಿಗೆ ಯೋಜನೆಯಲ್ಲಿ ಕಾರಿನ ವೆಚ್ಚಕ್ಕಿಂತ ಪ್ರತಿ ಕಿ.ಮೀ.ಗೆ 3.9 ರೂ. ಹೆಚ್ಚುವರಿಯಾಗಿ MG ಶುಲ್ಕ ವಿಧಿಸುತ್ತದೆ.

    ಎಲ್ಲಾ ಬೆಲೆಗಳು ಭಾರತಾದ್ಯಂತದ ಎಕ್ಸ್-ಶೋರೂಮ್ ಆಗಿದೆ.

    MG ಯಿಂದ BaaS (ಬ್ಯಾಟರಿ ಆಸ್‌ ಎ ಸರ್ವೀಸ್‌) ಎಂದು ಕರೆಯಲ್ಪಡುವ ಬ್ಯಾಟರಿ ಚಂದಾದಾರಿಕೆ ಯೋಜನೆಯು, ಕೋಷ್ಟಕದಲ್ಲಿ ತೋರಿಸಿರುವಂತೆ ವಿಂಡ್ಸರ್ EV ಯ ಮುಂಗಡ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಯೋಜನೆಯಡಿಯಲ್ಲಿ, ಗ್ರಾಹಕರು ಪ್ರತಿ ಕಿ.ಮೀ.ಗೆ 3.9 ರೂ. ಬ್ಯಾಟರಿ ಬಾಡಿಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಜೊತೆಗೆ ಕನಿಷ್ಠ 1,500 ಕಿ.ಮೀ.ಗೆ ಕಡ್ಡಾಯ ಮಾಸಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಈ ಯೋಜನೆಯ ಒಂದು ಪ್ರಮುಖ ಪ್ರಯೋಜನವೆಂದರೆ, ಕಡಿಮೆ ಆರಂಭಿಕ ವೆಚ್ಚದ ಹೊರತಾಗಿ, ಮೊದಲ ಮಾಲೀಕರು ಬ್ಯಾಟರಿಯ ಮೇಲೆ ಅನ್‌ಲಿಮಿಟೆಡ್‌ ವ್ಯಾರಂಟಿಯನ್ನು ಪಡೆಯುತ್ತಾರೆ ಮತ್ತು ಅಗತ್ಯವಿದ್ದಾಗ ಉಚಿತ ಬ್ಯಾಟರಿ ಬದಲಿಯನ್ನು ಪಡೆಯುತ್ತಾರೆ.

    ಎಂಜಿ ವಿಂಡ್ಸರ್ ಇವಿ: ಒಂದು ಅವಲೋಕನ

    MG Windsor EV front

    ಎಂಜಿ ವಿಂಡ್ಸರ್ ಇವಿ ಮೊಟ್ಟೆಯ ಆಕಾರದ ವಿನ್ಯಾಸವನ್ನು ಹೊಂದಿದ್ದು, ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲೈಟ್‌ಗಳು, ಕನೆಕ್ಟೆಡ್‌ ಎಲ್ಇಡಿ ಲೈಟಿಂಗ್ ಅಂಶಗಳು, 18-ಇಂಚಿನ ಅಲಾಯ್ ವೀಲ್‌ಗಳು ಮತ್ತು ಫ್ಲಶ್ ಡೋರ್ ಹ್ಯಾಂಡಲ್‌ಗಳನ್ನು ಹೊಂದಿದೆ. ಹಿಂಭಾಗದಲ್ಲಿ, ಇದು ಕನೆಕ್ಟೆಡ್‌ ಎಲ್‌ಇಡಿ ಟೈಲ್ ಲೈಟ್‌ಗಳು ಮತ್ತು ರೂಫ್‌ನ ಮೇಲೆ ಜೋಡಿಸಲಾದ ಸ್ಪಾಯ್ಲರ್ ಅನ್ನು ನಯವಾದ ಮತ್ತು ಆಧುನಿಕ ನೋಟಕ್ಕಾಗಿ ಒಳಗೊಂಡಿದೆ.

    MG Windor EV dashboard

    ಒಳಭಾಗದಲ್ಲಿ, ಕ್ಯಾಬಿನ್ ಸಂಪೂರ್ಣ ಕಪ್ಪು ಬಣ್ಣದಲ್ಲಿ ಕೃತಕ ಮರ ಮತ್ತು ಕಂಚಿನ ಅಲಂಕಾರಗಳೊಂದಿಗೆ ಫಿನಿಶ್‌ ಮಾಡಲಾಗಿದೆ. ಸೀಟುಗಳನ್ನು ಲೆದರೆಟ್‌ನಿಂದ ಕವರ್‌ ಮಾಡಲಾಗಿದೆ ಮತ್ತು ಹಿಂಭಾಗದ ಬೆಂಚ್ 135 ಡಿಗ್ರಿಗಳವರೆಗೆ ಒರಗುತ್ತದೆ, ಇದು ವಿಮಾನದಂತಹ ಆಸನ ಅನುಭವವನ್ನು ನೀಡುತ್ತದೆ.

    MG Windor EV touchscreen

    ಫೀಚರ್‌ಗಳ ವಿಷಯದಲ್ಲಿ, ವಿಂಡ್ಸರ್ ಇವಿ ದೊಡ್ಡ 15.6-ಇಂಚಿನ ಟಚ್‌ಸ್ಕ್ರೀನ್, 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್‌ ಕ್ಲೈಮೆಟ್‌ ಕಂಟ್ರೋಲ್‌  ಹವಾಮಾನ ನಿಯಂತ್ರಣ, 256-ಬಣ್ಣದ ಆಂಬಿಯೆಂಟ್ ಲೈಟಿಂಗ್, 9-ಸ್ಪೀಕರ್ ಇನ್ಫಿನಿಟಿ ಸೌಂಡ್ ಸಿಸ್ಟಮ್ ಮತ್ತು ಪನೋರಮಿಕ್ ಗ್ಲಾಸ್ ರೂಫ್‌ನೊಂದಿಗೆ ಸಜ್ಜುಗೊಂಡಿದೆ.

    ಸುರಕ್ಷತೆಯ ವಿಷಯದಲ್ಲಿ, ಇದು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಟೈರ್ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಮ್‌(TPMS) ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಪ್ರಮಾಣಿತವಾಗಿ ನೀಡುತ್ತದೆ. MG ವಿಂಡ್ಸರ್ EV ಯಲ್ಲಿ ಯಾವುದೇ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಲಭ್ಯವಿಲ್ಲ.

    ಇದನ್ನೂ ಓದಿ: Maruti Eeco ದಿಂದ ಹೊಸ ಆಪ್‌ಡೇಟ್‌: ಎಲ್ಲಾ ವೇರಿಯೆಂಟ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು, ಕ್ಯಾಪ್ಟನ್ ಸೀಟ್‌ನೊಂದಿಗೆ 6-ಸೀಟರ್ ಆಯ್ಕೆ ಲಭ್ಯ

    ಎಂಜಿ ವಿಂಡ್ಸರ್ ಇವಿ: ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ವಿಶೇಷಣಗಳು

    MG Windor EV rear

    ಎಂಜಿ ವಿಂಡ್ಸರ್ ಇವಿ ಮುಂಭಾಗದ ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾದ ಒಂದೇ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬರುತ್ತದೆ, ಅದರ ವಿವರಗಳು ಈ ಕೆಳಗಿನಂತಿವೆ:

    ಬ್ಯಾಟರಿ ಪ್ಯಾಕ್‌

    38 ಕಿ.ವ್ಯಾಟ್‌

    ಎಲೆಕ್ಟ್ರಿಕ್ ಮೋಟರ್‌ಗಳ ಸಂಖ್ಯೆ

    1

    ಪವರ್‌

    136 ಪಿಎಸ್‌

    ಟಾರ್ಕ್‌

    200 ಎನ್‌ಎಮ್‌

    ಕ್ಲೈಮ್‌ ಮಾಡಲಾದ ರೇಂಜ್‌

    332 ಕಿ.ಮೀ.

    ಡ್ರೈವ್‌ಟ್ರೈನ್‌

    ಫ್ರಂಟ್-ವೀಲ್-ಡ್ರೈವ್ (FWD)

    ಎಂಜಿ ವಿಂಡ್ಸರ್ ಇವಿ: ಪ್ರತಿಸ್ಪರ್ಧಿಗಳು

    MG Windor EV rear

    MG ವಿಂಡ್ಸರ್ ಇವಿಯು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ400 ಗಳೊಂದಿಗೆ ಸ್ಪರ್ಧಿಸುತ್ತದೆ. ಬ್ಯಾಟರಿ ಬಾಡಿಗೆ ಆಯ್ಕೆಯೊಂದಿಗೆ ಇದರ ಕಡಿಮೆ ಆರಂಭಿಕ ಬೆಲೆಯು ಟಾಟಾ ಪಂಚ್ ಇವಿ ಗೆ ಪ್ರಬಲ ಪ್ರತಿಸ್ಪರ್ಧಿಯನ್ನಾಗಿ ಮಾಡುತ್ತದೆ.

    ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

    was this article helpful ?

    Write your Comment on M g ವಿಂಡ್ಸರ್‌ ಇವಿ

    ಇನ್ನಷ್ಟು ಅನ್ವೇಷಿಸಿ on ಎಂಜಿ ವಿಂಡ್ಸರ್‌ ಇವಿ

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    We need your ನಗರ to customize your experience