Windsor EVಯ ಬಿಡುಗಡೆಗೆ ಮೊದಲು ಭಾರತದಲ್ಲಿ EV ಗಾಗಿ MG ಮೋಟಾರ್‌ನಿಂದ ಹೊಸ ತಂತ್ರಜ್ಞಾನಗಳ ಪರಿಚಯ
ಎಂಜಿ ಜೆಡ್‌ಎಸ್ ಇ ವಿ ಗಾಗಿ shreyash ಮೂಲಕ ಆಗಸ್ಟ್ 07, 2024 03:25 pm ರಂದು ಮಾರ್ಪಡಿಸಲಾಗಿದೆ
- 79 Views
- ಕಾಮೆಂಟ್ ಅನ್ನು ಬರೆಯಿರಿ
ಈ ಕಾರ್ಯಕ್ರಮಗಳು EV ಮಾಲೀಕರಿಗೆ ಈಗಿರುವ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಹೊಸ EV ತಂತ್ರಜ್ಞಾನಗಳ ಬಗ್ಗೆ ಅರಿವು ಹೆಚ್ಚಿಸಲು ಸಹಾಯ ಮಾಡುತ್ತದೆ
ಇತ್ತೀಚಿನ ಈವೆಂಟ್‌ನಲ್ಲಿ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬಳಕೆಯನ್ನು ಹೆಚ್ಚಿಸಲು MG ಹೊಸ ಯೋಜನೆಗಳನ್ನು ಪರಿಚಯಿಸಿತು. ಈ ಯೋಜನೆಗಳು EV ಮಾಲೀಕರಿಗೆ ಮುಂಬರುವ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಹೊಸ EV ತಂತ್ರಜ್ಞಾನಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತವೆ. ಬನ್ನಿ, ಈ ಯೋಜನೆಗಳನ್ನು ಒಂದೊಂದಾಗಿ ನೋಡೋಣ.
eHUB ಆಪ್
eHUB ಎನ್ನುವುದು ಆಂಡ್ರಾಯ್ಡ್ ಮತ್ತು iOS ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಚಾರ್ಜಿಂಗ್ ಲೊಕೇಟರ್ ಅಪ್ಲಿಕೇಶನ್ ಆಗಿದೆ. MG ಯು ಅದಾನಿ ಟೋಟಲ್ ಎನರ್ಜಿಸ್, BPCL, ಚಾರ್ಜ್ ಜೋನ್, ಗ್ಲಿಡಾ, HPCL, ಜಿಯೋ-BP, ಶೆಲ್, ಸ್ಟಾಟಿಕ್ ಮತ್ತು ಜಿಯೋನ್ ನಂತಹ ಕಂಪನಿಗಳೊಂದಿಗೆ ಸೇರಿಕೊಂಡು ದೇಶಾದ್ಯಂತ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ಸ್ಥಾಪಿಸಲು ಯೋಜನೆ ಶುರುಮಾಡಿದೆ. EV ಮಾಲೀಕರು ಚಾರ್ಜಿಂಗ್ ಸ್ಟೇಷನ್‌ಗಳನ್ನು ಹುಡುಕಲು ಮತ್ತು ತಾವು ಚಲಿಸುತ್ತಿರುವ ಮಾರ್ಗದಲ್ಲಿ ಚಾರ್ಜರ್‌ಗಳು ಎಲ್ಲಿವೆ ಎಂಬುದನ್ನು ಪರಿಶೀಲಿಸುವ ಮೂಲಕ ತಮ್ಮ ಪ್ರಯಾಣಗಳನ್ನು ಯೋಜಿಸಲು ಈ ಅಪ್ಲಿಕೇಶನ್ ಅನ್ನು ಬಳಸಬಹುದು. ಚಾರ್ಜಿಂಗ್ ಸ್ಪಾಟ್ ಲಭ್ಯವಿದೆಯೇ ಮತ್ತು ಚಾರ್ಜರ್ ಕೆಲಸ ಮಾಡುತ್ತಿದೆಯೇ ಎಂದು ಕೂಡ ಅಪ್ಲಿಕೇಶನ್ ತೋರಿಸುತ್ತದೆ. ಇದರ ಜೊತೆಗೆ, ಬಳಕೆದಾರರು ಸ್ಲಾಟ್ ಅನ್ನು ಬುಕ್ ಮಾಡಬಹುದು ಮತ್ತು ನೇರವಾಗಿ eHUB ಅಪ್ಲಿಕೇಶನ್ ಮೂಲಕ ಪಾವತಿಗಳನ್ನು ಮಾಡಬಹುದು.
ಪ್ರಾಜೆಕ್ಟ್ REVIVE
EV ಬ್ಯಾಟರಿ ಪ್ಯಾಕ್ ಎಲೆಕ್ಟ್ರಿಕ್ ಕಾರಿನ ಅತ್ಯಂತ ದುಬಾರಿ ಮತ್ತು ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಈ ಬ್ಯಾಟರಿಗಳನ್ನು ಮರುಬಳಕೆ ಮಾಡಬಹುದು ಮತ್ತು ಎನರ್ಜಿ ಸ್ಟೋರೇಜ್ ಸಿಸ್ಟಮ್ ಗಳಲ್ಲಿ ಮತ್ತೆ ಬಳಸಬಹುದು. MG ಪ್ರಾಜೆಕ್ಟ್ REVIVEಗಾಗಿ LOHUM ಮತ್ತು ಎನರ್ಜಿ ಮತ್ತು ರಿಸೋರ್ಸಸ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಜೊತೆ ಕೈಜೋಡಿಸಿದೆ. ಈ ಯೋಜನೆಯಲ್ಲಿ, ಸೌರಶಕ್ತಿಯಂತಹ ವಸ್ತುಗಳಿಗೆ ಶಕ್ತಿಯನ್ನು ಸಂಗ್ರಹಿಸಲು ಬ್ಯಾಟರಿಗಳನ್ನು ಮರುಬಳಕೆ ಮಾಡಲಾಗುತ್ತದೆ. ಈ ಯೋಜನೆಯು ದೇಶಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಒದಗಿಸಲು ಸಹಾಯ ಮಾಡುತ್ತದೆ. ಪ್ರಾಜೆಕ್ಟ್ REVIVE ಲಿಥಿಯಂ ಬ್ಯಾಟರಿಗಳಿಂದ ಉತ್ಪಾದನೆಗೊಳ್ಳುವ ಪರಿಸರಕ್ಕೆ ಹಾನಿಕಾರಕವಾದ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ.
ಇದನ್ನು ಕೂಡ ಓದಿ: ಟಾಟಾ ಮೋಟಾರ್ಸ್ ಆಗಸ್ಟ್ 7 ರಂದು ಲಾಂಚ್ ಮಾಡಲಿದೆ ಟಾಟಾ ಕರ್ವ್ EV ಜೊತೆಗೆ ಚಾರ್ಜ್ ಪಾಯಿಂಟ್ ಅಗ್ರಿಗೇಟರ್ ಆಪ್
MG-ಜಿಯೋ ಇನ್ನೋವೇಟಿವ್ ಕನೆಕ್ಟಿವಿಟಿ ಪ್ಲಾಟ್‌ಫಾರ್ಮ್ (MG-ಜಿಯೋ ICP)
MG ತನ್ನ ಹೊಸ ಇನ್ನೋವೇಟಿವ್ ಕನೆಕ್ಟಿವಿಟಿ ಪ್ರೋಗ್ರಾಂ (ICP) ಎಂದು ಕರೆಯಲಾಗುವ ಕನೆಕ್ಟೆಡ್ ಕಾರ್ ತಂತ್ರಜ್ಞಾನವನ್ನು ಪ್ರಾರಂಭಿಸಲು ಜಿಯೋದೊಂದಿಗೆ ಕೈಜೋಡಿಸಿದೆ. ಈ ಫೀಚರ್ ಹೊಸ ವಿಂಡ್ಸರ್ EV ಯಿಂದ ಪ್ರಾರಂಭವಾಗಿ ಭವಿಷ್ಯದ ಎಲ್ಲಾ MG EV ಗಳಲ್ಲಿ ಲಭ್ಯವಿರುತ್ತದೆ. ಕನೆಕ್ಟಿವಿಟಿ ಪ್ಲಾಟ್‌ಫಾರ್ಮ್ ಕಾರ್ ಇನ್‌ಫೋಟೈನ್‌ಮೆಂಟ್ ಮತ್ತು ಮನರಂಜನೆಗಾಗಿ ಆಪರೇಟಿಂಗ್ ಸಿಸ್ಟಮ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ತನ್ನದೇ ಆದ MG ಸ್ಟೋರ್ ಅನ್ನು ಹೊಂದಿರುತ್ತದೆ, ಅಲ್ಲಿ ಗ್ರಾಹಕರು ವಿವಿಧ ಅಪ್ಲಿಕೇಶನ್‌ಗಳನ್ನು, ಗೇಮ್ಸ್ ಗಳನ್ನು AI-ಚಾಲಿತ ವಾಯ್ಸ್ ರೆಕೋಗ್ನಿಶನ್ ಸಿಸ್ಟಮ್ ಗಳನ್ನು ಬಳಸುವ ಅವಕಾಶವನ್ನು ಪಡೆಯಬಹುದು. ಈ ವಾಯ್ಸ್ ರೆಕೋಗ್ನಿಶನ್ ಸಿಸ್ಟಮ್ 11 ವಿವಿಧ ಭಾರತೀಯ ಭಾಷೆಗಳಲ್ಲಿ ಲಭ್ಯವಾಗಲಿದೆ.
EVPEDIA
EVPEDIA ಎಲೆಕ್ಟ್ರಿಕ್ ಕಾರುಗಳು ಮತ್ತು ಅವುಗಳ ತಂತ್ರಜ್ಞಾನಗಳ ಮೇಲೆ ಮಾಹಿತಿ ನೀಡುವ ವೇದಿಕೆಯಾಗಿದೆ. EVಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ, EVPEDIA ಕಾಸ್ಟ್ ಕ್ಯಾಲ್ಕುಲೇಟರ್‌ಗಳು, ಸರ್ಕಾರದ ನೀತಿಗಳ ಲೈಬ್ರರಿ ಮತ್ತು ವಿವಿಧ ಪಬ್ಲಿಕೇಷನ್ ಗಳು ಮತ್ತು ರಿಸರ್ಚ್ ಪೇಪರ್ ಗಳಂತಹ ಉಪಯುಕ್ತ ಸಾಧನಗಳನ್ನು ಒದಗಿಸುತ್ತದೆ. ಇಂಟರಾಕ್ಟಿವ್ ಡಿಸ್ಪ್ಲೇಗಳು, ಎಜುಕೇಷನಲ್ ವೀಡಿಯೊಗಳು ಮತ್ತು ಲೈವ್ ಪ್ರದರ್ಶನಗಳ ಮೂಲಕ EVPEDIA ಬಳಕೆದಾರರಿಗೆ EV ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
ಭಾರತದಲ್ಲಿ MG ಮೋಟಾರ್‌ನಿಂದ ಪ್ರಾರಂಭಿಸಲಾದ ನಾಲ್ಕು ಪ್ರಮುಖ EV ಕಾರ್ಯಕ್ರಮಗಳನ್ನು ನೀವು ಈಗ ಓದಿದ್ದೀರಿ. ಈ ಪ್ರಯತ್ನಗಳು ಗ್ರಾಹಕರಿಗೆ ಅಸ್ತಿತ್ವದಲ್ಲಿರುವ ಸವಾಲುಗಳನ್ನು ಪರಿಹರಿಸಲು ಮತ್ತು ಇತ್ತೀಚಿನ ತಂತ್ರಜ್ಞಾನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ ಎಂದು MG ಭಾವಿಸುತ್ತದೆ. MG ಸದ್ಯಕ್ಕೆ ಭಾರತದಲ್ಲಿ ಕಾಮೆಟ್ EV ಮತ್ತು ZS EV ಎಂಬ ಎರಡು ಎಲೆಕ್ಟ್ರಿಕ್ ಕಾರುಗಳನ್ನು ನೀಡುತ್ತಿದೆ ಮತ್ತು ಮೂರನೆಯ ಕಾರಾಗಿರುವ MG ವಿಂಡ್ಸರ್ EV ಮೇಲೆ ಈಗಾಗಲೇ ಕೆಲಸ ಮಾಡುತ್ತಿದೆ.
ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: MG ZS EV ಆಟೋಮ್ಯಾಟಿಕ್
0 out of 0 found this helpful