MG Windsor EV ಡ್ಯಾಶ್‌ಬೋರ್ಡ್ ಅನಾವರಣ: ಏನಿದೆ ಹೊಸ ಆಪ್‌ಡೇಟ್ ?
ವಿಂಡ್ಸರ್ ಇವಿಯು ತನ್ನ ಮೂಲ ವಾಹನದಲ್ಲಿ ಕಾಣುವಂತೆ ಕಂಚಿನ ಇನ್ಸರ್ಟ್‌ನೊಂದಿಗೆ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ
- ಎಮ್‌ಜಿಯು ಭಾರತದಲ್ಲಿ ತನ್ನ ಮೂರನೇ ಆಲ್-ಎಲೆಕ್ಟ್ರಿಕ್ ಕೊಡುಗೆಯಾಗಿ ವಿಂಡ್ಸರ್ ಇವಿಯನ್ನು ಬಿಡುಗಡೆ ಮಾಡಲಿದೆ.
- ಇತ್ತೀಚಿನ ಟೀಸರ್‌ನಲ್ಲಿ 15.6-ಇಂಚಿನ ಟಚ್‌ಸ್ಕ್ರೀನ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ತೋರಿಸಲಾಗಿದೆ.
- ಪನರೋಮಿಕ್ ಗ್ಲಾಸ್ ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು 135 ಡಿಗ್ರಿಗಳವರೆಗೆ ಒರಗಿಕೊಳ್ಳುವ ಹಿಂದಿನ ಸೀಟುಗಳಂತಹ ಫೀಚರ್‌ಗಳನ್ನು ಪಡೆಯಲಿದೆ.
- ಇದು 50.6 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುವ ನಿರೀಕ್ಷೆಯಿದೆ, 136 ಪಿಎಸ್ ಮತ್ತು 200 ಎನ್‌ಎಮ್ ಉತ್ಪಾದಿಸುವ ಏಕೈಕ ಮೋಟಾರ್ ಅನ್ನು ಪಡೆಯಲಿದೆ.
- ಆರಂಭಿಕ ಬೆಲೆ ಸುಮಾರು 20 ಲಕ್ಷ ರೂಪಾಯಿ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.
ಎಮ್‌ಜಿ ವಿಂಡ್ಸರ್ ಇವಿಯು ಭಾರತದಲ್ಲಿ ಸೆಪ್ಟೆಂಬರ್ 11 ರಂದು ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ ಮತ್ತು ವಾಹನ ತಯಾರಕರು ಇತ್ತೀಚೆಗೆ ಅದರ ಎಲೆಕ್ಟ್ರಿಕ್ ಕ್ರಾಸ್ಒವರ್‌ನ ಟೀಸರ್‌ಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದ್ದಾರೆ. ಇದರ ಇತ್ತೀಚಿನ ಟೀಸರ್ ವೀಡಿಯೋ ವಿಂಡ್ಸರ್ ಇವಿಯ ಇಂಟೀರಿಯರ್‌ನ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುತ್ತದೆ. ಇಂಡೋನೇಷ್ಯಾದಲ್ಲಿ ಮಾರಾಟವಾದ Wuling Cloud EV ಯ ಮರುಬ್ಯಾಡ್ಜ್ ಮಾಡಲಾದ ಆವೃತ್ತಿಯಾಗಿರುವ ವಿಂಡ್ಸರ್ ಇವಿ, ಎಮ್‌ಜಿಯಿಂದ ನಮ್ಮ ಮಾರುಕಟ್ಟೆಯಲ್ಲಿ ಮೂರನೇ ಇವಿ ಆಗಿದೆ ಮತ್ತು ಎಮ್‌ಜಿ ಕಾಮೆಟ್ ಮತ್ತು ಎಮ್‌ಜಿ ಜೆಡ್‌ಎಸ್ ಇವಿಯ ನಡುವೆ ಇರಿಸಲಾಗುತ್ತದೆ. ಇತ್ತೀಚಿನ ಟೀಸರ್ ವೀಡಿಯೊ ಏನನ್ನು ಅನಾವರಣ ಎಂಬುದನ್ನು ಪರಿಶೀಲಿಸೋಣ.
ನಾವು ಗಮನಿಸಿದ್ದು ಏನು ?
ಎಮ್‌ಜಿ ವಿಂಡ್ಸರ್ ಇವಿಯ ಇತ್ತೀಚಿನ ಟೀಸರ್ ಅದರ ಇಂಟೀರಿಯರ್ ಅನ್ನು ಹೈಲೈಟ್ ಮಾಡುತ್ತದೆ ಮತ್ತು ಡ್ಯಾಶ್‌ಬೋರ್ಡ್‌ನ ಸಂಪೂರ್ಣ ನೋಟವನ್ನು ತೋರಿಸುತ್ತದೆ. ಇದು ದೊಡ್ಡ 15.6-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್‌ನೊಂದಿಗೆ ಕಂಚಿನ ಎಕ್ಸೆಂಟ್‌ನೊಂದಿಗೆ (ಅದರ ಮೂಲ ವಾಹನದಲ್ಲಿ ಲಭ್ಯವಿರುವಂತೆಯೇ) ಡ್ಯುಯಲ್-ಟೋನ್ ವಿನ್ಯಾಸವನ್ನು ಹೊಂದಿದೆ. ಈ ಟಚ್‌ಸ್ಕ್ರೀನ್ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಷನ್ ಅನ್ನು ಸಪೋರ್ಟ್ ಮಾಡುತ್ತದೆ. ನಯವಾದ ಸೆಂಟ್ರಲ್ ಎಸಿ ವೆಂಟ್‌ಗಳನ್ನು ಡ್ಯಾಶ್‌ಬೋರ್ಡ್‌ಗೆ ಸಂಯೋಜಿಸಲಾಗಿದೆ ಮತ್ತು ಟಚ್‌ಸ್ಕ್ರೀನ್ ಘಟಕದ ಕೆಳಗೆ ಇರಿಸಲಾಗಿದೆ. ಕೆಳಗೆ ಗಮನಿಸಿದಾಗ, ನೀವು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಪ್ಯಾನಲ್ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ಆಂಬಿಯೆಂಟ್ ಲೈಟಿಂಗ್ ಅನ್ನು ಗಮನಿಸಬಹುದು.
ಹೆಚ್ಚುವರಿಯಾಗಿ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸಹ ಗೋಚರಿಸುತ್ತದೆ (ಅಂದಾಜು 8.8-ಇಂಚಿನ ಡಿಸ್‌ಪ್ಲೇ). ಎಮ್‌ಜಿ ಇದಕ್ಕೆ ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಅನ್ನು ಸಹ ಒದಗಿಸಿದೆ, ಇದು ಆಡಿಯೋ ಮತ್ತು ಕರೆ ಕಂಟ್ರೋಲ್‌ಗಳನ್ನು ಹೊಂದಿದೆ.
ಇತರ ಫೀಚರ್‌ಗಳು ಮತ್ತು ಸುರಕ್ಷತಾ ಪ್ಯಾಕೇಜ್
ಇತರ ನಿರೀಕ್ಷಿತ ಫೀಚರ್‌ಗಳಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟ್‌ಗಳು ಮತ್ತು ಚಾಲಿತ ಟೈಲ್‌ಗೇಟ್ ಸೇರಿವೆ. ಸುರಕ್ಷತೆಯ ದೃಷ್ಟಿಯಿಂದ, ಎಮ್‌ಜಿಯ ಇತ್ತೀಚಿನ ಇವಿಯು ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ನಂತೆ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360-ಡಿಗ್ರಿ ಕ್ಯಾಮೆರಾ ಮತ್ತು ಪ್ರಾಯಶಃ ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಪಡೆಯುವ ನಿರೀಕ್ಷೆಯಿದೆ.
ಇದನ್ನು ಸಹ ಓದಿ: MG Windsor EVಯ ಇನ್ನೊಂದು ಟೀಸರ್ ಔಟ್: ಪನೋರಮಿಕ್ ಗ್ಲಾಸ್ ರೂಫ್ ಇರೋದು ಪಕ್ಕಾ
ಪವರ್‌ಟ್ರೈನ್
ಎಮ್‌ಜಿ ವಿಂಡ್ಸರ್ 136 ಪಿಎಸ್ ಮತ್ತು 200 ಎನ್‌ಎಮ್ ಅನ್ನು ಉತ್ಪಾದಿಸುವ ಫ್ರಂಟ್-ವೀಲ್-ಡ್ರೈವ್ ಮೋಟಾರ್‌ಗೆ ಶಕ್ತಿ ನೀಡುವ 50.6 ಕಿ.ವ್ಯಾಟ್ ಬ್ಯಾಟರಿಯೊಂದಿಗೆ ಬರುವ ನಿರೀಕ್ಷೆಯಿದೆ. ಇಂಡೋನೇಷ್ಯಾ-ಸ್ಪೆಕ್ ಆವೃತ್ತಿಯು 460 ಕಿಮೀ ರೇಂಜ್ ಅನ್ನು ಕ್ಲೈಮ್ ಮಾಡುತ್ತದೆ, ಆದರೆ ಭಾರತೀಯ ಮೊಡೆಲ್‌ನ ARAI ಪರೀಕ್ಷೆಯ ನಂತರ ಹೆಚ್ಚಿದ ರೇಂಜ್ ಅನ್ನು ನೋಡಬಹುದು.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಎಂಜಿಯು ತನ್ನ ವಿಂಡ್ಸರ್ ಇವಿ ಬೆಲೆಯನ್ನು 20 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ400 ಇವಿಗೆ ಹೋಲಿಸಿದರೆ ಹೆಚ್ಚು ಪ್ರೀಮಿಯಂ ಆಯ್ಕೆಯಾಗಿರುವ ಎಮ್‌ಜಿ ಜೆಡ್‌ಎಸ್ ಇವಿಗೆ ಹೆಚ್ಚು ಕೈಗೆಟುಕುವ ಪರ್ಯಾಯವಾಗಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.