MG ವಿಂಡ್ಸರ್ EV: ಯಾವಾಗ ಮಾಡಬಹುದು ಟೆಸ್ಟ್ ಡ್ರೈವ್? ಬುಕಿಂಗ್ ಮತ್ತು ಡೆಲಿವರಿ ಯಾವಾಗ? ಇಲ್ಲಿದೆ ಎಲ್ಲಾ ವಿವರಗಳು
ಎಂಜಿ ವಿಂಡ್ಸರ್ ಇವಿ ಗಾಗಿ shreyash ಮೂಲಕ ಸೆಪ್ಟೆಂಬರ್ 12, 2024 09:41 pm ರಂದು ಪ್ರಕಟಿಸಲಾಗಿದೆ
- 55 Views
- ಕಾಮೆಂಟ್ ಅನ್ನು ಬರೆಯಿರಿ
MG ವಿಂಡ್ಸರ್ EV ಟೆಸ್ಟ್ ಡ್ರೈವ್ ಸೆಪ್ಟೆಂಬರ್ 25 ರಿಂದ ಪ್ರಾರಂಭವಾಗಲಿದೆ, ಮತ್ತು ಬುಕಿಂಗ್ ಮತ್ತು ಡೆಲಿವೆರಿಗಳು ಅಕ್ಟೋಬರ್ 2024 ರಲ್ಲಿ ಶುರುವಾಗುತ್ತವೆ
-
ಅಕ್ಟೋಬರ್ 3 ರಿಂದ ಗ್ರಾಹಕರು ವಿಂಡ್ಸರ್ EVಯನ್ನು ಬುಕ್ ಮಾಡಲು ಪ್ರಾರಂಭಿಸಬಹುದು.
-
ಅಕ್ಟೋಬರ್ 12 ರಿಂದ (ದಸರಾ 2024) ಡೆಲಿವರಿಗಳು ಪ್ರಾರಂಭವಾಗಲಿವೆ.
-
ವಿಂಡ್ಸರ್ EV ಅನ್ನು ಮೂರು ವೇರಿಯಂಟ್ ಗಳಲ್ಲಿ ನೀಡಲಾಗುತ್ತದೆ: ಎಕ್ಸೈಟ್, ಎಕ್ಸ್‌ಕ್ಲೂಸಿವ್ ಮತ್ತು ಎಸೆನ್ಸ್.
-
ಪ್ರಮುಖ ಫೀಚರ್ ಗಳಲ್ಲಿ 15.6-ಇಂಚಿನ ಟಚ್‌ಸ್ಕ್ರೀನ್, 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಪನರೋಮಿಕ್ ಗ್ಲಾಸ್ ರೂಫ್ ಒಳಗೊಂಡಿವೆ.
-
ಪ್ರಯಾಣಿಕ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ನೀಡಲಾಗಿದೆ.
ಎಲೆಕ್ಟ್ರಿಕ್ ಕ್ರಾಸ್ಒವರ್ ಆಗಿರುವ MG ವಿಂಡ್ಸರ್ EV ಅನ್ನು ರೂ 9.99 ಲಕ್ಷ ಬೆಲೆಗೆ ಬಿಡುಗಡೆ ಮಾಡಲಾಗಿದೆ (ಪರಿಚಯಾತ್ಮಕ ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ). ವಿಂಡ್ಸರ್ EV ಸ್ಪೆಕ್ ಮತ್ತು ಫೀಚರ್ ಗಳನ್ನು ಪ್ರಕಟಿಸುವಾಗ, ವಾಹನ ತಯಾರಕರು ಟೆಸ್ಟ್ ಡ್ರೈವ್, ಬುಕಿಂಗ್ ಮತ್ತು ಡೆಲಿವರಿ ದಿನಾಂಕಗಳ ಬಗ್ಗೆ ವಿವರಗಳನ್ನು ಕೂಡ ಹಂಚಿಕೊಂಡಿದ್ದಾರೆ.
ವಿಂಡ್ಸರ್ EV ಗಾಗಿ ಟೆಸ್ಟ್ ಡ್ರೈವ್ ಸೆಪ್ಟೆಂಬರ್ 25 ರಿಂದ ಪ್ರಾರಂಭವಾಗಲಿದೆ. ಗ್ರಾಹಕರು ಅಕ್ಟೋಬರ್ 3 ರಿಂದ ವಿಂಡ್ಸರ್ EV ಅನ್ನು ಬುಕ್ ಮಾಡಲು ಪ್ರಾರಂಭಿಸಬಹುದು, ಮತ್ತು ಅದರ ಡೆಲಿವರಿಗಳು ಈ ದಸರಾ ಸಮಯದಲ್ಲಿ ಅಂದರೆ ಅಕ್ಟೋಬರ್ 12, 2024 ರಿಂದ ಪ್ರಾರಂಭವಾಗಲಿದೆ.
MG ವಿಂಡ್ಸರ್ EV ಕುರಿತು ಇನ್ನಷ್ಟು ವಿವರಗಳು
MG ವಿಂಡ್ಸರ್ EV ಒಂದು ಕ್ಲೀನ್ ಮತ್ತು ಸರಳ ಡಿಸೈನ್ ಇರುವ ಕ್ರಾಸ್ಒವರ್ ಆಗಿದೆ. ಇದು ಕನೆಕ್ಟೆಡ್ LED ಲೈಟಿಂಗ್ ಮತ್ತು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳಂತಹ ಆಧುನಿಕ ಡಿಸೈನ್ ಫೀಚರ್ ಗಳನ್ನು ಪಡೆಯುತ್ತದೆ. ವಿಂಡ್ಸರ್ EV ಯಲ್ಲಿ ಐದು ಜನರು ಆರಾಮವಾಗಿ ಕುಳಿತುಕೊಳ್ಳಬಹುದು.
ಒಳಭಾಗದಲ್ಲಿ, ಇದು ಡ್ಯಾಶ್‌ಬೋರ್ಡ್‌ನಲ್ಲಿ ವುಡನ್ ಇನ್ಸೆರ್ಟ್ಸ್ ನೊಂದಿಗೆ ಆಲ್ ಬ್ಲಾಕ್ ಕ್ಯಾಬಿನ್ ಮತ್ತು ಕ್ಯಾಬಿನ್ ಸುತ್ತಲೂ ಬ್ರೊನ್ಜ್ ಅಕ್ಸೆನ್ಟ್ ಅನ್ನು ಪಡೆಯುತ್ತದೆ. ಹಿಂದಿನ ಸೀಟುಗಳನ್ನು 135 ಡಿಗ್ರಿಗಳಷ್ಟು ರಿಕ್ಲೈನ್ ಮಾಡಬಹುದು. ಇದು 15.6-ಇಂಚಿನ ಟಚ್‌ಸ್ಕ್ರೀನ್ (ಇಲ್ಲಿಯವರೆಗೆ ಭಾರತದಲ್ಲಿ ಇರುವ ಯಾವುದೇ MG ಕಾರಿಗೆ ಹೋಲಿಸಿದರೆ ಅತ್ಯಂತ ದೊಡ್ಡದು), 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಟೋಮ್ಯಾಟಿಕ್ AC, ಪವರ್ಡ್ ಡ್ರೈವರ್ ಸೀಟ್ ಮತ್ತು ಪನರೋಮಿಕ್ ಗ್ಲಾಸ್ ರೋಡ್ ಫೀಚರ್ ಗಳನ್ನು ಪಡೆಯುತ್ತದೆ.
ಸುರಕ್ಷತೆಯ ವಿಷಯದಲ್ಲಿ 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಒಳಗೊಂಡಿದೆ.
ಇದನ್ನು ಕೂಡ ಓದಿ: ಹಬ್ಬಗಳ ಕೊಡುಗೆ ಈಗ ಟಾಟಾದ ಕೆಲವು EVಗಳಲ್ಲಿ ಕೂಡ ಲಭ್ಯ, ಪಡೆಯಿರಿ ರೂ 3 ಲಕ್ಷದವರೆಗೆ ರಿಯಾಯಿತಿ
ಬ್ಯಾಟರಿ ಪ್ಯಾಕ್ ಮತ್ತು ರೇಂಜ್
MG ವಿಂಡ್ಸರ್ EV 38 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಲಭ್ಯವಿದೆ. ಇದರ ವಿವರವಾದ ಸ್ಪೆಸಿಫಿಕೇಷನ್ ಗಳನ್ನು ಈ ಕೆಳಗೆ ಟೇಬಲ್ ನಲ್ಲಿ ನೀಡಲಾಗಿದೆ:
ಬ್ಯಾಟರಿ ಪ್ಯಾಕ್ |
38 kWh |
ಎಲೆಕ್ಟ್ರಿಕ್ ಮೋಟರ್ ಸಂಖ್ಯೆ |
1 |
ಪವರ್ |
136 PS |
ಟಾರ್ಕ್ |
200 Nm |
MIDC ಕ್ಲೇಮ್ ಮಾಡಿರುವ ರೇಂಜ್ |
331 km 331 ಕಿ.ಮೀ |
MIDC: ಮಾಡಿಫೈಡ್ ಇಂಡಿಯನ್ ಡ್ರೈವ್ ಸೈಕಲ್
ವಿಂಡ್ಸರ್ EV ಹಲವಾರು ಚಾರ್ಜಿಂಗ್ ಆಯ್ಕೆಗಳನ್ನು ಸಪೋರ್ಟ್ ಮಾಡುತ್ತದೆ, ವಿವರಗಳನ್ನು ಕೆಳಗೆ ನೀಡಲಾಗಿದೆ:
ಚಾರ್ಜರ್ |
ಚಾರ್ಜಿಂಗ್ ಸಮಯ |
3.3 kW AC ಚಾರ್ಜರ್ |
13.8 ಗಂಟೆಗಳು |
7.4 kW AC ಚಾರ್ಜರ್ |
6.5 ಗಂಟೆಗಳು |
50 kW DC ಫಾಸ್ಟ್ ಚಾರ್ಜರ್ |
55 ನಿಮಿಷಗಳು |
ಮೊದಲ ಕೆಲವು ಗ್ರಾಹಕರು ವಿಂಡ್ಸರ್ EV ಬ್ಯಾಟರಿಯ ಮೇಲೆ ಲೈಫ್ ಟೈಮ್ ವಾರಂಟಿಯನ್ನು ಪಡೆಯಲಿದ್ದಾರೆ. ಗ್ರಾಹಕರು MGಯ eHUB ಆಪ್ ಅನ್ನು ಬಳಸಿ ಎಲ್ಲಾ ಸಾರ್ವಜನಿಕ ಚಾರ್ಜರ್‌ಗಳಲ್ಲಿ ಒಂದು ವರ್ಷದವರೆಗೆ ಉಚಿತ ಚಾರ್ಜಿಂಗ್ ಪಡೆಯಬಹುದು.
ಪ್ರತಿಸ್ಪರ್ಧಿಗಳು
MG ವಿಂಡ್ಸರ್ EV ಅನ್ನು ಟಾಟಾ ನೆಕ್ಸಾನ್ EV ಮತ್ತು ಮಹೀಂದ್ರಾ XUV400 EV ಗೆ ಕ್ರಾಸ್ಒವರ್ ಪರ್ಯಾಯ ಆಯ್ಕೆಯಾಗಿ ಪರಿಗಣಿಸಬಹುದು. ಅದರ ಬೆಲೆ ಮತ್ತು ಎಲೆಕ್ಟ್ರಿಕ್ ಮೋಟಾರ್ ಸ್ಪೆಸಿಫಿಕೇಷನ್ ಗಳನ್ನು ನೋಡಿದರೆ, ಇದು ಟಾಟಾ ಪಂಚ್ EV ಗೆ ಕೂಡ ಪ್ರತಿಸ್ಪರ್ಧಿಯಾಗಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: MG ವಿಂಡ್ಸರ್ EV ಆಟೋಮ್ಯಾಟಿಕ್