MG Windsor EV ವರ್ಸಸ್ Wuling Cloud EV: ನಿಮಗಾಗಿ ತಂದಿದ್ದೇವೆ ಟಾಪ್ 5 ವ್ಯತ್ಯಾಸಗಳು
ಎಂಜಿ ವ ಿಂಡ್ಸರ್ ಇವಿ ಗಾಗಿ shreyash ಮೂಲಕ ಸೆಪ್ಟೆಂಬರ್ 30, 2024 04:16 pm ರಂದು ಪ್ರಕಟಿಸಲಾಗಿದೆ
- 323 Views
- ಕಾಮೆಂಟ್ ಅನ್ನು ಬರೆಯಿರಿ
ವಿಂಡ್ಸರ್ ಇವಿ ಮತ್ತು ಕ್ಲೌಡ್ ಇವಿ ಎರಡೂ ಒಂದೇ ಡಿಸೈನ್ ಮತ್ತು ಫೀಚರ್‌ಗಳನ್ನು ಹೊಂದಿವೆ, ಆದರೆ ಕ್ಲೌಡ್ ಇವಿ ದೊಡ್ಡ ಬ್ಯಾಟರಿ ಮತ್ತು ADAS ಅನ್ನು ಪಡೆಯುತ್ತದೆ
MG ವಿಂಡ್ಸರ್ ಇವಿ ಭಾರತದಲ್ಲಿ ಬಿಡುಗಡೆಯಾದ ಇತ್ತೀಚಿನ ಇವಿಗಳಲ್ಲಿ ಒಂದಾಗಿದೆ. ಇದು ಒಂದು ಎಲೆಕ್ಟ್ರಿಕ್ ಕ್ರಾಸ್‌ಒವರ್ ಆಗಿದ್ದು ಮತ್ತು ಕ್ಲೌಡ್ ಇವಿಯ ರೀಬ್ಯಾಡ್ಜ್ ಮಾಡಿದ ವರ್ಷನ್ ಆಗಿದೆ. ಇದನ್ನು ವಿದೇಶದಲ್ಲಿ 'ವುಲಿಂಗ್' ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ವಿಂಡ್ಸರ್ ಇವಿ ಅದರ ಅಂತರಾಷ್ಟ್ರೀಯ ವರ್ಷನ್‌ನಲ್ಲಿ ಇರುವ ಅದೇ ಡಿಸೈನ್ ಮತ್ತು ಫೀಚರ್‌ಗಳನ್ನು ಹೊಂದಿದ್ದರೂ ಕೂಡ, ಸ್ಪೆಸಿಫಿಕೇಷನ್‌ಗಳು ಮತ್ತು ಇಕ್ವಿಪ್‌ಮೆಂಟ್‌ಗಳಲ್ಲಿ ಕೆಲವು ವ್ಯತ್ಯಾಸಗಳಿವೆ. ಬನ್ನಿ, ವಿಂಡ್ಸರ್ ಇವಿ ಮತ್ತು ಕ್ಲೌಡ್ ಇವಿ ನಡುವಿನ ಟಾಪ್ 5 ವ್ಯತ್ಯಾಸಗಳನ್ನು ನೋಡೋಣ.
ಡೈಮೆನ್‌ಶನ್‌ಗಳು
ಮಾಡೆಲ್ |
MG ವಿಂಡ್ಸರ್ ಇವಿ |
ವುಲಿಂಗ್ ಕ್ಲೌಡ್ ಇವಿ |
ವ್ಯತ್ಯಾಸ |
ಉದ್ದ |
4295 ಮಿ.ಮೀ |
4295 ಮಿ.ಮೀ |
ಯಾವುದೇ ಬದಲಾವಣೆ ಇಲ್ಲ |
ಅಗಲ (ಮಿರರ್‌ಗಳನ್ನು ಹೊರತುಪಡಿಸಿ) |
1850 ಮಿ.ಮೀ |
1850 ಮಿ.ಮೀ |
ಯಾವುದೇ ಬದಲಾವಣೆ ಇಲ್ಲ |
ಎತ್ತರ |
1677 ಮಿ.ಮೀ |
1652 ಮಿ.ಮೀ |
+ 25 ಮಿ.ಮೀ |
ವೀಲ್‌ಬೇಸ್ |
2700 ಮಿ.ಮೀ |
2700 ಮಿ.ಮೀ |
ಯಾವುದೇ ಬದಲಾವಣೆ ಇಲ್ಲ |
ವಿಂಡ್ಸರ್ ಇವಿ ಮತ್ತು ಕ್ಲೌಡ್ ಇವಿ ಎರಡೂ ಬಹುತೇಕ ಒಂದೇ ಡೈಮೆನ್‌ಶನ್‌ಗಳನ್ನು ಹೊಂದಿವೆ, ಆದರೆ ಇಂಡಿಯಾ-ಸ್ಪೆಕ್ ವಿಂಡ್ಸರ್ ಇವಿ ಕ್ಲೌಡ್ ಇವಿಗಿಂತ 25 ಎಂಎಂ ಎತ್ತರವಾಗಿದೆ.
ಕಲರ್ ಆಯ್ಕೆಗಳು
MG ವಿಂಡ್ಸರ್ ಇವಿ ಮತ್ತು ವುಲಿಂಗ್ ಕ್ಲೌಡ್ ಇವಿ ವೈಟ್, ಬ್ಲಾಕ್ ಮತ್ತು ಬೀಜ್ ಕಲರ್‌ಗಳಲ್ಲಿ ಲಭ್ಯವಿವೆ, ಹಾಗೆಯೆ ಎರಡೂ ಕೂಡ ತನ್ನದೇ ಆದ ಒಂದು ವಿಶೇಷ ಕಲರ್ ಆಯ್ಕೆಯನ್ನು ನೀಡುತ್ತದೆ. ಇಂಡಿಯಾ-ಸ್ಪೆಕ್ ವಿಂಡ್ಸರ್ ಇವಿ ಟರ್ಕೊಯಿಸ್ ಗ್ರೀನ್ ಶೇಡ್ ನಲ್ಲಿ ಲಭ್ಯವಿದೆ, ಮತ್ತು ಕ್ಲೌಡ್ ಇವಿ ಮಾಲ್ಟೀಸ್ ಬ್ಲೂ ಆಯ್ಕೆಯನ್ನು ನೀಡುತ್ತದೆ.
ವಿಂಡ್ಸರ್ ಇವಿ ಟರ್ಕೊಯಿಸ್ ಗ್ರೀನ್
ಕ್ಲೌಡ್ ಇವಿ ಮಾಲ್ಟೀಸ್ ಬ್ಲೂ
ಫೀಚರ್‌ಗಳು
ವಿಂಡ್ಸರ್ ಇವಿಯು ಅದರ ಅಂತಾರಾಷ್ಟ್ರೀಯ ವರ್ಷನ್ ಆಗಿರುವ ಕ್ಲೌಡ್ ಇವಿಯಲ್ಲಿರುವ ಅನೇಕ ಫೀಚರ್‌ಗಳನ್ನು ಹೊಂದಿದೆ. ಎರಡೂ ಇವಿಗಳು 15.6-ಇಂಚಿನ ಟಚ್‌ಸ್ಕ್ರೀನ್, 8.8-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, 6-ವೇ ಪವರ್ಡ್ ಡ್ರೈವರ್ ಸೀಟ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು 135 ಡಿಗ್ರಿಗಳವರೆಗೆ ರಿಕ್ಲೈನ್ ಆಗುವ ಹಿಂಭಾಗದ ಸೀಟುಗಳಂತಹ ಫೀಚರ್‌ಗಳನ್ನು ಹೊಂದಿವೆ.
ಆದರೆ, ವಿಂಡ್ಸರ್ EV ಹೆಚ್ಚುವರಿಯಾಗಿ ಪನರೋಮಿಕ್ ಫಿಕ್ಸೆಡ್ ಗ್ಲಾಸ್ ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳನ್ನು ಪಡೆಯುತ್ತದೆ. ಮತ್ತೊಂದೆಡೆ, ಕ್ಲೌಡ್ EV, 4-ವೇ ಪವರ್ಡ್ ಕೋ ಡ್ರೈವರ್ ಸೀಟ್ ಅನ್ನು ಹೊಂದಿದೆ, ಇದು ವಿಂಡ್ಸರ್ ಇವಿಯಲ್ಲಿ ಲಭ್ಯವಿಲ್ಲ.
ಸುರಕ್ಷತೆ
ಸುರಕ್ಷತೆಯ ವಿಷಯದಲ್ಲಿ, ಎರಡೂ ಇವಿಗಳು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಹೋಲ್ಡ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಒಳಗೊಂಡಿವೆ. ವಿಂಡ್ಸರ್ ಇವಿ 6 ಏರ್‌ಬ್ಯಾಗ್‌ಗಳನ್ನು ಪಡೆದರೆ, ಕ್ಲೌಡ್ ಇವಿ ಕೇವಲ 4 ಏರ್‌ಬ್ಯಾಗ್‌ಗಳೊಂದಿಗೆ ಬರುತ್ತದೆ.
ಕ್ಲೌಡ್ ಇವಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಮತ್ತು ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳ (ADAS) ಫೀಚರ್‌ನೊಂದಿಗೆ ಬರುತ್ತದೆ, ಇವೆಲ್ಲವೂ ವಿಂಡ್ಸರ್ ಇವಿಯಲ್ಲಿ ಲಭ್ಯವಿಲ್ಲ.
ಪವರ್‌ಟ್ರೇನ್
MG ವಿಂಡ್ಸರ್ ಇವಿಗೆ ಹೋಲಿಸಿದರೆ ವುಲಿಂಗ್ ಕ್ಲೌಡ್ ಇವಿ ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ವಿವರವಾದ ಸ್ಪೆಸಿಫಿಕೇಷನ್‌ಗಳನ್ನು ಈ ಕೆಳಗೆ ನೀಡಲಾಗಿದೆ:
ಸ್ಪೆಸಿಫಿಕೇಷನ್‌ಗಳು |
MG ವಿಂಡ್ಸರ್ ಇವಿ |
MG ಕ್ಲೌಡ್ ಇವಿ |
ಬ್ಯಾಟರಿ ಪ್ಯಾಕ್ |
38 kWh |
50.6 kWh |
ಎಲೆಕ್ಟ್ರಿಕ್ ಮೋಟಾರ್ ಸಂಖ್ಯೆ |
1 |
1 |
ಪವರ್ |
136 PS |
136 PS |
ಟಾರ್ಕ್ |
200 Nm |
200 Nm |
ರೇಂಜ್ |
332 (MIDC) |
460 km (CLTC) |
MIDC - ಮಾಡಿಫೈಡ್ ಇಂಡಿಯನ್ ಡ್ರೈವ್ ಸೈಕಲ್
CLTC - ಚೀನಾ ಲೈಟ್ ಡ್ಯೂಟಿ ವೆಹಿಕಲ್ ಟೆಸ್ಟ್ ಸೈಕಲ್
ಬೆಲೆ ರೇಂಜ್ ಮತ್ತು ಪ್ರತಿಸ್ಪರ್ಧಿಗಳು
ಭಾರತದಲ್ಲಿ MG ವಿಂಡ್ಸರ್ ಇವಿ ಬೆಲೆಯು ರೂ. 13.50 ಲಕ್ಷದಿಂದ ಮತ್ತು ರೂ. 15.50 ಲಕ್ಷದವರೆಗೆ (ಪರಿಚಯಾತ್ಮಕ, ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ) ಇದೆ. MG ತನ್ನ ವಿಂಡ್ಸರ್ ಇವಿಗಾಗಿ ಬ್ಯಾಟರಿ ರೆಂಟಲ್ ಪ್ರೋಗ್ರಾಮ್ ಅನ್ನು ಕೂಡ ನೀಡುತ್ತದೆ. ನೀವು ಈ ಆಯ್ಕೆಯನ್ನು ಆರಿಸಿದರೆ, ಬೆಲೆಯು 9.99 ಲಕ್ಷದಿಂದ ಪ್ರಾರಂಭವಾಗುತ್ತದೆ. ವಿಂಡ್ಸರ್ EV ಅನ್ನು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ XUV400 ಇವಿಗೆ ಹೋಲಿಸಿದರೆ ಪರ್ಯಾಯ ಕ್ರಾಸ್ಒವರ್ ಆಯ್ಕೆಯಾಗಿ ಪರಿಗಣಿಸಬಹುದು ಮತ್ತು ಅದರ ಬೆಲೆ ಮತ್ತು ಸ್ಪೆಸಿಫಿಕೇಷನ್‌ಗಳನ್ನು ನೋಡಿದರೆ, ಇದು ಟಾಟಾ ಪಂಚ್ ಇವಿಗೆ ಪ್ರತಿಸ್ಪರ್ಧಿಯಾಗಿದೆ.
ವಾಹನ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: MG ವಿಂಡ್ಸರ್ ಇವಿ ಆಟೋಮ್ಯಾಟಿಕ್