• English
  • Login / Register

ಭಾರತದಲ್ಲಿ ಮಿನಿ ಕಂಟ್ರಿಮ್ಯಾನ್ ಶ್ಯಾಡೋ ಆವೃತ್ತಿ ಬಿಡುಗಡೆ; ಇದರ ಬೆಲೆ 49 ಲಕ್ಷ ರೂ ನಿಂದ ಪ್ರಾರಂಭ

ಮಿನಿ ಕೂಪರ್ ಕಾನ್‌ಟ್ರೀಮ್ಯಾನ್‌ ಗಾಗಿ rohit ಮೂಲಕ ಅಕ್ಟೋಬರ್ 11, 2023 12:55 pm ರಂದು ಪ್ರಕಟಿಸಲಾಗಿದೆ

  • 48 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಿನಿ ಭಾರತದಲ್ಲಿ ಕಂಟ್ರಿಮ್ಯಾನ್ ಶ್ಯಾಡೋ ಆವೃತ್ತಿಯ 24 ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.

Mini Countryman Shadow edition

  • ಈ ಸೀಮಿತ ಆವೃತ್ತಿಯು ಸ್ಪೋರ್ಟಿ ಕಂಟ್ರಿಮ್ಯಾನ್ ಕೂಪರ್‌ನ S JCW ಮಾದರಿಯನ್ನು ಆಧರಿಸಿದೆ. 
  • ಇದು ಕಂಚಿನ ORVM ಹೌಸಿಂಗ್‌ಗಳು (ಸೈಡ್‌ ಮಿರರ್‌ನ ಕವರ್‌) ಮತ್ತು ರೂಫ್, ಡೆಕಲ್‌ಗಳು ಮತ್ತು 18-ಇಂಚಿನ ಅಲಾಯ್‌ ವೀಲ್‌ಗಳೊಂದಿಗೆ ಸಂಪೂರ್ಣ ಕಪ್ಪು ಹೊರಭಾಗವನ್ನು ಪಡೆಯುತ್ತದೆ.
  • ಒಳಗೆ, ಇದು ಸಿಲ್ವರ್ ಪೈಪಿಂಗ್ ಮತ್ತು ಜೆಸಿಡಬ್ಲ್ಯೂ-ವಿಶೇಷ ಲೋಹದ ಪೆಡಲ್‌ಗಳೊಂದಿಗೆ ಟ್ಯಾನ್ ಲೆದರ್ ಅಪ್‌ಹೊಲ್ಸ್‌ಟೆರಿಯನ್ನು ಹೊಂದಿದೆ. 
  • ಡ್ಯಾಶ್‌ಬೋರ್ಡ್‌ನಲ್ಲಿರುವ ವೈಶಿಷ್ಟ್ಯಗಳು 8.8-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಿವೆ.
  • ಈ ಎಸ್‌ಯುವಿ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ ಮತ್ತು ಇದನ್ನು 7-ಸ್ಪೀಡ್ DCT ಗೆ ಜೋಡಿಸಲಾಗಿದೆ.

ಹಬ್ಬದ ಸೀಸನ್‌ನಲ್ಲಿ ಆಟೋಮೊಬೈಲ್‌ ಉದ್ಯಮದಾದ್ಯಂತ ಅನೇಕ ಕಾರು ತಯಾರಕರು ತಮ್ಮ ಮಾದರಿಗಳ ಮೇಲೆ ವಿವಿಧ ವಿಶೇಷ ಮತ್ತು ಸೀಮಿತ ಆವೃತ್ತಿಗಳನ್ನು ಪರಿಚಯಿಸಿದ್ದಾರೆ. ಈಗ, ಮಿನಿ ಕಂಟ್ರಿಮ್ಯಾನ್ ಕೂಪರ್ ಎಸ್ ಜೆಸಿಡಬ್ಲ್ಯೂ ಮಾದರಿಯನ್ನು ಆಧರಿಸಿದ ಮಿನಿ ಕಂಟ್ರಿಮ್ಯಾನ್ಸ್ ಶ್ಯಾಡೋ ಆವೃತ್ತಿಯನ್ನು ಹೊರತರುವ ಮೂಲಕ ಮಿನಿ ಕೂಡ ಈ ಸಂಪ್ರದಾಯವನ್ನು ಅನುಸರಿಸಿದೆ. ಭಾರತದಾದ್ಯಂತ ಇದರ ಎಕ್ಸ್-ಶೋರೂಮ್ ಬೆಲೆ 49 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ ಮತ್ತು ಕಾಂಪ್ಯಾಕ್ಟ್ ಐಷಾರಾಮಿ ಎಸ್‌ಯುವಿಯ ಸೀಮಿತ 24 ಕಾರುಗಳನ್ನು ಮಾತ್ರ  ಮಾರಾಟ ಮಾಡಲಿದೆ.

ಹೊರಭಾಗದಲ್ಲಿ ಏನು ಭಿನ್ನವಾಗಿದೆ?

Mini Countryman Shadow edition bonnet decals
Mini Countryman Shadow edition bronze ORVM housings

ಸೀಮಿತ ಆವೃತ್ತಿಯಾಗಿರುವುದರಿಂದ, ಕಂಟ್ರಿಮ್ಯಾನ್ ಶ್ಯಾಡೋ ಆವೃತ್ತಿಯು ಸಂಪೂರ್ಣ ಕಪ್ಪು ಬಾಡಿ ಬಣ್ಣದ ಆಯ್ಕೆ, ORVM ಗಳಿಗೆ ಮತ್ತು ರೂಫ್‌ಗೆ ಕಂಚಿನ ಫಿನಿಶ್‌ ಮತ್ತು ಬಾನೆಟ್ ಮತ್ತು ಮುಂಭಾಗದ ಫೆಂಡರ್‌ಗಳ ಮೇಲೆ ವಿವಿಧ ಡಿಸೈನ್‌ನ ಸ್ಟಿಕ್ಕರ್‌ ಸೇರಿದಂತೆ ಹಲವು ಆಪ್‌ಡೇಟ್‌ಗಳನ್ನು ಪಡೆಯುತ್ತದೆ. ಮಿನಿಯು 18-ಇಂಚಿನ ಅಲಾಯ್‌ ವೀಲ್‌ಗಳು ಮತ್ತು ಸಿ-ಪಿಲ್ಲರ್‌ನ ಮೇಲಿನ ರೂಫ್‌ನ ಮೇಲೆ 'ಶ್ಯಾಡೋ' ಆವೃತ್ತಿಯ ಸ್ಟಿಕ್ಕರ್‌ಗಳನ್ನು ಸಹ ಒದಗಿಸಿದೆ. 'ಕಂಟ್ರಿಮ್ಯಾನ್' ಚಿಹ್ನೆ ಸೇರಿದಂತೆ ಎಲ್ಲಾ ಮಾನಿಕರ್‌ಗಳು ಕಪ್ಪು ಬಣ್ಣದಲ್ಲಿ ನೀಡಲಾಗಿದೆ. JCW (ಜಾನ್ ಕೂಪರ್ ವರ್ಕ್ಸ್) ಆವೃತ್ತಿಯಾಗಿರುವುದರಿಂದ, ಇದನ್ನು JCW ಏರೋಡೈನಾಮಿಕ್ಸ್ ಕಿಟ್‌ನೊಂದಿಗೆ ಅಳವಡಿಸಲಾಗಿದೆ, ಇದು ಸ್ಪೋರ್ಟಿ ನಿಲುವನ್ನು ನೀಡುತ್ತದೆ. 

ಒಳಭಾಗದಲ್ಲಿ ಕ್ಲಾಸಿ

Mini Countryman Shadow edition seats

ಒಳಭಾಗದಲ್ಲಿ, ಮಿನಿ ಕಂಟ್ರಿಮ್ಯಾನ್ ಶ್ಯಾಡೋ ಆವೃತ್ತಿಯು ಎಸ್‌ಯುವಿಯ ಟ್ಯಾನ್ ಲೆದರ್ ಅಪ್‌ಹೊಲ್ಸ್‌ಟೆರಿಯನ್ನು ಉಳಿಸಿಕೊಂಡಿದೆ. ಆದರೆ ಸೀಮಿತ ಆವೃತ್ತಿಯ ಸ್ವಭಾವವನ್ನು ಪ್ರತಿಬಿಂಬಿಸಲು ಕಾಂಟ್ರಾಸ್ಟ್ ಸಿಲ್ವರ್ ಪೈಪಿಂಗ್ ಹೊಂದಿದೆ. ಇದು JCW-ವಿಶೇಷ ಮೆಟಲ್‌ ಪೆಡಲ್‌ಗಳನ್ನು ಮತ್ತು ಸ್ಟೀರಿಂಗ್ ವೀಲ್‌ಗಾಗಿ ನಪ್ಪಾ ಲೆದರ್ ಫಿನಿಶ್ ಅನ್ನು ಸಹ ಹೊಂದಿದೆ.

Mini Countryman Shadow edition panoramic glass roof

ವೈಶಿಷ್ಟ್ಯಗಳ ವಿಷಯದಲ್ಲಿ, ಕಂಟ್ರಿಮ್ಯಾನ್ ಶ್ಯಾಡೋ ಆವೃತ್ತಿಯು ಮಿನಿಯ ಎಕ್ಸೈಟ್‌ಮೆಂಟ್ ಪ್ಯಾಕ್‌ನ ಭಾಗವಾಗಿ ಎಲ್ಇಡಿ ಆಂಬಿಯೆಂಟ್ ಲೈಟಿಂಗ್ ಮತ್ತು ಪಡ್ಲ್ ಲ್ಯಾಂಪ್‌ಗಳನ್ನು ಹೊಂದಲಿದೆ. ಈ ಎಸ್‌ಯುವಿನಲ್ಲಿರುವ ಇತರ ಸೌಕರ್ಯಗಳೆಂದರೆ ಪನೋರಮಿಕ್ ಗ್ಲಾಸ್‌ ರೂಫ್, 8.8-ಇಂಚಿನ ಟಚ್‌ಸ್ಕ್ರೀನ್, ಚಾಲಿತ ಟೈಲ್‌ಗೇಟ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಇದರ ಸುರಕ್ಷತಾ ಪ್ಯಾಕೇಜ್‌ ಆರು ಏರ್‌ಬ್ಯಾಗ್‌ಗಳು, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ರಿವರ್ಸಿಂಗ್ ಕ್ಯಾಮೆರಾ ಮತ್ತು ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ ಅನ್ನು ಒಳಗೊಂಡಿದೆ. 

 ಇದನ್ನೂ ಓದಿ: Skoda Slavia Matte Edition ಬಿಡುಗಡೆ; 15.52 ಲಕ್ಷ ರೂ. ಬೆಲೆ ನಿಗದಿ 

ಪವರ್‌ಟ್ರೇನ್‌ನ ಬಗ್ಗೆ..

Mini Countryman Shadow edition

ಮಿನಿ ಕಂಟ್ರಿಮ್ಯಾನ್ ಶ್ಯಾಡೋ ಆವೃತ್ತಿಯನ್ನು ಏಕೈಕ 2-ಲೀಟರ್ 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ (181PS/280Nm) ನೊಂದಿಗೆ ನೀಡಲಾಗುತ್ತದೆ. ಮಿನಿ ಇದನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ (DCT) ಯೊಂದಿಗೆ ಜೋಡಿಸಿದೆ.ಹಾಗೆಯೇ 5-ಬಾಗಿಲಿನ ಈ ಕ್ರಾಸ್‌ಒವರ್ ಎಸ್‌ಯುವಿ 7.5 ಸೆಕೆಂಡುಗಳಲ್ಲಿ 0 ಯಿಂದ 100 ಕಿ.ಮೀವರೆಗೆ ವೇಗವನ್ನು ಹೆಚ್ಚಿಸುವಷ್ಟು ಪವರ್‌ ಹೊಂದಿದೆ ಎಂದು ಮಿನಿ ಘೋಷಿಸಿಕೊಂಡಿದೆ. ಇದು ಸ್ಪೋರ್ಟ್ ಮತ್ತು ಗ್ರೀನ್ ಎಂಬ ಎರಡು ಡ್ರೈವ್ ಮೋಡ್‌ಗಳನ್ನು ಹೊಂದಿದೆ. 

ಸ್ಪರ್ಧಿಗಳು

Mini Countryman Shadow edition rear

 ಸೀಮಿತ ಆವೃತ್ತಿಯ 5-ಡೋರ್ ಮಿನಿ ಕಂಟ್ರಿಮ್ಯಾನ್ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಇದನ್ನು ಮರ್ಸೀಡೀಸ್‌ ಬೆನ್ಸ್‌ GLA, ಬಿಎಂಡಬ್ಲ್ಯೂ X1, ವೋಲ್ವೋ XC40, ಮತ್ತು ಆಡಿ Q3 ಗೆ ಪರ್ಯಾಯವಾಗಿ ಪರಿಗಣಿಸಬಹುದು. 

ಇದನ್ನೂ ಓದಿ: ನಿಸ್ಸಾನ್ ಮ್ಯಾಗ್ನೈಟ್ ಕುರೋ ಆವೃತ್ತಿ ಬಿಡುಗಡೆ, 8.27 ಲಕ್ಷ ರೂ.ನಿಂದ ಬೆಲೆಗಳು ಪ್ರಾರಂಭ

ಹೆಚ್ಚು ಓದಿ: ಮಿನಿ ಕೂಪರ್ ಕಂಟ್ರಿಮ್ಯಾನ್ ಆಟೋಮ್ಯಾಟಿಕ್ 

was this article helpful ?

Write your Comment on Mini ಕೂಪರ್ ಕಾನ್‌ಟ್ರೀಮ್ಯಾನ್‌

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience