Skoda Slavia Matte Edition ಬಿಡುಗಡೆ; 15.52 ಲಕ್ಷ ರೂ. ಬೆಲೆ ನಿಗದಿ
ಸ್ಕೋಡಾ ಸ್ಲಾವಿಯಾ ಗಾಗಿ shreyash ಮೂಲಕ ಅಕ್ಟೋಬರ್ 10, 2023 10:06 pm ರಂದು ಪ್ರಕಟಿಸಲಾಗಿದೆ
- 57 Views
- ಕಾಮೆಂಟ್ ಅನ್ನು ಬರೆಯಿರಿ
ಸ್ಕೋಡಾ ಸ್ಲಾವಿಯಾ ಮ್ಯಾಟ್ ಆವೃತ್ತಿಯು ಅದರ ಟಾಪ್-ಎಂಡ್ ಸ್ಟೈಲ್ ವೇರಿಯೆಂಟ್‌ನ್ನು ಆಧರಿಸಿದೆ
- ಸ್ಕೋಡಾ ಸ್ಲಾವಿಯಾ ಮ್ಯಾಟ್ ಆವೃತ್ತಿಯು 1-ಲೀಟರ್ ಮತ್ತು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ.
- ಸ್ಲಾವಿಯಾದ ಮ್ಯಾಟ್ ಪೇಂಟ್ ಆಯ್ಕೆಗಾಗಿ ಗ್ರಾಹಕರು 40,000 ರೂಪಾಯಿಗಳವರೆಗೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.
- ಒಳಗೆ, ಸ್ಲಾವಿಯಾದ ಟಾಪ್-ಎಂಡ್‌ನ ವೇರಿಯೆಂಟ್ ಸ್ಟೈಲ್ ಈಗ ದೊಡ್ಡ 10-ಇಂಚಿನ ಟಚ್‌ಸ್ಕ್ರೀನ್ ವ್ಯವಸ್ಥೆಯನ್ನು ಪಡೆಯುತ್ತವೆ.
- ವೈಶಿಷ್ಟ್ಯಗಳ ಸೇರ್ಪಡೆಗಳು ಫುಟ್‌ವೆಲ್ ಇಲ್ಯುಮಿನೇಷನ್ ಜೊತೆಗೆ ಎಲೆಕ್ಟ್ರಿಕಲ್ ಡ್ರೈವರ್ ಮತ್ತು ಕೋ-ಡ್ರೈವರ್ ಸೀಟ್‌ಗಳನ್ನು ಸಹ ಒಳಗೊಂಡಿದೆ.
ಮೂರು ತಿಂಗಳ ಹಿಂದೆ ಸ್ಕೋಡಾ ಕುಶಾಕ್‌ನ ಮ್ಯಾಟ್ ಆವೃತ್ತಿಯನ್ನು ಬಿಡುಗಡೆ ಮಾಡಿದ ನಂತರ, ಜೆಕ್ ಮೂಲದ ಈ ವಾಹನ ತಯಾರಕರು ಈಗ ಸ್ಕೋಡಾ ಸ್ಲಾವಿಯಾಕ್ಕೂ ಇದೇ ರೀತಿಯ ಮ್ಯಾಟ್ ಆವೃತ್ತಿಯನ್ನು ಪರಿಚಯಿಸಿದ್ದಾರೆ. ಸೆಡಾನ್‌ನ ಈ ಮ್ಯಾಟ್ ಆವೃತ್ತಿಯು ಅದರ ಟಾಪ್- ಎಂಡ್ ಸ್ಟೈಲ್ ವೇರಿಯೆಂಟ್‌ನ್ನು ಆಧರಿಸಿದೆ. ಹೆಚ್ಚುವರಿಯಾಗಿ, ಸ್ಕೋಡಾ ಸ್ಲಾವಿಯಾದ ಸ್ಟೈಲ್ ವೆರಿಯೆಂಟ್‌ನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ನಾವು ಹೊಸದಾಗಿ ಸೇರ್ಪಡೆಯಾಗಿರುವ ವೈಶಿಷ್ಟ್ಯಗಳನ್ನು ಗಮನಿಸುವ ಮೊದಲು, ಸೆಡಾನ್‌ನ ಮ್ಯಾಟ್ ಆವೃತ್ತಿಯ ಬೆಲೆಯನ್ನು ನೋಡೋಣ.
ವೇರಿಯೆಂಟ್‌ಗಳು |
ಸಾಮಾನ್ಯ ಬೆಲೆ |
ಮ್ಯಾಟ್ ಆವೃತ್ತಿಯ ಬೆಲೆ |
ವ್ಯತ್ಯಾಸ |
ಸ್ಟೈಲ್ 1-ಲೀಟರ್ TSI ಮ್ಯಾನುಯಲ್ |
15.12 ಲಕ್ಷ ರೂ |
15.52 ಲಕ್ಷ ರೂ |
+ 40,000 ರೂ |
ಸ್ಟೈಲ್ 1-ಲೀಟರ್ TSI ಆಟೋಮ್ಯಾಟಿಕ್ |
16.32 ಲಕ್ಷ ರೂ |
16.72 ಲಕ್ಷ ರೂ |
+ 40,000 ರೂ |
ಸ್ಟೈಲ್ 1.5-ಲೀಟರ್ TSI ಮ್ಯಾನುಯಲ್ |
17.32 ಲಕ್ಷ ರೂ |
17.72 ಲಕ್ಷ ರೂ |
+ 40,000 ರೂ |
ಸ್ಟೈಲ್ 1.5-ಲೀಟರ್ TSI DSG |
18.72 ಲಕ್ಷ ರೂ |
19.12 ಲಕ್ಷ ರೂ |
+ 40,000 ರೂ |
ಸ್ಕೋಡಾ ಸ್ಲಾವಿಯಾದ ಮ್ಯಾಟ್ ಆವೃತ್ತಿಗಾಗಿ, ಗ್ರಾಹಕರು ಸೆಡಾನ್‌ನ ಟಾಪ್-ಎಂಡ್ ಸ್ಟೈಲ್ ಆವೃತ್ತಿಗಳ ಮೇಲೆ 40,000 ರೂಪಾಯಿಗಳಷ್ಟು ಹೆಚ್ಚು ಪಾವತಿಸಬೇಕಾಗುತ್ತದೆ.
ಕಾರ್ಬನ್ ಸ್ಟೀಲ್ ಮ್ಯಾಟ್ ಗ್ರೇ ಶೇಡ್
ಸ್ಕೋಡಾ ಕುಶಾಕ್‌ನಂತೆಯೇ, ಸ್ಲಾವಿಯಾದ ಮ್ಯಾಟ್ ಆವೃತ್ತಿಯು ಸಹ ಕಾರ್ಬನ್ ಸ್ಟೀಲ್ ಮ್ಯಾಟ್ ಗ್ರೇ ಎಂಬ ಶೇಡ್‌ನಲ್ಲಿ ಲಭ್ಯವಿದೆ. ಅದರ ಮ್ಯಾಟ್ ಪೇಂಟ್ ಫಿನಿಶ್‌ನ ಹೊರತಾಗಿಯೂ, ಡೋರ್ ಹ್ಯಾಂಡಲ್‌ಗಳು ಮತ್ತು ಬೆಲ್ಟ್‌ಲೈನ್ ಕ್ರೋಮ್ ಫಿನಿಶ್ ನಲ್ಲಿ ನೀಡಲಾಗುತ್ತದೆ. ಈ ಬಾಡಿ ಪೇಂಟ್‌ನ ಆಯ್ಕೆಯನ್ನು ಹೊರತುಪಡಿಸಿ, ಸ್ಕೋಡಾ ಸ್ಲಾವಿಯಾದ ಮ್ಯಾಟ್ ಆವೃತ್ತಿಯು ಯಾವುದೇ ಗಮನಾರ್ಹ ವಿನ್ಯಾಸ ಬದಲಾವಣೆಗಳನ್ನು ಪಡೆಯುವುದಿಲ್ಲ.
ಸಹ ಪರಿಶೀಲಿಸಿ: ಸ್ಕೋಡಾ ಕುಶಕ್ ಪಡೆದಿದೆ ಸೀಮಿತ ಆವೃತ್ತಿಯ ಮ್ಯಾಟ್ ಬಣ್ಣದ ಆಯ್ಕೆ
ಹೊಸ ವೈಶಿಷ್ಟ್ಯಗಳು
ಸ್ಕೋಡಾ ಸ್ಲಾವಿಯಾದ ಮ್ಯಾಟ್ ಆವೃತ್ತಿಯು ಅದೇ ಕಪ್ಪು ಮತ್ತು ಮರಳು ಬಣ್ಣದ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ. ಸ್ಕೋಡಾ ಈಗ ಸ್ಲಾವಿಯಾದಲ್ಲಿ 10-ಇಂಚಿನ ಟಚ್‌ಸ್ಕ್ರೀನ್ ವ್ಯವಸ್ಥೆಯನ್ನು ಮರುಪರಿಚಯಿಸಿದೆ. ಆದರೆ, ಇದು ಸೆಮಿಕಂಡಕ್ಟರ್ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಲಭ್ಯವಿಲ್ಲ. ಸೆಡಾನ್‌ನ ಟಾಪ್-ಎಂಡ್ ಸ್ಟೈಲ್ ವೇರಿಯೆಂಟ್ ಈಗ ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಮತ್ತು ಕೋ-ಡ್ರೈವರ್ ಸೀಟ್‌ಗಳನ್ನು ನೀಡುತ್ತದೆ. ಇದರೊಂದಿಗೆ ಫುಟ್‌ವೆಲ್ ಇಲ್ಯುಮಿನೇಷನ್ (ಕಾಲು ಇಡುವ ಜಾಗದಲ್ಲಿ ಕಲರ್‌ಫುಲ್ ಲೈಟಿಂಗ್) ವ್ಯವಸ್ಥೆ ಕೂಡ ಹೊಂದಿದೆ.
ಸ್ಲಾವಿಯಾದಲ್ಲಿನ ಇತರ ವೈಶಿಷ್ಟ್ಯಗಳೆಂದರೆ 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಸಿಂಗಲ್-ಪೇನ್ ಸನ್‌ರೂಫ್, ವಾತಾಯನ ಮುಂಭಾಗದ ಸೀಟುಗಳು ಮತ್ತು ಕ್ರೂಸ್ ಕಂಟ್ರೋಲ್. ಹಾಗೆಯೇ, ಆರು ಏರ್‌ಬ್ಯಾಗ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮೂಲಕ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ.
ಇದನ್ನೂ ನೋಡಿ: ಹೊಸ ವೈಶಿಷ್ಟ್ಯಗಳನ್ನು ಪಡೆಯಲಿರುವ ವೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಟೈಗನ್, ಹಬ್ಬದ ಸೀಸನ್‌ನಲ್ಲಿ ಸಿಗುತ್ತಿದೆ ಇನ್ನಷ್ಟು ಪ್ರಯೋಜನಗಳು
ಆಫರ್‌ನಲ್ಲಿರುವ ಪವರ್‌ಟ್ರೇನ್‌ಗಳು
ಸ್ಲಾವಿಯಾದ ಮ್ಯಾಟ್ ಆವೃತ್ತಿಯು 1-ಲೀಟರ್ (115PS/178Nm) ಮತ್ತು 1.5-ಲೀಟರ್ ಘಟಕ (150PS/250Nm) ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಎರಡೂ ಎಂಜಿನ್‌ಗಳನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡಲಾಗುತ್ತದೆ, ಆದರೆ ಮೊದಲನೆಯದ್ದು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಪಡೆಯುತ್ತದೆ ಮತ್ತು ಎರಡನೆಯದು 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (ಡಿಸಿಟಿ) ಆಯ್ಕೆಯನ್ನು ಪಡೆಯುತ್ತದೆ.
ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು
ಭಾರತದಾದ್ಯಂತ ಸ್ಕೋಡಾ ಸ್ಲಾವಿಯಾದ ಎಕ್ಸ್ ಶೋರೂಂ ಬೆಲೆ ಈಗ 10.89 ಲಕ್ಷ ರೂ.ನಿಂದ 19.12 ಲಕ್ಷ ರೂ.ಗಳ ನಡುವೆ ಇದೆ. ಇದು ಮಾರುಕಟ್ಟೆಯಲ್ಲಿ ವೋಕ್ಸ್‌ವ್ಯಾಗನ್ ವರ್ಟಸ್, ಹೋಂಡಾ ಸಿಟಿ, ಹುಂಡೈ ವೆರ್ನಾ ಮತ್ತು ಮಾರುತಿ ಸುಜುಕಿ ಸಿಯಾಜ್‌ನ ವಿರುದ್ಧ ಸ್ಪರ್ಧಿಸುತ್ತದೆ.
ಈ ಹಬ್ಬದ ಸೀಸನ್‌ನಲ್ಲಿ ಸ್ಕೋಡಾ ಇತ್ತೀಚೆಗೆ ಸ್ಲಾವಿಯಾ ಮತ್ತು ಕುಶಾಕ್‌ನ ಬೇಸ್ ಮೊಡೆಲ್‌ಗಳ ಬೆಲೆಗಳನ್ನು ಸೀಮಿತ ಅವಧಿಗೆ ಇಳಿಸಿದೆ. ಹೆಚ್ಚಿನ ವಿವರಗಳಿಗಾಗಿ ನೀವು ಈ ಸುದ್ದಿಯನ್ನು ಓದಿ.
ಇನ್ನಷ್ಟು ಓದಿ: ಸ್ಲಾವಿಯಾದ ಆನ್ ರೋಡ್ ಬೆಲೆ