ಇನ್ನೂ ಡೆಲಿವೆರಿಯಾಗಬೇಕಿವೆ ಸುಮಾರು 1.2 ಲಕ್ಷ ಸ್ಕಾರ್ಪಿಯೋ ಎನ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್‌ಗಳು, ಕಾರಣ ಮಹೀಂದ್ರಾದ ಬಳಿ ಬಾಕಿಯಿವೆ 2.6 ಲಕ್ಷ ಯೂನಿಟ್‌ಗಳಿಗಿಂತ ಹೆಚ್ಚು ಆರ್ಡರ್‌ಗಳು
ಮಹೀಂದ್ರ ಎಕ್ಸ್‌ಯುವಿ300 ಗಾಗಿ rohit ಮೂಲಕ ಫೆಬ್ರವಾರಿ 14, 2023 07:19 pm ರಂದು ಪ್ರಕಟಿಸಲಾಗಿದೆ
- 52 Views
- ಕಾಮೆಂಟ್ ಅನ್ನು ಬರೆಯಿರಿ
ಮಹೀಂದ್ರಾ ತನ್ನ ಅತ್ಯಂತ ಜನಪ್ರಿಯ ಎಸ್‌ಯುವಿಗಳ ನಿರೀಕ್ಷಣಾ ಅವಧಿಯನ್ನು ಕಡಿಮೆ ಮಾಡಲು ಬಹಳಷ್ಟು ಪ್ರಯತ್ನಿಸುತ್ತಿದ್ದರೂ, ಆರ್ಡರ್ ಪುಸ್ತಕಗಳು ಈಗಾಗಲೇ ಭರ್ತಿಯಾಗಿವೆ
ಇತ್ತೀಚಿನ ಹೂಡಿಕೆದಾರರ ಸಭೆಯಲ್ಲಿ, ಮಹೀಂದ್ರಾ ಡಿಸೆಂಬರ್ 31, 2022 ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ತನ್ನ ಹಣಕಾಸಿನ ಫಲಿತಾಂಶಗಳನ್ನು ಪ್ರಕಟಿಸಿದೆ, ಈ ಅವಧಿಯಲ್ಲಿ ತನ್ನ ಎಸ್‌ಯುವಿ ಮಾದರಿ 60 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿದೆ ಎನ್ನುವುದನ್ನು ಬಹಿರಂಗಪಡಿಸಿತು. ಫೆಬ್ರವರಿ 1 ರ ವೇಳೆಗೆ ಅದರ ಬಳಿಯಿರುವ ಒಟ್ಟು ಬಾಕಿ ಆರ್ಡರ್‌ಗಳು 2.66 ಲಕ್ಷ ಯುನಿಟ್‌ಗಳಿಗೆ ಸಮೀಪದಲ್ಲಿದೆ ಎಂದು ಈ ಕಾರು ತಯಾರಕರು ಬಹಿರಂಗಪಡಿಸಿದ್ದಾರೆ.
ಬಾಕಿಯಿರುವ ಆರ್ಡರ್‌ಗಳಲ್ಲಿ ಸ್ಕಾರ್ಪಿಯೋ ಮತ್ತು ಎಕ್ಸ್ಸ್‌ಯುವಿ700 ಗಳ ಪಾಲು 70% ಗಿಂತ ಹೆಚ್ಚು
ಮಾಡೆಲ್‌ಗಳು |
ಬಾಕಿಯಿರುವ ಆರ್ಡರ್‌ಗಳು |
ಸ್ಕಾರ್ಪಿಯೋ ಎನ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್ |
1.19 ಲಕ್ಷ |
ಎಕ್ಸ್‌ಯುವಿ700 |
77,000 |
ಥಾರ್ (ಥಾರ್ ಆರ್‌ಡಬ್ಲ್ಯೂಡಿ ಸಹಿತ) |
37,000 |
ಎಕ್ಸ್‌ಯುವಿ 300 ಮತ್ತು ಎಕ್ಸ್‌ಯುವಿ 400 |
23,000 |
ಬೊಲೆರೊ ಮತ್ತು ಬೊಲೆರೊ ನಿಯೋ |
9,000 |
ವಿಳಂಬಕ್ಕೆ ಕಾರಣವೇನು?
ಮಹೀಂದ್ರಾ ಶೀಘ್ರವಾಗಿ ಭರ್ತಿಯಾಗುತ್ತಿರುವ ಆರ್ಡರ್ ಪುಸ್ತಕಗಳ ಹಿಂದಿನ ಕಾರಣವನ್ನು ನೇರವಾಗಿ ಬಹಿರಂಗಪಡಿಸದಿದ್ದರೂ, ಅಂತಾರಾಷ್ಟ್ರೀಯ ಸಂಘರ್ಷಗಳು, ಸರಬರಾಜು ಸರಪಳಿಯ ನಿರ್ಬಂಧಗಳು ಮತ್ತು ಚಿಪ್ ಕೊರತೆಯಂತಹ ಜಾಗತಿಕ ಸಾಮಾಜಿಕ-ಆರ್ಥಿಕ ಅಂಶಗಳಿಂದ ಡೆಲಿವರಿ ವಿಳಂಬವಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.
ಅಷ್ಟೇ ಅಲ್ಲದೇ, ಪ್ರಸ್ತುತ-ಪೀಳಿಗೆ ಥಾರ್ ಮತ್ತು ಎಕ್ಸ್‌ಯುವಿ700 ನಿಂದ ಪ್ರಾರಂಭವಾಗುವ ಮಹೀಂದ್ರಾದ ಹೊಸ ಮಾದರಿಗಳು, ಮಾರುಕಟ್ಟೆಗೆ ಪ್ರವೇಶಿಸಿದ ಸಮಯದಿಂದಲೇ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿವೆ. ಎಕ್ಸ್‌ಯುವಿ700 ಅಂತೂ ಅದನ್ನು ಪಡೆದುಕೊಳ್ಳಲು ಎರಡು ವರ್ಷಗಳವರೆಗೆ ಕಾಯಬೇಕು ಎಂಬ ಅಪಕೀರ್ತಿಗೂ ಪಾತ್ರವಾಗಿದೆ. ಇದರೊಂದಿಗೆ, ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಲಾದ ಎಕ್ಸ್‌ಯುವಿ400 ಮತ್ತು ಸ್ಕಾರ್ಪಿಯೋ ಎನ್ ತಮ್ಮ ತಮ್ಮ ವಿಭಾಗಗಳಲ್ಲಿ ಕೋಲಾಹಲವನ್ನು ಸೃಷ್ಟಿಸಿವೆ.
ಇದನ್ನೂ ನೋಡಿ: ವಿಂಟೇಜ್-ಯುಗದ ಜೀಪ್‌ನಂತೆ ಕಾಣಿಸುವ ಚಾಪ್ಡ್ ರೂಫ್ ಹೊಂದಿರುವ ಭಾರತದ ಮೊದಲ ಮಹೀಂದ್ರ ಥಾರ್
ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ಇತರ ಬ್ರ್ಯಾಂಡ್‌ಗಳು
ನೀವು ಕೇವಲ ಮಹೀಂದ್ರಾ ಆರ್ಡರ್ ಬ್ಯಾಕ್‌ಲಾಗ್‌ನ ಸಮಸ್ಯೆಯನ್ನು ಎದುರಿಸುತ್ತಿದೆ ಎಂದುಕೊಂಡಿದ್ದರೆ, ನಿಮ್ಮ ಊಹೆ ತಪ್ಪು. 2023 ರ ಆರಂಭದಲ್ಲಿ, ಮಾರುತಿ ಮತ್ತು ಹ್ಯುಂಡೈ ಎರಡೂ ವಿಳಂಬ ಡೆಲಿವರಿಗಳ ಸವಾಲು ಎದುರಿಸುತ್ತಿರುವುದನ್ನು ಪ್ರತ್ಯೇಕವಾಗಿ ಬಹಿರಂಗಪಡಿಸಿದ್ದವು.
ಸಂಬಂಧಿತ: ಮಹೀಂದ್ರ ಎಕ್ಸ್‌ಯುವಿ700 ರ ಈ ಕಾರ್ಡ್‌ಬೋರ್ಡ್ ಮಾದರಿಯನ್ನು ನೋಡೋಣ
ಕಾರು ತಯಾರಕರು ತಮ್ಮ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಸವಾಲನ್ನು ಯಶಸ್ವಿಯಾಗಿ ಎದುರಿಸಲು ಇರುವ ಏಕೈಕ ಮಾರ್ಗವಾಗಿದೆ, ಫೋರ್ಡ್‌ನ ಹಳೆಯ ಘಟಕವನ್ನು ಸ್ವಾಧೀನಪಡಿಸಿಕೊಂಡ ನಂತರ ಟಾಟಾ ಇದಕ್ಕಾಗಿಯೇ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಇದು ನಿರೀಕ್ಷಣಾ ಸಮಯವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ.
ಇನ್ನಷ್ಟು ಓದಿ: ಮಹೀಂದ್ರ ಎಕ್ಸ್‌ಯುವಿ300 ಎಎಂಟಿ