ಇನ್ನೂ 2 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳನ್ನು ಡೆಲಿವರಿ ಮಾಡಲು ಬಾಕಿ ಉಳಿಸಿಕೊಂಡ Mahindra, ಇದರಲ್ಲಿ Scorpio ಕ್ಲಾಸಿಕ್, ಸ್ಕಾರ್ಪಿ ಯೋ N ಮತ್ತು Thar ಸಂಖ್ಯೆಯೆ ಅತ್ಯಂತ ಅಧಿಕ..!
ಮಹೀಂದ್ರ ಸ್ಕಾರ್ಪಿಯೋ ಗಾಗಿ rohit ಮೂಲಕ ಫೆಬ್ರವಾರಿ 16, 2024 04:48 pm ರಂದು ಪ್ರಕಟಿಸಲಾಗಿದೆ
- 34 Views
- ಕಾಮೆಂಟ್ ಅನ್ನು ಬರೆಯಿರಿ
ಸ್ಕಾರ್ಪಿಯೊ N ಮತ್ತು XUV700 6.5 ತಿಂಗಳವರೆಗಿನ ಗರಿಷ್ಠ ಕಾಯುವ ಅವಧಿಯನ್ನು ಹೊಂದಿವೆ
ಇತ್ತೀಚಿನ ಹಣಕಾಸು ವರದಿಯಲ್ಲಿ, ಮಹೀಂದ್ರಾ ಪ್ರತಿ ಮಾನಿಕರ್‌ಗೆ ಕೆಲವು ನಿರ್ದಿಷ್ಟ ವಿವರಗಳನ್ನು ಒಳಗೊಂಡಂತೆ ತನ್ನ ವಿವಿಧ ಮಾಡೆಲ್ ಗಳಿಗೆ ಒಟ್ಟಾಗಿ ಬಾಕಿ ಉಳಿದಿರುವ ಆರ್ಡರ್ ಗಳನ್ನು ಬಹಿರಂಗಪಡಿಸಿತು. ಫೆಬ್ರವರಿ 2024 ರ ಆರಂಭದ ವೇಳೆಗೆ ಬಾಕಿ ಉಳಿದಿರುವ ಆರ್ಡರ್‌ಗಳ ಮೊತ್ತವು 2.26 ಲಕ್ಷದಷ್ಟಿದ್ದು, ಇದು ಮಹೀಂದ್ರಾ XUV700, ಮಹೀಂದ್ರಾ ಸ್ಕಾರ್ಪಿಯೋ N ಮತ್ತು ಮಹೀಂದ್ರ ಥಾರ್‌ನಂತಹ ಹೆಚ್ಚು ಬೇಡಿಕೆಯಿರುವ SUV ಗಳನ್ನು ಒಳಗೊಂಡಿದೆ.
ಮಾಡೆಲ್-ವಾರು ಬಾಕಿ ಇರುವ ಆರ್ಡರ್ ಗಳು
ಮಾಡೆಲ್ |
ಬಾಕಿ ಇರುವ ಆರ್ಡರ್ |
ಸ್ಕಾರ್ಪಿಯೋ ಕ್ಲಾಸಿಕ್ ಮತ್ತು ಸ್ಕಾರ್ಪಿಯೋ N |
1,01,000 |
ಥಾರ್ |
71,000 |
XUV700 |
35,000 |
ಬೊಲೆರೊ ಮತ್ತು ಬೊಲೆರೊ ನಿಯೋ |
10,000 |
XUV300 ಮತ್ತು XUV400 |
8,800 |
ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಮತ್ತು ಮಹೀಂದ್ರಾ ಸ್ಕಾರ್ಪಿಯೊ N ಒಟ್ಟಿಗೆ 1.01 ಲಕ್ಷದಷ್ಟು ಓಪನ್ ಬುಕಿಂಗ್‌ಗಳನ್ನು ಹೊಂದಿದೆ. ಈ ಎರಡು ಸ್ಕಾರ್ಪಿಯೊ ಮಾಡೆಲ್ ಗಳು ತಿಂಗಳಿಗೆ ಸರಾಸರಿ 16,000 ಬುಕಿಂಗ್‌ಗಳನ್ನು ಪಡೆಯುತ್ತವೆ ಎಂದು ಈಗ ಬಹಿರಂಗವಾಗಿದೆ, ಇದು ಇದರ ಜನಪ್ರಿಯತೆಯನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ. ಹಾಗೆಯೇ, ಮಹೀಂದ್ರ ಥಾರ್ (ರಿಯರ್-ವೀಲ್-ಡ್ರೈವ್ ವರ್ಷನ್ ಸೇರಿದಂತೆ), 71,000 ಬಾಕಿ ಆರ್ಡರ್‌ಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಕಾರು ತಯಾರಕರು XUV700 ನ 35,000 ಯುನಿಟ್‌ಗಳು, ಬೊಲೆರೊ ಮತ್ತು ಬೊಲೆರೊ ನಿಯೊದ 10,000 ಯುನಿಟ್‌ಗಳು ಮತ್ತು XUV300 ಮತ್ತು XUV400 EV ಯ ಸುಮಾರು 9,000 ಯೂನಿಟ್‌ಗಳನ್ನು ಡೆಲಿವೆರಿ ಮಾಡಬೇಕಿದೆ.
ಇದನ್ನು ಕೂಡ ಓದಿ: XUV300 ಜನವರಿ 2024 ರ ಸೇಲ್ಸ್ ಪ್ರಕಾರ ಮಹೀಂದ್ರಾದ ಅತಿ ಹೆಚ್ಚು ಬೇಡಿಕೆಯಲ್ಲಿರುವ ಪೆಟ್ರೋಲ್ SUV ಆಗಿದೆ
ಈ SUV ಗಳ ಸರಾಸರಿ ಕಾಯುವ ಅವಧಿಗಳು
ಮಾಡೆಲ್ |
ಸರಾಸರಿ ಕಾಯುವ ಅವಧಿ* |
ಸ್ಕಾರ್ಪಿಯೋ ಕ್ಲಾಸಿಕ್ |
2.5-3 ತಿಂಗಳುಗಳು |
ಸ್ಕಾರ್ಪಿಯೋ N |
6 ತಿಂಗಳುಗಳು |
ಥಾರ್ |
3.5 ತಿಂಗಳುಗಳು |
XUV700 |
6.5 ತಿಂಗಳುಗಳು |
ಬೊಲೆರೊ |
3 ತಿಂಗಳುಗಳು |
ಬೊಲೆರೊ ನಿಯೋ |
3 ತಿಂಗಳುಗಳು |
XUV300 |
4 ತಿಂಗಳುಗಳು |
XUV400 |
3 ತಿಂಗಳುಗಳು |
* ಟಾಪ್ 20 ಸಿಟಿಗಳಲ್ಲಿ
ಮೇಲೆ ನೋಡಿದಂತೆ, ಸ್ಕಾರ್ಪಿಯೋ N ಮತ್ತು XUV700 ಭಾರತದಲ್ಲಿನ ಟಾಪ್ 20 ನಗರಗಳಲ್ಲಿ 6.5 ತಿಂಗಳವರೆಗಿನ ಗರಿಷ್ಠ ಕಾಯುವ ಅವಧಿಯನ್ನು ಹೊಂದಿವೆ. ಸ್ಕಾರ್ಪಿಯೋ ಕ್ಲಾಸಿಕ್ ಇಲ್ಲಿ ಕನಿಷ್ಠ ಅಂದರೆ 2.5 ತಿಂಗಳ ಕಾಯುವ ಅವಧಿಯನ್ನು ಹೊಂದಿದೆ.
ಮಹೀಂದ್ರಾ ಇಂತಹ ದೊಡ್ಡ ಸಂಖ್ಯೆಯಲ್ಲಿ ಡೆಲಿವರಿ ಬಾಕಿಯಿರುವ ಹಿಂದಿನ ಕಾರಣವನ್ನು ಅಧಿಕೃತವಾಗಿ ತಿಳಿಸಿಲ್ಲ. ಇದು ಈ ಹಿಂದಿನ ಬ್ಯಾಕ್ ಆರ್ಡರ್ ಆಗಿದ್ದ 3 ಲಕ್ಷ ಯುನಿಟ್‌ಗಳಿಗೆ ಹೋಲಿಸಿದರೆ ಕಡಿಮೆಯಿದ್ದರೂ ಕೂಡ, ಉತ್ಪಾದನೆ ಮತ್ತು ಪೂರೈಕೆ ನಿರ್ಬಂಧಗಳು ಸೇರಿದಂತೆ ವಿವಿಧ ಅಂಶಗಳಿಂದ ಡೆಲಿವರಿಗಳು ನಿಧಾನವಾಗುವ ಸಾಧ್ಯತೆಯಿದೆ. ನೀವು ಮೇಲೆ ತಿಳಿಸಿದ ಯಾವುದೇ ಮಹೀಂದ್ರ ಮಾಡೆಲ್ ಗಳಿಗೆ ಆರ್ಡರ್ ನೀಡಿದ್ದರೆ, ನೀವು ಯಾವ ರೀತಿಯ ಕಾಯುವ ಅವಧಿಯನ್ನು ಹೊಂದಿದ್ದೀರಿ ಎಂಬುದನ್ನು ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ.
ಇನ್ನಷ್ಟು ಓದಿ: ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್ ಡೀಸೆಲ್