2025ರ ಆಟೋ ಎಕ್ಸ್‌ಪೋದಲ್ಲಿ ಭಾರತದಲ್ಲಿ ಹೊಸ BMW X3 ಬಿಡುಗಡೆ, ಬೆಲೆಗಳು 75.80 ಲಕ್ಷ ರೂ.ನಿಂದ ಪ್ರಾರಂಭ
ಬಿಎಂಡವೋ ಎಕ್ಸ3 ಗಾಗಿ shreyash ಮೂಲಕ ಜನವರಿ 18, 2025 10:57 pm ರಂದು ಪ್ರಕಟಿಸಲಾಗಿದೆ
- 35 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ X3 ಈಗ ಹೊಚ್ಚ ಹೊಸ ಎಕ್ಸ್‌ಟೀರಿಯರ್ ವಿನ್ಯಾಸವನ್ನು ಪಡೆದುಕೊಂಡಿದೆ ಮತ್ತು ಆಧುನಿಕ ಕ್ಯಾಬಿನ್ ವಿನ್ಯಾಸವನ್ನು ಹೊಂದಿದೆ
-
ಹೊಸ ಹೆಡ್‌ಲೈಟ್‌ಗಳು, ಗ್ರಿಲ್ ಮತ್ತು ಹೊಸ 19-ಇಂಚಿನ ಅಲಾಯ್ ವೀಲ್‌ಗಳು ಹೊರಭಾಗದ ಹೈಲೈಟ್‌ಗಳಲ್ಲಿ ಸೇರಿವೆ.
-
ಸಂಪೂರ್ಣ ಕಪ್ಪು ಬಣ್ಣದ ಕ್ಯಾಬಿನ್ ಜೊತೆಗೆ ಲೆದರೆಟ್ ಸುತ್ತಿದ ಸ್ಟೀರಿಂಗ್ ವೀಲ್ ಮತ್ತು ಸೀಟುಗಳನ್ನು ಒಳಗೊಂಡಿದೆ.
-
14.9-ಇಂಚಿನ ಟಚ್‌ಸ್ಕ್ರೀನ್, 12.3-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಸೌಲಭ್ಯಗಳೊಂದಿಗೆ ಬರುತ್ತದೆ.
-
2-ಲೀಟರ್ ಟರ್ಬೊ-ಪೆಟ್ರೋಲ್ ಅಥವಾ 2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಿಂದ ನಿಯಂತ್ರಿಸಲ್ಪಡುತ್ತದೆ, ಎರಡೂ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಒಳಗೊಂಡಿವೆ.
ಜೂನ್ 2024 ರಲ್ಲಿ ಜಾಗತಿಕವಾಗಿ ಅನಾವರಣಗೊಂಡ ನಂತರ, ನಾಲ್ಕನೇ ಜನರೇಶನ್‌ನ ಬಿಎಮ್‌ಡಬ್ಲ್ಯೂ X3 ಅನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ನಮ್ಮ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಇದರ ಬೆಲೆ ರೂ. 75.80 ಲಕ್ಷದಿಂದ ಪ್ರಾರಂಭವಾಗಿದ್ದರೆ, ಡೀಸೆಲ್ ವೇರಿಯೆಂಟ್‌ನ ಬೆಲೆ 77.80 ಲಕ್ಷ ರೂ.(ಎಕ್ಸ್-ಶೋರೂಂ ಪ್ಯಾನ್-ಇಂಡಿಯಾ) ವರೆಗೆ ಇದೆ. ಹೊಸ X3 ಕಾರು ಬಿಎಮ್‌ಡಬ್ಲ್ಯೂ 5 ಸೀರಿಸ್‌ನ ಒಳಭಾಗ ಮತ್ತು ಹೊರಭಾಗದಿಂದ ಸ್ಫೂರ್ತಿ ಪಡೆದ ಹೊಸ ವಿನ್ಯಾಸವನ್ನು ಹೊಂದಿದ್ದು, ಭಾರತ-ಸ್ಪೆಕ್ ಆವೃತ್ತಿಯ ಪವರ್‌ಟ್ರೇನ್ ಆಯ್ಕೆಗಳು ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಒಳಗೊಂಡಿವೆ. ಹೊಸ X3 ಏನು ನೀಡುತ್ತದೆ ಎಂಬುದನ್ನು ನೋಡೋಣ.
ಸಂಪೂರ್ಣವಾಗಿ ಹೊಸ ವಿನ್ಯಾಸ
X3 ನ ಮುಂಭಾಗವು ದೊಡ್ಡ ಗ್ರಿಲ್ ಅನ್ನು ಹೊಂದಿದ್ದು, ಹೊಸ ಡಿಆರ್‌ಎಲ್ ಸಿಗ್ನೇಚರ್‌ಗಳೊಂದಿಗೆ ನಯವಾದ LED ಹೆಡ್‌ಲೈಟ್‌ಗಳಿಂದ ಸುತ್ತುವರೆದಿದೆ. ಈ SUV ಯ ಒಟ್ಟಾರೆ ವಿನ್ಯಾಸವು ಹಿಂದಿನ ಆವೃತ್ತಿಯಂತೆಯೇ ಕಂಡುಬಂದರೂ, ಹೊಸ X3 ಹೊಸ 19-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ರೇಖೆಗಳು ಸಹ ಹೆಚ್ಚು ಮೃದುವಾಗಿದ್ದು, ಅದಕ್ಕೆ ಸುಂದರವಾದ ನಯವಾದ ನೋಟವನ್ನು ನೀಡುತ್ತದೆ. ಹಿಂಭಾಗದಿಂದ, 2025 ರ BMW X3, ವಿಶೇಷವಾಗಿ ತೆಳುವಾದ Y- ಆಕಾರದ ಟೈಲ್‌ಲೈಟ್‌ಗಳಿಂದಾಗಿ XM ಗೆ ಬಹಳಷ್ಟು ಹೋಲಿಕೆಯನ್ನು ಹೊಂದಿದೆ. ನಂಬರ್ ಪ್ಲೇಟ್ ಹೌಸಿಂಗ್ ಅನ್ನು ಬಂಪರ್‌ನ ಕೆಳಕ್ಕೆ ಸ್ಥಳಾಂತರಿಸಲಾಗಿದೆ.
ಆಧುನಿಕ ಕ್ಯಾಬಿನ್ ವಿನ್ಯಾಸ


2025ರ ಬಿಎಮ್‌ಡಬ್ಲ್ಯೂ X3 ಹೊಸ ಡ್ಯಾಶ್‌ಬೋರ್ಡ್ ಅನ್ನು ಹೊಂದಿದ್ದು, ಇದರಲ್ಲಿ ಸಾಕಷ್ಟು ಆಂಬಿಯೆಂಟ್ ಲೈಟಿಂಗ್ ಅಂಶಗಳಿವೆ, ಇದು ಮೊದಲಿಗಿಂತ ಹೆಚ್ಚು ಆಧುನಿಕವಾಗಿ ಕಾಣುತ್ತದೆ. ಫೀಚರ್‌ಗಳ ವಿಷಯದಲ್ಲಿ, ಇದು 14.9-ಇಂಚಿನ ಟಚ್‌ಸ್ಕ್ರೀನ್, 12.3-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು 15-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಇತರ ವೈಶಿಷ್ಟ್ಯಗಳಲ್ಲಿ ಬಹು ಬಣ್ಣಗಳೊಂದಿಗೆ ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ನಿಯಂತ್ರಣ, ಪನೋರಮಿಕ್ ಸನ್‌ರೂಫ್ ಮತ್ತು ಟ್ರೈ-ಝೋನ್ ಕ್ಲೈಮೇಟ್ ಕಂಟ್ರೋಲ್ ಸೇರಿವೆ. ಸುರಕ್ಷತಾ ಫೀಚರ್‌ಗಲ್ಲಿ ಬಹು ಏರ್‌ಬ್ಯಾಗ್‌ಗಳು, ಹಲವಾರು ADAS ವೈಶಿಷ್ಟ್ಯಗಳು, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಟೈರ್ ಪ್ರೆಷರ್ ಮಾನಿಟರ್, ಪಾರ್ಕಿಂಗ್ ಸಹಾಯ ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿವೆ.
ಪವರ್ ಟ್ರೈನ್ ಆಯ್ಕೆಗಳು
BMW ಹೊಸ X3 ಅನ್ನು ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತಿದೆ. ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
2-ಲೀಟರ್ ಟರ್ಬೊ-ಪೆಟ್ರೋಲ್ |
2-ಲೀಟರ್ ಡೀಸೆಲ್ |
ಪವರ್ |
193 ಪಿಎಸ್ |
200 ಪಿಎಸ್ |
ಟಾರ್ಕ್ |
310 ಎನ್ಎಂ |
400 ಎನ್ಎಂ |
ಗೇರ್‌ಬಾಕ್ಸ್ |
8-ಸ್ಪೀಡ್ ಮ್ಯಾನ್ಯುವಲ್ |
8-ಸ್ಪೀಡ್ ಆಟೋಮ್ಯಾಟಿಕ್ |
ಡ್ರೈವ್ ಟೈಪ್ |
AWD |
AWD |
ಪ್ರತಿಸ್ಪರ್ಧಿಗಳು
ಬಿಎಮ್‌ಡಬ್ಲ್ಯೂ X3ಯು ಮರ್ಸಿಡಿಸ್-ಬೆಂಝ್ ಜಿಎಲ್‌ಸಿ ಮತ್ತು ಆಡಿ Q5 ನೊಂದಿಗೆ ತನ್ನ ಪೈಪೋಟಿಯನ್ನು ಮುಂದುವರೆಸಿದೆ.
ಆಟೋಮೋಟಿವ್ ಜಗತ್ತಿನಿಂದ ಕ್ಷಣಕ್ಷಣದ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ