Login or Register ಅತ್ಯುತ್ತಮ CarDekho experience ಗೆ
Login

ಹೊಸ ಕಿಯಾ ಕಾರ್ನಿವಲ್‌ ಕಾರಿನ ಹೊರಭಾಗದ ಅನಾವರಣ, ಭಾರತದಲ್ಲಿ 2024ರಲ್ಲಿ ಬಿಡುಗಡೆ ಸಾಧ್ಯತೆ

published on ಅಕ್ಟೋಬರ್ 28, 2023 08:53 pm by rohit for ಕಿಯಾ ಕಾರ್ನಿವಲ್

ಹೊಸ ಕಿಯಾ ಕಾರ್ನಿವಲ್‌ ಕಾರು ಆಕರ್ಷಕ ಫೇಶಿಯಾ ಮತ್ತು ಲಂಬಾಂತರವಾಗಿ ಇರಿಸಿದ LED ಹೆಡ್‌ ಲೈಟುಗಳನ್ನು ಹೊಂದಿದ್ದು ಕಿಯಾ ಸಂಸ್ಥೆಯ ಆಧುನಿಕ ವಿನ್ಯಾಸ ಭಾಷೆಯೊಂದಿಗೆ ಇದನ್ನು ಹೊಂದಿಸಲಾಗಿದೆ.

  • ಕಿಯಾ ಸಂಸ್ಥೆಯು ನಾಲ್ಕನೇ ತಲೆಮಾರಿನ ಕಾರ್ನಿವಲ್‌ ಕಾರನ್ನು ಅಟೋ ಎಕ್ಸ್‌ ಪೋ 2023 ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದೆ.
  • ಹೊಸ ಅಲೋಯ್‌ ವೀಲ್‌ ವಿನ್ಯಾಸ ಮತ್ತು ಮರುವಿನ್ಯಾಸಕ್ಕೆ ಒಳಪಟ್ಟಿರುವ LED ಟೇಲ್‌ ಲೈಟ್‌ ಗಳು ಈ ವಾಹನ ಹೊರಭಾಗಕ್ಕೆ ವಿಶೇಷ ನೋಟವನ್ನು ನೀಡಿವೆ.
  • ಒಳಭಾಗದಲ್ಲಿ ಹೊಸ ಡ್ಯಾಶ್‌ ಬೋರ್ಡ್‌ ವಿನ್ಯಾಸ ಮತ್ತು ಡಿಸ್ಪ್ಲೇಗಳನ್ನು ನಾವು ಕಾಣಬಹುದು.
  • ಇದನ್ನು ಪೆಟ್ರೋಲ್‌, ಡೀಸೆಲ್‌ ಮತ್ತು ಹೈಬ್ರೀಡ್‌ ಹೀಗೆ 3 ಪವರ್‌ ಟ್ರೇನ್‌ ಗಳಲ್ಲಿ ಹೊರತರಲಾಗುತ್ತದೆ; ಈಗ 1.6 ಲೀಟರ್‌ ನ ಟರ್ಬೊ ಪೆಟ್ರೋಲ್‌ ಹೈಬ್ರೀಡ್‌ ಅನ್ನು ಸಹ ಇದು ಪಡೆಯಲಿದೆ.
  • ಭಾರತದಲ್ಲಿ ಇದು 2024ರ ಸುಮಾರಿಗೆ ಬಿಡುಗಡೆಯಾಗಲಿದ್ದು, ಬೆಲೆಯು ರೂ. 40 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದೆ.

ನಾಲ್ಕನೇ ತಲೆಮಾರಿನ ಕಿಯಾ ಕಾರ್ನಿವಲ್ ಕಾರನ್ನು ಅಟೋ ಎಕ್ಸ್ಪೊ 2023 ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಗಿದ್ದು, ಇದರ ಮೊದಲ ನೋಟವು ನಮಗೆ ನೋಡಲು ಸಿಕ್ಕಿದೆ. ಈ ಐಷಾರಾಮಿ MPV ಗೆ ತಾಜಾತನವನ್ನು ನೀಡಲಾಗಿದ್ದು, ಇದರ ಹೊರಭಾಗದ ವಿನ್ಯಾಸಗಳನ್ನು ಬಹಿರಂಗಗೊಳಿಸಲಾಗಿದೆ. ಇದರ ಶೈಲಿಯಲ್ಲಿ ಮಾಡಲಾಗಿರುವ ಪರಿಷ್ಕರಣೆಯು ಕಿಯಾ ಸಂಸ್ಥೆಯ ಇತ್ತೀಚಿನ ವಿನ್ಯಾಸ ತತ್ವವೆನಿಸಿರುವ ʻಒಪೊಸಿಟ್ಸ್‌ ಯುನೈಟೆಡ್‌ʼಗೆ ಅನುಗುಣವಾಗಿದೆ.

ಆಕರ್ಷಕ ನೋಟ

ಪರಿಷ್ಕೃತ ಕಿಯಾ ಕಾರ್ನಿವಲ್‌ ಕಾರು ಆಕರ್ಷಕ ಫೇಶಿಯಾವನ್ನು ಹೊಂದಿದ್ದು, ಲಂಬಾಂತರವಾಗಿ ಇರಿಸಿರುವ 4-ಪೀಸ್ LED ಹೆಡ್‌ ಲೈಟ್‌ ಗಳು, ಅಚ್ಚುಕಟ್ಟಾದ LED DRLಗಳು, ಮತ್ತು ದೊಡ್ಡದಾದ ಹಾಗೂ ಮರುವಿನ್ಯಾಸಕ್ಕೆ ಒಳಪಟ್ಟ ಗ್ರಿಲ್‌ ಗಳು ಇದರಲ್ಲಿ ಎದ್ದು ಕಾಣುತ್ತವೆ. ಕಿಯಾ ಸಂಸ್ಥೆಯು ಈ ವಾಹನದ ಮುಂಭಾಗದ ಬಂಪರ್‌ ಅನ್ನು ಸರಿಹೊಂದಿಸಿದ್ದು, ಫಾಗ್‌ ಲ್ಯಾಂಪ್‌ ಗಳನ್ನು ಇದರ ಮೂಲೆಗಳಿಗೆ ಸರಿಸಲಾಗಿದೆ. ಆದರೆ ಏರ್‌ ಡ್ಯಾಮ್‌ ನಲ್ಲಿ ಸಮತಲ ಸ್ಲಾಟ್‌ ಗಳಿದ್ದು, ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS)ಗಳಿಗಾಗಿ ರೇಡಾರ್‌ ಅನ್ನು ಇದು ಹೊಂದಿದೆ.

ಆದರೆ ಇದರ ಪಕ್ಕದಲ್ಲಿ ಹೆಚ್ಚೇನೂ ಬದಲಾವಣೆಗಳನ್ನು ಮಾಡಲಾಗಿಲ್ಲ. ಅಲೋಯ್‌ ವೀಲ್‌ ಗಳಿಗೆ ಹೊಸ ವಿನ್ಯಾಸವನ್ನು ನೀಡಲಾಗಿದೆ. ಹಿಂಭಾಗದಲ್ಲಿ, ಹೊಸತನವನ್ನು ಪಡೆದಿರುವ ಟೇಲ್‌ ಗೇಟ್‌, ಸ್ಲಿಮ್ಮರ್‌ ಮತ್ತು ಮರುವಿನ್ಯಾಸಕ್ಕೆ ಒಳಪಟ್ಟ LED ಟೇಲ್‌ ಲೈಟ್‌ ಗಳು, ಸಿಲ್ವರ್‌ ಸ್ಕಿಡ್‌ ಪ್ಲೇಟ್‌ ಜೊತೆಗೆ ಇರುವ ಮರುಹೊಂದಿಸಲಾದ ಬಂಪರ್‌ ಅನ್ನು ಕಾಣಬಹುದು.

ಕಿಯಾ ಸಂಸ್ಥೆಯು ಹೊಸ ಕಾರ್ನಿವಲ್‌ ಅನ್ನು ಗ್ರಾವಿಟಿ ಟ್ರಿಮ್‌ ಕಾರಿಗಿಂತ ಭಿನ್ನವಾದ ವಿನ್ಯಾಸದಲ್ಲಿ ಹೊರತರಲಿದ್ದು, ಇದು ಗಾಢ ಬೂದು ಛಾಯೆ, ಕಪ್ಪು ORVMಗಳು ಮತ್ತು ನೀಟಾದ ಅಲೋಯ್‌ ವೀಲ್‌ ಗಳು ಹಾಗೂ ಕಪ್ಪು ಬಣ್ಣವನ್ನು ಹೊಂದಿರುವ ವಿಭಿನ್ನ ಗ್ರಿಲ್‌ ವಿನ್ಯಾಸ ಇತ್ಯಾದಿಗಳೊಂದಿಗೆ ಈ ವಾಹನವು ಸಜ್ಜುಗೊಂಡಿದೆ.

  • ನಿಮ್ಮ ಯಾವುದೇ ಟ್ರಾಫಿಕ್‌ ಚಲನ್‌ ನ ಪಾವತಿ ಬಾಕಿ ಇದ್ದರೆ ಇಲ್ಲಿ ಪರಿಶೀಲಿಸಿ.

ಪರಿಷ್ಕೃತ ಕ್ಯಾಬಿನ್

ಉಲ್ಲೇಖಕ್ಕಾಗಿ ಈಗಿನ ಕಿಯಾ ಕಾರ್ನಿವಲ್‌ ಕಾರಿನ ಚಿತ್ರವನ್ನು ಬಳಸಲಾಗಿದೆ

ಕಿಯಾ ಸಂಸ್ಥೆಯು ಪರಿಷ್ಕೃತ ಕಾರ್ನಿವಲ್‌ ಕಾರಿನ ಒಳಭಾಗವನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೂ ಈ ಕಾರು ತಯಾರಕ ಸಂಸ್ಥೆಯು MPV ಯ ಒಳಭಾಗವನ್ನೂ ಪರಿಷ್ಕರಣೆಗೆ ಒಳಪಡಿಸಲಿದ್ದು, ಈ ಪರಿಷ್ಕರಣೆಗಳು ಇದರ ಸ್ಕ್ರೀನ್‌ ಗಳು, ಡ್ಯಾಶ್‌ ಬೋರ್ಡ್‌ ಮತ್ತು ಹಿಂದಿನ ಸೀಟಿನ ಆರಾಮಕ್ಕೆ ಸಂಬಂಧಿಸಿವೆ. ಬೇರೆ ಬೇರೆ ಸೀಟಿಂಗ್‌ ವಿನ್ಯಾಸದಲ್ಲಿ ಈ ವಾಹನವನ್ನು ಹೊರತರುವುದನ್ನು ಮುಂದುವರಿಸಲಾಗುತ್ತದೆ.

ಹೂಡ್‌ ಒಳಗಡೆ ಹೇಗಿರಲಿದೆ?

ಹೊಸ ಕಾರ್ನಿವಲ್‌ ಕಾರು ಜಾಗತಿಕವಾಗಿ ಪೆಟ್ರೋಲ್‌, ಡೀಸೆಲ್‌ ಮತ್ತು ಹೈಬ್ರೀಡ್‌ - ಹೀಗೆ ಮೂರು ಪವರ್‌ ಟ್ರೇನ್‌ ಗಳಲ್ಲಿ ಹೊರಬರಲಿದೆ. ಜೊತೆಗೆ 1.6 ಲೀಟರಿನ ಹೊಸ ಟರ್ಬೊ ಪೆಟ್ರೋಲ್‌ ಹೈಬ್ರೀಡ್‌ ಅನ್ನು ಸೇರ್ಪಡೆಗೊಳಿಸಿರುವುದನ್ನು ಕಿಯಾ ಸಂಸ್ಥೆಯು ಘೋಷಿಸಿದೆ. ಭಾರತದಲ್ಲಿ ರಸ್ತೆಗಳಲ್ಲಿ ಓಡಾಡಲಿರುವ ಪ್ರೀಮಿಯಂ MPV ಯು ಈ ಬಾರಿ ಪೆಟ್ರೋಲ್‌ ಎಂಜಿನ್‌ ಅನ್ನು ಪಡೆಯುವ ಸಾಧ್ಯತೆ ಇದೆ. ಹಿಂದಿನ ಆವೃತ್ತಿಯು ಡೀಸೆಲ್‌ ಎಂಜಿನ್‌ ನಲ್ಲಿ ಮಾತ್ರವೇ ಹೊರಬರುತ್ತಿತ್ತು.

ಇದನ್ನು ಸಹ ಓದಿರಿ: ಹೊಸ ಗೂಗಲ್‌ ಮ್ಯಾಪ್ಸ್‌ ಪರಿಷ್ಕರಣೆಯು ನಿಮ್ಮ ಪ್ರಯಾಣಕ್ಕೆ ಇನ್ನಷ್ಟು ಉತ್ತಮ ರೀತಿಯಲ್ಲಿ ಯೋಜನೆ ರೂಪಿಸಲು ಸಹಾಯ ಮಾಡಲಿದೆ

ಭಾರತದಲ್ಲಿ ಆಗಮನ ಮತ್ತು ಬೆಲೆ

ಭಾರತದಲ್ಲಿ ಕಿಯಾ ಕಾರ್ನಿವಲ್‌ ಕಾರನ್ನು ಬಿಡುಗಡೆಗೊಳಿಸುವ ಕುರಿತ ಯೋಜನೆಯನ್ನು ಕಿಯಾ ಸಂಸ್ಥೆಯು ಇನ್ನೂ ದೃಢೀಕರಿಸದೆ ಇದ್ದರೂ, ಇದು 2024ರ ಸುಮಾರಿಗೆ ಇಲ್ಲಿ ರಸ್ತೆಗಿಳಿಯಲಿದ್ದು, ಇದರ ಬೆಲೆಯು ರೂ. 40 ಲಕ್ಷದಿಂದ ಪ್ರಾರಂಭಗೊಳ್ಳಲಿದೆ ಎಂದು ನಂಬಲಾಗಿದೆ. ಇದು ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲದೆ ಇದ್ದರೂ ಟೊಯೊಟಾ ಇನೋವಾ ಹೈಕ್ರಾಸ್ ಕಾರಿಗೆ ಪ್ರೀಮಿಯಂ ದರದ ಬದಲಿ ವಾಹನ ಎನಿಸಲಿದೆ. ಜಾಗತಿಕವಾಗಿ, ಕಿಯಾ ಸಂಸ್ಥೆಯು 2024 ಕಾರ್ನಿವಲ್‌ ಕುರಿತು 2023ರ ನವೆಂಬರ್‌ ತಿಂಗಳಿನಲ್ಲಿ ಇನ್ನಷ್ಟು ವಿವರಗಳನ್ನು ಬಿಡುಗಡೆ ಮಾಡಲಿದೆ.

ಇದನ್ನು ಸಹ ಓದಿರಿ: ಮರೆಮಾಚಿದ ಸ್ಥಿತಿಯಲ್ಲಿ ಕಾಣಿಸಿಕೊಂಡ ಕಿಯಾ ಸೋನೆಟ್‌ ಫೇಸ್‌ ಲಿಫ್ಟ್‌ ಕಾರಿನ ಹೊರಾಂಗಣ; ಆನ್ಲೈನ್‌ ನಲ್ಲಿ ಬಿತ್ತರಗೊಂಡ ಚಿತ್ರಗಳು

r
ಅವರಿಂದ ಪ್ರಕಟಿಸಲಾಗಿದೆ

rohit

  • 40 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಕಿಯಾ ಕಾರ್ನಿವಲ್

Read Full News

trendingಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ