ಮರೆಮಾಚಿದ ಸ್ಥಿತಿಯಲ್ಲಿ ಕಾಣಿಸಿಕೊಂಡ ಕಿಯಾ ಸೋನೆಟ್ ಫೇಸ್ ಲಿಫ್ಟ್ ಕಾರಿನ ಹೊರಾಂಗಣ; ಆನ್ಲೈನ್ ನಲ್ಲಿ ಬಿತ್ತರಗೊಂಡ ಚಿತ್ರಗಳು
ಕಿಯಾ ಸೊನೆಟ್ ಗಾಗಿ rohit ಮೂಲಕ ಅಕ್ಟೋಬರ್ 18, 2023 04:51 pm ರಂದು ಪ್ರಕಟಿಸಲಾಗಿದೆ
- 55 Views
- ಕಾಮೆಂಟ್ ಅನ್ನು ಬರೆಯಿರಿ
ಕಾಣಿಸಿಕೊಂಡಿರುವ ಮಾದರಿಯು ಚೀನಾ ದೇಶಕ್ಕೆ ಸೀಮಿತವಾದ ಕಿಯಾ ಸೋನೆಟ್ ಆಗಿದ್ದು,ಇದು ಕೋರೆಹಲ್ಲಿನ ಆಕಾರದ LED DRL ಗಳು ಮತ್ತು ಸಂಪರ್ಕಿತ ಟೇಲ್ ಲೈಟ್ ಸೆಟಪ್ ಜೊತೆಗೆ ಕಾಣಿಸಿಕೊಂಡಿದೆ.
- ಕಿಯಾ ಸಂಸ್ಥೆಯು ಸೋನೆಟ್ ಅನ್ನು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಿತ್ತು.
- ಇದರ ಪರಿಷ್ಕೃತ ಆವೃತ್ತಿಯ ಹೊರಾಂಗಣವು ಮೊದಲ ಬಾರಿಗೆ ಯಾವುದೇ ಹೊದಿಕೆ ಇಲ್ಲದೆ ಕಾಣಿಸಿಕೊಂಡಿದೆ.
- ಹೊಸ ಅಲೋಯ್ ವೀಲ್ ವಿನ್ಯಾಸಗಳು ಮತ್ತು ಸೂಕ್ಷ್ಮವಾಗಿ ಹೊಂದಿಸಿದ ಬಂಪರ್ ಗಳನ್ನು ಸಹ ಇದು ಹೊಂದಿದೆ.
- ಹಿಂದಿನ ಸ್ಪೈ ಶಾಟ್ ಗಳ ಪ್ರಕಾರ ಇದು ಹೊಸ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಮತ್ತು ಟ್ಯಾನ್ ಹಾಗೂ ಕಪ್ಪು ಸೀಟ್ ಅಫೋಲ್ಸ್ಟರಿಯ ಮೂಲಕ ಸಜ್ಜುಗೊಂಡಿದೆ.
- ಇದರ ಬೆಲೆಯು ರೂ. 8 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದ್ದು 2024ರ ಆರಂಭದಲ್ಲಿ ಬಿಡುಗಡೆಗೊಳ್ಳಲಿದೆ.
ಕಿಯಾ ಸೋನೆಟ್ ಕಾರು, ಸಬ್-4m SUV ವಲಯದಲ್ಲಿ ಅತ್ಯಂತ ಪ್ರೀಮಿಯಂ ಮಾದರಿ ಎನಿಸಿದೆ. ಈ ಕಾರು ತನ್ನ ಪ್ರಸ್ತುತ ಅವತಾರದಲ್ಲಿ ಕಳೆದ 3 ವರ್ಷಗಳಿಂದ ಮಾರಾಟಗೊಳ್ಳುತ್ತಿದ್ದು, ಕೆಲ ಕಾಲದಿಂದ ಇದರ ಪರಿಷ್ಕರಣೆಯು ಚಾಲ್ತಿಯಲ್ಲಿತ್ತು. ಈ ಸಂದರ್ಭದಲ್ಲಿ ಪರೀಕ್ಷೆಯ ವೇಳೆ ಇದು ಅನೇಕ ಬಾರಿ ಕಾಣಿಸಿಕೊಂಡಿದ್ದು, ಚೀನಾಕ್ಕೆ ಸೀಮಿತವೆನಿಸಿರುವ ಮಾದರಿಯ ಮರೆಮಾಚಿದ ಚಿತ್ರಗಳು ಇಂಟರ್ ನೆಟ್ ನಲ್ಲಿ ಕಾಣಿಸಿಕೊಂಡಿದ್ದು ಮೊದಲ ಬಾರಿಗೆ ಈ ಕಾರಿನ ಹೊರಾಂಗಣವು ಅನಾವರಣಗೊಂಡಿದೆ.
ಏನೆಲ್ಲ ಗಮನಿಸಬಹುದು?
ಕಿಯಾ ಸಂಸ್ಥೆಯು ಈ SUV ಯ ಮುಂಭಾಗ ಮತ್ತು ಹಿಂಭಾಗದ ವಿನ್ಯಾಸಕ್ಕೆ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಹೊಸ ಸೋನೆಟ್ ಕಾರು ಮರುವಿನ್ಯಾಸಕ್ಕೆ ಒಳಗಾದ ಹೆಡ್ ಲೈಟ್ ಕ್ಲಸ್ಟರ್, ಕೋರೆಹಲ್ಲಿನ ಆಕಾರದ LED DRLಗಳು, ಮತ್ತು ಸೂಕ್ಷ್ಮವಾಗಿ ಹೊಂದಿಸಿದ ಮುಂಭಾಗದ ಬಂಪರ್ ಅನ್ನು ಹೊಂದಿದೆ. ಗ್ರಿಲ್ ಗಾತ್ರ ಮತ್ತು ವಿನ್ಯಾಸಕ್ಕೆ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಭಾರತದ ರಸ್ತೆಗಳಲ್ಲಿ ಇಳಿಯಲಿರುವ ಕಿಯಾ ಸೋನೆಟ್ ಫೇಸ್ ಲಿಫ್ಟ್ ಕಾರಿನ ವಿನ್ಯಾಸವು ಅಲ್ಲಿನ ಮಾದರಿಗಿಂತ ಭಿನ್ನವಾಗಿರಲಿದೆ.
ಇದರ ಪಕ್ಕದಲ್ಲಿ ಮಾಡಿರುವ ಬದಲಾವಣೆಯು ಹೊಸ ಅಲೋಯ್ ವೀಲ್ ಗಳಿಗಷ್ಟೇ ಸೀಮಿತವಾಗಿದ್ದು, ಹಿಂಭಾಗದಲ್ಲಿ, ಹೊಸ ಸೆಲ್ಟೋಸ್ ಮಾದರಿಯಲ್ಲಿ ಕಂಡುಬರುವ ಸಂಪರ್ಕಿತ LED ಟೇಲ್ ಲೈಟ್ ಗಳು ಮತ್ತು ಹೊಸ ಬಂಪರ್ ಅನ್ನು ಕಾಣಬಹುದು.
ಇತ್ತೀಚಿನ ಚಿತ್ರಗಳ ಪ್ರಕಾರ, ಈ SUV ಯ ಎರಡು ವಿಭಿನ್ನ ವೇರಿಯಂಟ್ ಗಳನ್ನು ಕಾಣಬಹುದು (ಬಹುಶಃ ಮಿಡ್ ಸ್ಪೆಕ್ ಮತ್ತು ಟಾಪ್ ಸ್ಪೆಕ್ ಟ್ರಿಮ್ ಗಳು). ವಿಶಿಷ್ಟವಾಗಿ ಕಾಣಿಸಿಕೊಳ್ಳುವ 16 ಇಂಚಿನ ಅಲೋಯ್ ವೀಲ್ ವಿನ್ಯಾಸಗಳು ಮತ್ತು ಒಂದರ ಡೋರ್ ಹ್ಯಾಂಡಲ್ ದೇಹದ ಬಣ್ಣವನ್ನು ಹೊಂದಿದ್ದರೆ ಇನ್ನೊಂದರಲ್ಲಿ ಕ್ರೋಮ್ ಫಿನಿಶ್ ಇರುವುದು ಈ ಭಿನ್ನತೆಗಳನ್ನು ದೃಢೀಕರಿಸಿದೆ. ಇನ್ನೊಂದು ಪ್ರಮುಖ ವ್ಯತ್ಯಾಸವೆಂದರೆ, ಟಾಪ್ ಸ್ಪೆಕ್ ಟ್ರಿಮ್ ನಲ್ಲಿ ಮಲ್ಟಿ ರಿಫ್ಲೆಕ್ಟರ್ LED ಹೆಡ್ ಲೈಟ್ ಗಳು ಇದ್ದರೆ ಮಿಡ್ ಸ್ಪೆಕ್ ವೇರಿಯಂಟ್ ನಲ್ಲಿ ಹ್ಯಾಲೋಜೆನ್ ಪ್ರಾಜೆಕ್ಟರ್ ಯೂನಿಟ್ ಗಳಿವೆ.
ಒಳಾಂಗಣದ ವಿವರಗಳು
ಇತ್ತೀಚಿನ ಸ್ಪೈ ಚಿತ್ರಗಳು ಪರಿಷ್ಕೃತ SUVಯ ಒಳಾಂಗಣದ ಕುರಿತು ಯಾವುದೇ ಮಾಹಿತಿಯನ್ನು ನೀಡದೆ ಇದ್ದರೂ, ಭಾರತಕ್ಕೆ ಸೀಮಿತವಾದ ವಾಹನದ ಪರೀಕ್ಷಾರ್ಥ ಮಾದರಿಯ ಈ ಹಿಂದಿನ ಕೆಲವೊಂದು ಚಿತ್ರಗಳು ಪ್ರಮುಖ ಪರಿಷ್ಕರಣೆಗಳ ಕುರಿತು ಮಾಹಿತಿ ನೀಡಿವೆ. ಹೊಸ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್, ಮತ್ತು ನವೀನ ಕಪ್ಪು ಮತ್ತು ಕಂದು ಬಣ್ಣದ ಅಫೋಲ್ಸ್ಟರಿ (ಬಹುಶಃ ಹೈಯರ್ ಎಂಡ್ ವೇರಿಯಂಟ್ ಗಳಿಗೆ) ಇತ್ಯಾದಿಗಳನ್ನು ಇದು ಒಳಗೊಂಡಿದೆ.
ನಿರೀಕ್ಷಿಸಬಹುದಾದ ವೈಶಿಷ್ಟ್ಯಗಳು
ಈ SUV ಯು ಸಿಂಗಲ್ ಪೇನ್ ಸನ್ ರೂಫ್ ಅನ್ನೇ ಮುಂದುವರಿಸಲಿದೆ ಎಂಬುದನ್ನು ಸ್ಪೈ ಶಾಟ್ ದೃಢೀಕರಿಸಿದೆ. ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು, ಕ್ರೂಸ್ ಕಂಟ್ರೋಲ್, 10.25 ಇಂಚಿನ ಟಚ್ ಸ್ಕ್ರೀನ್ ಮತ್ತು ಅಟೋ ಕ್ಲೈಮೇಟ್ ಕಂಟ್ರೋಲ್ ಇತ್ಯಾದಿ ವೈಶಿಷ್ಟ್ಯಗಳನ್ನು ಇದರಲ್ಲಿ ನಿರೀಕ್ಷಿಸಬಹುದು.
ಸುರಕ್ಷತೆಯ ದೃಷ್ಟಿಯಿಂದ ಇದು 360 ಡಿಗ್ರಿ ಕ್ಯಾಮರಾ ಮತ್ತು ಕೆಲವೊಂದು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಇತ್ಯಾದಿಗಳನ್ನು ಹೊಂದಿರುವ ಸಾಧ್ಯತೆ ಇದೆ ಎಂದು ಮುಂಭಾಗದ ವಿಂಡ್ ಶೀಲ್ಡ್ ನಲ್ಲಿ ಇರಿಸಲಾದ ಕ್ಯಾಮರಾವು ಮುನ್ಸೂಚನೆ ನೀಡಿದೆ. ಕಿಯಾ ಸಂಸ್ಥೆಯು ಹೊಸ ಸೋನೆಟ್ ನಲ್ಲಿ ಆರು ಏರ್ ಬ್ಯಾಗ್ ಗಳು, ISOFIX ಚೈಲ್ಡ್ ಸೀಟ್ ಮೌಂಟ್ ಗಳು ಮತ್ತು ಫ್ರಂಟ್ ಹಾಗೂ ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳನ್ನು ಒದಗಿಸಲಿದೆ.
ಇದನ್ನು ಸಹ ಓದಿರಿ: 360 ಡಿಗ್ರಿ ಕ್ಯಾಮರಾ ಹೊಂದಿರುವ 10 ಅಗ್ಗದ ಕಾರುಗಳು: ಮಾರುತಿ ಬಲೇನೊ, ಟಾಟಾ ನೆಕ್ಸನ್, ಕಿಯಾ ಸೆಲ್ಟೊಸ್, ಮತ್ತು ಇತರ ಕಾರುಗಳು
ಯಾವುದೇ ತಾಂತ್ರಿಕ ಬದಲಾವಣೆಗಳಿಲ್ಲ
ಕಿಯಾ ಸಂಸ್ಥೆಯು ತನ್ನ SUVಯ ಪವರ್ ಟ್ರೇನ್ ಆಯ್ಕೆಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳು ಕಡಿಮೆ. ಭಾರತದಲ್ಲಿ ಪ್ರಸ್ತುತ ಚಾಲನೆಯಲ್ಲಿರುವ ಸೋನೆಟ್ ಕಾರು ಈ ಕೆಳಗಿನ ಎಂಜಿನ್ - ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡುತ್ತದೆ
ವಿವರಗಳು |
1.2-ಲೀಟರ್ ಪೆಟ್ರೋಲ್ |
1-ಲೀಟರ್ ಟರ್ಬೊ ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
83PS |
120PS |
116PS |
ಟಾರ್ಕ್ |
115Nm |
172Nm |
250Nm |
ಟ್ರಾನ್ಸ್ ಮಿಶನ್ |
5-ಸ್ಪೀಡ್ MT |
6-ಸ್ಪೀಡ್ iMT, 7-ಸ್ಪೀಡ್ DCT |
6-ಸ್ಪೀಡ್ iMT, 6-ಸ್ಪೀಡ್ AT |
ಕಿಯಾ ಸಂಸ್ಥೆಯು ಡೀಸೆಲ್ ಟ್ರಾನ್ಸ್ ಮಿಶನ್ ಗೆ ಸಾಮಾನ್ಯ ಮ್ಯಾನುವಲ್ ಟ್ರಾನ್ಸ್ ಮಿಶನ್ ಅನ್ನು ವಾಪಾಸ್ ತರಲಿದೆ ಎನ್ನುವ ಗಾಳಿಸುದ್ದಿ ಕೇಳಿಬಂದಿದ್ದರೂ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ ಸೋನೆಟ್ ಫೇಸ್ ಲಿಫ್ಟ್ ಕಾರನ್ನು ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಭವವಿದ್ದು, ಬೆಲೆಯು ರೂ. 8 ಲಕ್ಷದಿಂದ ಪ್ರಾರಂಭಗೊಳ್ಳಲಿದೆ (ಎಕ್ಸ್-ಶೋರೂಂ). ಇದು ಟಾಟಾ ನೆಕ್ಸನ್, ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯು, ರೆನೋ ಕೈಗರ್, ನಿಸಾನ್ ಮ್ಯಾಗ್ನೈಟ್, ಮಹೀಂದ್ರಾ XUV300 ಇತ್ಯಾದಿಗಳೊಂದಿಗೆ ಸ್ಪರ್ಧಿಸಲಿದ್ದು, ಮಾರುತಿ ಫ್ರಾಂಕ್ಸ್ ಕ್ರಾಸ್ ಓವರ್ ಕಾರಿಗೆ ಬದಲಿ ಆಯ್ಕೆ ಎನಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸೋನೆಟ್ ಅಟೋಮ್ಯಾಟಿಕ್