ಬಿಡುಗಡೆಯಾಗಿದೆ ಹೊಸ ಮರ್ಸಿಡಿಸ್-ಬೆನ್ಝ್ G ಕ್ಲಾಸ್ 400d, ಬೆಲೆಗಳು ರೂ 2.55 ಕೋಟಿಯಿಂದ ಪ್ರಾರಂಭ!

modified on ಜುಲೈ 02, 2023 11:15 am by shreyash for ಮರ್ಸಿಡಿಸ್ ಜಿ ವರ್ಗ

  • 32 Views
  • ಕಾಮೆಂಟ್‌ ಅನ್ನು ಬರೆಯಿರಿ

ಒಂದೇ ರೀತಿಯ ಡೀಸೆಲ್ ಪವರ್‌ಟ್ರೇನ್ ಹೊಂದಿರುವ ಎರಡು ವಿಶಾಲ ಎಡ್ವೆಂಚರ್ ಮತ್ತು AMG ಲೈನ್ ವೇರಿಯೆಂಟ್‌ಗಳಲ್ಲಿ ಪರಿಚಯಿಸಲಾಗಿದೆ

Mercedes-Benz G400d Adventure And AMG Line

  •  ಭಾರತದಲ್ಲಿ G-ಕ್ಲಾಸ್ ಹೊಸತಾದ ಮತ್ತು ಹೆಚ್ಚು ಶಕ್ತಿಯುತ ಡೀಸೆಲ್ ವೇರಿಯೆಂಟ್ ಅನ್ನು ಪಡೆಯುತ್ತಿದೆ.

  •  G400d ಅಡ್ವೆಂಚರ್ ಲೈಫ್‌ಸ್ಟೈಲ್ ಕೇಂದ್ರಿತ ಆವೃತ್ತಿಯಾಗಿದ್ದು ವಿಶೇಷವಾಗಿ ಭಾರತಕ್ಕಾಗಿಯೇ ಕಾನ್ಫಿಗರ್ ಮಾಡಲಾಗಿದೆ.

  •  ಇನ್ನೊಂದೆಡೆ, ಈ G400d AMG, SUVಯ ಸ್ಪೋರ್ಟಿಯರ್ ನೋಟದ ಆವೃತ್ತಿಯಾಗಿದೆ.

  •  ಎರಡೂ ಕೂಡಾ 330PS ಮತ್ತು 700Nm ಉತ್ಪಾದಿಸುವ ಒಂದೇ ರೀತಿಯ ಆರು ಸಿಲಿಂಡರ್ ಡೀಸೆಲ್ ಇಂಜಿನ್ ಅನ್ನು ಬಳಸುತ್ತವೆ.

  •  ಈ ಹೊಸ G-ಕ್ಲಾಸ್ ಅನ್ನು ರೂ 1.5 ಲಕ್ಷದ ಮುಂಗಡ ಮೊತ್ತಕ್ಕೆ ಕಾಯ್ದಿರಿಸಬಹುದು ಮತ್ತು ಡೆಲಿವರಿಗಳು ಅಕ್ಟೋಬರ್ 2023ರಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.

 ಈ ಮರ್ಸಿಡಿಸ್-ಬೆನ್ಝ್ G ಕ್ಲಾಸ್ ಈಗ ಭಾರತದಲ್ಲಿ G400d ಆಗಿ ಹೆಚ್ಚು ಶಕ್ತಿಯುತ ಡೀಸೆಲ್ ವೇರಿಯೆಂಟ್ ಅನ್ನು ಪಡೆದಿದೆ. ಇದನ್ನು ಎರಡು ಹೊಸ ಪುನರಾವರ್ತನೆಗಳಲ್ಲಿ ನೀಡಲಾಗಿದೆ- ಮೊದಲು ಮಾರಾಟ ಮಾಡುತ್ತಿದ್ದ G350d ವೇರಿಯೆಂಟ್‌ಗಳಿಗೆ ಬದಲಾಗಿ G400d ಅಡ್ವೆಂಚರ್ ಮತ್ತು G400d AMG ಲೈನ್. G ಕ್ಲಾಸ್‌ನ ಎರಡೂ ವೇರಿಯೆಂಟ್‌ಗಳಿಗೆ ರೂ 2.55 ಕೋಟಿಗಳ ಸಮಾನ ಬೆಲೆಯನ್ನು (ಎಕ್ಸ್-ಶೋರೂಂ ಪ್ಯಾನ್ ಇಂಡಿಯಾ) ನಿಗದಿಪಡಿಸಲಾಗಿದೆ. ಗ್ರಾಹಕರು ಈ SUVಗಳಲ್ಲಿ ಯಾವುದನ್ನಾದರೂ ರೂ.1.5 ಲಕ್ಷದ ಮುಂಗಡ ಮೊತ್ತಕ್ಕೆ ಕಾಯ್ದಿರಿಸಬಹುದು. ಆಫರ್‌ನ ವಿವರಗಳು ಇಲ್ಲಿವೆ.

 

ಇವುಗಳು ಒಂದಕ್ಕಿಂತ ಇನ್ನೊಂದು ಹೇಗೆ ಭಿನ್ನವಾಗಿದೆ?

G400d ಅಡ್ವೆಂಚರ್ ಎಡಿಷನ್

New Mercedes-Benz G Class 400d Launched, Prices Start At Rs 2.55 Crore

ಅಡ್ವೆಂಚರ್ ಎಡಿಷನ್ ಭಾರತಕ್ಕಾಗಿ ವಿಶೇಷವಾಗಿ ಕಾನ್ಫಿಗರ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ SUV ಯ ವಿಶೇಷ ಎಡಿಷನ್ ರೂಫ್ ರ‍್ಯಾಕ್, ಹಿಂಭಾಗದಲ್ಲಿ ತೆಗೆಯಬಹುದಾದ ಏಣಿ, 5-ಸ್ಪೋಕ್ 18-ಇಂಚು ಅಲಾಯ್ ವ್ಹೀಲ್‌ಗಳು ಮತ್ತು ಟೇಲ್‌ಗೇಟ್‌ನಲ್ಲಿ ಮೌಂಟ್ ಮಾಡಲಾದ ಪೂರ್ಣ ಗಾತ್ರದ ಹೆಚ್ಚುವರಿ ವ್ಹೀಲ್ ಮುಂತಾದ ಅನೇಕ ಸಾಹಸ ವಿಶಿಷ್ಟ ಸೇರ್ಪಡೆಗಳನ್ನು ಪಡೆದಿದೆ.

 ಈ  G400d ಎಡಿಷನ್ ಒಟ್ಟು 25 ಬಣ್ಣ ಆಯ್ಕೆಗಳಲ್ಲಿ ಬರುತ್ತಿದ್ದು, ನಾಲ್ಕು ಹೊಸ ಆಕರ್ಷಕ ಬಣ್ಣಗಳಾದ ಸ್ಯಾಂಡ್ ನಾನ್ ಮೆಟಾಲಿಕ್, ವಿಂಟೇಜ್ ಬ್ಲೂ ನಾನ್-ಮೆಟಾಲಿಕ್, ಟ್ರಾವರ್ಟೈನ್ ಬೀಜ್ ಮೆಟಾಲಿಕ್ ಮತ್ತು ಸೌತ್ ಸೀಸ್ ಬ್ಲೂ ಮೆಟಾಲಿಕ್ ಅನ್ನು ಒಳಗೊಂಡಿದೆ.

 ಇದನ್ನೂ ಓದಿ: ಭಾರತದಲ್ಲಿ ಮರ್ಸಿಡಿಸ್-ಬೆನ್ಝ್ ಪರಿಚಯಿಸುತ್ತಿದೆ ನವೀಕೃತ A-ಕ್ಲಾಸ್ , ಬೆಲೆಗಳು ರೂ 45.8 ಲಕ್ಷದಿಂದ ಪ್ರಾರಂಭ 

 

G400d AMG ಲೈನ್

New Mercedes-Benz G Class 400d Launched, Prices Start At Rs 2.55 Crore

 G400d AMG ಅನ್ನು G-Wagen  AMG ಪರ್ಫಾರ್ಮೆನ್ಸ್ SUV ನೊಂದಿಗೆ ಗೊಂದಲಕ್ಕೀಡಾಗಬಾರದು, ಆದರೆ, ಇದು G ಕ್ಲಾಸ್‌ನ ಸ್ಪೋರ್ಟಿ ನೋಟದ್ದಾಗಿದೆ. ಈ ಟ್ರಿಮ್‌ನ ಮುಖ್ಯಾಂಶಗಳು ನಪ್ಪಾ ಲೆದರ್ ಅಪ್‌ಹೋಲ್ಸ್‌ಟ್ರಿ, ಸ್ಪೋರ್ಟಿ ಮಲ್ಟಿಫಂಕ್ಷನ್ ಸ್ಟೀರಿಂಗ್ ವ್ಹೀಲ್, 20-ಇಂಚು ಅಲಾಯ್ ವ್ಹೀಲ್‌ಗಳು ಮತ್ತು ಸ್ಟೇನ್‌ಲೆಸ್ ಸ್ಪೇರ್ ವ್ಹೀಲ್ ಕವರ್ ಅನ್ನು ಒಳಗೊಂಡಿದೆ.

 ಈ ಮರ್ಸಿಡಿಸ್ ಐಷಾರಾಮಿ ಆಫ್-ರೋಡರ್‌ನಲ್ಲಿರುವ ಇತರ ಫೀಚರ್‌ಗಳೆಂದರೆ, ಮಲ್ಟಿಬೀಮ್ LED ಹೆಡ್‌ಲ್ಯಾಂಪ್‌ಗಳು, ಬರ್ಮೆಸ್ಟರ್ ಆವರಿಸಿದ ಸೌಂಡ್ ಸಿಸ್ಟಮ್, 64 ಕಲರ್ ಆ್ಯಂಬಿಯೆಂಟ್ ಲೈಟಿಂಗ್ ಮತ್ತು ಸ್ಲೈಡಿಂಗ್ ಸನ್‌ರೂಫ್.

  ಎರಡೂ ಕೂಡಾ ಸಮನಾದ ಆಫ್‌ರೋಡ್ ಸಾಮರ್ಥ್ಯ ಹೊಂದಿದೆ

New Mercedes-Benz G Class 400d Launched, Prices Start At Rs 2.55 Crore

  G ಕ್ಲಾಸ್ ಯಾವಾಗಲೂ ತನ್ನ ಹಾರ್ಡ್‌ಕೋರ್ ಆಫ್‌ರೋಡಿಂಗ್ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದು ಇದು ಈ ಹೊಸ ವೇರಿಯೆಂಟ್‌ಗಳೊಂದಿಗೂ ಮುಂದುವರಿಯುತ್ತದೆ. ಇದು ಸ್ಟೀಲ್ ಲ್ಯಾಡರ್ ಫ್ರೇಮ್ ಚಾಸಿಸ್ ಆಧಾರಿತವಾಗಿದ್ದು 700mm ನಷ್ಟು ನೀರಿನಲ್ಲಿ ಹೋಗುವ ಸಾಮರ್ಥ್ಯದೊಂದಿಗೆ 241mm ನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ನೀಡುತ್ತದೆ.

 ಅಲ್ಲದೇ ಇದು “G ಮೋಡ್” ಮೋಡ್ ಅನ್ನು ನಿರ್ದಿಷ್ಟವಾಗಿ ಆಫ್‌ರೋಡಿಂಗ್‌ಗೆ ಪಡೆದಿದ್ದು, ಇದು ಯಾವುದೇ ಡ್ರೈವಿಂಗ್ ಮೋಡ್ ಆಯ್ಕೆ ಮಾಡಿದರೂ ಮೂರು ಡಿಫರೆನಿಕ್ಷಿಯಲ್ ಲಾಕ್‌ನಲ್ಲಿ ಒಂದರೊಂದಿಗೆ ತೊಡಗಿಸಿಕೊಳ್ಳುತ್ತದೆ. ಈ ಮೋಡ್‌ನಲ್ಲಿ ಇದು ಬೇಡದ ಗೇರ್‌ಶಿಫ್ಟ್‌ಗಳನ್ನು ತಡೆಗಟ್ಟಲು ಚಾಸಿಸ್ ಡ್ಯಾಂಪಿಂಗ್, ಸ್ಟೀರಿಂಗ್ ಇನ್‌ಪುಟ್‌ಗಳು ಮತ್ತು ಆ್ಯಕ್ಸಿಲರೇಶನ್ ರೆಸ್ಪಾನ್ಸ್ ಅನ್ನು ಅಳವಡಿಸಿಕೊಳ್ಳುತ್ತದೆ.

 ಇದನ್ನೂ ಪರಿಶೀಲಿಸಿ.: ಮರ್ಸಿಡಿಸ್-ಬೆನ್ಝ್ E-ಕ್ಲಾಸ್ ವರ್ಷಗಳಿಂದ ಹೇಗೆ ವಿಕಸನಗೊಂಡಿತು ಎಂಬುದರ ನೋಟ


 ಪವರ್‌ಟ್ರೇನ್ ವಿವರಗಳು

 ಈ ಹೊಸ G400d ಅದೇ OM656 ಇನ್‌ಲೈನ್ ಆರು ಸಿಲಿಂಡರ್‌ ಡೀಸೆಲ್ ಇಂಜಿನ್‌ನಿಂದ ಚಾಲಿತವಾಗಿದ್ದು 330PS ಮತ್ತು 700Nm ಅನ್ನು ಉತ್ಪಾದಿಸುತ್ತದೆ. ಇದು G ಕ್ಲಾಸ್‌ಗೆ ಕೇವಲ 6.4 ಸೆಕೆಂಡುಗಳಲ್ಲಿ ಸೊನ್ನೆಯಿಂದ 100kmph ಸ್ಪ್ರಿಂಟ್ ಆಗಿ 210kmph ಗಳ ಟಾಪ್ ಸ್ಪೀಡ್ ಅನ್ನು ಪಡೆಯಲು ಸಾಕಾಗುತ್ತದೆ.

 ಡೀಸೆಲ್ SUಯ Vಗ್ರೀನ್ ವಿವರಗಳು

New Mercedes-Benz G Class 400d Launched, Prices Start At Rs 2.55 Crore

 G400dಯಲ್ಲಿ 35.9kg ತೂಕದ 41 ಅಂಶಗಳನ್ನು ಉನ್ನತ-ಗುಣಮಟ್ಟದ ಮರುಬಳಕೆಯ ಪ್ಲಾಸ್ಟಿಕ್‌ಗಳಿಂದ ಮಾಡಲಾಗಿದೆ ಎಂದು ಮರ್ಸಿಡಿಸ್-ಬೆನ್ಝ್ ಹೇಳುತ್ತದೆ. ಮೇಲಾಗಿ, ಒಳಗೂ ಬ್ಯಾಕ್‌ರೆಸ್ಟ್ ಕುಶನಿಂಗ್‌ಗೆ ಲೇಟೆಕ್ಸ್ ಎಮಲ್ಷನ್‌ನೊಂದಿಗೆ ‌ತೆಂಗಿನ ನಾರು ಮತ್ತು ಡೋರ್ ಪ್ಯಾನೆಲ್ ಒಳಗೆ ಉಪರಚನೆಗಾಗಿ ಮರದ ನಾರಿನ ಸಂಯೋಜನೆ ಮುಂತಾದ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಲಾಗುತ್ತದೆ.

 ಡೆಲಿವರಿಗಳು ಮತ್ತು ಪ್ರತಿಸ್ಪರ್ಧಿಗಳು

 ಹೊಸ G ಕ್ಲಾಸ್ ಡೆಲಿವರಿಗಳನ್ನು ಹಂಚಿಕೆಗಳನ್ನು ಆಧರಿಸಿ ಅಕ್ಟೋಬರ್ 2023ರಿಂದ ಪ್ರಾರಂಭಿಸುವ ನಿರೀಕ್ಷೆ ಇದೆ. ಪ್ರಸ್ತುತ ಇರುವ ಗ್ರಾಹಕರು G400d ಅನ್ನು ಕಾಯ್ದಿರಿಸಲು ಆಕರ್ಷಕ ಮೊದಲ ಪ್ರವೇಶವನ್ನು ಪಡೆಯಲಿದ್ದಾರೆ ಎಂದು ಮರ್ಸಿಡಿಸ್-ಬೆನ್ಝ್ ಹೇಳುತ್ತದೆ. ಭಾರತದಲ್ಲಿ G ಕ್ಲಾಸ್ ಲ್ಯಾಂಡ್ ರೋವರ್ ಡಿಫೆಂಡರ್  ಮತ್ತು ಟೊಯೋಟಾ ಲ್ಯಾಂಡ್ ಕ್ರ್ಯೂಸರ್ ಗೆ ಪೈಪೋಟಿ ನೀಡುತ್ತದೆ.

ಇನ್ನಷ್ಟು ಓದಿ: G-ಕ್ಲಾಸ್ ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮರ್ಸಿಡಿಸ್ ಜಿ ವರ್ಗ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience