ಹೊಸ Nissan X-Trail ಎಸ್‌ಯುವಿಯ ಟೀಸರ್ ಔಟ್, ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆ ಸಾಧ್ಯತೆ
ನಿಸ್ಸಾನ್ ಎಕ್ಜ್-ಟ್ರೈಲ್ ಗಾಗಿ dipan ಮೂಲಕ ಜೂನ್ 27, 2024 06:50 pm ರಂದು ಪ್ರಕಟಿಸಲಾಗಿದೆ
- 83 Views
- ಕಾಮೆಂಟ್ ಅನ್ನು ಬರೆಯಿರಿ
ನಿಸ್ಸಾನ್ ಇಂಡಿಯಾದ ಶ್ರೇಣಿಯಲ್ಲಿ ಮ್ಯಾಗ್ನೈಟ್ ಹೊರತಾಗಿ ನಿಸ್ಸಾನ್ ಎಕ್ಸ್-ಟ್ರಯಲ್ ಏಕೈಕ ಕೊಡುಗೆಯಾಗಿದೆ.
- ನಿಸ್ಸಾನ್ ಭಾರತದಲ್ಲಿ ನಾಲ್ಕನೇ ಜನರೇಷನ್ X-ಟ್ರಯಲ್ SUV ಯ ಒಂದು ಝಲಕ್ ಅನ್ನು ನೀಡಿದೆ.
- ಇದನ್ನು ಸಂಪೂರ್ಣವಾಗಿ ನಿರ್ಮಿಸಿದ ಘಟಕ (CBU) ರೂಪದಲ್ಲಿ ನೀಡಲಾಗುವುದು.
- ಇದು 12V ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಜಾಗತಿಕವಾಗಿ ಲಭ್ಯವಿದೆ.
- ಇಂಡಿಯಾ-ಸ್ಪೆಕ್ X-ಟ್ರಯಲ್‌ನ ಪವರ್‌ಟ್ರೇನ್‌ಗಳ ವಿವರಗಳು ಇನ್ನೂ ಬಹಿರಂಗವಾಗಿಲ್ಲ.
- SUV ರಿಯರ್-ವೀಲ್ ಡ್ರೈವ್ (RWD) ಅಥವಾ 4-ವೀಲ್ ಡ್ರೈವ್ ನೊಂದಿಗೆ (4WD) ಕೂಡ ಲಭ್ಯವಿದೆ.
- ಇದು ಜುಲೈನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ; ಬೆಲೆಯು ರೂ 40 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋರೂಂ).
ನಿಸ್ಸಾನ್ ತನ್ನ ಹೊಸ SUV ನಿಸ್ಸಾನ್ X-ಟ್ರಯಲ್ ಅನ್ನು ಭಾರತದಲ್ಲಿ ಪರಿಚಯಿಸಲು ಸಿದ್ಧವಾಗುತ್ತಿದೆ. ಮುಂಬರುವ SUV ಗಾಗಿ ಈ ಜಪಾನಿ ವಾಹನ ತಯಾರಕರು ಮೊದಲ ಟೀಸರ್ ಅನ್ನು ಅನಾವರಣಗೊಳಿಸಿದ್ದಾರೆ. ಮ್ಯಾಗ್ನೈಟ್ SUV ಜೊತೆಗೆ X-ಟ್ರಯಲ್ ಭಾರತದಲ್ಲಿ ಅದರ ಶ್ರೇಣಿಯಲ್ಲಿ ನಿಸ್ಸಾನ್‌ನ ಎರಡನೇ ವಾಹನವಾಗಿದೆ. ಹೊಸ ಎಕ್ಸ್-ಟ್ರಯಲ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿವರಗಳು ಇಲ್ಲಿದೆ:
ಹೊರಭಾಗ ಮತ್ತು ಒಳಭಾಗ
ಅಂತರಾಷ್ಟ್ರೀಯವಾಗಿ, ಎಕ್ಸ್-ಟ್ರಯಲ್ ಐದು ಮತ್ತು ಏಳು ಸೀಟರ್ ಗಳ ಲೇಔಟ್ ಗಳಲ್ಲಿ ಲಭ್ಯವಿದೆ. ಈ SUV ಯ ಡೈಮೆನ್ಷನ್ ಗಳು ಈ ಕೆಳಗಿನಂತಿವೆ:
ಡೈಮೆನ್ಷನ್ ಗಳು |
ನಿಸ್ಸಾನ್ X-ಟ್ರಯಲ್ SUV |
ಉದ್ದ |
4,680 ಮಿ.ಮೀ |
ಅಗಲ |
1,840 ಮಿ.ಮೀ |
ಎತ್ತರ |
1,725 ಮಿ.ಮೀ |
ವೀಲ್ಬೇಸ್ |
2,705 ಮಿ.ಮೀ |
ಡಿಸೈನ್ ವಿಷಯದಲ್ಲಿ, X-ಟ್ರಯಲ್ LED ಲೈಟ್ ಗಳೊಂದಿಗೆ ಸ್ಪ್ಲಿಟ್ ಹೆಡ್‌ಲೈಟ್‌ಗಳನ್ನು ಮತ್ತು ನಿಸ್ಸಾನ್‌ನ ಇತ್ತೀಚಿನ V-ಮೋಷನ್ ಡಿಸೈನ್ ಅನ್ನು ಒಳಗೊಂಡಿರುವ ದೊಡ್ಡ ಗ್ರಿಲ್ ಅನ್ನು ಒಳಗೊಂಡಿದೆ. ನೀವು ಆಯ್ಕೆ ಮಾಡುವ ಮಾಡೆಲ್ ಅನ್ನು ಅವಲಂಬಿಸಿ SUV 18-ಇಂಚಿನ ಅಥವಾ 19-ಇಂಚಿನ ಅಲೊಯ್ ವೀಲ್ ನೊಂದಿಗೆ ಬರುತ್ತದೆ. ಇದು LED ಟೈಲ್ ಲೈಟ್‌ಗಳನ್ನು ಹೊಂದಿದೆ ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಆಧುನಿಕ SUV ಗಳಲ್ಲಿ ಸಾಮಾನ್ಯವಾಗಿರುವ ಲೈಟ್ ಬಾರ್ ಅನ್ನು ಹೊಂದಿಲ್ಲ.
ಕ್ಯಾಬಿನ್ ನ ವಿವಿಧ ಭಾಗಗಳಲ್ಲಿ ಸಿಲ್ವರ್ ಅಕ್ಸೆಂಟ್ ನೊಂದಿಗೆ ಬ್ಲಾಕ್ ಮತ್ತು ಟ್ಯಾನ್ ಬಣ್ಣದ ಲೆಥೆರೆಟ್ ಅನ್ನು ಹೊಂದಿದೆ. ಆದರೆ, ಭಾರತೀಯ ಮಾಡೆಲ್ ನ ಇಂಟೀರಿಯರ್ ಕಲರ್ ವಿಭಿನ್ನವಾಗಿರಬಹುದು.
ನಿರೀಕ್ಷಿಸಲಾಗಿರುವ ಫೀಚರ್ ಗಳು ಮತ್ತು ಸುರಕ್ಷತೆ
X-ಟ್ರಯಲ್ 3-ಜೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪವರ್ಡ್ ಟೈಲ್‌ಗೇಟ್, ಮೆಮೊರಿ ಫಂಕ್ಷನ್ ನೊಂದಿಗೆ ಹೀಟೆಡ್ ಮತ್ತು ಪವರ್ಡ್ ಮುಂಭಾಗದ ಸೀಟ್, 10-ಸ್ಪೀಕರ್ ಪ್ರೀಮಿಯಂ ಬೋಸ್ ಸರೌಂಡ್ ಸೌಂಡ್ ಸಿಸ್ಟಮ್, 3-ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಯೂನಿಟ್, ಮತ್ತು ಪನರೋಮಿಕ್ ಸನ್‌ರೂಫ್ ಗಳೊಂದಿಗೆ ಬರುವ ನಿರೀಕ್ಷೆಯಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಅದೇ ಸೈಜ್ ನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 10.8-ಇಂಚಿನ ಹೆಡ್-ಅಪ್ ಡಿಸ್‌ಪ್ಲೇಯನ್ನು ಕೂಡ ನಿರೀಕ್ಷಿಸಲಾಗಿದೆ.
ಸುರಕ್ಷತಾ ಫೀಚರ್ ಗಳಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಫ್ರಂಟ್ ಕೊಲಿಷನ್ ವಾರ್ನಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರುವ ADAS (ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್) ಸೂಟ್ ಅನ್ನು ಒಳಗೊಂಡಿರಬಹುದು.
ಎಂಜಿನ್ ಮತ್ತು ಕಾರ್ಯಕ್ಷಮತೆ
ಅಂತರಾಷ್ಟ್ರೀಯವಾಗಿ, ನಿಸ್ಸಾನ್ X-ಟ್ರಯಲ್ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ 12V ಮೈಲ್ಡ್-ಹೈಬ್ರಿಡ್ ಸೆಟಪ್‌ನೊಂದಿಗೆ ಬರುತ್ತದೆ. ಈ ಎಂಜಿನ್ ಟೂ-ವೀಲ್ ಡ್ರೈವ್ (2WD) ಮೋಡ್‌ನಲ್ಲಿ 204 PS ಮತ್ತು 330 Nm ಮತ್ತು ಫೋರ್-ವೀಲ್ ಡ್ರೈವ್‌ನಲ್ಲಿ (4WD) 213 PS ಮತ್ತು 495 Nm ಅನ್ನು ಉತ್ಪಾದಿಸುತ್ತದೆ. ಇದು 8-ಸ್ಪೀಡ್ CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಕೂಡ ಹೊಂದಿದೆ.
ಭಾರತದಲ್ಲಿ ಬಿಡುಗಡೆ ಯಾವಾಗ ಮತ್ತು ಪ್ರತಿಸ್ಪರ್ಧಿಗಳು
2024 ನಿಸ್ಸಾನ್ X-ಟ್ರಯಲ್ ಜುಲೈ ತಿಂಗಳಲ್ಲಿ ಭಾರತದ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ, ಇದರ ಬೆಲೆಯು ರೂ 40 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ (ಎಕ್ಸ್ ಶೋರೂಂ). ಇದು ಸ್ಕೋಡಾ ಕೊಡಿಯಾಕ್, ಜೀಪ್ ಮೆರಿಡಿಯನ್, ಟೊಯೊಟಾ ಫಾರ್ಚುನರ್ ಮತ್ತು MG ಗ್ಲೋಸ್ಟರ್‌ಗೆ ಪ್ರತಿಸ್ಪರ್ಧಿಯಾಗಿದೆ.
ಆಟೋಮೋಟಿವ್ ಜಗತ್ತಿನ ಇನ್ನಷ್ಟು ಅಪ್ಡೇಟ್ ಗಳನ್ನು ಪಡೆಯಲು ಬಯಸುವಿರಾ? ದಯವಿಟ್ಟು ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಈಗಲೇ ಫಾಲೋ ಮಾಡಿ
0 out of 0 found this helpful