ಹೊಸ ಪೀಳಿಗೆಯ ಮಹಿಂದ್ರಾ XUV500 ಮೊದಲ ಬಾರಿಗೆ ನೋಡಲಾಗಿದೆ
published on sep 24, 2019 03:51 pm by dhruv ಮಹೀಂದ್ರ ಎಕ್ಸಯುವಿ500 ಗೆ
- 17 ವೀಕ್ಷಣಿಗಳು
- ಕಾಮೆಂಟ್ ಅನ್ನು ಬರೆಯಿರಿ
ಮಹಿಂದ್ರಾ ಅವರ ಹೊಸ XUV500 ನಲ್ಲಿ ಹೊಸ BS6 ಕಂಪ್ಲೇಂಟ್ 2.0-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳನ್ನು ಬಳಸಲಾಗುತ್ತದೆ.
- ಮುಂದಿನ ಪೀಳಿಗೆಯ XUV500 ನಲ್ಲಿ ಫೀಚರ್ ಗಳು ಬಹಳಷ್ಟು ನೆರವಾಗಿದೆ ಮುಂಭಾಗದಲ್ಲಿ
- ಆಂತರಿಕಗಳು 2019 ಸ್ಸಾನ್ಗ್ ಯೊಂಗ್ ಕೊರಂದೋ ಆಧಾರಿತವಾಗಿರಬಹುದು
- ಹೊಸ XUV500 ನಲ್ಲಿ ಪನೋರಮಿಕ್ ಸನ್ ರೂಫ್ ಅನ್ನು ಕೊಡಲಾಗಬಹುದು
- ಈ 7-ಸೆಟರ್ SUV ಯು MG ಹೆಕ್ಟರ್,ಮತ್ತು ಟಾಟಾ ಹ್ಯಾರಿಯೆರ್ ಜೊತೆ ಸ್ಪರ್ದಿಸಬಹುದು.
ಮಹಿಂದ್ರಾ XUV500 ಯು ಭಾರತದಲ್ಲಿ ಒಂದು ಪ್ರಖ್ಯಾತ SUV ಆಗಿದೆ ಆದರೆ ಟಾಟಾ ಹ್ಯಾರಿಯೆರ್ ಮತ್ತು MG ಹೆಕ್ಟರ್ ಗಳ ಆಗಮನದ ಬಳಿಕ ಸ್ಪರ್ಧೆಯ ತೀವ್ರತೆ ಕಾಣಿಸತೊಡಗಿದೆ. ಪ್ರತಿಸ್ಪರ್ದಿಗಳ ಜೊತೆ ಸ್ಪರ್ಧೆಯನ್ನು ತೀವ್ರ ಗೊಳಿಸಲು ಮಹಿಂದ್ರಾ ದವರು ಹೊಸ ಪೀಳಿಗೆಯ XUV500 ಮೇಲೆ ಕಾರ್ಯತತ್ಪರರಾಗಿದ್ದರೆ , ಅದನ್ನು ಪರೀಕ್ಷಿಸುತ್ತಿರುವಾಗ ಮೊದಲಬಾರಿಗೆ ನೋಡಲಾಗಿದೆ.
ಮುಂಭಾಗದಲ್ಲಿ, ಹೊಸ XUV500 ಯಲ್ಲಿ ಹೆಚ್ಚು ನೂತನ ಸ್ಟೈಲಿಂಗ್ ಕೊಡಲಾಗಿದೆ ಮತ್ತು ಏಳು ಸ್ಲಾಟ್ ಗಳ ಮಹಿಂದ್ರಾ ಗ್ರಿಲ್ ಅನ್ನು ಇರಿಸಿಕೊಳ್ಳಲಾಗಿದೆ. ಹಾಗು, ಕಾರ್ ನ ಬದಿಗಳಲ್ಲಿ ಇರುವ ಈಗಿನ ಪಿಳ್ಗೆಯ ಮಾಡೆಲ್ ಅನ್ನು ಸಹ ಟೆಸ್ಟ್ ಮಾಡೆಲ್ ನಲ್ಲಿ ನೋಡಬಹುದು. ಹೆಡ್ ಲೈಟ್ ಗಳು ಇಲ್ಲಿರುವಂತಹವು ತಯಾರಿಕಾ ಸ್ಪೆಕ್ ಯೂನಿಟ್ ಆಗಿಲ್ಲ ಮತ್ತು ಅದನ್ನು ಪರೀಕ್ಷೆಗಾಗಿ ರಸ್ತೆಯಲ್ಲಿ ಉಪಯೋಗಿಸಲು ಅಳವಡಿಸಲಾಗಿದೆ. ಇದರಿಂದ ಇದು ಕೊನೆಯ ಉತ್ಪನ್ನದ ಮಾಡೆಲ್ ಅಲ್ಲ ಎಂದು ತಿಳಿಯಬಹುದು.
ಸ್ಸಾನ್ಗ್ ಯೊಂಗ್ ರೆಕ್ಸ್ಟೋನ್ ಮಾಡೆಲ್ ಆಲ್ತುರಸ್ G4 ಗಾಗಿ ಇರುವಂತೆ ಮತ್ತು ಟಿವೊಲಿ ಯು XUV300 ಗಾಗಿ ಇರುವಂತೆ ಹೊಸ XUV500 ಅನ್ನು ಕೊರಿಯಾ ಕಾರ್ ಮೇಕರ್ ನ ಕೊರಾಂದೋ SUV ಗಾಗಿ ಇದೆ. ನಮ್ಮ ನಂಬಿಕೆಯಂತೆ ಹೊಸ XUV500 ಕೆಲವು ತುಣುಕುಗಳನ್ನು ಹೊಸ ಕೊರಾಂದೋ ಇಂದ ತರಬಹುದು, ವಿಶೇಷವಾಗಿ ಆಂತರಿಕಗಳಿಗೆ. ಫೀಚರ್ ಗಳಾದ ಡುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಪವರ್ ಇರುವ ಟೈಲ್ ಗೇಟ್ , ಪನರಾಮಿಕ್ ಸನ್ ರೂಫ್, ಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ವೆಂಟಿಲೇಟೆಡ್ ಸೀಟ್ ಗಳು, ಮತ್ತು ಮೆಮೊರಿ ಕಾರ್ಯ ಡ್ರೈವರ್ ಸೀಟ್ ಗಾಗಿ ಇವುಗಳನ್ನು ಕೊಡಲಾಗಬಹುದು.
ಮಹಿಂದ್ರಾ ದವರ ಹೊಸ BS6 2.0-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಅನ್ನು ಮುಂದಿನ ಪೀಳಿಗೆಯ XUV500 ಗಾಗಿ ತಯಾರಿಸುತ್ತಿದ್ದಾರೆ. ಈಗ ಲಭ್ಯವಿರುವ 2.2- ಲೀಟರ್ ಪೆಟ್ರೋಲ್ ಮೋಟಾರ್ 140PS ಪವರ್ ಹಾಗು 320Nm ಟಾರ್ಕ್ ಕೊಡುತ್ತದೆ, ಹಾಗು ಡೀಸೆಲ್ ಎಂಜಿನ್ ಅದೇ ಡಿಸ್ಪ್ಲೇಸ್ಮೆಂಟ್ ನಲ್ಲಿ 155PS ಪವರ್ ಮತ್ತು 360Nm ಟಾರ್ಕ್ ಕೊಡುತ್ತದೆ. ಹೊಸ ಎಂಜಿನ್ ನಲ್ಲಿ ಅದೇ ತರಹದ ಕಾರ್ಯದಕ್ಷತೆ ನಿರೀಕ್ಷಿಸಲಾಗಿದೆ, ಹೆಚ್ಚು ಇಲ್ಲದಿದ್ದರೆ, , ಈಗಿರುವ ಎಂಜಿನ್ ನಂತೆ. ಮಹಿಂದ್ರಾ ದವರು 6-ಮಾನ್ಯುಯಲ್ ಮತ್ತು ಒಂದು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಮತ್ತು ಆಯ್ಕೆಯಾಗಿ AWD (ಆಲ್ ವೀಲ್ ಡ್ರೈವ್ ) ಆಯ್ದ ವೇರಿಯೆಂಟ್ ಗಳಲ್ಲಿ ಕೊಡಲಾಗುತ್ತದೆ.
ಅಧಿಕೃತ ಬಿಡುಗಡೆಯ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ ಸಹ, ಮಹಿಂದ್ರಾ ತಮ್ಮ ಹೊಸ XUV500 ಅನ್ನು ಫೆಬ್ರವರಿ ನಲ್ಲಿ 2020 ಆಟೋ ಎಕ್ಸ್ಪೋ ದಲ್ಲಿ ಬಿಡುಗಡೆ ಮಾಡಬಹುದು. ಈಗ ಇರುವ XUV500 ರಿಟೇಲ್ ರೂ 12.31 ಲಕ್ಷ ದಿಂದ ರೂ 18.52 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ )ಇರಬಹುದು. ಬಿಡುಗಡೆ ಆದಾಗ, ಹೊಸ XUV500 ತನ್ನ ಸ್ಪರ್ಧೆಯನ್ನು ಹೊಸ MG ಹೆಕ್ಟರ್ ಮತ್ತು ಟಾಟಾ ಹ್ಯಾರಿಯೆರ್ ಜೊತೆ ಮುಂದುವರೆಸುತ್ತದೆ ಹಾಗು ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಜೊತೆ ತೀವ್ರ ಪೈಪೋಟಿ ಮುಂದುವರೆಸುತ್ತದೆ.
- Renew Mahindra XUV500 Car Insurance - Save Upto 75%* with Best Insurance Plans - (InsuranceDekho.com)
- Loan Against Car - Get upto ₹25 Lakhs in cash
0 out of 0 found this helpful