Login or Register ಅತ್ಯುತ್ತಮ CarDekho experience ಗೆ
Login

ಭಾರತದಲ್ಲಿ ಹೊಸ ಜನರೇಶನ್‌ನ Skoda Kodiaqನ ಅನಾವರಣ

ಸ್ಕೋಡಾ ಕೊಡಿಯಾಕ್ ಗಾಗಿ dipan ಮೂಲಕ ಜನವರಿ 18, 2025 07:04 pm ರಂದು ಪ್ರಕಟಿಸಲಾಗಿದೆ

ಹೊಸ ಕೊಡಿಯಾಕ್ ವಿಕಸನೀಯ ವಿನ್ಯಾಸವನ್ನು ಹೊಂದಿದೆ, ಆದರೆ ಮುಖ್ಯ ಆಪ್‌ಡೇಟ್‌ಗಳು ಒಳಭಾಗದಲ್ಲಿವೆ, ಅಲ್ಲಿ ಇದು ಸಾಕಷ್ಟು ತಂತ್ರಜ್ಞಾನದೊಂದಿಗೆ ಹೊಚ್ಚ ಹೊಸ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ

  • ಹೊಸ ಕೊಡಿಯಾಕ್ ನಯವಾದ LED ಹೆಡ್‌ಲೈಟ್‌ಗಳು, ಹೊಸ 20-ಇಂಚಿನ ಅಲಾಯ್‌ಗಳು ಮತ್ತು C-ಆಕಾರದ ಕನೆಕ್ಟೆಡ್‌ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ.

  • ಒಳಭಾಗದಲ್ಲಿ, ಇದು 13-ಇಂಚಿನ ಟಚ್‌ಸ್ಕ್ರೀನ್ ಮತ್ತು ಪ್ರಮುಖ ಫಂಕ್ಷನ್‌ಗಳಿಗಾಗಿ ಭೌತಿಕ ಡಯಲ್‌ಗಳೊಂದಿಗೆ ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ ಬರುತ್ತದೆ.

  • ಇತರ ಫೀಚರ್‌ಗಳಲ್ಲಿ 10.25-ಇಂಚಿನ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್ ಮತ್ತು ಬ್ರಾಂಡೆಡ್ ಸೌಂಡ್ ಸಿಸ್ಟಮ್ ಸೇರಿವೆ.

  • ಸುರಕ್ಷತಾ ಸೂಟ್ ಬಹು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, TPMS ಮತ್ತು ADAS ಅನ್ನು ಒಳಗೊಂಡಿದೆ.

  • ಬೆಲೆಗಳು 45 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.

2024 ರಲ್ಲಿ ಜಾಗತಿಕವಾಗಿ ಅನಾವರಣಗೊಂಡ ನಂತರ, ಹೊಸ ಜನರೇಶನ್‌ನ ಸ್ಕೋಡಾ ಕೊಡಿಯಾಕ್ ಮೊಡೆಲ್‌ ಅನ್ನು ಭಾರತದಲ್ಲಿ 2025 ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿದೆ. ಈಗ ಅದರ ಎರಡನೇ ಜನರೇಶನ್‌ನ ಅವತಾರದಲ್ಲಿ, ಭಾರತದಲ್ಲಿ ಜೆಕ್ ಮೂಲದ ಕಾರು ತಯಾರಕರ ಹೆಚ್ಚು ಬೆಲೆಯ ಎಸ್‌ಯುವಿಯ ವಿಕಸಿತ ಬಾಹ್ಯ ವಿನ್ಯಾಸ, ತಾಜಾ ಕ್ಯಾಬಿನ್, ಸಾಕಷ್ಟು ಹೊಸ ಫೀಚರ್‌ಗಳು ಮತ್ತು ಬಹು ಪವರ್‌ಟ್ರೇನ್ ಆಯ್ಕೆಗಳನ್ನು ಪಡೆಯುತ್ತದೆ. ಹೊಸ ಸ್ಕೋಡಾ ಕೊಡಿಯಾಕ್ ನೀಡುವ ಎಲ್ಲವನ್ನೂ ನಾವು ನೋಡೋಣ:

ಎಕ್ಸ್‌ಟೀರಿಯರ್‌

ಬಾಹ್ಯ ವಿನ್ಯಾಸವು ಹಿಂದಿನ ಪೀಳಿಗೆಯ ಮೊಡೆಲ್‌ನೊಂದಿಗೆ ಹೋಲಿಕೆಯಿದೆ ಮತ್ತು ಇದೇ ರೀತಿಯ ಗ್ರಿಲ್ ವಿನ್ಯಾಸದೊಂದಿಗೆ ವಿಕಸನಗೊಂಡಿದೆ. ಆದರೆ, ಇದು ಈಗ ನಯವಾದ ಎಲ್‌ಇಡಿ ಹೆಡ್‌ಲೈಟ್ ಸೆಟಪ್‌ ಮತ್ತು ಜೇನುಗೂಡು ಜಾಲರಿ ವಿನ್ಯಾಸದೊಂದಿಗೆ ಬರುವ ಮರುವಿನ್ಯಾಸಗೊಳಿಸಲಾದ ಬಂಪರ್ ಅನ್ನು ಒಳಗೊಂಡಿದೆ. ಎರಡೂ ಹೆಡ್‌ಲೈಟ್‌ಗಳ ಕೆಳಗೆ ಇರುವ ಎರಡು ಹೊಸ ಏರ್‌ ಇನ್‌ಟೇಕ್‌ಗಳು ಎಸ್‌ಯುವಿಗೆ ಮೊದಲಿಗಿಂತ ಹೆಚ್ಚು ಆಕ್ರಮಣಕಾರಿ ನೋಟವನ್ನು ನೀಡುತ್ತದೆ.

ಬದಿಯಿಂದ ಗಮನಿಸುವಾಗ, 20-ಇಂಚಿನ ಅಲಾಯ್ ವೀಲ್‌ಗಳು ಹೊಸದಾಗಿವೆ, ಪ್ರಮುಖ ಬದಲಾವಣೆಯೆಂದರೆ ಹೊಸ ಕೊಡಿಯಾಕ್‌ನಲ್ಲಿ ರೂಫ್‌ಲೈನ್‌ ಹಿಂಭಾಗದ ಕಡೆಗೆ ಹೆಚ್ಚು ಮೊನಚಾಗಿದೆ. ಇದು ಹಿಂದಿನ ಜನರೇಶನ್‌ನ ಮೊಡೆಲ್‌ನಂತೆ ಕಪ್ಪು ಕ್ಲಾಡಿಂಗ್ ಹೊಂದಿರುವ ಹೆಚ್ಚು ದುಂಡಾದ ವೀಲ್‌ ಆರ್ಚ್‌ಗಳೊಂದಿಗೆ ಬರುತ್ತದೆ.

ಹಿಂಭಾಗದ ವಿನ್ಯಾಸವು ಮೊದಲಿಗಿಂತ ಹೆಚ್ಚು ನಯವಾಗಿದ್ದು, ಸಿ-ಆಕಾರದ ಕನೆಕ್ಟೆಡ್‌ ಟೈಲ್ ಲೈಟ್‌ಗಳ ಮೇಲೆ ಸ್ಕೋಡಾ ಅಕ್ಷರಗಳನ್ನು ಹೊಂದಿವೆ. ಎಸ್‌ಯುವಿಯನ್ನು ಹೆಚ್ಚು ದಿಟ್ಟವಾಗಿ ಕಾಣುವಂತೆ ಮಾಡಲು ಹಿಂಭಾಗದ ಬಂಪರ್ ವಿನ್ಯಾಸವನ್ನು ಸಹ ಪರಿಷ್ಕರಿಸಲಾಗಿದೆ.

ಇಂಟೀರಿಯರ್‌

ಹೊರಭಾಗದ ವಿನ್ಯಾಸ ಬದಲಾವಣೆಗಳು ಸೂಕ್ಷ್ಮವಾಗಿದ್ದರೂ, ಕೊಡಿಯಾಕ್‌ಗೆ ಹೆಚ್ಚು ದುಬಾರಿ ಮತ್ತು ಆಧುನಿಕ ಆಕರ್ಷಣೆಯನ್ನು ನೀಡಲು ಇಂಟೀರಿಯರ್‌ ವಿನ್ಯಾಸವನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದೆ. ಹೊಸ ಜನರೇಶನ್‌ನ ಮೊಡೆಲ್‌ ಲೇಯರ್ಡ್ ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ ಬರುತ್ತದೆ ಮತ್ತು ಒಳಗೆ ಸುಸ್ಥಿರ ಮೆಟಿರಿಯಲ್‌ಗಳನ್ನು ಬಳಸುತ್ತದೆ.

ಇದು ದೊಡ್ಡದಾದ 13-ಇಂಚಿನ ಫ್ರೀಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್‌ನೊಂದಿಗೆ ಬರುತ್ತದೆ ಆದರೆ 2-ಸ್ಪೋಕ್ ಸ್ಟೀರಿಂಗ್ ವೀಲ್ ಹಳೆಯ ಮೊಡೆಲ್‌ನಂತೆಯೇ ಇದೆ, ಇದು ಪ್ರಸ್ತುತ-ಸ್ಪೆಕ್ ಸ್ಕೋಡಾ ಸೂಪರ್ಬ್, ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಕೈಲಾಕ್‌ನಲ್ಲಿಯೂ ಸಹ ಕಾಣಿಸಿಕೊಂಡಿದೆ.

ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ಗೇರ್ ಲಿವರ್‌ನ ಬಾಕ್ಸ್‌ ಅನ್ನು ಸ್ಟೀರಿಂಗ್ ವೀಲ್‌ನ ಹಿಂದೆ ನೀಡಲಾಗಿದೆ, ಇದು ಸೆಂಟರ್ ಕನ್ಸೋಲ್‌ಗೆ ಹೆಚ್ಚಿನ ಸ್ಥಳಾವಕಾಶವನ್ನು ನೀಡಿದೆ. ವಾಹನದಲ್ಲಿ ವಿವಿಧ ಕಾರ್ಯಗಳಿಗಾಗಿ ಬಳಸಬಹುದಾದ ಬಟನ್‌ ಕಂಟ್ರೋಲ್‌ಗಳು ಸಹ ಇವೆ ಮತ್ತು ಡ್ಯಾಶ್‌ಬೋರ್ಡ್‌ಗೆ ಆಧುನಿಕದೊಂದಿಗೆ ಕ್ಲಾಸಿ ವೈಬ್ ನೀಡುತ್ತದೆ.

ಫೀಚರ್‌ಗಳು ಮತ್ತು ಸುರಕ್ಷತೆ

ಇತರ ಫೀಚರ್‌ಗಳಲ್ಲಿ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ಬ್ರಾಂಡೆಡ್ ಸೌಂಡ್ ಸಿಸ್ಟಮ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಸೇರಿವೆ. ಇದು ಮೊದಲ ಬಾರಿಗೆ ಒಪ್ಶನಲ್‌ ಹೆಡ್-ಅಪ್ ಡಿಸ್ಪ್ಲೇ (HUD) ನೊಂದಿಗೆ ಬರುತ್ತದೆ.

ಸುರಕ್ಷತೆಯ ವಿಷಯದಲ್ಲಿ, ಹೊಸ ಕೊಡಿಯಾಕ್ ಬಹು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಹಿಲ್ ಹೋಲ್ಡ್ ಅಸಿಸ್ಟ್‌ನೊಂದಿಗೆ ಬರುತ್ತದೆ. ಆಪ್‌ಡೇಟ್‌ ಮಾಡಿದ ಸ್ಕೋಡಾ ಎಸ್‌ಯುವಿಯು ಆಟೋಮೆಟೆಡ್‌ ಎಮೆರ್ಜೆನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಲೇನ್ ಅಸಿಸ್ಟ್ ಮತ್ತು ಪಾರ್ಕಿಂಗ್ ಅಸಿಸ್ಟ್ ಕಾರ್ಯಗಳಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿದೆ.

ಪವರ್‌ಟ್ರೇನ್ ಆಯ್ಕೆಗಳು

ಜಾಗತಿಕ-ಸ್ಪೆಕ್ ಕೊಡಿಯಾಕ್ ನಾಲ್ಕು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ.

ವಿಶೇಷತೆಗಳು

1.5-ಲೀಟರ್ ಟರ್ಬೊ-ಪೆಟ್ರೋಲ್ ಮೈಲ್ಡ್-ಹೈಬ್ರಿಡ್

1.5-ಲೀಟರ್ ಟರ್ಬೊ-ಪೆಟ್ರೋಲ್ ಪ್ಲಗ್-ಇನ್ ಹೈಬ್ರಿಡ್

2-ಲೀಟರ್ ಟರ್ಬೊ-ಪೆಟ್ರೋಲ್

2-ಲೀಟರ್ ಡೀಸೆಲ್

ಪವರ್‌

150 ಪಿಎಸ್‌

204 ಪಿಎಸ್‌

204 ಪಿಎಸ್‌/ 265 ಪಿಎಸ್‌

150 ಪಿಎಸ್‌/ 193 ಪಿಎಸ್‌

ಗೇರ್‌ಬಾಕ್ಸ್‌

7-ಸ್ಪೀಡ್‌ ಡಿಸಿಟಿ

6-ಸ್ಪೀಡ್‌ ಡಿಸಿಟಿ

7-ಸ್ಪೀಡ್‌ ಡಿಸಿಟಿ

7-ಸ್ಪೀಡ್‌ ಡಿಸಿಟಿ

ಡ್ರೈವ್‌ಟ್ರೈನ್‌

FWD^

FWD^

FWD^/ AWD*

FWD^/ AWD*

ಭಾರತ-ಸ್ಪೆಕ್ ಕೊಡಿಯಾಕ್‌ನಲ್ಲಿರುವ ಈ ಪವರ್‌ಟ್ರೇನ್ ಆಯ್ಕೆಗಳಲ್ಲಿ ಯಾವ ಫೀಚರ್‌ಗಳನ್ನು ಹೊಂದಿರುತ್ತದೆ ಎಂಬುದನ್ನು ಸ್ಕೋಡಾ ಇನ್ನೂ ದೃಢೀಕರಿಸದಿದ್ದರೂ, ಇದು 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಸಜ್ಜುಗೊಳ್ಳಲಿದೆ ಎಂದು ನಾವು ನಿರೀಕ್ಷಿಸುತ್ತೇವೆ.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಹೊಸ ಸ್ಕೋಡಾ ಕೊಡಿಯಾಕ್ ಬೆಲೆಯು 45 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಟೊಯೋಟಾ ಫಾರ್ಚೂನರ್, ಜೀಪ್ ಮೆರಿಡಿಯನ್ ಮತ್ತು ಎಂಜಿ ಗ್ಲೋಸ್ಟರ್‌ನಂತಹ ಪೂರ್ಣ ಗಾತ್ರದ ಎಸ್‌ಯುವಿಗಳೊಂದಿಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯುತ್ತದೆ.

ಆಟೋಮೋಟಿವ್ ಜಗತ್ತಿನಿಂದ ಕ್ಷಣಕ್ಷಣದ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

Share via

Write your Comment on Skoda ಕೊಡಿಯಾಕ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ಎಲೆಕ್ಟ್ರಿಕ್
Rs.48.90 - 54.90 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ