ಮುಂದಿನ -ಪೀಳಿಗೆಯ ಹುಂಡೈ ಎಲೈಟ್ i20 ಪರೀಕ್ಷಿಸುವಾಗ ಕಾಣಿಸಿಕೊಂಡಿದೆ.
ಹುಂಡೈ ಇಲೈಟ್ I20 2017-2020 ಗಾಗಿ dhruv attri ಮೂಲಕ ಜುಲೈ 08, 2019 10:50 am ರಂದು ಪ್ರಕಟಿಸಲಾಗಿದೆ
- 27 Views
- ಕಾಮೆಂಟ್ ಅನ್ನು ಬರೆಯಿರಿ
ಮೂರನೆ ಪೀಳಿಗೆಯ i20 ಭಾರತದಲ್ಲಿ 2020 ಮದ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
- ಮೂರನೆ ಪೀಳಿಗೆಯ ಹುಂಡೈ ಎಲೈಟ್ i20 ನಲ್ಲಿ ಬಹಳಷ್ಟು ಫೀಚರ್ ಗಳ ನವೀಕರಣಗಳನ್ನು ಕೊಡಲಾಗಿದೆ ಒಳಗಡೆ ಮತ್ತು ಹೊರಗಡೆ.
- ಅದರಲ್ಲಿ ಹೆಚ್ಚು ಫೀಚರ್ ಗಳನ್ನೂ ಕೊಡಲಾಗುತ್ತದೆ ಮತ್ತು ಸನ್ ರೂಫ್ ಅನ್ನು ಸಹ ಕೊಡಲಾಗುವುದು.
- ಇದರಲ್ಲಿ eSIM ಇಂಟರ್ನೆಟ್ ಕನೆಕ್ಟಿವಿಟಿ ಮತ್ತು ಇನ್ನು ಹೆಚ್ಚು ಕೊಡಲಾಗಿದೆ.
- ಇದರಲ್ಲಿ ವೆನ್ಯೂ ನ 1.0-ಲೀಟರ್ , 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್
- ಅಚ್ಚ ಹೊಸ ಹುಂಡೈ ಎಲೈಟ್ i20 ಅನ್ನು 2020 ಆಟೋ ಎಕ್ಸ್ಪೋ ದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಹೆಚ್ಚುತ್ತಿರುವ ಸ್ಪರ್ಧೆಗಳನ್ನು ಗಮನದಲ್ಲಿರಿಸಿಕೊಂಡು (ಟೊಯೋಟಾ ಗ್ಲಾನ್ಝ ಮತ್ತು ಮುಂಬರುವ ಟಾಟಾ ಅಲ್ಟ್ರಾಜ್ ), ಹುಂಡೈ ಮೂರನೆ ಪೀಳಿಗೆಯ ಪ್ರೀಮಿಯಂ ಹ್ಯಾಕ್ ಬ್ಯಾಕ್ ಆವೃತ್ತಿಯನ್ನು ಸಿದ್ಧಪಡಿಸುತ್ತಿದೆ. ಪೂರ್ಣವಾಗಿ ಕುಖವಾದ ಧರಿಸಿದಂತಹ ಈ ವಾಹನದ ಒಂದು ಯೂನಿಟ್ ಅನ್ನು ಹುಂಡೈ ನ ಶ್ರೀಪೆರಂಬದೂರ್ , ಚೆನ್ನೈ ಹತ್ತಿರದ ಉತ್ಪಾದನಾ ಘಟಕದ ಹತ್ತಿರ ಪರೀಕ್ಷಿಸುತ್ತಿರುವುದು ಕಂಡುಬಂದಿತು.
ಹುಂಡೈ ಎಲೈಟ್ i20 ನಲ್ಲಿ ಕಡಿಮೆ ಎತ್ತರ ಮತ್ತು ಹೆಚ್ಚು ಅಗಳ ಉಳ್ಳಂತಹ ನಿಲುವನ್ನು ಮುಂದುವರೆಸಲಾಗಿದೆ , ಹೊರ ಹೋಗುತ್ತಿರುವ ಮಾಡೆಲ್ ನಂತೆ. ಮೂಲಮಾದರಿಯ ಮುಂಭಾಗದ ಕೊನೆ ಚಿತ್ರಗಳಲ್ಲಿ ಕಾಣಿಸುತ್ತಿಲ್ಲ, ಆದರೆ ಇದರಲ್ಲಿ ದೊಡ್ಡಮಟ್ಟದಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಚಿತ್ರಗಳ ಮುಖಾಂತರ ಹೇಳಬಹುದು ಬದಿಗಳಲ್ಲಿ ದೊಡ್ಡದಾಗಿದ್ದು ಈಗಿರುವ ಎಲೈಟ್ i20 ಯಂತೆ ಇದೆ. ಆದರೆ, ORVM ಗಳು, ಅಲಾಯ್ ವೀಲ್ ಗಳು, ಮತ್ತು ಬೆಲ್ಟ್ ಲೈನ್ ಗಳನ್ನು ಮರು ಪರಿಸ್ಕರಿಸಲಾಗುವುದು. ಹಿಂಬದಿಯ ವಿಂಡ್ ಶೀಲ್ಡ್ , LED ಟೈಲ್ ಲೈಟ್ ಗಳು ಮತ್ತು ಬಂಪರ್ ಗಳನ್ನೂ ಸಹ ನವೀಕರಣಗೊಳಿಸಲಾಗುವುದು. ಮುಂದಿನ ಪೀಳಿಗೆಯ ಎಲೈಟ್ i20 ಯು ಹೊರ ಹೋಗುತ್ತಿರುವ ಮಾಡೆಲ್ ಗಿಂತ ಹೆಚ್ಚು ವಿಶಾಲವಾಗಿಯೂ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಈಗಿರುವ ಕಾರ್ ಸ್ವಲ್ಪ ಮಟ್ಟಿಗೆ ಚಿಕ್ಕದಾಗಿದೆ , ವಿಶೇಷವಾಗಿ ನೀವು ಪ್ರತಿಸ್ಪರ್ದಿಗಳಾದ ಹೋಂಡಾ ಜಾಜ್ ಮತ್ತು ಮಾರುತಿ ಸುಜುಕಿ ಬಲೆನೊ ಗಳಿಗೆ ಹೋಲಿಸಿದಾಗ.
ಆದರೆ,ಹೊರ ಹೋಗುತ್ತಿರುವ ಮಾಡೆಲ್ ನಲ್ಲಿ ಹೆಚ್ಚು ಫೀಚರ್ ಗಳನ್ನೂ ತುಂಬಲಾಗಿದೆ , ಇದರಲ್ಲಿ ಆರು ಏರ್ಬ್ಯಾಗ್ ಗಳನ್ನು , ವಯರ್ಲೆಸ್ ಚಾರ್ಜಿನ್ಗ್, 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಯೂನಿಟ್ ಜೊತೆಗೆ ಆಂಡ್ರಾಯ್ಡ್ ಆಟೋ , ಆಪಲ್ ಕಾರ್ ಪ್ಲೇ, ಮತ್ತು ಮಿರರ್ ಲಿಂಕ್ ಕೊಡಲಾಗಿದೆ. ಮುಂದಿನ ಪೀಳಿಗೆಯ ಮಾಡೆಲ್ ನಲ್ಲಿ ಇತ್ತೀಚಿಗೆ ಬಿಡುಗಡೆ ಮಾಡಲಾದ ವೆರ್ನಾ ನಲ್ಲಿ ಕೊಡಲಾಗಿರುವ ಫೀಚರ್ ಗಳನ್ನೂ ಇಲ್ಲಿಯೂ ಸಹ ಅಳವಡಿಸಬಹುದು, ಸನ್ ರೂಫ್, ಬ್ಲೂ ಲಿಂಕ್ ಕನೆಕ್ಟೆಡ್ ಕಾರ್ ಟೆಕ್ನಲಜಿ ಜೊತೆಗೆ ಅಂತರ್ಗತ ವಾಗಿರುವ eSIM ಸಹ ಕೊಡಲಾಗಬಹುದು. ಅದರ ಜೊತೆಗೆ, ಡ್ಯಾಶ್ ಬೋರ್ಡ್ ನಲ್ಲಿ ಫ್ರೀ ಫ್ಲೋಟಿಂಗ್ ಸ್ಕ್ರೀನ್ ವೆನ್ಯೂ ಮತ್ತು ಇತರ ಹೊಸ ಕಾರ್ ಗಳಲ್ಲಿರುವಂತೆ ಕೊಡಬಹುದು.
ಮುಂದಿನ ಪೀಳಿಗೆಯ ಹುಂಡೈ ಎಲೈಟ್ i20 ಯಲ್ಲಿ 1.0-ಲೀಟರ್ , 3-ಸಿಲಿಂಡರ್ ಟರ್ಬೊ ಚಾರ್ಜ್ ಇರುವ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು, ವೆನ್ಯೂ ನಲ್ಲಿ ಇರುವಂತೆ ಮತ್ತು ಆಯ್ಕೆ ಯಾಗಿ 7-ಸ್ಪೀಡ್ DCT ಅನ್ನು ಸಹ ಕೊಡಬಹುದು. ಈ ಯೂನಿಟ್ ಎರೆಡು ಪವರ್ ಗಳಲ್ಲಿ ಸಿಗಬಹುದು -- 120PS ಮತ್ತು 100PS ಜೊತೆಗೆ 172Nm ಟಾರ್ಕ್ --ಪ್ರಪಂಚದಾದ್ಯಂತ ಈಗಿರುವ i20 ಯಲ್ಲೂ ಸಹ. ಹುಂಡೈ ನವರು ಕಡಿಮೆ ಪವರ್ ಇರುವುದನ್ನು ಭಾರತದಲ್ಲಿ ಬಿಡುಗಡೆ ಮಾಡುವ i20 ಯಲ್ಲಿ ಬಿಡುಗಡೆ ಮಾಡಬಹುದು. ಇದರಲ್ಲಿರುವ 1.2-ಲೀಟರ್, 4- ಸಿಲಿಂಡರ್ ಎಂಜಿನ್ ಅನ್ನು ಪ್ರಾರಂಭ ಹಂತದ ಎಂಜಿನ್ ಆಗಿ ಮುಂದುವರೆಸಬಹುದು. ಈಗಿರುವ 1.4-ಲೀಟರ್ ಡೀಸೆಲ್ ಎಂಜಿನ್ ಯು ಸಹ i20 ಯ ಬಾನೆಟ್ ಒಳಗೆ ಸ್ಥಾನ ಪಡೆಯಬಹುದು , ಹುಂಡೈ ನವರು ಹೇಳಿಕೆ ಕೊಟ್ಟಿರುವಂತೆ ಡೀಸೆಲ್ ಯೂನಿಟ್ ಗಳನ್ನು BS6 ನರ್ಮ್ ಗಾಲ ಅಳವಡಿಕೆಯ ನಂತರವೂ ಮುಂದುವರಿಸಲಾಗುವುದು.
ಮುಂದುವರೆದು, ಉತ್ಸಾಹಿಗಳಿಗಾಗಿ ಶುಭ ಸಮಾಚಾರಗಳು ಇವೆ , ಹೆಚ್ಚು ವೇಗಕ್ಕೆ ಪ್ರಾಮುಖ್ಯತೆ ಕೊಡಲಾಗುವ i20 ಯನ್ನು ಸಹ ನೂರ್ಬರ್ಗ್ರಿಂಗ್ ನಲ್ಲಿ ಪರೀಕ್ಷಿಸುತ್ತಿರುವುದನ್ನು ನೋಡಲಾಗಿದೆ. ಇದರ ಬಗ್ಗೆ ಹೆಚ್ಚು ತಿಳಿಯಿರಿ ಇಲ್ಲಿ.
ಹುಂಡೈ ಮೂರನೆ ಪೀಳಿಗೆಯ i20 ಯನ್ನು 2020 ಆಟೋ ಎಕ್ಸ್ಪೋ ದಲ್ಲಿ . ನಾವು ಮುಂದಿನ ಪೀಳಿಗೆಯ ಹ್ಯಾಚ್ ಅನ್ನು ಮದ್ಯ-2020 ನಲ್ಲಿ ಮಾರ್ಕೆಟ್ ಗೆ ಬರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸುತ್ತಿದ್ದೇವೆ. ಎಲೈಟ್ i20 ಪ್ರತಿಸ್ಪರ್ದಿಗಳು ಮಾರುತಿ ಸುಜುಕಿ ಬಲೆನೊ, ಟೊಯೋಟಾ ಗ್ಲಾನ್ಝ, ಹೋಂಡಾ ಜಾಜ್ ಮತ್ತು ವೋಕ್ಸ್ವ್ಯಾಗನ್ ಪೋಲೊ. ಇದು ಮುಂಬರುವ ಟಾಟಾ ಅಲ್ಟ್ರಾಜ್ ಜೊತೆಗೂ ಸ್ಪರ್ದಿಸಬಹುದಾಗಿದೆ, ಅದನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುತ್ತದೆ.
0 out of 0 found this helpful