ಸತತ ಮೂರನೇ ವರ್ಷವು 30,000 ಯುನಿಟ್‌ಗಳ ಮಾರಾಟದ ಕಂಡ Nissan Magnite
ಏಪ್ರಿಲ್ 26, 2024 07:25 am rohit ಮೂಲಕ ಮಾರ್ಪಡಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
2024 ರ ಆರಂಭದಲ್ಲಿ Nissan ಭಾರತದಲ್ಲಿ ಈ ಎಸ್‌ಯುವಿಯ 1 ಲಕ್ಷ ಯುನಿಟ್ ಮಾರಾಟದ ದಾಖಲೆಯನ್ನು ನಿರ್ಮಿಸಿದೆ
- ನಿಸ್ಸಾನ್ ಭಾರತದಲ್ಲಿ ಮ್ಯಾಗ್ನೈಟ್ ಅನ್ನು 2020ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಿತು.
- ಇದು XE, XL, XV, ಮತ್ತು XV ಪ್ರೀಮಿಯಂ ಎಂಬ ನಾಲ್ಕು ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ.
- ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೊಂದಿಗೆ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ.
- 8 ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು 360 ಡಿಗ್ರಿ ಕ್ಯಾಮೆರಾದೊಂದಿಗೆ ಬರುತ್ತದೆ.
- ಬೆಲೆಗಳು 6 ಲಕ್ಷ ರೂ.ನಿಂದ 11.27 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ ಪ್ಯಾನ್-ಇಂಡಿಯಾ) ಇದೆ.
- 2024 ರ ದ್ವಿತೀಯಾರ್ಧದಲ್ಲಿ ಫೇಸ್‌ಲಿಫ್ಟೆಡ್ ಮ್ಯಾಗ್ನೈಟ್ ಅನ್ನು ನಿಸ್ಸಾನ್ ಪರಿಚಯಿಸಲಿದೆ.
Nissan Magnite ಹೊಸ ಮೈಲಿಗಲ್ಲನ್ನು ಸಾಧಿಸಿದೆ, ಹೌದು, ಈ ಕಾರು ತಯಾರಕರು ಸತತ ಮೂರನೇ ವರ್ಷವೂ ಸಬ್-4ಮೀ ಎಸ್‌ಯುವಿಯ 30,000 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಇದು 2024 ರ ಆರಂಭದಲ್ಲಿ ಭಾರತದಲ್ಲಿ ಮ್ಯಾಗ್ನೈಟ್‌ನ 1 ಲಕ್ಷಕ್ಕೂ ಹೆಚ್ಚು ಮಾರಾಟದ ಮಾರ್ಕ್ ಅನ್ನು ನೋಂದಾಯಿಸಲು ನಿಸ್ಸಾನ್‌ಗೆ ಸಹಾಯ ಮಾಡಿದೆ.
ಅಂಕಿ-ಅಂಶಗಳ ಒಂದು ನೋಟ
ಕೆಳಗಿನ ಕೋಷ್ಟಕದಲ್ಲಿ ತಿಳಿಸಿದಂತೆ, ನಿಸ್ಸಾನ್ ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಸತತವಾಗಿ ಮ್ಯಾಗ್ನೈಟ್‌ನ 30,000 ಕ್ಕೂ ಹೆಚ್ಚು ಕಾರುಗಳನ್ನು ಡೆಲಿವರಿ ನೀಡಿದೆ.
ಭಾರತದಲ್ಲಿನ ಮಾರಾಟ |
|
|||
ಹ.ವರ್ಷ20 |
ಹ.ವರ್ಷ21 |
ಹ.ವರ್ಷ22 |
ಹ.ವರ್ಷ23 |
ಒಟ್ಟು |
9569 |
33905 |
32546 |
30146 |
106166 |
ಮ್ಯಾಗ್ನೈಟ್ ಅನ್ನು 2020 ರ ಅಂತ್ಯದ ವೇಳೆಗೆ ಬಿಡುಗಡೆ ಮಾಡಲಾಯಿತು, ಆ ಹಣಕಾಸು ವರ್ಷದಲ್ಲಿ ಸುಮಾರು 9500 ಕ್ಕೂ ಹೆಚ್ಚು ಕಾರುಗಳ ಮಾರಾಟವನ್ನು ಕಂಡಿದೆ. ಹಾಗೆಯೇ 22-23 ಹಣಕಾಸು ವರ್ಷದ ಅವಧಿಯಲ್ಲಿ ಎಸ್‌ಯುವಿಯ ಮಾರಾಟದಲ್ಲಿ ಸ್ವಲ್ಪ ಮಟ್ಟಿಗೆ ಕುಸಿತವನ್ನು ಕಂಡಿದೆ.
ನಿಸ್ಸಾನ್ ಮ್ಯಾಗ್ನೈಟ್: ಒಂದು ಅವಲೋಕನ
ಸಬ್-4ಮೀ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಮ್ಯಾಗ್ನೈಟ್ ನಿಸ್ಸಾನ್‌ನ ಮೊದಲ ಕೊಡುಗೆಯಾಗಿದೆ ಮತ್ತು 2020ರ ಡಿಸೆಂಬರ್‌ನಲ್ಲಿ ಪೆಟ್ರೋಲ್ ಎಂಜಿನ್ ನೊಂದಿಗೆ ಬಿಡುಗಡೆ ಮಾಡಲಾಯಿತು. ಇದು XE, XL, XV, ಮತ್ತು XV ಪ್ರೀಮಿಯಂ ಎಂಬ ನಾಲ್ಕು ವಿಶಾಲವಾದ ಮೊಡೆಲ್‌ಗಳಲ್ಲಿ ಲಭ್ಯವಿದೆ.
ಎಂಜಿನ್ ಮತ್ತು ಗೇರ್ ಬಾಕ್ಸ್ ಆಯ್ಕೆಗಳು
ಇದು ಕೆಳಗಿನ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ:
ಸ್ಪೇಷಿಫಿಕೇಶನ್ |
1-ಲೀಟರ್ ಎನ್/ಎ ಪೆಟ್ರೋಲ್ |
1-ಲೀಟರ್ ಟರ್ಬೋ ಪೆಟ್ರೋಲ್ |
ಪವರ್ |
72 ಪಿಎಸ್ |
100 ಪಿಎಸ್ |
ಟಾರ್ಕ್ |
96 ಎನ್‌ಎಮ್ |
160 ಎನ್‌ಎಮ್‌ನ ವರೆಗೆ |
ಟ್ರಾನ್ಸ್‌ಮಿಷನ್ |
5-ಸ್ಪೀಡ್ ಮ್ಯಾನುಯಲ್, 5-ಸ್ಪೀಡ್ ಎಎಮ್‌ಟಿ |
5-ಸ್ಪೀಡ್ ಮ್ಯಾನುಯಲ್, ಸಿವಿಟಿ |
ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ, ಟರ್ಬೊ ಎಂಜಿನ್ 152 Nm ನಷ್ಟು ಉತ್ಪಾದಿಸುತ್ತದೆ. ಮಾಡುತ್ತದೆ. ನಿಸ್ಸಾನ್ ಇತ್ತೀಚೆಗೆ ಮ್ಯಾಗ್ನೈಟ್‌ನ 1-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್ ಎಂಜಿನ್ ಅನ್ನು 5-ಸ್ಪೀಡ್ AMT ಆಯ್ಕೆಯೊಂದಿಗೆ ಬಿಡುಗಡೆ ಮಾಡಿದೆ.
ಇದನ್ನು ಓದಿ: Nissan Magnite AMT ಮೊದಲ ಡ್ರೈವ್ ರಿವ್ಯೂ: ಅನುಕೂಲಕ್ಕಾಗಿ ಕೈಗೆಟುಕುವಂತೆ ಮಾಡಲಾಗಿದೆ
ವೈಶಿಷ್ಟ್ಯಗಳು ಮತ್ತು ಸುರಕ್ಷತೆ
ನಿಸ್ಸಾನ್ ಮ್ಯಾಗ್ನೈಟ್ ಅನ್ನು 8-ಇಂಚಿನ ಟಚ್‌ಸ್ಕ್ರೀನ್ ಯುನಿಟ್, ಹಿಂಭಾಗದ ವೆಂಟ್‌ನೊಂದಿಗೆ ಆಟೋ ಎಸಿ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ನೀಡುತ್ತದೆ. ಸುರಕ್ಷತೆಯ ವಿಷಯದಲ್ಲಿ, ಇದು ಸಬ್-4m ಎಸ್‌ಯುವಿಯು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆಯುತ್ತದೆ.
ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು
ಆಪ್‌ಗ್ರೇಡ್ ಮಾಡಿರುವ ಎಸ್‌ಯುವಿಯ ಕೆಲವು ಸ್ಪೈ ಶಾಟ್‌ಗಳು ಹೇಳುವಂತೆ, ಫೇಸ್‌ಲಿಫ್ಟೆಡ್ ಮ್ಯಾಗ್ನೈಟ್‌ನ ಕೆಲಸವನ್ನು ಈಗಾಗಲೇ ನಿಸ್ಸಾನ್ ಪ್ರಾರಂಭಿಸಿದೆ, ಇದು 2024 ರ ದ್ವಿತೀಯಾರ್ಧದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಪ್ರಸ್ತುತ ಭಾರತದಾದ್ಯಂತ, ನಿಸ್ಸಾನ್ ಮ್ಯಾಗ್ನೈಟ್‌ನ ಬೆಲೆ 6 ಲಕ್ಷ ರೂ.ನಿಂದ 11.27 ಲಕ್ಷ ರೂಪಾಯಿ ವರೆಗೆ (ಎಕ್ಸ್ ಶೋರೂಂ) ಇದೆ. ಇದು ರೆನಾಲ್ಟ್ ಕೈಗರ್, ಸಿಟ್ರೋಯೆನ್ ಸಿ3, ಟಾಟಾ ನೆಕ್ಸಾನ್, ಹುಂಡೈ ವೆನ್ಯೂ, ಮಾರುತಿ ಬ್ರೆಜ್ಜಾ, ಕಿಯಾ ಸೊನೆಟ್, ಮಹೀಂದ್ರಾ ಎಕ್ಸ್‌ಯುವಿ300, ಮತ್ತು ಮುಂಬರುವ ಸ್ಕೊಡಾ ಸಬ್ 4ಮೀ ಎಸ್‌ಯುವಿ ಯ ವಿರುದ್ಧ ಸ್ಪರ್ಧಿಸಲಿದೆ. ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್‌ನಂತಹ ಸಬ್-4ಮೀ ಕ್ರಾಸ್‌ಒವರ್‌ಗಳಿಗೆ ಮ್ಯಾಗ್ನೈಟ್ ಪರ್ಯಾಯವಾಗಿದೆ.
ಇಲ್ಲಿ ಇನ್ನಷ್ಟು ಓದಿ : ಮ್ಯಾಗ್ನೈಟ್ ಎಎಮ್‌ಟಿ